ನೀರು ಕುಡಿಯುವುದರಲ್ಲಿ ಯಾವುದು ಫಸ್ಟ್‌? ನಾಯಿಯೋ? ಬೆಕ್ಕೊ?

Posted By:

ನಾಯಿ ಮತ್ತು ಬೆಕ್ಕು ನೀರನ್ನು ಹೇಗೆ ಕುಡಿಯುತ್ತದೆ ಎನ್ನುವ ಪ್ರಶ್ನೆಗೆ ಕೊನೆಗೆ ಉತ್ತರ ಸಿಕ್ಕಿದೆ. ವಿಜ್ಞಾನಿಗಳು ಈ ಎರಡು ಪ್ರಾಣಿಗಳ ಬಗ್ಗೆ ಸಂಶೋಧನೆ ನಡೆಸಿ ಕೊನೆಗೂ ಈ ಪ್ರಶ್ನೆಗೆ ಉತ್ತರ ಕಂಡು ಹುಡುಕಿದ್ದಾರೆ.
ಮನುಷ್ಯ ಆಹಾರವನ್ನು ಸೇವಿಸಲು ಕೈ ಬಳಕೆ ಮಾಡಿದ್ರೆ ಪ್ರಾಣಿಗಳು ನಾಲಗೆಯಲ್ಲಿ ಮೂಲಕ ಆಹಾರ ಸೇವಿಸುವ ವಿಚಾರ ನಿಮಗೆಲ್ಲ ತಿಳಿದಿದೆ. ಆದರೆ ಈ ಪ್ರಾಣಿಗಳು ನಾಲಗೆಯಲ್ಲಿ ಹೇಗೆ ನೀರನ್ನು ಹೀರಿಕೊಳ್ಳುತ್ತವೆ ಎನ್ನುವುದರ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇರಲಿಲ್ಲ. ಈಗ ಅಮೆರಿಕದ ಮಾಸಾಚುಸೆಟ್ಸ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿ, ವರ್ಜಿನಿಯಾ ಟೆಕ್‌ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಹೈಸ್ಪೀಡ್‌ ಕ್ಯಾಮೆರಾದ ಮೂಲಕ ಈ ಸಂಶೋಧನೆ ನಡೆಸಿ ಉತ್ತರ ಕಂಡು ಹಿಡಿದಿದ್ದಾರೆ.
ನಾಯಿಗಳು ನೀರನ್ನು ಹೀರಿ ಅದನ್ನು ನಾಲಗೆಯಲ್ಲಿ ಮಡಚಿ ನಂತರ ಕುಡಿಯುತ್ತದೆ. ಆದರೆ ಬೆಕ್ಕು ನಾಲಗೆಯನ್ನು ನೀರಿಗೆ ಹಾಕಿ ಕ್ಷಣ ಮಾತ್ರದಲ್ಲಿ ಹೀರಿಕೊಳ್ಳತ್ತದೆ. ಒಂದು ಬಾರಿ ಬೆಕ್ಕು ನೀರಿಗೆ ನಾಲಗೆ ಹಾಕಿದ್ರೆ ನಾಯಿ ಹೀರುವ ನೀರಿನ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ ಎಂದು ಸಂಶೋಧನೆ ತಿಳಿಸಿದೆ. ಹೀಗಾಗಿ ಗಿಜ್ಬಾಟ್‌ ಹೈ ಸ್ಪೀಡ್‌ ಕ್ಯಾಮೆರಾಗಳಲ್ಲಿ ಸೆರೆಹಿಡಿದ ಈ ಎರಡು ಪ್ರಾಣಿಗಳ ವೀಡಿಯೋವನ್ನು ತಂದಿದ್ದು ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಕ್ಯಾಮೆರಾಕ್ಕೆ ಸಾಕು ಪ್ರಾಣಿಗಳು ಫೋಸ್‌ ನೀಡಿದ್ರೆ ಹೇಗಿರುತ್ತೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೀರು ಕುಡಿಯುವುದರಲ್ಲಿ ಯಾವುದು ಫಸ್ಟ್‌? ನಾಯಿಯೋ ? ಬೆಕ್ಕೊ ?

ನೀರು ಕುಡಿಯುವುದರಲ್ಲಿ ಯಾವುದು ಫಸ್ಟ್‌? ನಾಯಿಯೋ ? ಬೆಕ್ಕೊ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot