Home
ಸುದ್ದಿಜಾಲ

ಭಾರತದ ಬೆಸ್ಟ್‌ ಹ್ಯಾಕರ್ಸ್‌ ಯಾರು ಗೊತ್ತಾ..?

By Avinash

ತಂತ್ರಜ್ಞಾನ ಜಗತ್ತು ಬೆಳೆದಂಗೆಲ್ಲ ಸಾಮಾನ್ಯ ಜನ ತಂತ್ರಜ್ಞಾನದ ಕುರಿತು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಜಗತ್ತನ್ನು ಭಯಪಡಿಸುತ್ತಿರುವ ತಂತ್ರಜ್ಞಾನ ಕೌಶಲವಾದ ಹ್ಯಾಕಿಂಗ್ ಬಗ್ಗೆ ಸಾಮಾನ್ಯ ಜನಕ್ಕೆ ಅಷ್ಟೇನು ಗೊತ್ತಿಲ್ಲ. ಗೊತ್ತಿದ್ದರೂ ಹ್ಯಾಕಿಂಗ್ ಎಂದರೆ ಕೇವಲ ಪಾಸವರ್ಡ್‌ ಕದಿಯುವುದು, ವೈಯಕ್ತಿಕ ಮಾಹಿತಿ ಕದ್ದು ದುರುಪಯೋಗ ಮಾಡಿಕೊಳ್ಳುವುದು ಜನ ಸಾಮಾನ್ಯರಿಗೆ ತೊಂದರೆ ಉಂಟು ಮಾಡುವುದು ಎಂದು ತಿಳಿದುಕೊಂಡಿದ್ದಾರೆ.

ಆದರೆ, ಹ್ಯಾಕರ್‌ಗಳನ್ನು ಬ್ಲಾಕ್‌ಹ್ಯಾಟ್‌ ಹ್ಯಾಕರ್‌ಗಳು, ವೈಟ್‌ಹ್ಯಾಟ್‌ ಹ್ಯಾಕರ್‌ಗಳು ಮತ್ತು ಗ್ರೇಹ್ಯಾಟ್‌ ಹ್ಯಾಕರ್‌ಗಳು ಎಂದು 3 ರೀತಿಯಲ್ಲಿ ವಿಂಗಡಿಸಲಾಗಿದೆ. ಬ್ಲಾಕ್‌ಹ್ಯಾಟ್‌ ಹ್ಯಾಕರ್‌ಗಳು ನೀವು ಅಂದುಕೊಂಡಂತೆ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುತ್ತಾ ತಮ್ಮ ಕಾರ್ಯನಿರ್ವಹಿಸುವ ಹ್ಯಾಕರ್‌ಗಳಾಗಿದ್ದಾರೆ. ವೈಟ್‌ಹ್ಯಾಟ್‌ ಹ್ಯಾಕಿಂಗ್‌ಗೆ ಎಥೀಕಲ್ ಹ್ಯಾಕಿಂಗ್ ಎಂದು ಕೂಡ ಕರೆಯುತ್ತಾರೆ. ಇವರು ಸರ್ಕಾರದ ಜತೆ ಅಥವಾ ಕೆಲವು ಸಂಸ್ಥೆಗಳ ಜತೆಗೂಡಿ ಜನರ ಅಭ್ಯುದಯಕ್ಕೆ ಮಾತ್ರ ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ. ಇನ್ನು ಗ್ರೇಹ್ಯಾಟ್ ಹ್ಯಾಕರ್‌ಗಳು ಎರಡು ತರಹ್ ವ್ಯಕ್ತಿತ್ವ ಹೊಂದಿದ್ದು, ಎರಡು ರೀತಿಯ ಹ್ಯಾಕಿಂಗ್‌ಗಳಲ್ಲೂ ಭಾಗಿಯಾಗುತ್ತಾರೆ.

ಭಾರತದ ಬೆಸ್ಟ್‌ ಹ್ಯಾಕರ್ಸ್‌ ಯಾರು ಗೊತ್ತಾ..?

ಅದರಂತೆ ಭಾರತದಲ್ಲೂ ಹ್ಯಾಕಿಂಗ್ ಬಹಳಷ್ಟು ದೊಡ್ಡಮಟ್ಟದಲ್ಲಿ ಬೆಳೆದಿದೆ. ದೊಡ್ಡ ದೊಡ್ಡ ಕಂಪನಿಗಳು ಹ್ಯಾಕರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಹ್ಯಾಕರ್‌ಗಳು ಯಾರಿಗೂ ಗೊತ್ತಿರಲ್ಲ. ಆದರೆ, ನಿಮ್ಮ ಮನೆಯಲ್ಲಿಯೇ ಅಥವಾ ನಿಮ್ಮ ಜೊತೆಯಲ್ಲಿಯೇ ಇರುತ್ತಾರೆ ಎನ್ನುವ ಮಾತಂತೂ ಸತ್ಯ. ಅದಕ್ಕಾಗಿಯೇ ಭಾರತದ ಬೆಸ್ಟ್‌ ಹ್ಯಾಕರ್‌ಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ.

1. ಆನಂದ್ ಪ್ರಕಾಶ್

1. ಆನಂದ್ ಪ್ರಕಾಶ್

ವೆಲ್ಲೋರ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೇ ವಿದ್ಯಾರ್ಥಿಯಾಗಿರುವ ಆನಂದ್ ಪ್ರಕಾಶ್‌ ಉಚಿತವಾಗಿ ಪ್ರಯಾಣಿಸುವುದಕ್ಕಾಗಿ ಊಬರ್‌ ಆಪ್‌ನ್ನು ಹ್ಯಾಕ್‌ ಮಾಡಿದ್ದರು. ಅಲ್ಲದೇ ಫೇಸ್‌ಬುಕ್‌ ಅಕೌಂಟ್‌ಗಳನ್ನು ಹ್ಯಾಕ್‌ ಮಾಡಿದ್ದರು. ವೈಟ್‌ಹ್ಯಾಟ್‌ ಹ್ಯಾಕರ್ ಆಗಿರುವ ಆನಂದ್‌ ಪ್ರಕಾಶ್ ಗುರಗಾಂವ್ ಪೊಲೀಸ್‌ ಸೈಬರ್‌ ಕ್ರೈಮ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಟ್ವಿಟ್ಟರ್ 2015ರಲ್ಲಿ ಪ್ರಕಟಿಸಿದ್ದ ಬಗ್ ಬೌಂಟಿ ಪಟ್ಟಿಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನ ಪಡೆದಿದ್ದರು.

2. ದೀಪಾಂಕರ್ ಚಾವ್ಲಾ

2. ದೀಪಾಂಕರ್ ಚಾವ್ಲಾ

ಹೈಕ್ ಮೆಸೆಂಜರ್‌ನಲ್ಲಿ ಸೆಕ್ಯೂರಿಟಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ದೀಪಾಂಕರ್ ಚಾವ್ಲಾ ಯಾಹೂ, ಸ್ನಾಪ್‌ಚಾಟ್‌, ಊಬರ್, ಟ್ವಿಟ್ಟರ್, ಸ್ಲಾಕ್‌ನಂತಹ ಅನೇಕ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ 382 ಬಗ್‌ ಸಮಸ್ಯೆಗೆ ಉತ್ತರ ಕಂಡು ಹಿಡಿದಿದ್ದಾರೆ. ಇದರಿಂದ ಒಂದು ಬಗ್‌ಗೆ ಏನಿಲ್ಲವೆಂದರೂ 250 ಡಾಲರ್‌ನಿಂದ 10,000 ಡಾಲರ್ ಹಣವನ್ನು ಪಡೆದಿದ್ದಾರೆ. ಆದರೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿಲ್ಲ.

3. ರಾಹುಲ್ ತ್ಯಾಗಿ

3. ರಾಹುಲ್ ತ್ಯಾಗಿ

ಕಂಪ್ಯೂಟರ್ ಸೆಕ್ಯೂರಿಟಿಯನ್ನು ಭೇದಿಸಿ ಒಳಹೋಗಬಲ್ಲ ಪ್ರಾವೀಣ್ಯತೆಯನ್ನು ರಾಹುಲ್ ತ್ಯಾಗಿ ಹೊಂದಿದ್ದಾರೆ. ರಾಹುಲ್ ಹ್ಯಾಕರ್ ಜತೆಗೆ ಒಬ್ಬ ಲೇಖಕ ಮತ್ತು ಪ್ರತಿಭಾನ್ವಿತ ನಟ ಕೂಡ ಹೌದು. ಹ್ಯಾಕಿಂಗ್ ಬಗ್ಗೆ 100ಕ್ಕೂ ಹೆಚ್ಚು ಕಾರ್ಯಗಾರ ನಡೆಸಿರುವ ರಾಹುಲ್ ತನ್ನ ಮಾರ್ಗದರ್ಶನದಲ್ಲಿ ಹಲವು ಹ್ಯಾಕರ್‌ಗಳು ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ.

4. ಪ್ರಣವ್ ಮಿಸ್ತ್ರೀ

4. ಪ್ರಣವ್ ಮಿಸ್ತ್ರೀ

ಪ್ರಣವ್ ಮಿಸ್ತ್ರೀ ಸಿಕ್ಸ್ತ್ ಸೆನ್ಸ್ ತಂತ್ರಜ್ಞಾನಕ್ಕೆ ಬಹಳ‍ಷ್ಟು ಪ್ರಸಿದ್ಧಿ ಹೊಂದಿದ್ದಾರೆ. ನಾಸಾ ಕೂಡ ಇವರ ತಂತ್ರಜ್ಞಾನವನ್ನು ಉಪಯೋಗಿಸುತ್ತಿದೆ. ಅದಲ್ಲದೇ ಕಾಣದ ಕಂಪ್ಯೂಟರ್ ಮೌಸ್‌ನ್ನು ಆವಿಷ್ಕರಿಸಿರುವುದು ದೊಡ್ಡ ಸಾಧನೆಯೇ ಸರಿ.

5. ಅಂಕಿತ್ ಫಾಡಿಯಾ

5. ಅಂಕಿತ್ ಫಾಡಿಯಾ

ಅನ್‌ಅಫೀಷಿಯಲ್ ಗೈಡ್ ಟೂ ಎಥೀಕಲ್ ಹ್ಯಾಕಿಂಗ್ ಎಂಬ ಪುಸ್ತಕ ಬರೆದಿರುವ ಅಂಕಿತ್ ಫಾಡಿಯಾ ತಮ್ಮ 15ನೇ ವಯಸ್ಸಿನಲ್ಲಿಫುಟ್ಬಾಲ್ ಆಡುವುದಕ್ಕೆ ಅಳುತ್ತಿದ್ದರು ಎಂದರೆ ನಂಬಲೇಬೇಖು. ಇಂದು ಭಾರತದ ಪ್ರಖ್ಯಾತ ಎಥೀಕಲ್ ಹ್ಯಾಕರ್‌ಗಳಲ್ಲೋಬ್ಬರಾಗಿ ವಿಶ್ವಕ್ಕೆ ಪರಿಚಿತರಾಗಿದ್ದಾರೆ.

6.ಕೌಷಿಕ್ ದತ್ತ

6.ಕೌಷಿಕ್ ದತ್ತ

ಮಕ್ರೊಸಾಫ್ಟ್‌ನಲ್ಲಿ ಇಂಟರ್ನ್‌ಶಿಪ್ ಮುಗಿದ ನಂತರ ಕೌಶಿಕ್ ದತ್ತ ಆಂಡ್ರಾಯ್ಡ್ ಸೆಲ್ ಪೋನ್‌ಗಳನ್ನು ಹ್ಯಾಕ್ ಮಾಡಲು ಶುರು ಮಾಡಿದರು. ಕ್ಲಾಕ್ ವರ್ಕ್ ಮಾಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋನಿಯಿಂದ ಬಂದಿದ್ದ ಕೆಲಸದ ಆಫರ್‌ ತಿರಸ್ಕರಿಸಿ ಸ್ವತಂತ್ರವಾಗಿ ಆಂಡ್ರಾಯ್ಡ್‌ ಬಳಕೆದಾರರಿಗೆ ಮೊಬೈಲ್ ಪ್ಲಾಟ್‌ಫಾರ್ಮ್ ಸುರಕ್ಷಿತ ಮಾಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

7. ವಿವೇಕ್ ರಾಮಚಂದ್ರನ್

7. ವಿವೇಕ್ ರಾಮಚಂದ್ರನ್

ಮೈಕ್ರೋಸಾಫ್ಟ್‌ ಮತ್ತು ಸಿಸ್ಕೋ ಕೊಡಲ್ಪಡುವ ಪ್ರಶಸ್ತಿಗಳನ್ನು ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ವಿವೇಕ್ ರಾಮಚಂದ್ರನ್ ಕಂಪ್ಯೂಟರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ. ಕಂಪ್ಯೂಟರ್ ಸೆಕ್ಯೂರಿಟಿಯನ್ನು ಪರಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇ-ಆಡಳಿತ, ವೈರ್‌ಲೆಸ್‌ ಸೆಕ್ಯೂರಿಟಿ ಮತ್ತು ಕಂಪ್ಯೂಟರ್ ಫಾರೆನ್ಸಿಕ್ಸ್‌ನಲ್ಲಿ ಬಹುದೊಡ್ಡ ಹೆಸರು ಹೊಂದಿದ್ದಾರೆ.

8. ತ್ರಿಶ್ನೀತ್ ಅರೋರಾ

8. ತ್ರಿಶ್ನೀತ್ ಅರೋರಾ

20 ವರ್ಷ ವಯಸ್ಸಿಗೆ ವಿಶ್ವಪ್ರಸಿದ್ಧಿಯಾಗಿದ್ದ ತ್ರಿಶ್ನೀತ್ ಅರೋರಾ ಹ್ಯಾಕಿಂಗ್ ವಿರೋಧಿ ಎಂದರೆ ನಂಬಲೇಬೇಕು. ಆದರೆ, ಇವರು ಕಂಪನಿಗಳಿಗೆ ಮತ್ತು ಕೈಗಾರಿಕೆಗಳಿಗೆ ಅವರ ಸೆಕ್ಯೂರಿಟಿ ವ್ಯವಸ್ಥೆಯನ್ನು ಭದ್ರಪಡಿಸಲು ಸಹಾಯ ಮಾಡುತ್ತಿದ್ದಾರೆ.

9. ಸನ್ನಿ ವಘೇಲಾ

9. ಸನ್ನಿ ವಘೇಲಾ

ಮೊಬೈಲ್ ನೆಟ್‌ವರ್ಕ್‌ನಲ್ಲಿನ ಎಸ್‌ಎಂಎಸ್‌ ಮತ್ತು ಕಾಲ್ ಫೋರ್ಜಿಂಗ್‌ಗಳಲ್ಲಿನ ಲೂಫ್‌ಹೋಲ್‌ಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ಸನ್ನಿ ವಘೇಲಾ ತಮ್ಮ 18ನೇ ವಯಸ್ಸಿನಲ್ಲಿಯೇ ನಿರ್ವಹಿಸಿದ್ದಾರೆ. ಅದಲ್ಲದೇ ಮುಂಬೈ ಮತ್ತು ಅಹಮಾದಾಬಾದ್‌ ಪೊಲೀಸ್‌ರಿಗೆ ಭಯೋತ್ಪಾದಕ ಸವಾಲುಗಳನ್ನು ಪರಿಹರಿಸುವಲ್ಲಿ ಸಹಾಯ ಕೂಡ ಮಾಡಿದ್ದಾರೆ.

10.ಬೆನಿಲ್ಡ್‌ ಜೋಸೆಫ್

10.ಬೆನಿಲ್ಡ್‌ ಜೋಸೆಫ್

ತಮ್ಮ 23ನೇ ವಯಸ್ಸಿನಲ್ಲಿಯೇ ದೆಹಲಿಯ ಸೈಬರ್ ಕ್ರೈಮ್ ತನಿಕಾದಳದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.ದಿ ಆರ್ಟ್‌ ಆಫ್ ಹ್ಯಾಕಿಂಗ್‌ ಎಂಬ ಸಂಸ್ಥೆ ಪ್ರಾರಂಭಿಸಿ ಅದರ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಭಾರತ ಸರ್ಕಾರದ ಇನ್ಫರ್ಮೇಷನ್ ಸಿಸ್ಟಮ್ಸ್‌ ಸೆಕ್ಯೂರಿಟಿ ಅಸೋಸಿಯೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೈಬರ್‌ ಕ್ರೈಮ್ ಫಾರೆನ್ಸಿಕ್ ಮತ್ತು ಮಾಹಿತಿಯ ಹಲವು ಪೇಟೆಂಟ್‌ಗಳನ್ನು ತಮ್ಮ ಹೆಸರಿನಲ್ಲಿಯೇ ಹೊಂದಿದ್ದಾರೆ.

11. ರಾಜೇಶ್ ಬಾಬು

11. ರಾಜೇಶ್ ಬಾಬು

ಭಾರತದ ಪ್ರಮುಖ ಎಥೀಕಲ್ ಹ್ಯಾಕರ್‌ಗಳಲ್ಲಿ ಒಬ್ಬರಾಗಿರುವ ರಾಜೇಶ್ ಬಾಬು ಬಹಳಷ್ಟು ಸರ್ಕಾರಗಳಿಗೆ ಮತ್ತು ಕಾರ್ಪೋರೆಟ್ ಏಜೆನ್ಸ್ಇಗಳಿಗೆ ಫ್ರಿಲ್ಯಾನ್ಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಕೇರಳದಲ್ಲಿ ತಮ್ಮದೇ ಆದ ಮಿರಾಕ್ಸ್‌ ಎಂಬ ಕಂಪನಿ ಪ್ರಾರಂಭಿಸಿದ್ದಾರೆ.

12. ಫಾಲ್ಗುಣ್ ರಾಥೋಡ್

12. ಫಾಲ್ಗುಣ್ ರಾಥೋಡ್

ಫಾಲ್ಗುಣ್ ರಾಥೋಡ್ ಅವರನ್ನು ಭಾರತದ ಇನ್ಫರ್ಮೇಶನ್ ಸೆಕ್ಯೂರಿಟಿಯ ನಾಯಕ ಎಂದು ಕರೆಯುತ್ತಾರೆ. ಭಾರತದಲ್ಲಿ ಮಾಹಿತಿ ಭದ್ರತೆಯ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

Best Mobiles in India

English summary
Who are the best hackers in India?. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+