ವಾಟ್ಸಾಪ್‌ನಿಂದ ಬಿಗ್ ಶಾಕ್! ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡೋಲ್ಲ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಕೆಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ. ಇದೇ ಅಕ್ಟೋಬರ್ 24, 2023 ರಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಮೂಲಕ ವಾಟ್ಸಾಪ್ ಸೂಚಿಸಿರುವ ಕೆಲವು ಸ್ಮಾರ್ಟ್‌ಫೋನ್ ಬಳಕೆದಾರರು ಹೊಸ ಫೋನ್‌ಗೆ ಬದಲಾಯಿಸಬೇಕಾದ ಅನಿವಾರ್ಯತೆಯಿದೆ.
ಹೌದು, ಕೆಲವು ಹಳೆಯ ಆಂಡ್ರಾಯ್ಡ್ ಫೋನ್‌ಗಳು ಮತ್ತು ಐಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ವಾಟ್ಸಾಪ್ ಮುಂದಾಗಿದೆ. ಇನ್ನು ಕೂಡ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ ಎಂದು ಹೇಳಲಾಗಿದೆ. ಸೆಕ್ಯುರಿಟಿ ಫೀಚರ್ಸ್ ಮತ್ತು ತಾಂತ್ರಿಕ ಪ್ರಗತಿಯ ಕಾರಣಕ್ಕಾಗಿ ವಾಟ್ಸಾಪ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್ ಯಾವೆಲ್ಲಾ ಡಿವೈಸ್‌ಗಳಲ್ಲಿ ತನ್ನ ಕೆಲಸವನ್ನು ಸ್ಟಾಪ್ ಮಾಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಬೆಂಬಲಿಸುವುದಿಲ್ಲ?
ವಾಟ್ಸಾಪ್ ಈಗಾಗಲೇ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿರುವ ಡಿವೈಸ್‌ಗಳಲ್ಲಿ ಬೆಂಬಲ ನೀಡುವುದನ್ನು ಸ್ಟಾಪ್ ಮಾಡುತ್ತಾ ಬಂದಿದೆ. ಹಳೆಯ ಸಾಫ್ಟ್‌ವೇರ್‌ನಲ್ಲಿ ವಾಟ್ಸಾಪ್ ಬಳಸುವುದು ಗೌಪ್ಯತೆಯ ದೃಷ್ಟಿಯಿಂದ ಸೂಕ್ತವಲ್ಲ ಅನ್ನೊದು ವಾಟ್ಸಾಪ್ ವಾದವಾಗಿದೆ. ಅದರಂತೆ ಪ್ರತಿ ವರ್ಷವೂ ಕೂಡ ಹಳೆಯ ಸಾಫ್ಟ್‌ವೇರ್‌ನಲ್ಲಿ ರನ್ ಆಗುವ ಡಿವೈಸ್‌ಗಳಲ್ಲಿ ವಾಟ್ಸಾಪ್ ಬೆಂಬಲ ನಿಲ್ಲಿಸುತ್ತಿದೆ. ಅದರ ಮುಂದುವರೆದ ಭಾಗವಾಗಿ ಇದೇ ಅಕ್ಟೋಬರ್ 24 ರಿಂದ ಈ ಕೆಳಕಂಡ ಮೊಬೈಲ್‌ಗಳಲ್ಲಿ ತನ್ನ ಬೆಂಬಲವನ್ನು ಸ್ಟಾಪ್ ಮಾಡುತ್ತಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S2
ನೆಕ್ಸಸ್ 7
ಐಫೋನ್ 5
iPhone 5c
ಆರ್ಕೋಸ್ 53 ಪ್ಲಾಟಿನಂ
ಗ್ರ್ಯಾಂಡ್ ಎಸ್ ಫ್ಲೆಕ್ಸ್ ZTE
ಗ್ರ್ಯಾಂಡ್ X ಕ್ವಾಡ್ V987 ZTE
HTC ಡಿಸೈರ್ 500
ಹುವಾವೇ ಅಸೆಂಡ್ ಡಿ
ಹುವಾವೇ Ascend D1
HTC ಒನ್
ಸೋನಿ ಎಕ್ಸ್‌ಪೀರಿಯಾ Z
ಎಲ್ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೆಕ್ಸಸ್
HTC ಸೆನ್ಸೇಶನ್
ಮೊಟೊರೊಲಾ ಡ್ರಾಯ್ಡ್ ರೇಜರ್
ಸೋನಿ ಎಕ್ಸ್‌ಪೀರಿಯಾ S2
ಮೊಟೊರೊಲಾ Xoom
ಸ್ಯಾಮ್‌ಸಂಗ್ ಗ್ಯಾಲಕ್ಸಿ Tab 10.1
Asus Eee ಪ್ಯಾಡ್ ಟ್ರಾನ್ಸ್ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ A5003
Samsung Galaxy S
HTC ಡಿಸೈರ್ HD
LG Optimus 2X
Sony Ericsson Xperia Arc3
ಈ ಮೇಲ್ಕಂಡ ಎಲ್ಲಾ ಡಿವೈಸ್‌ಗಳಲ್ಲಿಯೂ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ಸ್ಟಾಪ್ ಮಾಡಲು ತಿರ್ಮಾನಿಸಿದೆ. ಈ ಡಿವೈಸ್‌ಗಳು ಇನ್ನು ಕೂಡ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಇನ್ನು ವಾಟ್ಸಾಪ್ ತನ್ನ ಬೆಂಬಲವನ್ನು ಸ್ಟಾಪ್ ಮಾಡುವುದಕ್ಕೂ ಮೊದಲೇ ಬಳಕೆದಾರರಿಗೆ ಸೂಚನೆ ನೀಡುತ್ತಿದೆ. ಅಲ್ಲದೆ ವಾಟ್ಸಾಪ್ ಬಳಕೆಯನ್ನು ಮುಂದುವರೆಸಲು ನಿಮ್ಮ ಡಿವೈಸ್ ಅನ್ನು ಅಪ್‌ಗ್ರೇಡ್ ಮಾಡಿರಿ ಎಂದು ಸೂಚಿಸುತ್ತಿದೆ.
ಆದರೆ ಅಕ್ಟೋಬರ್ 24 ರ ನಂತರ, ವಾಟ್ಸಾಪ್ ಡೆವಲಪರ್‌ಗಳು ಈ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ತಾಂತ್ರಿಕ ಬೆಂಬಲ ಮತ್ತು ನವೀಕರಣಗಳನ್ನು ನೀಡುವುದನ್ನು ನಿಲ್ಲಿಸುತ್ತಾರೆ. ಸದ್ಯ ವಾಟ್ಸಾಪ್ ತನ್ನ ಕಾರ್ಯನಿರ್ವಹಣೆ ಸ್ಟಾಪ್ ಮಾಡಲು ಮುಂದಾಗಿರುವ ಡಿವೈಸ್‌ಗಳು ಹಿಂದಿನ ಮಾದರಿಗಳಾಗಿವೆ. ಒಂದು ವೇಳೆ ನೀವು ಕೂಡ ಈ ಹಳೆಯ ಮಾಡೆಲ್‌ಗಳನ್ನು ಬಳಸುತ್ತಿದ್ದರೆ ಹೊಸ ಸ್ಮಾರ್ಟ್‌ಫೋನ್‌ಗೆ ಬದಲಾಗುವುಸು ಸೂಕ್ತವಾಗಿದೆ.
ನಿಮ್ಮ ಡಿವೈಸ್‌ನ OS ಅನ್ನು ಪರಿಶೀಲಿಸುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಯಾವ ಆಂಡ್ರಾಯ್ಡ್ OS ಆವೃತ್ತಿಯಲ್ಲಿ ರನ್ ಆಗುತ್ತಿದೆ ಎಂದು ಪರಿಶೀಲಿಸುವುದಕ್ಕೆ ಸುಲಭ ಮಾರ್ಗವಿದೆ. ಇದಕ್ಕಾಗಿ ನೀವು ನಿಮ್ಮ ಡಿವೈಸ್‌ನ ಸೆಟ್ಟಿಂಗ್ಸ್ >ಅಬೌಟ್ ಫೋನ್ > ಸಾಫ್ಟ್‌ವೇರ್ ಮಾಹಿತಿಗೆ ನ್ಯಾವಿಗೇಟ್ ಮಾಡಿ. ಈ ಮೂಲಕ ನಿಮ್ಮ ಡಿವೈಸ್‌ನ ಆಂಡ್ರಾಯ್ಡ್ ಆವೃತ್ತಿ ಯಾವುದು ಅನ್ನೊದನ್ನ ತಿಳಿದುಕೊಳ್ಳಬಹುದಾಗಿದೆ.


Click it and Unblock the Notifications








