Just In
Don't Miss
- News
'ರಾಜ್ಯದ ಜನ ಮತ್ತೆ ಬಿಎಸ್ ಯಡಿಯೂರಪ್ಪರನ್ನು ನಂಬುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
- Movies
Weekend With Ramesh: ಶೀಘ್ರದಲ್ಲೇ 'ವೀಕೆಂಡ್ ವಿತ್ ರಮೇಶ್' ಶೋ ಮತ್ತೆ ಶುರು.. ಕಂಪ್ಲೀಟ್ ಗೆಸ್ಟ್ ಲಿಸ್ಟ್ ಇದೇನೆ?
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಲ್‌ಪೂಲ್ ಕಂಪೆನಿಯಿಂದ ಹೊಸ 3D ಕೂಲ್ ಇನ್‌ವರ್ಟರ್ ಏರ್ ಕಂಡಿಷನರ್ ಬಿಡುಗಡೆ
ವರ್ಲ್‌ಪೂಲ್ ಕಂಪೆನಿ ತನ್ನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೂಲಕ ಉತ್ತಮ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಈಗಾಗ್ಲೆ ಹಲವು ಮಾದರಿಯ ಪ್ರಾಡಕ್ಟ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ವರ್ಲ್‌ಪೂಲ್ ಇದೀಗ ಹೊಸ ಮಾದರಿಯ ಹೊಸ ಏರ್ ಕಂಡಿಷನರ್ ಅನ್ನು ಪರಿಚಯಿಸಿದೆ. ಬೇಸಿಗೆ ಕಾಲದಲ್ಲಿ ಉತ್ತಮ ಹವಾನಿಯಂತ್ರಣವನ್ನು ಕೊಠಡಿಗೆ ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಇದು ಹೊಸ ಆವೃತ್ತಿಯ 3D ಕೂಲ್ ಇನ್‌ವರ್ಟರ್ ಅನ್ನು ಒಳಗೊಂಡಿದೆ.

ಹೌದು, ಹವಾನಿಯಂತ್ರಣ ಉತ್ಪನ್ನಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವರ್ಲ್‌ಪೂಲ್ ಇದೀಗ ತನ್ನ ಹೊಸ 3D ಕೂಲ್ ಇನ್‌ವರ್ಟರ್ ಏರ್ ಕಂಡಿಷನರ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಏರ್‌ಕಂಡಿಷರ್ 60% ವೇಗವಾಗಿ ಕೂಲಿಂಗ್ ನೀಡುತ್ತದೆ. ಅಲ್ಲದೆ ಬೇಸಿಗೆಯ ಸಮಯದಲ್ಲಿ ಗರಿಷ್ಠ 50 ಡಿಗ್ರಿ ತಾಪಮಾನದಲ್ಲಿಯೂ ಸಹ, ಏರ್‌ಕಂಡಿಷನರ್ ಕೋಣೆಯನ್ನು ಶೇಕಡಾ 60 ರಷ್ಟು ವೇಗವಾಗಿ ತಂಪಾಗಿಸಲಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಈ ಏರ್ ಕಂಡಿಷನರ್ ವಾಯ್ಸ್ ಅಸಿಸ್ಟೆಮಟ್ ಮತ್ತು ವೈಫೈ ಅನ್ನು ಬೆಂಬಲಿಸಲಿದೆ. ಇನ್ನು ಈ ಏರ್ ಕಂಡಿಷನರ್ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ವರ್ಲ್‌ಪೂಲ್ ಕಂಪೆನಿಯ ಈ ಏರ್‌ಕಂಡಿಷನರ್ ಸ್ಮಾರ್ಟ್ ಕಂಡಿಷನರ್ ಆಗಿದ್ದು, ಇದು ಉತ್ತಮ ವಿನ್ಯಾಸ ಹಾಗೂ ಟೆಕ್ನಾಲಜಿಯನ್ನ ಒಳಗೊಂಡಿದೆ. ಇದು 3 ಡಿ ಟೆಕ್ನಾಲಜಿಯನ್ನು ಒಳಗೊಂಡಿದ್ದು, ಸ್ಮಾರ್ಟ್ ಗೂಗಲ್ ಮತ್ತು ವೈಫೈ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಅಲ್ಲದೆ ಕನೆಕ್ಟಿವಿಟಿ ಹಾಗೂ ಮತ್ತು ಗ್ರಾಹಕರಿಗೆ ಉತ್ತಮವಾದ ಏರ್ ಕಂಡಿಷನರ್ ಒದಗಿಸುವಲ್ಲಿ ನಾವು ಉತ್ತಮ ಪ್ರಯತ್ನವನ್ನ ಮಾಡಿದ್ದೇವೆ ಎಂದು ವರ್ಲ್‌ಪೂಲ್ ಆಫ್ ಇಂಡಿಯಾದ ಉಪಾಧ್ಯಕ್ಷ-ಮಾರ್ಕೆಟಿಂಗ್ ಕೆ.ಜಿ.ಸಿಂಗ್ ಹೇಳಿದ್ದಾರೆ.

ಇನ್ನು ವರ್ಲ್‌ಪೂಲ್‌ನ 3 ಡಿ ಕೂಲ್ ಟೆಕ್ನಾಲಜಿ ಏರ್‌ಕಂಡಿಷನ್ 3-ಏರ್-ಇಂಟೆಕ್ ವೆಂಟ್ಸ್ ಅನ್ನು ಅವಲಂಬಿಸಿದ್ದು, ಇದು ನಿಮ್ಮ ಕೊಟಡಿಯಿಂದ ಬಿಸಿ ಗಾಳಿಯನ್ನು ವೇಗವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಇ ತಂತ್ರಜ್ಞಾನವು 12 ಮೀಟರ್ ವರೆಗೆ ಗಾಳಿಯನ್ನು ತಲುಪಿಸುವ ಸಾಮರ್ಥ್ಯವನ್ನ ಹೊಂದಿದ್ದು, ಮನೆಯನ್ನ ತಂಪಾಗಿಡಲಿದೆ. ಜೊತೆಗೆ ಇದು ಗೂಗಲ್ ವಾಯ್ಸ್ ಅನ್ನು ಬೆಂಬಲಿಸಲಿದ್ದು, ಸ್ಮಾರ್ಟ್ ಸ್ಪೀಕರ್ ಬಳಸಿ ನೀವು ಎಸಿಯನ್ನು ನಿಯಂತ್ರಿಸಬಹುದಾಗಿದೆ. ಅಷ್ಟೇ ಅಲ್ಲ ಬಳಕೆದಾರರು ಎಸಿಯನ್ನು ಆನ್ ಮಾಡಲು, ಸ್ವಿಂಗ್ ಅನ್ನು ಹೊಂದಿಸಲು ಮತ್ತು ತಾಪಮಾನವನ್ನು ಬದಲಾಯಿಸಲು ಸಹಾಯವಾಗಲಿದೆ.

ಇದಲ್ಲದೆ ಇದು ವೈಫೈ ನೆಟ್‌ವರ್ಕ್ ಮೂಲಕ ಸ್ಮಾರ್ಟ್‌ಫೋನ್ ಅನ್ನು ಸಹ ಎಸಿಗೆ ಕನೆಕ್ಟ್ ಮಾಡಬಹುದಾಗಿದೆ. ಇದರಿಂದ ಸ್ಮಾರ್ಟ್‌ಫೋನ್ ಮೂಲಕವೂ ಸಹ ಎಸಿಯನ್ನ ನಿಯಂತ್ರಿಸಬಹುದು. ಇದಕ್ಕಾಗಿ ವರ್ಲ್‌ಪೂಲ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿರುತ್ತದೆ. ಇನ್ನು ಈ ಎಸಿಯು 8-ಇನ್ -1 ಮೋಡ್‌ಗಳೊಂದಿಗೆ ಇಂಟೆಲ್-ಕನ್‌ವರ್ಟರ್ ಅನ್ನು ಸಹ ಬೆಂಬಲಿಸಲಿದೆ. ಅಲ್ಲದೆ ಇದರಲ್ಲಿ ನಿಡಿರುವ ಬಟನ್ಗಲನ್ನ ಟಚ್ ಮಾಡುವ ಮೂಲಕವೂ ಬಳಕೆದಾರರು ವಿಭಿನ್ನ ಆಯ್ಕೆಯಲ್ಲಿ ಎಸಿ ಕೂಲ್ ಅನ್ನು ಬದಲಾಯಿಸಬಹುದಾಗಿದೆ. ಇವುಗಳಲ್ಲಿ ಸ್ಲೀಪ್ ಕನ್ವರ್ಟ್, ಕಂಫರ್ಟ್ ಕನ್ವರ್ಟ್ ಮತ್ತು ಕೆಪಾಸಿಟಿ ಕನ್ವರ್ಟ್ ಆಯ್ಕೆಗಳನ್ನ ನೀಡಲಾಗಿದೆ.

ಇನ್ನು ಈ ಎಸಿಯಲ್ಲಿ ಧೂಳು ಕಣಗಳು ಮತ್ತು ಮಾಲಿನ್ಯಕಾರಕಗಳಿಂದ ಗಾಳಿಯನ್ನು ಶುದ್ಧೀಕರಿಸುವ ಪುರಾಫ್ರೆಶ್ ಟೆಕ್ನಾಲಜಿಯನ್ನ ನಿಡಲಾಗಿದೆ. ಅಲ್ಲದೆ ಇಂಟೆಲ್ಲಿಸೆನ್ಸ್ ಟೆಕ್ನಾಲಜಿಯನ್ನ ಸಹ ಹೊಂದಿದೆ. ಅಲ್ಲದೆ ವಿದ್ಯುತ್ ಬಿಲ್‌ನಲ್ಲಿ 65,000 ರೂ.ಗಳವರೆಗೆ ಉಳಿಸಬಹುದಾಗಿದೆ ಎಮದು ಹೇಳಲಾಗಿದೆ. ಜೊತೆಗೆ "ವರ್ಲ್‌ಪೂಲ್ ಎಸಿಗಳಲ್ಲಿ ಆರ್ -32 ಶೈತ್ಯೀಕರಣ ಇಂಧನ ದಕ್ಷತೆಯ ವ್ಯವಸ್ಥೆ ಮಾಡಲಾಗಿದ್ದು, ಇದು ಓಜೋನ್ ಪದರದ ಮೇಲೆ ಶೂನ್ಯ ಪರಿಣಾಮ ಬೀರುತ್ತದೆ. ಇನ್ನು ಇದರ ಬೆಲೆ ಹಾಗೂ ಮಾರಾಟ ಯಾವಾಗ ಶುರುವಾಗಲಿದೆ ಎಂಬುದನ್ನ ಕಂಪೆನಿ ಇನ್ನು ಬಹಿರಂಗ ಪಡಿಸಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470