ಟೆಲಿಗ್ರಾಮ್ ಅಪ್ಲಿಕೇಶನ್ ಯಾವ ದೇಶದ್ದು?..ಇದರ ಮಾಲೀಕರು ಯಾರು?

|

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸಾಪ್‌ ತನ್ನ ಸೇವಾ ನಿಯಮಗಳನ್ನು ಅಪ್ಡೇಟ್‌ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ ಈ ಸೇವಾ ನಿಯಮಗಳನ್ನು ಒಪ್ಪಿಕೊಂಡವರು ಮಾತ್ರ ವಾಟ್ಸಾಪ್‌ ಬಳಸಬಹುದು ಎನ್ನುವುದನ್ನ ವಾಟ್ಸಾಪ್‌ ಸ್ಪಷ್ಟಪಡಿಸಿದೆ. ಒಂದು ವೇಳೆ ಈ ಅಪ್ಡೇಟ್‌ ಅನ್ನು ಒಪ್ಪಿಕೊಳ್ಳದ ಬಳಕೆದಾರರು ವಾಟ್ಸಾಪ್‌ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ. ಸದ್ಯ ಇದೇ ವಿಚಾರ ಎಲ್ಲೆಡೆ ಹೆಚ್ಚು ಚರ್ಚೆ ಆಗುತ್ತಿದೆ. ಜೊತೆಗೆ, ವಾಟ್ಸಾಪ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವ ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ಅನೇಕರು ಪರಿಗಣಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಮತ್ತೊಂದು ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಟೆಲಿಗ್ರಾಮ್ ಅಗ್ರಸ್ಥಾನದಲ್ಲಿದೆ.

ಟೆಲಿಗ್ರಾಮ್‌

ಹೌದು, ವಾಟ್ಸಾಪ್‌ನ ಸೇವಾ ನಿಯಮ ವಿರೋದಿಸುತ್ತಿರುವ ಬಹುತೇಕ ಮಂದಿ ಇದೀ ಟೆಲಿಗ್ರಾಮ್‌ ಕಡೆಗೆ ಮುಖ ಮಾಡುತ್ತಿದ್ದಾರೆ. ಇನ್ನು ವಾಟ್ಸಾಪ್ ವಿಶೇಷವಾಗಿ ಭಾರತದಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಮೀಡಿಯಾ ಫೈಲ್‌ಗಳ ಸುಲಭ ವರ್ಗಾವಣೆ, ಧ್ವನಿ ಮತ್ತು ವೀಡಿಯೊ ಕರೆ, ಮತ್ತು ಅಂತಹ ಇತರ ಫೀಚರ್ಸ್‌ಗಳು ಇನ್ನಷ್ಟು ಜನಪ್ರಿಯತೆಗೆ ಸಾಕ್ಷಿಯಾಗಿವೆ. ಆದಾಗ್ಯೂ, ಟೆಲಿಗ್ರಾಮ್, ಲೈನ್ ಮತ್ತು ಇತರ ಸಂದೇಶ ಸರ್ವಿಸ್‌ ಕೂಡ ವಾಟ್ಸಾಪ್‌ ನಂತೆಯೇ ಇದೆ. ಹಾಗಾದ್ರೆ ಟೆಲಿಗ್ರಾಮ್‌ ವಿಶೇಷತೆ ಏನು? ಟೆಲಿಗ್ರಾಮ್‌ ಯಾವ ದೇಶಕ್ಕೆ ಸೇರಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್ ಎಂದರೇನು?

ಟೆಲಿಗ್ರಾಮ್ ಎಂದರೇನು?

ಸರಳವಾಗಿ ಹೇಳುವುದಾದರೆ, ಟೆಲಿಗ್ರಾಮ್ ವಾಟ್ಸಾಪ್ನಂತೆಯೇ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ಆಗಿದೆ. ಇದು ಕ್ಲೌಡ್-ಆಧಾರಿತ ಕಾರ್ಯಾಚರಣೆಗಳೊಂದಿಗೆ ಉಚಿತ ಮತ್ತು ಕ್ರಾಸ್‌-ಪ್ಲಾಟ್‌ಫಾರ್ಮ್ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್ ಆಗಿದೆ. VoIP ಜೊತೆಗೆ ಧ್ವನಿ ಮತ್ತು ವೀಡಿಯೊ ಕರೆ ಮಾಡುವಂತಹ ಫೀಚರ್ಸ್‌ಗಳನ್ನು ಸಹ ಇದರಲ್ಲಿ ಬಳಸಬಹುದು. ಹಾಗೇ ನೋಡಿದರೆ ಟೆಲಿಗ್ರಾಮ್ ಆಂಡ್ರಾಯ್ಡ್‌ನಲ್ಲಿ ಲಭ್ಯವಾಗುವುದಕ್ಕೂ ಮೊದಲು 2013 ರಲ್ಲಿ ಐಒಎಸ್‌ನಲ್ಲಿ ಪ್ರಾರಂಭವಾಯಿತು. ಇಂದು, ಟೆಲಿಗ್ರಾಮ್ ವಿಶ್ವದಾದ್ಯಂತ ದೊಡ್ಡ ಯೂಸರ್ ಬೇಸ್‌ ಅನ್ನು ಒಳಗೊಂಡಿದೆ.

ಟೆಲಿಗ್ರಾಮ್ ಯಾರ ಒಡೆತನದಲ್ಲಿದೆ?

ಟೆಲಿಗ್ರಾಮ್ ಯಾರ ಒಡೆತನದಲ್ಲಿದೆ?

ವಾಟ್ಸಾಪ್ ಫೇಸ್‌ಬುಕ್‌ನ ಒಡೆತನದಲ್ಲಿದೆ ಎಂದು ನಮಗೆ ತಿಳಿದಿದೆ. ಆದರೆ ಟೆಲಿಗ್ರಾಮ್ ಯಾರ ಒಡೆತನದಲ್ಲಿ ಅನ್ನೊದು ಬಹಳ ವಿಶೇಷವಾಗಿದೆ. ಟೆಲಿಗ್ರಾಮ್‌ ಅನ್ನು ರಷ್ಯಾದ ಇಬ್ಬರು ಸಹೋದರರಾದ ನಿಕೊಲಾಯ್ ಮತ್ತು ಪಾವೆಲ್ ಡುರೊವ್ ಪ್ರಾರಂಭಿಸಿದರು. ಇಂದು, ಪಾವೆಲ್ ಡುರೊವ್ ಟೆಲಿಗ್ರಾಮ್‌ನ ಬಹುಪಾಲು ಮಾಲೀಕರಾಗಿದ್ದಾರೆ, ಅವರು ಅದರ ಸಿಇಒ ಕೂಡ ಆಗಿದ್ದಾರೆ.

ಟೆಲಿಗ್ರಾಮ್ ಯಾವ ದೇಶಕ್ಕೆ ಸೇರಿದೆ?

ಟೆಲಿಗ್ರಾಮ್ ಯಾವ ದೇಶಕ್ಕೆ ಸೇರಿದೆ?

ಟೆಲಿಗ್ರಾಮ್ ಭಾರತೀಯ ಕಂಪನಿಯಾಗಿದೆ ಎಂಬ ವ್ಯಾಪಕ ತಪ್ಪು ಕಲ್ಪನೆ ಕೂಡ ನಮ್ಮಲ್ಲಿ ಎಷ್ಟೋ ಜನರಿಗೆ ಇದೆ. ಹಾಗೇ ನೋಡಿದರೆ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲತಃ ಜರ್ಮನಿಯ ಬರ್ಲಿನ್‌ ದೇಶದಾಗಿದೆ. ಇಂದು, ಈ ಪ್ಲಾಟ್‌ಫಾರ್ಮ್ ಅನ್ನು ಅಮೇರಿಕನ್ ಲಿಮಿಟೆಡ್ ಹೊಣೆಗಾರಿಕೆ ಕಂಪನಿಯಾಗಿ ಮತ್ತು ಯುಕೆಯಲ್ಲಿ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಎಂದು ನೋಂದಾಯಿಸಲಾಗಿದೆ.

ಟೆಲಿಗ್ರಾಮ್ ಬಳಸಲು ಸುರಕ್ಷಿತವೇ?

ಟೆಲಿಗ್ರಾಮ್ ಬಳಸಲು ಸುರಕ್ಷಿತವೇ?

ಇನ್ನು ಈ ಸನ್ನಿವೇಶದಲ್ಲಿ, ಪ್ರಮುಖವಾಗಿ ಕಾಡುವ ಪ್ರಶ್ನೆ ಟೆಲಿಗ್ರಾಮ್ ಬಳಸಲು ಸುರಕ್ಷಿತವಾಗಿದೆಯೇ ಎಂದು? ಟೆಲಿಗ್ರಾಮ್‌ ನಿಮ್ಮ ಸೀಕ್ರೆಟ್ ಚಾಟ್‌ಗಳಿಗಾಗಿ ಎನ್‌ಕ್ರಿಪ್ಶನ್‌ನೊಂದಿಗೆ ಲೋಕಲ್‌ ಸ್ಟೋರೇಜ್‌ ಅನ್ನು ಹೊಂದುವ ಆಯ್ಕೆಯೊಂದಿಗೆ ಇದು ಬರುತ್ತದೆ. ಇದು ಎರಡು ಹಂತದ ಸೆಕ್ಯುರಿಟಿ ಎನ್‌ಕ್ರಿಪ್ಶನ್‌ ಅನ್ನು ಹೊಂದಿದೆ. ಅಲ್ಲದೆ ಬಳಕೆದಾರರು ತಮ್ಮ ಖಾಸಗಿ ಮತ್ತು ಗ್ರೂಪ್‌ ಚಾಟ್‌ಗಳನ್ನು ಕ್ಲೈಂಟ್-ಟು-ಕ್ಲೌಡ್ ಎನ್‌ಕ್ರಿಪ್ಟ್ ಮಾಡಲು ಅನುಮತಿಸುತ್ತದೆ ಮತ್ತು ರಹಸ್ಯ ಚಾಟ್‌ಗಳನ್ನು ಕ್ಲೈಂಟ್-ಟು-ಕ್ಲೈಂಟ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.

Best Mobiles in India

English summary
Telegram is also a messaging platform just like WhatsApp. It's a free and cross-platform instant messaging app with cloud-based operations.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X