ವಿಶ್ವದ ದಿಗ್ಗಜರು ಬಳಸುವ ಸ್ಮಾರ್ಟ್‌ಫೋನ್ ಬಗ್ಗೆ ಗೊತ್ತೇ?

Written By:

ಈಗ ಎಲ್ಲೆಡೆಯೂ ಸ್ಮಾರ್ಟ್‌ಫೋನ್ ಹವಾ ತುಸು ಹೆಚ್ಚಾಗಿಯೇ ಬೀಸುತ್ತಿದೆ. ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ಆನ್‌ಲೈನ್‌ನಲ್ಲಿ ಅರಿತುಕೊಂಡು ಅದರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಖರೀದಿಸುವ ತುಡಿತ ನಮ್ಮದಾಗಿರುತ್ತದೆ. ಮಾರುಕಟ್ಟೆಯಲ್ಲಿರುವ ಮತ್ತು ಹೊಸದಾಗಿ ಬಂದಿರುವ ಫೋನ್‌ಗಳ ಇಂಟ್ರಡಕ್ಷನ್ ಪಾರ್ಟ್‌ನಿಂದ ಹಿಡಿದು ಅದರ ಎಲ್ಲಾ ಫೀಚರ್‌ಗಳನ್ನು ಉರು ಹೊಡೆದಂತೆ ಹೇಳುವ ವಾಗ್ಮಿಗಳೂ ಇದ್ದಾರೆ.

ಇದು ನಮ್ಮ ಮಾತಾಯಿತು. ಆದರೆ ನಮ್ಮಿಂದ ಸ್ವಲ್ಪ ತೂಕ ಏರುವ ಸೆಲೆಬ್ರಿಟಿಗಳು, ರಾಜಕಾರಣಿಗಳು ಯಾವ ಫೋನ್ ಬಳಸುತ್ತಿದ್ದಾರೆ ಅವರೂ ನಮ್ಮಂತೆಯೇ ಜಾಲತಾಣದಲ್ಲಿ ಬ್ಯುಸಿಯೇ ಎಂಬುದನ್ನು ಅರಿಯುವ ಕಾತರ ಸಹಜವೇ. ಈ ಕಾತರವನ್ನು ತಣಿಸುವ ಗುರಿ ಹೊಂದಿಯೇ ಈ ಲೇಖನದ ಬರವಣಿಗೆ ನಿಮಗಾಗಿ. ಹಾಗಿದ್ದರೆ ಪ್ರಪಂಚದ ದಿಗ್ಗಜರು ಬಳಸುವ ಸ್ಮಾರ್ಟ್‌ಫೋನ್ ಎಂಬುದನ್ನು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನರೇಂದ್ರ ಮೋದಿ

ನರೇಂದ್ರ ಮೋದಿ

#1

ಭಾರತದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಪಲ್ ಫೋನ್‌ನ ಪ್ರೇಮಿಗಳು. ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ಫೋನ್‌ನಲ್ಲಿ ತಾವೇ ತೆಗೆದ ಸೆಲ್ಫೀಯನ್ನು ಕೂಡ ಅವರು ಅಪ್‌ಲೋಡ್ ಮಾಡಿದ್ದಾರೆ.

ಬರಾಕ್ ಒಬಾಮಾ

ಬರಾಕ್ ಒಬಾಮಾ

#2

ಬರಾಕ್ ಒಬಾಮಾ ಬ್ಲಾಕ್‌ಬೆರ್ರಿ ಫೋನ್ ಪ್ರಿಯರು. ಇದರಲ್ಲಿ ಅವರ ಸುರಕ್ಷತೆಯ ಬಗೆಗಿನ ಎಲ್ಲಾ ಮಾಹಿತಿಯನ್ನು ಅವರು ಸಂಗ್ರಹಿಸಿದ್ದು ಅವರ ರಕ್ಷಕನಂತೆ ಈ ಫೋನ್ ಕಾರ್ಯನಿರ್ವಹಿಸುತ್ತದೆ.

ಹಿಲೆರಿ ಕ್ಲಿಂಟನ್

ಹಿಲೆರಿ ಕ್ಲಿಂಟನ್

#3

ಬ್ಲಾಕ್‌ಬೆರ್ರಿ ಫೋನ್ ಪ್ರಿಯೆ ಹಿಲೆರಿ ಕ್ಲಿಂಟನ್ ಹೆಚ್ಚಿನ ಬಾರಿ ಈ ಕಂಪೆನಿಯ ಫೋನ್ ಅನ್ನು ಬಳಸುತ್ತಾರೆ.

ವ್ಲಾದಿಮರ್ ಪುತಿನ್

ವ್ಲಾದಿಮರ್ ಪುತಿನ್

#4

ವ್ಲಾದಿಮರ್ ಪುತಿನ್ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿಲ್ಲವಂತೆ.

ನವಾಜ್ ಷರೀಫ್

ನವಾಜ್ ಷರೀಫ್

#5

ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಬಳಿ ಬ್ಲಾಕ್‌ಬೆರ್ರಿ ಸ್ಮಾರ್ಟ್‌ಫೋನ್ ಇದೆ.

ಡೇವಿಡ್ ಕ್ಯಾಮರೂನ್

ಡೇವಿಡ್ ಕ್ಯಾಮರೂನ್

#6

ಬ್ರಿಟಿಷ್ ಪ್ರಧಾನಮಂತ್ರಿ ಡೇವಿಡ್ ಕ್ಯಾಮರೂನ್ ಬಳಿ ಬ್ಲಾಕ್‌ಬೆರ್ರಿ ಸ್ಮಾರ್ಟ್‌ಫೋನ್ ಇದೆ.

ಕಿಮ್ ಜಾಂಗ್ ಉನ್

ಕಿಮ್ ಜಾಂಗ್ ಉನ್

#7

ಉತ್ತರ ಕೊರಿಯಾ ರಾಜಕಾರಣಿ ಕಿಮ್ ಜಾಂಗ್ ಎಚ್‌ಟಿಸಿ ಬಟರ್‌ಫ್ಲೈ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಾರಂತೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್

#8

ಇವರ ಬಳಿ ಯಾವುದೇ ಸ್ಮಾರ್ಟ್‌ಫೋನ್ ಇಲ್ಲ ಅವರು ತಮ್ಮ ವೈಯಕ್ತಿಕ ಇಮೇಲ್ ಐಡಿಯನ್ನು ಕೂಡ ಹೊಂದಿಲ್ಲವಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot