Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ ಬಳಕೆದಾರರಿಗೆ ಲಭ್ಯವಾಗಲಿದೆ ಈ ಅಚ್ಚರಿಯ ಫೀಚರ್ಸ್‌!

ಇಂದಿನ ದಿನಗಳಲ್ಲಿ ವಾಟ್ಸಾಪ್‌ ಪ್ರಮುಖ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ನಲ್ಲಿ ಸ್ನೇಹಿತರೊಡನೆ ಚಾಟ್‌ ಮಾಡುವುದು ಸಾಮಾನ್ಯ, ಅಷ್ಟೇ ಅಲ್ಲ ಪ್ರಮುಖ ವಿಚಾರಗಳ ನಡುವೆ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಚರ್ಚೆ ಕೂಡ ನಡೆಯುತ್ತಿರುತ್ತದೆ. ಕೆಲವೊಮ್ಮೆ ಈ ವಾದಗಳು ಯಾವುದು ಸರಿ ಯಾವುದು ತಪ್ಪು ಅನ್ನೊ ಚರ್ಚೆ ಹುಟ್ಟುಹಾಕುತ್ತದೆ. ಇಂತಹ ಸನ್ನಿವೇಶದಲ್ಲಿ ಪೋಲ್‌ ಮಾಡುವುದಕ್ಕೆ ವಾಟ್ಸಾಪ್‌ನಲ್ಲಿ ಅವಕಾಶವಿದ್ದರೆ ಎಷ್ಟು ಚಂದಾ ಎನಿಸಿಬಿಡುತ್ತದೆ. ಬಳಕೆದಾರರ ಈ ಆಶಯಕ್ಕೆ ಇದೀಗ ವಾಟ್ಸಾಪ್‌ ಕೂಡ ತಯಾರಿ ನಡೆಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲೂ ಪೋಲ್‌ ಫೀಚರ್‌ ಪರಿಚಯಿಸಲು ಮುಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಗ್ರೂಪ್‌ ಪೋಲ್‌ ಫೀಚರ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್‌ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ ಎಂದು ಹೇಳಲಾಗ್ತಿದೆ. ವಾಟ್ಸಾಪ್‌ನ ಹೊಸ ಅಪ್‌ಡೇಟ್ 22.6.0.70 ನಲ್ಲಿ ಈ ಫೀಚರ್ಸ್‌ ಬರಲಿದೆ ಎಂದು ವರದಿಯಾಗಿದೆ. ಇದು ವಾಟ್ಸಾಪ್‌ ಗ್ರೂಪ್‌ನಲ್ಲಿ ಸಮೀಕ್ಷೆಗಳನ್ನು ಕ್ರಿಯೆಟ್‌ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನ ಗ್ರೂಪ್‌ ಪೋಲ್‌ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಗ್ರೂಪ್‌ ಚರ್ಚೆಗಳನ್ನು ನಡೆಸಲು ಸುಲಭವಾಗಲಿದೆ. ಗ್ರೂಪ್‌ನಲ್ಲಿ ನೀವು ಚರ್ಚಿಸುವ ವಿಚಾರದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಸಮೀಕ್ಷೆ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ಉತ್ತಮವಾದ ಚರ್ಚೆ ನಡೆಸುವುದಕ್ಕೆ ಇದು ಅನುಕೂಲ ಮಾಡಿಕೊಡಲಿದೆ. ಸದ್ಯ ವಾಟ್ಸಾಪ್ ಗ್ರೂಪ್ ಪೋಲ್ ಫೀಚರ್ ಅನ್ನು WABetaInfo ಗುರುತಿಸಿದ್ದು, ವಾಟ್ಸಾಪ್‌ ಟೆಸ್ಟ್‌ಫ್ಲೈಟ್ ಬೀಟಾ ಪ್ರೋಗ್ರಾಂನಲ್ಲಿ ಅಭಿವೃದ್ಧಿ ಪಡಿಸುತ್ತಿದೆ ಎನ್ನಲಾಗಿದೆ.

ವಾಟ್ಸಾಪ್‌

ಇನ್ನು ಒಂದೇ ಚಾಟ್‌ಗಳಲ್ಲಿ ವಾಟ್ಸಾಪ್‌ ಪೋಲ್‌ಗಳು ಲಭ್ಯವಿರುವುದಿಲ್ಲ. ಗುಂಪುಗಳಲ್ಲಿ, ನೀವು ಪ್ರಶ್ನೆಯನ್ನು ಕೇಳಲು ಸಾಧ್ಯವಾಗುತ್ತದೆ. ನಂತರ ನೀವು ಕೇಳುವ ಪ್ರಶ್ನೆಗೆ ಇತರರು ಅದರ ಮೇಲೆ ಮತ ಹಾಕಬಹುದು. ಈ ಪೋಲ್‌ಗಳನ್ನು ಸಹ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ಮಾಡಲಾಗಿರುತ್ತದೆ ಎನ್ನಲಾಗಿದೆ. ವಾಟ್ಸಾಪ್‌ ಗ್ರೂಪಿನ ಸದಸ್ಯರು ಮಾತ್ರ ಸಮೀಕ್ಷೆ ಮತ್ತು ಸಮೀಕ್ಷೆಯ ಫಲಿತಾಂಶಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಉತ್ತರಗಳನ್ನು ಸಹ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ಈ ಫೀಚರ್ಸ್‌ ಕಾರ್ಯನಿರ್ವಹಣೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ವಾಟ್ಸಾಪ್‌

ಇದಲ್ಲದೆ ನೀವು ವಾಟ್ಸಾಪ್‌ ಮೂಲಕ ವಾಟ್ಸಾಪ್‌ನಲ್ಲಿ ಬರುವ ಸುದ್ದಗಳ ಅಸಲಿಯತ್ತನ್ನು ಪರಿಶೀಲಿಸಬಹುದು. ಇದಕ್ಕಾಗಿ ವಾಟ್ಸಾಪ್‌ ಹೊಂದಿರುವ ಫ್ಯಾಕ್ಟ್‌ ಚೆಕಿಂಗ್‌ ಸಂಸ್ಥೆಗಳ ಟಿಪ್‌ಲೈನ್‌ಗಳನ್ನು ಬಳಸಬಹುದು. ಈ ಟಿಪ್‌ಲೈನ್‌ಗಳನ್ನು ಇಂಟರ್‌ನ್ಯಾಶನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ (IFCN) ಮೂಲಕ ಪರಿಶೀಲಿಸಲಾಗಿದೆ. ಇವುಗಳ ಮೂಲಕ ಫೋಟೋಗಳು, ವೀಡಿಯೊಗಳು ಮತ್ತು ವಾಯ್ಸ್‌ ರೆಕಾರ್ಡಿಂಗ್‌ಗಳು ಸೇರಿದಂತೆ ನಿಮ್ಮನ್ನು ತಪ್ಪುದಾರಿಗೆಳೆಯುವ ವಿಷಯವನ್ನು ಪರಿಶೀಲಿಸಲು ಬಳಸಬಹುದು. ಇನ್ನು ಈ ಟಿಪ್‌ಲೈನ್‌ಗಳಲ್ಲಿ ಹೆಚ್ಚಿನ ಸಂಸ್ಥೆಗಳು ಇಂಗ್ಲಿಷ್ ಮತ್ತು ಬಂಗಾಳಿ, ಹಿಂದಿ, ಮರಾಠಿ ಮತ್ತು ಪಂಜಾಬಿ ಸೇರಿದಂತೆ ಭಾರತದ 11 ಭಾಷೆಗಳನ್ನು ಬೆಂಬಲಿಸುತ್ತವೆ.

ವಾಟ್ಸಾಪ್‌ ನಲ್ಲಿ ಫ್ಯಾಕ್ಟ್‌ ಚೆಕ್‌ ಮಾಡಲು ಟಿಪ್‌ಲೈನ್‌ಗಳನ್ನು ಬಳಸುವುದು ಹೇಗೆ?

ವಾಟ್ಸಾಪ್‌ ನಲ್ಲಿ ಫ್ಯಾಕ್ಟ್‌ ಚೆಕ್‌ ಮಾಡಲು ಟಿಪ್‌ಲೈನ್‌ಗಳನ್ನು ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಬರುವ ಸುದ್ದಿಯ ಅಸಲಿಯತೆ ಪರಿಶೀಲಿಸಲು ಟಿಪ್‌ಲೈನ್‌ ಬಳಸುವುದಕ್ಕೆ ಬಳಕೆದಾರರು ತಮ್ಮ ಕಂಟ್ಯಾಕ್ಟ್‌ನಲ್ಲಿ ಟಿಪ್‌ಲೈನ್‌ಗಳ ಸಂಖ್ಯೆಗಳನ್ನು ಸೇವ್‌ ಮಾಡಬೇಕು. ನಂತರ ನೀವು ಬಯಸುವ ಮಾಹಿತಿಯನ್ನು ಮೌಲ್ಯೀಕರಿಸಲು ಟಿಪ್‌ಲೈನ್‌ ಸಂಖ್ಯೆಗೆ ವಾಟ್ಸಾಪ್‌ನಲ್ಲಿ "ಹಾಯ್" ಎಂದು ಕಳುಹಿಸಬೇಕು. ಟಿಪ್‌ಲೈನ್‌ಗಳು ಮೂಲಭೂತವಾಗಿ ಚಾಟ್‌ಬಾಟ್‌ಗಳಾಗಿರುವುದರಿಂದ, ನೀವು ಫೀಡ್ ಮಾಡುವ ಮಾಹಿತಿಯನ್ನು ಪರಿಶೀಲಿಸಲು ಅವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ನಂತರ ನೀವು ಕಳುಹಿಸಿದ ಮಾಹಿತಿಯ ಅಸಲಿಯತೆಯನ್ನು ಬಹಿರಂಗ ಪಡಿಸುತ್ತವೆ.

Best Mobiles in India

English summary
WhatsApp Group discussions will get way easier with this new upcoming feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+