ವಾಟ್ಸಾಪ್ ಸೇರಲಿದೆ ಹೊಸ AI ಟೂಲ್; ಇದು ನಿಮ್ಮ ಆಲೋಚನೆಗೂ ಮೀರಿದ್ದು!
ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಹಲವು ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಅಪ್ಡೇಟ್ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ವಾಟ್ಸಾಪ್ AI ಅನ್ನು ಬಳಸಿಕೊಂಡು ಕಸ್ಟಮ್ ಸ್ಟಿಕ್ಕರ್ಗಳನ್ನು ಕ್ರಿಯೆಟ್ ಮಾಡಲು ಅವಕಾಶ ನೀಡುವ ಫೀಚರ್ಸ್ ಪರಿಚಯಿಸಲು ಮುಂದಾಗಿದೆ.
ಹೌದು, ವಾಟ್ಸಾಪ್ ನ್ಯೂ ಜೆನೆರೇಟಿವ್ AI ಬ್ಯಾಕ್ಡ್ ಫೀಚರ್ ಅನ್ನು ಟೆಸ್ಟ್ ಮಾಡುತ್ತಿದೆ. ಇದರಲ್ಲಿ ಬಳಕೆದಾರರು ಕೇವಲ ಟೆಕ್ಸ್ಟ್ ಪ್ರಾಂಪ್ಟ್ನೊಂದಿಗೆ ಕಸ್ಟಮ್ ಸ್ಟಿಕ್ಕರ್ಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಇದರಿಂದ ಬಳಕೆದಾರರು ತಮ್ಮ ಆಲೋಚನೆಯನ್ನು ಸ್ಟಿಕ್ಕರ್ ಆಗಿ ಕನ್ವರ್ಟ್ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್ನಲ್ಲಿ AI ಬಳಸಿಕೊಂಡು ವಾಟ್ಸಾಪ್ನಲ್ಲಿ ಕಸ್ಟಮ್ ಸ್ಟಿಕ್ಕರ್ಗಳನ್ನು ಕ್ರಿಯೆಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮಗೆಲ್ಲಾ ತಿಳಿದಿರುವಂತೆ AI ಟೆಕ್ನಾಲಜಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಕೂಡ AI ಆಧಾರಿತ ವ್ಯವಸ್ಥೆ ಸಾಕಷ್ಟು ಸೌಂಡ್ ಮಾಡುತ್ತಿದೆ. ಇದಕ್ಕೆ ಇದೀಗ ವಾಟ್ಸಾಪ್ ಕೂಡ ಹೊರತಾಗಿಲ್ಲ. ವಾಟ್ಸಾಪ್ ಕೂಡ AI ಬಳಸಿಕೊಂಡು ಕಸ್ಟಮ್ ಸ್ಟಿಕ್ಕರ್ಗಳನ್ನು ಕ್ರಿಯೆಟ್ ಮಾಡಲು ಅವಕಾಶ ನೀಡುವುದಕ್ಕೆ ಮುಂದಾಗಿದೆ. ಇದರಿಂದ ಬಳಕೆದಾರರು ತಮ್ಮ ಆಲೋಚನೆಯನ್ನು AI ಮೂಲಕ ಕಸ್ಟಮ್ ಸ್ಟಿಕ್ಕರ್ ಕ್ರಿಯೆಟ್ ಮಾಡಬಹುದಾಗಿದೆ.
ಈ ಹೊಸ ಆಯ್ಕೆಯು ಆಂಡ್ರಾಯ್ಡ್ 2.23.17.8 ಅಥವಾ ಹೊಸ ಆವೃತ್ತಿಯ ವಾಟ್ಸಾಪ್ ಬೀಟಾ ಬಳಕದಾರರಿಗೆ ಲಭ್ಯವಿದೆ. ಈ ಆವೃತ್ತಿಯನ್ನು ಹೊಂದಿರುವ ಬಳಕೆದಾರರು ತಮ್ಮ ಕಲ್ಪನೆಯನ್ನು ತ್ವರಿತವಾಗಿ ಅನಿಮೇಟೆಡ್ ಸ್ಟಿಕ್ಕರ್ ಆಗಿ ಕನ್ವರ್ಟ್ ಮಾಡಲು ಸಾಧ್ಯವಾಗಲಿದೆ. ಅಂದರೆ ನೀವು ಏನು ಆಲೋಚನೆ ಮಾಡುತ್ತೀರಿ ಅದನ್ನು ಸ್ಟಿಕ್ಕರ್ ರೂಪದಲ್ಲಿ ಕಾಣಬಹುದಾಗಿದೆ. ಸದ್ಯ ಈ ಆಯ್ಕೆಯು ಸೀಮಿತ ಸಂಖ್ಯೆಯ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೆ ಮುಂಬರುವ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ.
AI ಬಳಸಿಕೊಂಡು ವಾಟ್ಸಾಪ್ನಲ್ಲಿ ಕಸ್ಟಮ್ ಸ್ಟಿಕ್ಕರ್ಗಳನ್ನು ಕ್ರಿಯೆಟ್ ಮಾಡಲು ಹೀಗೆ ಮಾಡಿ
ನೀವು ಕೂಡ ವಾಟ್ಸಾಪ್ ಬೀಟಾ ಪ್ರವೇಶ ಬಳಕೆದಾರರಾಗಿದ್ದರೆ AI ಸ್ಟಿಕ್ಕರ್ ಜನರೇಟಿವ್ ಫೀಚರ್ಸ್ ಲಭ್ಯವಿರಲಿದೆ. ಒಂದು ವೇಳೆ ನಿಮಗೆ ಈ ಆಯ್ಕೆಯು ಲಭ್ಯವಿದ್ದರೆ AI ಕಸ್ಟಮ್ ಸ್ಟಿಕ್ಕರ್ಗಳನ್ನು ಕ್ರಿಯೆಟ್ ಮಾಡಲು ಈ ಹಂತಗಳನ್ನು ಅನುಸರಿಸಿರಿ.
* ಮೊದಲಿಗೆ ವಾಟ್ಸಾಪ್ನಲ್ಲಿ ಯಾವುದೇ ಚಾಟ್ ತೆರೆಯಿರಿ
* ಇದರಲ್ಲಿ ಸ್ಮೈಲಿ ಐಕಾನ್ ಕ್ಲಿಕ್ ಮಾಡುವ ಮೂಲಕ ಸ್ಟಿಕ್ಕರ್ಗಳ ವಿಂಡೋವನ್ನು ತೆರೆಯಿರಿ
* ನಂತರ "ನಿಮ್ಮ ಸ್ವಂತ AI ಸ್ಟಿಕ್ಕರ್ ಅನ್ನು ರಚಿಸು" ("generate your own AI sticker") ಎಂಬ ಆಯ್ಕೆ ಕಾಣಲಿದೆ
* ಅದರ ಮೇಲೆ ಕ್ಲಿಕ್ ಮಾಡಿ.
* ನಂತರ ಅನಿಮೇಟೆಡ್ ಸ್ಟಿಕ್ಕರ್ ಕ್ರಿಯೆಟ್ ಮಾಡಲು "ಕ್ಯಾಟ್ ಲಾಫಿಂಗ್ ಆನ್ ಎ ಸ್ಕೇಟ್ಬೋರ್ಡ್" ಟೆಕ್ಸ್ಟ್ ಪ್ರಾಂಪ್ಟ್ ಕ್ರಿಯೆಟ್ ಮತ್ತು ನಮೂದಿಸಿ ಕ್ಲಿಕ್ ಮಾಡಿ.
* ಇದೀಗ ವಿವರಣೆಯನ್ನು ಅವಲಂಬಿಸಿ, ವಾಟ್ಸಾಪ್ ನಿಮಗೆ ಕೆಲವು ಆಯ್ಕೆಗಳನ್ನು ನೀಡಲಿದೆ
ಇನ್ನು ವಾಟ್ಸಾಪ್ AI ಬಳಸಿಕೊಂಡು ನೀವು ಯಾವುದ್ಯಾವುದೋ ಸ್ಟಿಕ್ಕರ್ ಕ್ರಿಯೆಟ್ ಮಾಡುವುದಕ್ಕೆ ಅವಕಾಶವಿಲ್ಲ. ಏಕೆಂದರೆ ಸೂಕ್ತವಲ್ಲದ ಅಥವಾ ಹಾನಿಕಾರಕ ಸ್ಟಿಕ್ಕರ್ಗಳನ್ನು ವರದಿ ಮಾಡುವ ಅವಕಾಶವೂ ಇದೆ. ಈ ಸ್ಟಿಕ್ಕರ್ಗಳು ನಿರ್ದಿಷ್ಟ ವಿನ್ಯಾಸದ ಮಾದರಿಯನ್ನು ಅನುಸರಿಸುತ್ತವೆ. ಆದರಿಂದ ಬಳಕೆದಾರರಿಗೆ ವಾಟ್ಸಾಪ್ನಲ್ಲಿ ಸಾಮಾನ್ಯ ಮತ್ತು AI- ಕ್ರಿಯೆಟ್ ಸ್ಟಿಕ್ಕರ್ಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ವಾಟ್ಸಾಪ್ ಸದ್ಯ ಈ ಫೀಚರ್ಸ್ಗೆ ಸಂಬಂಧಿಸಿದಂತೆ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಫೀಚರ್ಸ್ ಅನ್ನು ಬಳಸುವುದಕ್ಕೆ ಆಯ್ದ ಬಳಕೆದಾರರಿಗೆ ನಿರ್ಬಂಧಿಸಿದೆ.


Click it and Unblock the Notifications








