ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಹೊಸ 'ಆಡಿಯೋ ಚಾಟ್ಸ್' ಫೀಚರ್ಸ್! ಏನಿದರ ಉಪಯೋಗ!
ಪ್ರಸ್ತುತ ದಿನಗಳಲ್ಲಿ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್ ತನ್ನದೇ ಅದ ಪ್ರಾಬಲ್ಯವನ್ನು ಸಾಧಿಸಿದೆ. ತನ್ನ ಆಕರ್ಷಕ ಫೀಚರ್ಸ್ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಪ್ರತಿನಿತ್ಯವೂ ಹೊಸ ಮಾದರಿಯ ಫೀಚರ್ಸ್ಗಳ ಬಗ್ಗೆ ಮಾಹಿತಿ ನೀಡುವ ವಾಟ್ಸಾಪ್ ಇದೀಗ ಮತ್ತೊಂದು ಆಕರ್ಷಕ ಫೀಚರ್ಸ್ ಪರಿಚಯಿಸಲು ಮುಂದಿದೆ.
ಹೌದು, ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಆಡಿಯೋ ಚಾಟ್ಸ್ ಎಂಬ ಹೊಸ ಫೀಚರ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಫೀಚರ್ಸ್ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಇನ್ನು ಈ ಫೀಚರ್ಸ್ ಮೂಲಕ ಬಳಕೆದಾರರು ಆಡಿಯೋ ಚಾಟ್ಗಳನ್ನು ಪ್ರಾರಂಭಿಸಲು ಸಾದ್ಯವಾಗಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ನ ಹೊಸ ಆಡಿಯೋ ಚಾಟ್ಸ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ. ಇನ್ನು ಈ ಹೊಸ ಫೀಚರ್ಸ್ ಚಾಟ್ ಹೆಡರ್ನಲ್ಲಿ ಕಾಣಿಸಲಿದೆ. ಇದಕ್ಕಾಗಿ ಹೊಸ ತರಂಗ ರೂಪಗಳ ಐಕಾನ್ ಅನ್ನು ಸೇರಿಸಲಾಗುತ್ತದೆ ಎಂದು ವಾ ಬೇಟಾ ಇನ್ಫೋ ವರದಿ ಮಾಡಿದೆ. ಇದು ಬಳಕೆದಾರರಿಗೆ ಆಡಿಯೊ ಚಾಟ್ಗಳನ್ನು ನಡೆಸುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ಬಳಕೆದಾರರು ಈಗಾಗಲೇ ಚಾಲ್ತಿಯಲ್ಲಿರುವ ಕರೆಗಳನ್ನು ಕೊನೆಗೊಳಿಸಲು ರೆಡ್ ಬಟನ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಇನ್ನು ಈ ಹೊಸ ವೇವ್ಫಾರ್ಮ್ ಐಕಾನ್ ರಿಯಲ್-ಟೈಂ ಆಡಿಯೊ ವಿಶ್ಯುಯಲೈಸೆಷನ್ ಸಾಮರ್ಥ್ಯವನ್ನು ಸೂಚಿಸಲಿದೆ. ಇದು ಚಾಟ್ ಹೆಡರ್ನ ಮೇಲಿರುವ ಜಾಗವನ್ನು ಆಡಿಯೊ ವೇವ್ಫಾರ್ಮ್ ಪ್ರದರ್ಶಿಸಲು ಕಾಯ್ದಿರಿಸುವ ಸಾಧ್ಯತೆಯಿದೆ. ಇದರಿಂದ ಬಳಕೆದಾರರು ತಮ್ಮ ಸಂಭಾಷಣೆಗಳ ನಡುವೆ ನ್ಯಾವಿಗೇಟ್ ಮಾಡುವಾಗ ವೇವ್ಫಾರ್ಮ್ ಅನ್ನು ವೀಕ್ಷಿಸಲು ಅನುಮತಿಸಲಿದೆ. ಈ ಹೊಸ ಫೀಚರ್ಸ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದೂ ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿವರ ಹೆಚ್ಚಿನ ಪ್ರಮಾಣದಲ್ಲಿ ಬಹಿರಂಗವಾಗಿಲ್ಲ.

ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ವಾಟ್ಸಾಪ್ ಐಒಎಸ್ ಬೀಟಾ ವರ್ಷನ್ನಲ್ಲಿ ಚಾಟ್ ಪಟ್ಟಿಯೊಳಗೆ ಪುಶ್ ಹೆಸರು ("Push name within the chat list") ಫೀಚರ್ಸ್ ಸೇರ್ಪಡೆ ಮಾಡಲು ಮುಂದಾಗಿದೆ. ಇದು ಅಪರಿಚಿತ ಗುಂಪಿನ ಸದಸ್ಯರಿಂದ ಸಂದೇಶವನ್ನು ಸ್ವೀಕರಿಸಿದಾಗ ಚಾಟ್ ಲಿಸ್ಟ್ನಲ್ಲಿ ಪುಶ್ ನೇಮ್ಗಳನ್ನು ಕಾಣುವಂತೆ ಮಾಡಲಿದೆ.
ವಾಟ್ಸಾಪ್ ಐಒಎಸ್ ಬೀಟಾ ವರ್ಷನ್ ಸೇರಿರುವ ಹೊಸ ಫುಶ್ ನೇಮ್ ವಿಥಿನ್ ದಿ ಚಾಟ್ ಲಿಸ್ಟ್ ಫೀಚರ್ಸ್ ಹೆಸರೇ ಸೂಚಿಸುವಂತೆ ವಿಶೇಷವಾಗಿದೆ. ನಿಮ್ಮ ವಾಟ್ಸಾಪ್ ಗ್ರೂಪ್ನಲ್ಲಿ ಅಪರಿಚಿತ ಸಂಖ್ಯೆಯಂದ ಸಂದೇಶವನ್ನು ಸ್ವೀಕರಿಸಿದರೆ ಪ್ರತಿ ಬಾರಿ ಫೋನ್ ನಂಬರ್ ಬದಲಿಗೆ ಚಾಟ್ ಲಿಸ್ಟ್ನಲ್ಲಿ ಪುಶ್ ನೇಮ್ ಅನ್ನು ತೋರಿಸಲಿದೆ. ಇದರಿಂದ ಪ್ರತಿ ಭಾರಿಯು ಸಂದೇಶ ಕಳುಹಿಸಿದ ಸಂದೇಶವನ್ನು ಕಾಣುವ ಬದಲಿಗೆ ಪುಶ್ ನೇಮ್ ನಿಮಗೆ ಕಾಣಿಸಲಿದೆ ಎಂದು ವಾಬೇಟಾ ಇನ್ಫೋ ವರದಿ ಮಾಡಿದೆ.

ಇನ್ನು ಈ ಫೀಚರ್ಸ್ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್ ಯಾರೆಂದು ಅರ್ಥಮಾಡಿಕೊಳ್ಳಲು ಅವಕಾಶ ನೀಡಲಿದೆ. ಅಲ್ಲದೆ ನೀವು ಪ್ರತಿ ಭಾರಿ ಸಂದೇಶ ಕಳುಹಿಸುವ ಸಂಖ್ಯೆಯನ್ನು ಸೇವ್ ಮಾಡಬೇಕಾದ ಅನಿವಾರ್ಯತೆ ಕೂಡ ಬರುವುದಿಲ್ಲ. ಈ ಹೊಸ ಫೀಚರ್ಸ್ ಆಯ್ಕೆಯು ಬಿಗ್ ಗ್ರೂಪ್ ಚಾಟ್ಗಳನ್ನು ಭಾಗವಹಿಸುವವರಿಗೆ ತುಂಬಾನೇ ಉಪಯುಕ್ತವಾಗಲಿದೆ. ಇದರಲ್ಲಿ ಪ್ರತಿಯೊಬ್ಬರ ಸಂಖ್ಯೆಯನ್ನು ಹುಡುಕುತ್ತಾ ಕೂರುವ ಬದಲು ಸಂದೇಶ ಕಳುಹಿಸಿದವರನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಿದೆ.
ಇದರೊಂದಿಗೆ ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ 21 ಹೊಸ ಎಮೋಜಿಗಳನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ಎಮೋಜಿಗಳನ್ನು ಅಧಿಕೃತ ವಾಟ್ಸಾಪ್ ಕೀಬೋರ್ಡ್ನಿಂದ ಡೈರೆಕ್ಟ್ ಆಗಿ ಸೆಂಡ್ ಮಾಡಬಹುದಾಗಿದೆ.


Click it and Unblock the Notifications








