ಭಾರತದಲ್ಲಿ OnePlus 13T ಫೋನ್ ಬಿಡುಗಡೆ ಯಾವಾಗ ಗೊತ್ತಾ?
OnePlus ಸಂಸ್ಥೆಯು ತನ್ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್ OnePlus 13T ಅನ್ನು ಚೀನಾದ ಮಾರುಕಟ್ಟೆಯಲ್ಲಿ ನೆನ್ನೆಯಷ್ಟೇ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಉನ್ನತ-ಮಟ್ಟದ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳನ್ನು ಹೊಂದುವುದು ಮಾತ್ರವಲ್ಲದೆ, ಕಡಿಮೆ ಬೆಲೆಯ ಮೂಲಕ ಗಮನ ಸೆಳೆದಿದೆ. ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತ ಸೇರಿದಂತೆ ಇತರ ಜಾಗತಿಕ ಮಾರುಕಟ್ಟೆಗಳಿಗೂ ಪ್ರವೇಶಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹೌದು, ಭಾರತದಲ್ಲಿ ಕಾಂಪ್ಯಾಕ್ಟ್ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನೊಳಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಕುರಿತು OnePlus ನಡೆಸಿದ ಸಮೀಕ್ಷೆಯು 2025 ರಲ್ಲಿ ಭಾರತೀಯ ಗ್ರಾಹಕರು ಕಾಂಪ್ಯಾಕ್ಟ್ ಫೋನ್‌ಗಳನ್ನು ಬಯಸುತ್ತಿದ್ದಾರೆ. ಕೌಂಟರ್‌ಪಾಯಿಂಟ್ ರಿಸರ್ಚ್ ಸಂಸ್ಥೆಯ ವರದಿಯ ಪ್ರಕಾರ, ಶೇಕಡಾ 74 ರಷ್ಟು ಭಾರತೀಯ ಬಳಕೆದಾರರು ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್‌ಗಳನ್ನು ಬಯಸುತ್ತಾರೆ ಎಂದು ಹೇಳಿತ್ತು. ಇದು OnePlus ನ ಇತ್ತೀಚಿನ ಕಾರ್ಯತಂತ್ರದ ನಡೆಯನ್ನು ಸೂಚಿಸುತ್ತದೆ.

ಚೀನಾದಂತೆಯೇ ಭಾರತದಲ್ಲಿಯೂ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ OnePlus ತನ್ನ OnePlus 13T ಅನ್ನು ಭಾರತಕ್ಕಾಗಿಯೂ ಸಹ ನಿರ್ಮಿಸಿದೆ. ಹಾಗಾಗಿ, ಭಾರತದಲ್ಲಿ OnePlus 13T ಸ್ಮಾರ್ಟ್‌ಫೋನ್ ಇದೇ ಮೇ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆಯಾಗಬಹುದು ಎಂದು ಪ್ರಮುಖ ಮಾಧ್ಯಮ ವರದಿಯು ತಿಳಿಸಿದೆ. ಆದರೆ ಈ ಬಗ್ಗೆ OnePlus ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂಬುದನ್ನು ನಾವು ಗಮನಿಸುವುದು ಇಲ್ಲಿ ಮುಖ್ಯ.
2022 ರಲ್ಲಿ OnePlus 10T ಬಿಡುಗಡೆಯಾದ ನಂತರ, ಈಗ ಮೂರು ವರ್ಷಗಳ ಬಳಿಕ 'T' ಸರಣಿಯಲ್ಲಿ OnePlus 13T ಸ್ಮಾರ್ಟ್‌ಫೋನ್ ಪರಿಚಯಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಕೇವಲ 185 ಗ್ರಾಂ ತೂಕವನ್ನು ಹೊಂದಿರುವ ಈ ಫೋನ್ ತನ್ನ ಲೋಹದ ವಿನ್ಯಾಸ, ಅತ್ಯದ್ಬುತ ಫೀಚರ್ಸ್ ಮತ್ತು ಕಡಿಮೆ ಬೆಲೆಯಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಚೀನಾದಲ್ಲಿ OnePlus 13T ಸ್ಮಾರ್ಟ್‌ಫೋನಿನ 12GB RAM + 256GB ಸ್ಟೋರೇಜ್ ಮಾದರಿಯ ಬೆಲೆ ಕೇವಲ 39,805 ರೂ.ಗಳಿಂದ ಆರಂಭವಾಗಿದೆ.
OnePlus 13T ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಹೀಗಿವೆ,
ಹೊಸ OnePlus 13T ಸ್ಮಾರ್ಟ್‌ಫೋನ್ 6.3 ಇಂಚಿನ 1.5K 8T LTPO ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 2640 × 1216 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. ಡಿಸ್ಪ್ಲೇಯು ಡಾಲ್ಬಿ ವಿಷನ್ ಮತ್ತು ಒಪ್ಪೋ ಕ್ರಿಸ್ಟಲ್ ಶೀಲ್ಡ್ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ.
ಕಾರ್ಯನಿರ್ವಹಣೆ ವಿಭಾಗದಲ್ಲಿ, OnePlus 13T ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಆಂಡ್ರಾಯ್ಡ್ 15 ಆಧಾರಿತ ColorOS 15 ಅನ್ನು ಹೊಂದಿದೆ. ಇದು 12GB ಅಥವಾ 16GB RAM ಮತ್ತು 256GB, 512GB ಅಥವಾ 1TB ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಕ್ಯಾಮೆರಾ ವಿಭಾಗದಲ್ಲಿ, OnePlus 13T ಹಿಂಭಾಗದಲ್ಲಿ OIS ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾವನ್ನು ಹೊಂದಿದೆ. ಇದು 4K 60fps ವರೆಗಿನ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದ್ದು, ಇದು 1080p 30fps ವಿಡಿಯೋ ರೆಕಾರ್ಡಿಂಗ್ ಅನ್ನು ನೀಡುತ್ತದೆ.
ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ, ಈ ಫೋನ್ 6260mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್, IP65 ರೇಟಿಂಗ್ (ನೀರು ಮತ್ತು ಧೂಳಿನ ಪ್ರತಿರೋಧ), ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮೋಸ್ ಮತ್ತು 5G, ವೈ-ಫೈ 7, ಬ್ಲೂಟೂತ್ 5.4, NFC ಮತ್ತು GPS ನಂತಹ ಕನೆಕ್ಟಿವಿಟಿ ಆಯ್ಕೆಗಳು ಸೇರಿವೆ.
OnePlus 13T ಮಾರ್ನಿಂಗ್ ಮಿಸ್ಟ್ ಗ್ರೇ, ಹಾರ್ಟ್ ಪೌಂಡಿಂಗ್ ಪಿಂಕ್ ಮತ್ತು ಕ್ಲೌಡಿ ಇಂಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದ್ದು, ಪ್ರಸ್ತುತ ಚೀನಾದಲ್ಲಿ ಮುಂಗಡ ಬುಕಿಂಗ್‌ಗೆ ತೆರೆದಿದೆ ಮತ್ತು ಏಪ್ರಿಲ್ 30 ರಂದು ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಭಾರತೀಯ ಮಾರುಕಟ್ಟೆಯು ಈ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ನ ಆಗಮನವನ್ನು ಕಾತರದಿಂದ ಎದುರು ನೋಡುತ್ತಿದೆ.


Click it and Unblock the Notifications








