ನಿಮಗಿರುವ 'ಟಿಕ್‌ ಟಾಕ್' ಹುಚ್ಚನ್ನು ಬಿಡಿಸಿಕೊಳ್ಳುವುದು ಹೇಗೆ?

|

ಚೀನಾ ಮೂಲದ ಟಿಕ್‌ ಟಾಕ್ ಎಂಬ ಮೊಬೈಲ್ ಆಪ್ ಇಂದಿನ ಯುವ ಜನತೆಗೆ ಹುಚ್ಚುಹಿಡಿಸಿದೆ. ಈ ಆಪ್‌ನಲ್ಲಿ ಯಾರು ಬೇಕಾದರೂ, ಯಾವ ರೀತಿಯ ವಿಡಿಯೊವನ್ನು ಬೇಕಾದರೂ ಅಪ್‌ಲೋಡ್‌ ಮಾಡುವ ಅವಕಾಶ ಇರುವುದರಿಂದ ಹದಿ ಹರೆಯದವರು ಈ ಟಿಕ್ ಟಾಕ್ ಎಂಬ ಆಪ್ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬೇರೆಯವರ ವಿಡಿಯೊಗಳನ್ನು ನೋಡಿ ಪ್ರಚೋದನೆಗೆ ಒಳಗಾಗಿ, ವಿಡಿಯೊ ಅಪ್‌ಲೋಡ್‌ ಮಾಡುವವರ ಸಂಖ್ಯೆ ಹೆಚ್ಚಿದ್ದು, ಹಲವರು ಈ ಟಿಕ್ ಟಾಕ್ ಆಪ್ ಬಳಕೆಗೆ ಅಡಿಕ್ಟ್ ಆಗಿದ್ದಾರೆ.!

ನಿಮಗಿರುವ 'ಟಿಕ್‌ ಟಾಕ್' ಹುಚ್ಚನ್ನು ಬಿಡಿಸಿಕೊಳ್ಳುವುದು ಹೇಗೆ?

ಹೌದು, ಈ ಟಿಕ್‌ಟಾಕ್ ಆಪ್‌ಗಳಲ್ಲಿನ ವಿಡಿಯೋಗಳನ್ನು ನೋಡಿ ಕೆಲವರು ಎಂಜಾಯ್ ಮಾಡುತ್ತಿದ್ದರೆ, ಹಲವರು ಆಪ್‌ನಲ್ಲಿನ ಕೆಲ ವಿಶೇಷ ಫೀಚರ್ಸ್‌ಗಳಿಗೆ ಮನಸೂತು ತಾವೂ ವಿಡಿಯೋ ಮಾಡುತ್ತಿದ್ದಾರೆ. ಇದರಿಂದಲೇ ಹಲವು ಅಪಾಯಗಳನ್ನು ಅರಿತ ತಮಿಳುನಾಡು ರಾಜ್ಯದಲ್ಲಿ ಟಿಕ್‌ ಟಾಕ್ ಆಪ್ ಅನ್ನು ನಿಷೇಧ ಮಾಡುವ ಪ್ರಸ್ತಾಪನೆಯೂ ಕೂಡ ಇದೆ. ಆದರೆ, ಟಿಕ್‌ ಟಾಕ್ ಆಪ್ ಅನ್ನು ನಿಷೇಧಿಸುವುದು ಇಲ್ಲಿ ಮುಖ್ಯವಲ್ಲ, ಬದಲಾಗಿ ನಾವು ಈ ಟಿಕ್‌ಟಾಕ್ ಆಪ್‌ ಗೀಳಿನಿಂದ ಹೊರಬರಬೇಕಿರುವುದು ಇಲ್ಲಿ ಮುಖ್ಯ.

ಹಾಗಾಗಿ, ಒಂದು ವೇಳೆ ನೀವು ಕೂಡ ಈ ಟಿಕ್‌ಟಾಕ್ ಆಪ್‌ಗೆ ಅಡಿಕ್ಟ್ ಆಗಿದ್ದರೆ ಅದರಿಂದ ಹೊರಬರುವುದು ಹೇಗೆ ಎಂಬುದನ್ನು ನಾನಿಂದು ಚರ್ಚಿಸುತ್ತೇನೆ. ಟಿಕ್‌ ಟಾಕ್ ಆಪ್‌ನಲ್ಲಿ ಫಾಲೋವರ್ಗಳ ಸಂಖ್ಯೆ ಹೆಚ್ಚಿಸಿಕೊಂಡು ಲೈಕ್ಸ್, ಕಮೆಂಟ್, ಶೇರ್‌ಗಳ ಲೆಕ್ಕಾಚಾರ ಹಾಕುತ್ತಾ ತಮ್ಮದೇ ಆದ ಫ್ಯಾಂಟಸಿ ಜಗತ್ತನ್ನು ಸೃಷ್ಟಿಸಿಕೊಂಡಿರುವವರಿಗೆ ಇದು ಖಂಡಿತವಾಗಿಯೂ ಸಹಾಯವಾಗುತ್ತದೆ. ಆದರೆ, ಟಿಕ್‌ಟಾಕ್ ಮೂಲಕ ನೀವು ಜನಪ್ರಿಯವಾಗಬೇಕು ಎಂದು ಅಂದುಕೊಂಡಿದ್ದರೆ ಈ ಲೇಖನವನ್ನು ಓದುವುದನ್ನು ಇಲ್ಲಿಗೆ ನಿಲ್ಲಿಸಿ.

ಹಂತಹಂತವಾಗಿ ದೂರಾಗಬೇಕು.

ಹಂತಹಂತವಾಗಿ ದೂರಾಗಬೇಕು.

ಯಾವುದೇ ಗೀಳು ಅಥವಾ ಚಟದಿಂದ ಹೊರಕ್ಕೆ ಬರುವಾಗ ಮನಸ್ಸಿನಲ್ಲಿ ಆಗುವ ಏರಿಳಿತಗಳು ತಾತ್ಕಾಲಿಕ. ಹಾಗಾಗಿ, ಟಿಕ್‌ ಟಾಕ್ ಗೀಳಿಗೆ ಒಳಗಾದವರು ಒಂದೇ ಕ್ಷಣದಲ್ಲಿ ಅದರಿಂದ ಹೊರ ಬರಲು ಸಾಧ್ಯವಿಲ್ಲ. ಹಂತಹಂತವಾಗಿ ಅದರಿಂದ ದೂರಾಗಬೇಕು. ಇದು ಕೂಡ ಒಂದು ರೀತಿಯಲ್ಲಿ ಪೇಸ್‌ಬುಕ್ ರೀತಿಯಲ್ಲಿಯೇ, ಇಷ್ಟವಿಲ್ಲದಿದ್ದರೂ ಬಳಸಲೇಬೇಕಾದ ಪರಿಸ್ಥಿತಿ.

ವೇಳಾಪಟ್ಟಿಯನ್ನು ರಚಿಸಿಕೊಳ್ಳಿ!

ವೇಳಾಪಟ್ಟಿಯನ್ನು ರಚಿಸಿಕೊಳ್ಳಿ!

ಟಿಕ್‌ ಟಾಕ್, ಫೇಸ್‌ಬುಕ್ ಸೇರಿದಂತೆ ಯಾವುದಕ್ಕೇ ನೀವು ಅಡಿಕ್ಟ್ ಆಗಿದ್ದರೆ, ನೀವು ದಿನನಿತ್ಯ ಮಾಡಬೇಕಾದ ಕೆಲಸಗಳ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಒಮ್ಮೆ ನೀವು ಅದನ್ನು ಪಾಲಿಸುತ್ತಾ ಬಂದರೆ, ಓದು, ಬರಹ, ಊಟ, ಆಟ, ನಿದ್ದೆ ಮತ್ತು ಮನರಂಜನೆ ಹೀಗೆ ಪ್ರತಿಯೊಂದಕ್ಕೂ ಇಂತಿಷ್ಟೇ ಸಮಯ ಅಂತ ನಿಗದಿಯಾಗಿ ಟಿಕ್‌ಟಾಕ್‌ನಿಂದ ದೂರಾಗಬಹುದು.

ಗ್ಯಾಜೆಟ್ ಟೈಮ್‌ ನಿರ್ಧರಿಸಿ

ಗ್ಯಾಜೆಟ್ ಟೈಮ್‌ ನಿರ್ಧರಿಸಿ

ನೀವು ನಿಮ್ಮ ಮೊಬೈಲ್‌ನಿಂದ ಟಿಕ್‌ ಟಾಕ್ ಅನ್ನು ಡಿಲೀಟ್ ಮಾಡಬಹುದು. ಆದರೆ, ನೀವು ಅದಕ್ಕಿಂತಲೂ ಮಾಡಬೇಕಾದ ಕೆಲಸವೆಂದರೆ, ಸ್ಕ್ರೀನ್‌ಟೈಮ್‌ ಅಥವಾ ಗ್ಯಾಜೆಟ್ ಟೈಮ್‌ಗೆ ನಿಗದಿಯಾಗಿರುವ ಸಮಯದಲ್ಲಿ ಮಾತ್ರ ಮೊಬೈಲ್‌ ಬಳಸುವುದು. ಶುರುವಿನಲ್ಲಿ ಸ್ಕ್ರೀನ್‌ಟೈಮ್‌ಗೆ ಒಂದು ಗಂಟೆ ನಿಗದಿಸಿದ್ದರೆ, ಕ್ರಮೇಣ ಅದನ್ನು ಕಡಿಮೆ ಮಾಡುತ್ತಾ ಬರಬಹುದು.

ಜಾಗೃತಿ ಮೂಡಿಸಿಕೊಳ್ಳಿ

ಜಾಗೃತಿ ಮೂಡಿಸಿಕೊಳ್ಳಿ

ಮಕ್ಕಳೇನಾದರೂ ಈ ಟಿಕ್‌ ಟಾಕ್‌ಗೆ ಅಡಿಕ್ಟ್ ಆಗಿದ್ದರೆ ಹಿರಿಯರು ತಮ್ಮ ಮೊಬೈಲ್‌ ಅನ್ನು ಲಾಕ್‌ ಮಾಡಿ ಇಟ್ಟುಕೊಳ್ಳಬಹುದು. ಆದರೆ, ಇಂದಿನ ಬಹುತೇಕ ಯುವ ಜನಾಂಗವೇ ಈ ಟಿಕ್‌ಟಾಕ್‌ಗೆ ಅಡಿಕ್ಟ್ ಆಗಿರುವುದರಿಂದ ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಿ. ಟಿಕ್‌ಟಾಕ್ ಜೊತೆಗೆ ಮೊಬೈಲ್‌ ಗೀಳು ತಪ್ಪಿಸಲು ಇತರೆ ಕಾರ್ಯಗಳತ್ತ ಗಮನಹರಿಸಿ.

ಪ್ರಚೋದನೆಗೆ ಒಳಗಾಗಬೇಡಿ

ಪ್ರಚೋದನೆಗೆ ಒಳಗಾಗಬೇಡಿ

ವಯಸ್ಸಿಗೆ ಮೀರಿದ ಕೆಲವು ಕಂಟೆಂಟ್‌ಗಳು ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಟಿಕ್‌ ಟಾಕ್ ವಿಡಿಯೊಗಳನ್ನು ನೋಡಿ, ನಕ್ಕು ಸುಮ್ಮನಾಗದೇ ಬೇರೆಯವರ ವಿಡಿಯೊಗಳನ್ನು ನೋಡಿ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗಬೇಡಿ. ಸೆಲಬ್ರಿಟಿ ಭ್ರಮೆಯ ಬಲೂನಿಗೆ ಸೂಜಿ ಚುಚ್ಚಿದಂತೆ ಇರುತ್ತದೆ.

Best Mobiles in India

English summary
WHY ARE PEOPLE ADDICTED TO TIK TOK is the fourth episode of the Smosh series My Strange Addiction. to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X