ಯಾರು ಈ ಆಂಡಿ ಜಾಸ್ಸಿ? ಅಮೆಜಾನ್‌ CEO ಸ್ಥಾನಕ್ಕೆ ಇವರನ್ನೇ ಆಯ್ಕೆಮಾಡಿದ್ದು ಯಾಕೆ?

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಅಮೆಜಾನ್‌ ಸಂಸ್ಥೆಯ CEO ಸ್ಥಾನದಿಂದ ಕೆಳಗಿಳಿಯುವುದಾಗಿ ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸ್ಥಾನಕ್ಕೆ ಆಂಡಿ ಜಾಸ್ಸಿ ಉತ್ತರಾಧಿಕಾರಿಯಾಗಿದ್ದು, ಅಮೆಜಾನ್‌ನ ಮುಂದಿನ ಸಿಇಒ ಆಗಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ, ಈ ಆಂಡಿ ಜಾಸ್ಸಿ ಯಾರು? ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಗಳಲ್ಲಿ ಒಂದಾಗಿರುವ ಅಮೆಜಾನ್‌ CEO ಸ್ಥಾನಕ್ಕೆ ಇವರನ್ನೇ ಯಾಕೆ ಆಯ್ಕೆ ಮಾಡಲಾಗಿದೆ ಅನ್ನೊ ಕುತೂಹಲ ಈಗ ಎಲ್ಲೆಡೆ ಹರಿದಾಡ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ CEO ಜೆಫ್‌ ಬೆಜೋಸ್‌ ಸ್ಥಾನದಿಂದ ಕೆಳಗಿಳಿಯುವದಾಗಿ ತಮ್ಮ ಸಿಬ್ಬಂದಿಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಅಮೆಜಾನ್‌ CEO ಸ್ಥಾನಕ್ಕೆ ಆಂಡಿ ಜಾಸ್ಸಿ ಅವರನ್ನು ಆಯ್ಕೆ ಮಾಡಿದ್ದಾರೆ. ಅಷ್ಟಕ್ಕೂ ಈ ಆಂಡಿ ಜಾಸ್ಸಿ ಯಾರು ಅನ್ನೊ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ಹಾಗಾದ್ರೆ ಆಂಡಿ ಜಾಸ್ಸಿ ಯಾರು? ಇವರ ಹಿನ್ನೆಲೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ನಂತೆಯೇ, ಆಂಡಿ ಜಾಸ್ಸಿ ಕೂಡ ಅಮೆಜಾನ್‌ನಲ್ಲಿಯೇ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಅಮೆಜಾನ್ ವೆಬ್ ಸರ್ವೀಸಸ್ ಅನ್ನು ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, 2006 ರಲ್ಲಿ ಪ್ರಾರಂಭವಾದ ಅಮೆಜಾನ್ ಕ್ಲೌಡ್‌ ಸರ್ವಿಸ್‌ ಕಾರ್ಯಕ್ರಮದ ಹಿಂದಿನ ಸೂತ್ರದಾರ ಇವರೇ ಆಗಿದ್ದಾರೆ. ಸದ್ಯ ಅಮೆಜಾನ್‌ CEO ಸ್ಥಾನಕ್ಕೆ ಆಂಡಿ ಜಾಸ್ಸಿ ಹೆಸರು ಕೇಳಿ ಬರುತ್ತಿದ್ದ ಹಾಗೇ ಎಲ್ಲಡೆ ಯಾರಿ ಆಂಡಿ ಜಾಸ್ಸಿ ಎಂದು ಚರ್ಚೆ ಆಗ್ತಿದೆ. ಪ್ರಸ್ತುತ ಇವರು ಅಮೆಜಾನ್‌ ಕ್ಲೌಡ್‌ ಸರ್ವಿಸ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಮೆಜಾನ್‌

ಇನ್ನು ಹಾರ್ವರ್ಡ್ ಬ್ಯುಸಿನೆಸ್ ಶಾಲೆಯಿಂದ ಎಂಬಿಎ ಪದವಿ ಪಡೆದಿರುವ ಇವರು ಅಮೆಜಾನ್‌ನ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. 53 ವರ್ಷ ವಯಸ್ಸಿನ ಆಂಡಿ ಜಾಸ್ಸಿ, ಜೆಫ್ ಬೆಜೋಸ್ ಗಿಂತ ವಯಸ್ಸಿನಲ್ಲಿ ಕಿರಿಯರು ಆದರೆ ಅಮೆಜಾನ್‌ ಕ್ಲೌಡ್‌ ಸರ್ವಿಸ್‌ ಮೂಲಕ ಅಮೆಜಾನ್‌ಗೆ ಹೆಚ್ಚಿನ ಆದಾಯ ಬರುವಂತೆ ಮಾಡಿದ್ದಾರೆ. ಇದು ಆಂಡಿ ಜಾಸ್ಸಿಯ ನಾಯಕತ್ವದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಆಂಡಿ ಜಾಸ್ಸಿ

ಇನ್ನು ಆಂಡಿ ಜಾಸ್ಸಿಯ ವೈಯಕ್ತಿಕ ಜೀವನದ ಕಡೆ ಗಮನ ಹರಿಸುವುದಾದರೆ, ಎಲಾನಾ ರೋಚೆಲ್ ಕ್ಯಾಪ್ಲಾನ್ ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಜೊತೆಗೆ ಕ್ರೀಡೆ, ಸಂಗೀತ ಮತ್ತು ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆಂದು ಹೇಳಲಾಗಿದೆ. ಸದ್ಯ ಆಂಡಿ ಜಾಸ್ಸಿ AWS ನ ಸಿಇಒ ಆಗಿ $175,000 ಮೂಲ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಆಂಡಿ ಜಾಸ್ಸಿ ಅಮೆಜಾನ್‌ಗೆ ಸೇರಿದ ಪ್ರಾರಂಭಿಕ ಹಂತದಲ್ಲಿ ಜೆಫ್ ಬೆಜೋಸ್‌ಗೆ ತಾಂತ್ರಿಕ ಸಹಾಯಕರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಇದೀಗ ಮುಂದಿನ ಸಿಇಒ ಆಗಿ ಆಯ್ಕೆಯಾಗಿದ್ದಾರೆ.

Best Mobiles in India

English summary
Amazon CEO and founder Jeff Bezos announced that it would step down as the CEO of the company.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X