ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಸೆಕ್ಯುರಿಟಿ ಫೀಚರ್ಸ್‌!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಬಳಕೆದಾರರು ವಾಟ್ಸಾಪ್‌ ಅಕೌಂಟ್‌ಗೆ ಲಾಗ್‌ ಇನ್‌ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್‌ ಪರಿಚಯಿಸಲು ಪ್ಲಾನ್‌ ಮಾಡದೆ ಎಂದು ವರದಿಯಾಗಿದೆ. ಇದನ್ನು ಐಒಎಸ್‌ ಮತ್ತು ಆಂಡ್ರಾಯ್ಡ್‌ ಅಪ್ಲಿಕೇಶನ್‌ನ ಬೀಟಾ ಆವೃತ್ತಿಗಳಿಗೆ ಈ ಫೀಚರ್ಸ್‌ಗಳನ್ನು ಹೊರತರಲಾಗುವುದು ಎಂದು ನಿರೀಕ್ಷಿಸಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಸೆಕ್ಯುರಿಟಿ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ನಿಮ್ಮ ವಾಟ್ಸಾಪ್‌ ಅಕೌಂಟ್‌ಗೆ ಲಾಗ್‌ಇನ್‌ ಆಗುವ ಮೊದಲು ಹೆಚ್ಚುವರಿ ಪರಿಶೀಲನೆ ಮಾಡಲಿದೆ. ಅಂದರೆ ವಾಟ್ಸಾಪ್‌ ಶೀಘ್ರದಲ್ಲೇ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳುವ ಸಾಧ್ಯತೆಯಿದೆ. SMS ಮೂಲಕ ಕಳುಹಿಸಲಾದ ವೆರಿಫಿಕೇಶನ್‌ ಕೋಡ್‌ ಹೊರತುಪಡಿಸಿ ನಿಮಗೆ ಹೆಚ್ಚುವರಿ ಪರಿಶೀಲನೆ ಕೋಡ್ ಕೇಳಲಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಬಳಕೆದಾರರು ತಮ್ಮ ಅಕೌಂಟ್‌ ಲಾಗ್‌ ಇನ್‌ ಮಾಡುವುದಕ್ಕೆ ಎರಡನೇ ವೆರಿಫಿಕೇಶನ್‌ ಕೋಡ್‌ ಪರಿಚಯಿಸಲಿದೆ. ಇದರಿಂದ ನಿಮ್ಮ ವಾಟ್ಸಾಪ್‌ ಅಕೌಮಟ್‌ ಫೋನ್‌ ನಂಬರ್‌ ಅನ್ನು ಈಗಾಗಲೇ ಮತ್ತೊಂದು ಫೋನ್‌ನಲ್ಲಿ ಬಳಸುತ್ತಿದ್ದರೆ, ನಿಮ್ಮ ಖಾತೆಯು ನಿಮ್ಮ ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡಲಿದೆ. ಹೆಚ್ಚುವರಿ ಭದ್ರತೆಗಾಗಿ, ನೀವು ಕೋಡ್ ಕಳುಹಿಸುವ ಮೊದಲು ಟೈಮರ್ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಆದರೆ ನೀವು ಕೋಡ್ ಅನ್ನು ಸ್ವೀಕರಿಸಿದಾಗ, ಅದನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ವೆರಿಫಿಕೇಶನ್‌

ಹೊಸ ವೆರಿಫಿಕೇಶನ್‌ ಫೀಚರ್ಸ್‌ನಿಂದಾಗಿ ವಾಟ್ಸಾಪ್‌ ಬಳಕೆದಾರರ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ. ಬಳಕೆದಾರರ ಡೇಟಾವನ್ನು ಬೇರೆಯವರು ಕದಿಯುವುದಕ್ಕೆ ಸಾಧ್ಯವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.ಅಂದರೆ ವಾಟ್ಸಾಪ್‌ ಅಕೌಂಟ್‌ ಹ್ಯಾಕ್ ಆಗುವುದನ್ನು ತಡೆಯಲು ಈ ಫೀಚರ್ಸ್‌ ಅನ್ನು ಘೋಷಿಸಲಾಗಿದೆ ಎಂದು ವರದಿಯಾಗಿದೆ. ಏಕೆಂದರೆ ಬಳಕೆದಾರರ ಬಳಿ ಒಟಿಪಿಯನ್ನು ಪಡೆದುಕೊಳ್ಳುವ ಸಾಕಷ್ಟು ವಂಚಕರು ವಾಟ್ಸಾಪ್‌ ಖಾತೆಗೆಳಿಗೆ ಅನಧಿಕೃತ ಪ್ರವೇಶ ನೀಡುವುದು ವರದಿಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಈ ರೀತಿಯ ವಂಚನೆಗಳನ್ನು ತಡೆಯುವುದಕ್ಕೆ ವಾಟ್ಸಾಪ್‌ ಮುಂದಾಗಿದೆ.

OTP

ಇನ್ನು ಈ ಹೊಸ ಸೆಕ್ಯುರಿಟಿ ಫೀಚರ್ಸ್‌ OTP ಅನ್ನು ತಿಳಿಯದೆ ಹಂಚಿಕೊಳ್ಳುವ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಿರಬಹುದು. ಈ ಫೀಚರ್ಸ್‌ ಲಭ್ಯವಾದ ಮೇಲೆ ಸಮಯದ ವಿಳಂಬದ ನಂತರ ಬಳಕೆದಾರರ ಫೋನ್ ಸಂಖ್ಯೆಗೆ ಎರಡನೇ 6-ಅಂಕಿಯ ಕೋಡ್ ಅನ್ನು ಕಳುಹಿಸಲಾಗುತ್ತದೆ. ಇದರಿಂದ OTP ಜೊತೆಗೆ ಬರುವ ಸಂದೇಶದಲ್ಲಿ ಬೇರೆಯವರು ನಿಮ್ಮ ಒಟಿಪಿ ಬಳಸಿ ವಾಟ್ಸಾಪ್‌ ಅಕೌಂಟ್‌ ಲಾಗ್‌ ಇನ್‌ ಆಗುತ್ತಿರುವುದರ ಬಗ್ಗೆ ಮಾಹಿತಿ ನೀಡಲಿದೆ. ಇಂತಹ ಸನ್ನಿವೇಶದಲ್ಲಿ ಬಳಕೆದಾರರು ಎರಡನೇ 6 ಅಂಕಿಯ ಕೋಡ್ ಅನ್ನು ಬಳಸಿ ತಮ್ಮ ಅಕೌಂಟ್‌ ಅನ್ನು ಪ್ರವೇಶಿಸುವುದಕ್ಕೆ ಸಾದ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಗ್ರೂಪ್‌ನಲ್ಲಿರುವ ಬಳಕೆದಾರರು ಶೀಘ್ರದಲ್ಲೇ ಹೊಸ ಫೀಚರ್ಸ್‌ ಪಡೆಯಲಿದ್ದಾರೆ. ಈ ಫೀಚರ್ಸ್‌ ಮೂಲಕ ವಾಟ್ಸಾಪ್‌ ಗ್ರೂಪ್‌ನಿಂದ ಸೈಲೆಂಟ್‌ ಆಗಿ ಎಕ್ಸಿಟ್‌ ಆಗುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ "ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್ಸ್" ಎಂಬ ಹೊಸ ಫೀಚರ್ಸ್‌ ಅಭಿವೃದ್ದಿಪಡಿಸುತ್ತಿದೆ. ಇದರಿಂದ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಹಿಂದೆ ಯಾರೆಲ್ಲಾ ಇದ್ದರೂ ಅನ್ನೊದನ್ನ ವೀಕ್ಷಿಸಲು ಅನುಮತಿಸುತ್ತದೆ. ಇನ್ನು ವಾಟ್ಸಾಪ್‌ ಗ್ರೂಪ್‌ ಅನ್ನು ಸೈಲೆಂಟ್‌ ಆಗಿ ತೊರೆಯುವುದಕ್ಕೆ ಅವಕಾಶ ನೀಡುವ ಫೀಚರ್ಸ್‌ನಿಂದ ಸಾಕಷ್ಟು ಅನುಕೂಲವಾಗಲಿದೆ.

Best Mobiles in India

English summary
WhatsApp will soon get second OTP option to make it more secure

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X