ಸೆಲ್ ಫೋನ್ ಅನ್ನು ಕಂಡುಹಿಡಿದವರು ಯಾರು? ಇದರ ಹಿಂದಿನ ರೋಚಕ ಕಥೆ ಇಲ್ಲಿದೆ ಓದಿರಿ!

|

ಇದು ಸ್ಮಾರ್ಟ್‌ಫೋನ್‌ ಜಮಾನ. ಸ್ಮಾರ್ಟ್‌ಫೋನ್‌ ಇಲ್ಲದೆ ಹೊರ ಹೋಗುವುದು ಕೂಡ ಅಸಾಧ್ಯ ಎನ್ನುವ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ. ಇನ್ನು ಲ್ಯಾಂಡ್‌ಲೈನ್‌ನಿಂದ ಹಿಡಿದು ಸ್ಮಾರ್ಟ್‌ಫೋನ್‌ ತನಕ ಬೆಳೆದು ಬಂದ ಹಾದಿ ಸಾಕಷ್ಟು ರೋಚಕವಾಗಿದೆ. ನೀವು ನಾವೆಲ್ಲಾ ದೂರವಾಣಿ ಕಂಡುಹಿಡಿದಿದ್ದು, ಗ್ರಹಾಂ ಬೆಲ್ ಅನ್ನೊದು ಎಲ್ಲರಿಗೂ ತಿಳಿದಿದೆ. ಆದರೆ ಹೆಚ್ಚಿನ ಜನರಿಗೆ ಸೆಲ್ ಫೋನ್ ಅನ್ನು ಕಂಡುಹಿಡಿದವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಇಂದು ಎಲ್ಲರ ಅಗತ್ಯದ ಡಿವೈಸ್‌ ಆಗಿದೆ. ಹಾಗಂತ ಸ್ಮಾರ್ಟ್‌ಫೋನ್‌ ಕಲ್ಪನೆ ಏಕಾಏಕಿ ರೂಪುಗೊಂಡಿದ್ದಲ್ಲ. ಇದರ ಹಿಂದೆ ಹಲವು ಸಂಶೋದಕರ ಪರಿಶ್ರಮವಿದೆ. ಕಾಲಕಾಲಕ್ಕೆ ತಕ್ಕಂತೆ ಹಂತಹಂತವಾಗಿ ಅಭಿವೃದ್ದಿಪಡಿಸಲಾಗಿದೆ. 1973 ರಲ್ಲಿ ಮೊದಲ ಬಾರಿಗೆ ಮೊಬೈಲ್‌ ಬಳಕೆಯಾಯ್ತು. ಹಾಗಾದ್ರೆ ಮೊಬೈಲ್‌ ಬೆಳೆದು ಬಂದ ರೋಚಕ ಹಾದಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಡ್ತೀವಿ ಓದಿರಿ.

ಮೊಬೈಲ್

ಇಂದು ಮೊಬೈಲ್ ಸ್ಮಾರ್ಟ್‌ಫೋನ್ ಉಪಯೋಗಿಸುವವರಿಗೆ ಇಂತಹ ಮಾಹಿತಿಗಳು ಹಲವು ತಿಳಿದಿಲ್ಲ. ಮೊಬೈಲ್ ಎನ್ನುವುದು ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಭಾಗವಾಗಿಹೋದರು ಮೊಬೈಲ್ ಬಗೆಗೆ ಇರುವ ಕುತೋಹಲಕಾರಿ ಅಂಶಗಳು ಜನರನ್ನು ತಲುಪಿಲ್ಲ. ಮೊಟ್ಟಮೊದಲ ಬಾರಿಗೆ ಕೈಯಲ್ಲಿ ಹಿಡಿದು ಮಾತನಾಡುವ ಮೊಬೈಲ್ ಅನ್ನು ಅಭಿವೃದ್ದಿಗೊಳಿಸಿದ್ದು ಮೊಟೊರೊಲಾ ಕಂಪನಿ. ಅಲ್ಲದೇ ಮೊಟ್ಟ ಮೊದಲ ಕರೆಯನ್ನು ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಕಾಲ್ ಮಾಡಿದ್ದು ಸಹ ಮೊಟೊರೊಲಾ ಸಂಶೋಧಕ ಮತ್ತು ಕಾರ್ಯನಿರ್ವಾಹಕರಾದ 'ಮಾರ್ಟಿನ್ ಕೂಪರ್'. ಇದು ಮೊಟ್ಟ ಮೊದಲ ಮೊಬೈಲ್ ಕರೆ.

ವಿಶ್ವದ ಮೊದಲ ಸೆಲ್ ಫೋನ್‌ಗೆ ಕಾರಣವೇನು?

ವಿಶ್ವದ ಮೊದಲ ಸೆಲ್ ಫೋನ್‌ಗೆ ಕಾರಣವೇನು?

ಮಾನವ ಧ್ವನಿ ರೇಡಿಯೊ ತರಂಗಗಳ ಮೂಲಕ ಪ್ರಸಾರ ಮಾಡಲು ಸಾಧ್ಯವಾಗಿತ್ತು. ಅಲ್ಲದೆ ಸಂಕೇತಗಳನ್ನು ಒಂದು ಗೋಪುರದಿಂದ ಇನ್ನೊಂದಕ್ಕೆ ಕಳುಹಿಸಲಾಯಿತು. ಈ ಪ್ರಸಾರ ಕೆಲಸ ರೇಡಿಯೊಗೆ ದಾರಿ ಮಾಡಿಕೊಟ್ಟಿತು ಆದರೆ ಸೆಲ್ ಫೋನ್ ಮತ್ತು ನೆಟ್‌ವರ್ಕ್‌ಗಳಿಗೆ ಅಡಿಪಾಯವನ್ನು ಒದಗಿಸಿತು. ಫೆಸ್ಸೆಂಡನ್ ಅವರ ಕೆಲಸವು ವಿಲಿಯಂ ರೇ ಯಂಗ್ ಎಂಬ ಯುವ ಎಂಜಿನಿಯರ್‌ಗೆ ಸ್ಫೂರ್ತಿ ನೀಡಿತು, ಅವರು ರೇಡಿಯೊ ತರಂಗಗಳನ್ನು ಷಡ್ಭುಜೀಯ ಮಾದರಿಯಲ್ಲಿ ಜೋಡಿಸಿದರೆ ಅವರು ದೂರವಾಣಿ ಜಾಲವನ್ನು ಬೆಂಬಲಿಸಬಹುದು ಎಂದು ಪ್ರಸ್ತಾಪಿಸಿದರು. ಇದೇ ಮುಂದೆ ಮೊಬೈಲ್‌ನ ಅಭಿವೃದ್ದಿಗೆ ಕಾರಣವಾಯಿತು ಎನ್ನಲಾಗಿದೆ.

ಮೊಬೈಲ್‌

ಇನ್ನು ಪ್ರಾರಂಭಿಕ ಹಂತದಲ್ಲಿ ಮೊಬೈಲ್‌ ವಾಕಿ-ಟಾಕಿ ಟ್ರಾನ್ಸ್‌ಸಿವರ್‌ಗಳಂತೆ ರೂಪುಗೊಳಿಸಲಾಗಿತ್ತು. ಅಲ್ಲದೆ ಅವುಗಳನ್ನು ಬಳಸಿಕೊಂಡು ಕೆಲವೇ ಕರೆಗಳನ್ನು ಮಾಡಬಹುದಾಗಿತ್ತು. ಜೊತೆಗೆ ಈ ಮೊಬೈಲ್‌ಗಳು ಕಡಿಮೆ ವ್ಯಾಪ್ತಿ ಹೊಂದಿದ್ದರಿಂದ ಯಾವುದೇ ಖಾಸಗಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಈ ಫೋನ್‌ಗಳು ಗಾತ್ರದಲ್ಲಿ ದೊಡ್ಡದಾಗಿದ್ದವು ಮತ್ತು ಈಗಿನಂತೆ ಜೇಬಿನಲ್ಲಿ ಫೋನ್‌ ಸಾಗಿಸುವುದು ಅಸಾಧ್ಯವಾಗಿತ್ತು. ನಂತರ ಅಂದರೆ 1960 ರ ದಶಕದಲ್ಲಿ ಜೋಯಲ್ ಎಸ್ ಮತ್ತು ಆರ್ಹೆಚ್ ಫ್ರೆಂಕಿಲ್ ಯಂಗ್ ಮಾದರಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು.

ಫೆಡರಲ್

ಇದಲ್ಲದೆ ಸೆಲ್ಯುಲಾರ್ ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಎಟಿ ಮತ್ತು ಟಿ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (ಎಫ್‌ಸಿಸಿ) ಯಿಂದ ಅನುಮತಿ ಕೋರಿತು. ಮೊಟೊರೊಲಾದ ಮಾರ್ಟಿನ್ ಕೂಪರ್ 1973 ರಲ್ಲಿ ಚೀಕಿ ನಡೆಯನ್ನು ಮಾಡಿದರು. ಕೂಪರ್ ತಂಡವು ಸೆಲ್ ಫೋನ್ ಅನ್ನು ವಿನ್ಯಾಸಗೊಳಿಸಿತು ಮತ್ತು ಮೊದಲ ಮೊಬೈಲ್‌ ವಿನ್ಯಾಸವನ್ನು ನೀಡಿತು. ಈ ಫೋನ್ ಅನ್ನು ಮೊಟೊರೊಲಾ ಡೈನಾಟಾಕ್ ಎಂದು ಹೆಸರಿಸಲಾಯಿತು. ಈ ಫೋನ್‌ನ ತೂಕ 1.1 ಕಿಲೋಗ್ರಾಂಗಳು ಆಗಿತ್ತು. ಇನ್ನು ಜಗತ್ತಿನ ಮೊತ್ತಮೊದಲ ಬಾರಿಗೆ ವಾಣಿಜ್ಯಾತ್ಮಕವಾಗಿ ಮೊಬೈಲ್ ಫೋನುಗಳು ಮಾರಾಟವಾಗಿದ್ದು 1983ರಲ್ಲಿ. ಮೊಟೊರೊಲಾ DynaTAC 8000X ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಯಿತು. ಅಂದು ಬಿಡುಗಡೆಯಾದ ಫೋನ್ ಬೆಲೆ $3,955.

ಮೊಬೈಲ್

ಇನ್ನು ಮೊದಲ ಮೊಬೈಲ್ ಕರೆ ಮಾಡಿದ್ದು ಮೋಟೊರೋಲಾ ಸಂಸ್ಥಾಪಕ ಮಾರ್ಟಿನ್ ಕೂಪರ್. ಮಾರ್ಟಿನ್ ಕೂಪರ್'ರವರು ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಏಪ್ರಿಲ್ 3, 1973 ರಲ್ಲಿ ಮೊಟೊರೊಲಾ ಮೊಬೈಲ್‌ನಿಂದ ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್‌ಗೆ ಕರೆ ಮಾಡಲಾಗಿತ್ತು.

Best Mobiles in India

English summary
Who invented the cell phone? It is a tricky theory which leads into the world of stiffest competitions of the technical world.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X