ಹೊಸ ವರ್ಷದಂದು ವಾಟ್ಸಾಪ್‌ನಲ್ಲಿ ಬಂದ ಮೆಸೇಜ್‌ಗಳೆಷ್ಟು ಗೊತ್ತಾ?

|

ಪ್ರಸ್ತುತ ಜಗತ್ತಿನಲ್ಲಿ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ಅಂದ್ರೆ ಅದು ವಾಟ್ಸಾಪ್‌. ದಿನದಿಂದ ದಿನಕ್ಕೆ ವಾಟ್ಸಾಪ್‌ ಬಳಕೆದಾರರ ಸಂಖ್ಯೆ ಏರುತ್ತಲೇ ಇದೆ. ಆಪ್‌ಲೈನ್‌ ಮೆಸೇಜ್‌ ಕಡಿಮೆ ಆಗಿ ಆನ್‌ಲೈನ್‌ ಮೆಸೇಜ್‌ ಜಾಸ್ತಿಯಾಗೋಕೆ ಕಾರಣನೇ ವಾಟ್ಸಾಪ್‌. ಇನ್ನು ವಿಶೇಷ ದಿನಗಳಲ್ಲಂತೂ ವಾಟ್ಸಾಪ್‌ನಲ್ಲಿ ಸಾಕಷ್ಟು ಮೆಸೇಜ್‌ಗಳನ್ನ ಬಳಕೆದಾರರು ಶೇರ್‌ ಮಾಡ್ತಾರೆ. ಇದೇ ಕಾರಣಕ್ಕೆ ಇದೀಗ ಹೊಸವರ್ಷದಂದು ವಾಟ್ಸಾಪ್‌ ದಾಖಲೆಯೊಂದನ್ನ ಬರೆದಿದೆ.

ಹೌದು

ಹೌದು ಹೊಸವರ್ಷದ ಸಂದರ್ಭದಲ್ಲಿ ವಾಟ್ಸಾಪ್‌ ವಿಶ್ವದಾಖಲೆಯೊಂದನ್ನ ಬರೆದಿದೆ, ಅದು ಕೂಡ ಸಂದೇಶಗಳ ವಿನಿಮಯದಲ್ಲಿ ಅನ್ನೊದು ಗಮನಿಸಬೇಕಾದ ಸಂಗತಿಯಾಗಿದೆ. ಪೇಸ್‌ಬುಕ್‌ ಒಡೆತನದ ಜಗತ್ತಿನ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ಆಗಿರೋ ವಾಟ್ಸಾಪ್‌ ಪ್ರತಿನಿತ್ಯ ಹೆಚ್ಚು ಸಂಖ್ಯೆಯ ಸಂದೇಶ ಮತ್ತು ಮಾಹಿತಿ ವಿನಿಮಯವನ್ನು ಮಾಡುತ್ತದೆ ನಿಜ, ಆದರೆ ಹೊಸ ವರ್ಷದ ಮುನ್ನಾದಿನ ವಾಟ್ಸಾಪ್‌ ಬಳಕೆದಾರರು 100 ಬಿಲಿಯನ್‌ ಗೂ ಅಧಿಕ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಮೂಲಕ ವಿಶ್ವದಾಖಲೆಯನ್ನ ವಾಟ್ಸಾಪ್‌ ಬರೆದಿದೆ.

ಸದ್ಯ

ಸದ್ಯ ವಾಟ್ಸಾಪ್‌ನಲ್ಲಿ ಅತಿ ಹೆಚ್ಚು ಸಂದೇಶಗಳನ್ನ ಬಳಕೆದಾರರು ವಿನಿಮಯ ಮಾಡಿಕೊಳ್ಳುತ್ತಾರೆ. ಅಷ್ಟೇ ಯಾಖೆ ಸಭೆ ಸಮಾರಂಭಗಳಿಗೆ ಸಂಬಂಧಿಸಿದ ಪೋಟೋ, ಇತರೆ ಮಾಹಿತಿ, ಸ್ಟೀಕರ್‌ಗಳನ್ನ ವಾಟ್ಸಾಪ್‌ನಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ. ಇದು ದಿನೇ ದಿನೇ ಹೆಚ್ಚುತ್ತಲೇ ಇದ್ದು,ಇದೀಗ ಹೊಸವಷರ್ಷದ ದಿನ 100 ಬಿಲಿಯನ್‌ಗೂ ಅಧಿಕ ಸಂದೇಶಗಳು ವಿನಿಮಯವಾಗಿದೆ ಅಂತಾ ವಾಟ್ಸಾಪ್‌ ಹೇಳಿಕೊಂಡಿದೆ.

ಕಳೆದ

ಕಳೆದ ಒಂದು ದಶಕದಲ್ಲಿ ಪ್ರಾರಂಭವಾದ ವಾಟ್ಸಾಪ್‌ ಹೊಸವರ್ಷದ ಮುನ್ನಾದಿನ ಒಂದೇ ದಿನದಲ್ಲಿ 100 ಬಿಲಿಯನ್‌ ಸಂದೇಶ ರವಾನೆಯಾಗಿರೋದು ಸರ್ವಕಾಲಿಕ ದಾಖಲೆಯಾಗಿದೆ. ಅದರಲ್ಲೂ 100 ಬಿಲಿಯನ್ + ಸಂದೇಶಗಳಲ್ಲಿ 20 ಶತಕೋಟಿಗೂ ಹೆಚ್ಚು ಸಂದೇಶಗಳನ್ನು ಭಾರತೀಯ ಬಳಕೆದಾರರು ಹಂಚಿಕೊಂಡಿದ್ದಾರೆ. ಅದರಲ್ಲೂ ಇತ್ತೀಚಿಗೆ ವಾಟ್ಸಾಪ್‌ ಮೇಸೆಜ್‌ ಜೊತೆಗೆ ಪಿಕ್ಚರ್ ಮೆಸೇಜಿಂಗ್ ವಿನಿಮಯ ಮಾಡುವ ಫೀಚರ್‌ ಪರಿಚಯಿಸಿತ್ತು. ಇದೇ ಕಾರಣಕ್ಕೆ ವಾಟ್ಸಾಪ್‌ನಲ್ಲಿ ವಿನಿಮಯಗೊಂಡ 100 ಬಿಲಿಯನ್ + ಸಂದೇಶಗಳಲ್ಲಿ ಸುಮಾರು 12 ಬಿಲಿಯನ್ ಚಿತ್ರ ಸಂದೇಶಗಳೇ ಆಗಿವೆ.

ಹೊಸ

ಹೊಸ ವರ್ಷದ ಮುನ್ನಾದಿನದ ಮಧ್ಯರಾತ್ರಿಯವರೆಗೆ 24 ಗಂಟೆಗಳ ಅವಧಿಯಲ್ಲಿ ಡಿಸೆಂಬರ್ 31 ರಂದು ಜಾಗತಿಕವಾಗಿ 100 ಬಿಲಿಯನ್ ಸಂದೇಶಗಳನ್ನು ಹಂಚಿಕೊಳ್ಳಲಾಗಿದೆ ಇದು ಕಳೆದ ಹತ್ತು ವರ್ಷಗಳ ಹಿಂದೆ ವಾಟ್ಸಾಪ್ ತನ್ನ ಸೇವೆ ಪ್ರಾರಂಬಿಸಿದಾಗಿನಿಂದ ಹಿಡಿದು ಇಲ್ಲಿಯವರೆಗೆ ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಸಂದೇಶ ವಿನಿಮಯವಾಗಿರಲಿಲ್ಲ. ಆದರೆ ಹೊಸವರ್ಷದ ಶುಭಾಶಯ ವಿನಿಮಯ ಮಾಡಲು ಜಗತ್ತಿನ ಅತಿ ಹೆಚ್ಚು ಗ್ರಾಹಕರು ವಾಟ್ಸಾಪ್‌ ಅನ್ನೇ ಬಳಸಿದ್ದಾರೆ ಅಂತಾ ವಾಟ್ಸಾಪ್‌ ಹೇಳಿಕೊಂಡಿದೆ.

ಅದರಲ್ಲೂ

ಅದರಲ್ಲೂ ವಾಟ್ಸಾಪ್‌ನ ಈ ದಾಖಲೆಯ ಹಿಂದೆ ಭಾರತೀಯ ಗ್ರಾಹಕರ ಕೊಡುಗೆಯೆ ಪ್ರಮುಖವಾಗಿದೆ. ಹೊಸ ವರ್ಷದ ಮುನ್ನಾದಿನದಂದು ಭಾರತೀಯ ಬಳಕೆದಾರರು 20 ಬಿಲಿಯನ್ ಸಂದೇಶಗಳನ್ನು ಹಂಚಿಕೊಂಡಿದ್ದು, ಇದು ಜಾಗತಿಕವಾಗಿ ವಿನಿಮಯವಾಗುವ ಒಟ್ಟು ಸಂದೇಶಗಳ ಐದನೇ ಒಂದು ಭಾಗವಾಗಿದೆ. ಹಾಗೇ ನೋಡಿದ್ರೆ ವಾಟ್ಸಾಪ್ ಬಳಕೆದಾರರಲ್ಲಿ ಹೆಚ್ಚಿನ ಪಾಲು ಭಾರತೀಯರ ಸಂಖ್ಯೆಯೆ ಅಧಿಕವಾಗಿದ್ದು ಇದು ಇನ್ನೂ ಬೆಳೆಯುತ್ತಲೇ ಇದೆ.

Most Read Articles
Best Mobiles in India

English summary
WhatsApp is one of the most widely used communication apps on the planet, and as such, clocks an insane number of message and media exchanges on a daily basis. But the New Year's Eve broke a record that has been standing since WhatsApp's debut a decade ago. WhatsApp has revealed that users exchanged over 100 billion messages on the New Year's eve. And out of that number, more than 20 billion messages were shared by Indian users alone. Moreover, around 12 billion out of the 100 billion+ messages shared on the platform were images.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more