Home
ಸುದ್ದಿಜಾಲ

ವಾಟ್ಸಾಪ್‌ ಬಳಸುವ ಪ್ರತಿಯೊಬ್ಬರಿಗೂ ಈ ಒಂದು ಆಯ್ಕೆಯಿಂದ ಲಾಭವಾಗೋದು ಪಕ್ಕಾ!

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಬಳಕೆದಾರರು ಸಾಕಷ್ಟು ದಿನದಿಂದ ಕಾಯ್ತಾ ಇದ್ದ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಅದರಂತೆ ಈ ಫೀಚರ್ಸ್‌ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಾಗಲಿದ್ದು, ವಾಟ್ಸಾಪ್‌ನಲ್ಲಿ ನೀವು ನೇರವಾಗಿ ಕಂಟ್ಯಾಕ್ಟ್‌ ಅನ್ನು ಸೇವ್‌ ಮಾಡಬಹುದಾಗಿದೆ.

ಹೌದು, ವಾಟ್ಸಾಪ್‌ನಲ್ಲಿಯೇ ಡೈರೆಕ್ಟ್‌ ಆಗಿ ಹೊಸ ಕಂಟ್ಯಾಕ್ಟ್‌ಗಳನ್ನು ಸೇರ್ಪಡೆ ಮಾಡುವ ಮತ್ತು ಅವುಗಳನ್ನು ಸೇವ್‌ ಮಾಡುವ ಅವಕಾಶ ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ಸ್‌ ಬೀಟಾ ಪರೀಕ್ಷೆಗೆ ಪ್ರವೇಶವಿರುವವರಿಗೆ ಲಭ್ಯವಾಗಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಬಳಸುವ ಪ್ರತಿಯೊಬ್ಬರಿಗೂ ಈ ಒಂದು ಆಯ್ಕೆಯಿಂದ ಲಾಭವಾಗೋದು ಪಕ್ಕಾ!

ಏನಿದು ಹೊಸ ಫೀಚರ್ಸ್‌?

ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಚಾಟ್‌ ಮಾಡಬೇಕಾದರೆ ಫೋನ್‌ಬುಕ್‌ನಲ್ಲಿ ಕಂಟ್ಯಾಕ್ಟ್‌ ಅನ್ನು ಸೇವ್‌ ಮಾಡುವುದು ಅವಶ್ಯಕವಾಗಿದೆ. ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಸೇವ್‌ ಮಾಡಿದ ನಂತರ ವಾಟ್ಸಾಪ್‌ಗೆ ತೆರಳಿ ಚಾಟ್‌ ಮಾಡಬಹುದು. ಆದರೆ ಇದೀಗ ವಾಟ್ಸಾಪ್‌ ಪರಿಚಯಿಸುತ್ತಿರುವ ಈ ಸಮಸ್ಯೆಗೆ ಮುಕ್ತಿ ಆಡಲಿದೆ. ಅಂದರೆ ಇನ್ಮುಂದೆ ಹೊಸ ಕಂಟ್ಯಾಕ್ಟ್‌ಗಳನ್ನು ವಾಟ್ಸಾಪ್‌ನಿಂದ ಹೊರಹೋಗಿ ಸೇವ್‌ ಮಾಡಬೇಕಾಗಿಲ್ಲ. ಬದಲಿಗೆ ವಾಟ್ಸಾಪ್‌ನಲ್ಲಿಯೇ ಹೊಸ ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಬಹುದಾಗಿದೆ.

ಇದರಿಂದ ಏನು ಉಪಯೋಗ?

ವಾಟ್ಸಾಪ್‌ನಲ್ಲಿ ಚಾಟ್‌ ಮಾಡಲು ಬಯಸುವ ಯಾವುದೇ ಕಂಟ್ಯಾಕ್ಟ್‌ಗಳನ್ನು ಫೋನ್‌ಬುಕ್‌ನಲ್ಲಿ ಸೇವ್‌ ಮಾಡಲೇಬೇಕಾದ ಅನಿವಾರ್ಯತೆಯನ್ನು ದೂರಮಾಡಲಿದೆ. ವಾಟ್ಸಾಪ್‌ ಬಳಸುವಾಗ ನಂಬರ್‌ ಸೇವ್‌ ಮಾಡುವುದಕ್ಕಾಗಿ ಅಪ್ಲಿಕೇಶನ್‌ನಿಂದ ಹೊರಹೋಗುವುದನ್ನು ತಪ್ಪಿಸಲಿದೆ. ವಾಟ್ಸಾಪ್‌ನಲ್ಲಿರುವಾಗಲೇ ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವ ಅವಕಾಶ ದೊರೆಯುವುದರಿಂದ ಹೆಚ್ಚುವರಿ ಅಪ್ಲಿಕೇಶನ್‌ ತೆರೆಯುವ ಸಾಧ್ಯತೆ ದೂರವಾಗಲಿದೆ. ಇದು ವಾಟ್ಸಾಪ್‌ನಲ್ಲಿಯೇ ಕಂಟ್ಯಾಕ್ಟ್‌ ಅನ್ನು ಸೇವ್‌ ಮಾಡುವುದಕ್ಕೆ ಅವಕಾಶ ನೀಡಿರುವುದರಿಂದ ಸುಲಭವಾಗಿ ವಾಟ್ಸಾಪ್‌ ಚಾಟ್‌ ನಡೆಸಬಹುದಾಗಿದೆ.

ವಾಟ್ಸಾಪ್‌ ಬಳಸುವ ಪ್ರತಿಯೊಬ್ಬರಿಗೂ ಈ ಒಂದು ಆಯ್ಕೆಯಿಂದ ಲಾಭವಾಗೋದು ಪಕ್ಕಾ!

ಇದರ ಲಭ್ಯತೆ ಯಾವಾಗ?

ಈ ಫೀಚರ್ಸ್‌ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಒಂದು ವೇಳೆ ನೀವು ನಿಮ್ಮ ವಾಟ್ಸಾಪ್‌ನಲ್ಲಿ ಕಾಂಟಾಕ್ಟ್ ಲಿಸ್ಟ್‌ ಅನ್ನು ತೆರೆದಾಗ "ನ್ಯೂ ಕಾಂಟಾಕ್ಟ್" ಆಯ್ಕೆ ಕಾಣಿಸಿದರೆ ಈ ಫೀಚರ್ಸ್‌ ನಿಮಗೆ ಲಭ್ಯವಿದೆ ಎಂದು ಅರ್ಥ. ಇದರ ಮೂಲಕ ನೀವು ವಾಟ್ಸಾಪ್‌ನಿಂದ ಎಕ್ಸಿಟ್‌ ಆಗದೇ ಹೊಸ ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಲು ಸಾಧ್ಯವಾಗಲಿದೆ. ಇದಲ್ಲದೆ ನೀವು ಸೇವ್‌ ಮಾಡದ ಕಂಟ್ಯಾಕ್ಟ್‌ಗಳು ಕೂಡ ವಾಟ್ಸಾಪ್‌ನಲ್ಲಿ ಕಂಡು ಬಂದರೆ ಅವುಗಳನ್ನು ಕೂಡ ಕಂಟ್ಯಾಕ್ಟ್‌ ಲಿಸ್ಟ್‌ಗೆ ಸೇರಿಸಬಹುದು ಎಂದು ವರದಿಯಾಗಿದೆ.

ಇನ್ನು ಇತ್ತೀಚಿಗೆ WABetaInfo ಈಗ ಆಂಡ್ರಾಯ್ಡ್‌ ಓಎಸ್‌ಗಾಗಿ ಇತ್ತೀಚಿನ ವಾಟ್ಸಾಪ್‌ ಬೀಟಾ ಆವೃತ್ತಿಯೊಂದಿಗೆ UI ಬದಲಾವಣೆಯನ್ನು ಬಹಿರಂಗಪಡಿಸಿದೆ. ವಾಟ್ಸಾಪ್‌ ಸೇರಲಿರುವ ನೂತನ ಬಾಟಮ್‌ ನ್ಯಾವಿಗೇಶನ್ ಬಾರ್‌ ಆಯ್ಕೆಯು ವಾಟ್ಸಾಪ್‌ನ ಕೆಳಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಈ ನ್ಯಾವಿಗೇಶನ್ ಬಾರ್‌ ಚಾಟ್ಸ್‌, ಕಮ್ಯೂನಿಟಿ, ಸ್ಟೇಟಸ್‌ ಮತ್ತು ಕರೆ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ಸ್ಕ್ರೀನ್‌ಶಾಟ್‌ನಲ್ಲಿ ಕಾಣಿಸಿದೆ.

ವಾಟ್ಸಾಪ್‌ ಬಳಸುವ ಪ್ರತಿಯೊಬ್ಬರಿಗೂ ಈ ಒಂದು ಆಯ್ಕೆಯಿಂದ ಲಾಭವಾಗೋದು ಪಕ್ಕಾ!

ವಾಟ್ಸಾಪ್‌ನ ಅಧಿಕೃತ ಮಾಹಿತಿ ತಿಳಿಸುವ WABetaInfo ಪ್ರಕಾರ, ನೂತನವಾಗಿ ಸೇರ್ಪಡೆ ಮಾಡಲು ಸಿದ್ಧವಾಗಿರುವ ಬಾಟಮ್ ನ್ಯಾವಿಗೇಷನ್ ಬಾರ್ ವಾಟ್ಸಾಪ್‌ ನ iOS ಆವೃತ್ತಿಯಂತೆಯೇ ಕಾಣುತ್ತದೆ. ಇದು ಆಂಡ್ರಾಯ್ಡ್‌ ನಿಂದ ಐಓಎಸ್‌ ಗೆ ಬದಲಾಯಿಸುವವರಿಗೆ ಬಳಕೆಯ ಅನುಭವವನ್ನು ಒಂದೇ ತರಹನಾಗಿ ಉಳಿಸುತ್ತದೆ. ಅಂದಹಾಗೆ ಈ ಹೊಸ ಬಾಟಮ್ ನ್ಯಾವಿಗೇಷನ್ ಬಾರ್ ವಾಟ್ಸಾಪ್‌ ಅಪ್ಲಿಕೇಶನ್‌ನ ಸಾಮಾನ್ಯ ಆವೃತ್ತಿಗೆ ಯಾವಾಗ ಕಾಣಿಸಿಕೊಳ್ಳಲಿದೆ ಎನ್ನುವ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ ಆಂಡ್ರಾಯ್ಡ್‌ ನ ಸ್ಥಿರ ಆವೃತ್ತಿಗಾಗಿ ವಾಟ್ಸಾಪ್‌ ನಲ್ಲಿ ಬಾಟಮ್ ನ್ಯಾವಿಗೇಷನ್ ಬಾರ್ ಆಗಮನಕ್ಕೆ ಯಾವುದೇ ನಿಗದಿತ ಟೈಮ್‌ಲೈನ್ ಇಲ್ಲ.

Best Mobiles in India

English summary
WhatsApp Working a new feature for the save contacts without exiting the app!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+