ಮೊದಲಿಗಿಂತ ನಿಮ್ಮ ಸ್ಮಾರ್ಟ್‌ಫೋನ್ ಸೌಂಡ್ ಕಡಿಮೆ ಆಗಿದೆಯಾ ಹೀಗೆ ಮಾಡಿ!
ಇದಕ್ಕಿದ್ದ ಹಾಗೇ ನಿಮ್ಮ ಫೋನ್‌ನ ಸೌಂಡ್ ಕಡಿಮೆ ಆಗೋಗಿದೆಯಾ? ವಾಲ್ಯೂಮ್ ಎಷ್ಟೇ ಜಾಸ್ತಿ ಮಾಡಿದ್ದರೂ ಸಹ ಮೊದಲಿಗಿಂತ ಕಡಿಮೆ ಅನಿಸುತ್ತಿದೆಯಾ? ಅಷ್ಟಕ್ಕೂ ನಿಮ್ಮ ಫೋನ್‌ನ ಸೌಂಡ್ ಸರಿಯಾಗಿ ಕಾರ್ಯನಿರ್ವಹಿಸದೆ ಇರೋದಕ್ಕೆ ಕಾರಣಗಳೇನು? ಇದೆಲ್ಲವನ್ನು ತಿಳಿಯಲು ನೀವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಹೌದು, ನಿಮ್ಮ ಮೊಬೈಲ್ ಸೌಂಡ್ ಕಡಿಮೆ ಆಗಿದ್ದು, ಏನೇ ಮಾಡಿದರೂ ಜಾಸ್ತಿ ಆಗುತ್ತಿಲ್ಲ ಅನ್ನೊದಾದ್ರೆ ಕೆಲವು ಕ್ರಮಗಳನ್ನು ಅನುಸರಿಬೇಕಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಸೌಂಡ್ ಕಡಿಮೆ ಆಗೋದಕ್ಕೆ ಕಾರಣ ಏನು ಅನ್ನೊದನ್ನ ತಿಳಿದುಕೊಳ್ಳಬೇಕಾಗುತ್ತದೆ. ಹಾಗಾದ್ರೆ ಮೊಬೈಲ್ ಸೌಂಡ್ ಕಡಿಮೆ ಆಗಿದ್ದಾಗ ನೀವು ಮಾಡಬೇಕಾದ ಕೆಲಸಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್ ಸೌಂಡ್ ಕಡಿಮೆ ಆಗೋದಕ್ಕೆ ಕಾರಣಗಳೇನು?
* ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬ್ಲೂಟೂತ್ ಮೂಲಕ ಮತ್ತೊಂದು ಡಿವೈಸ್‌ಗೆ ಕನೆಕ್ಟ್ ಮಾಡಿರಬಹುದು.
* ನಿಮ್ಮ ಮೊಬೈಲ್ ವಾಲ್ಯೂಮ್ ಕಂಟ್ರೋಲ್ ಮಾಡುವ ಬ್ಯಾಕ್‌ಗ್ರೌಂಡ್ ಅಪ್ಲಿಕೇಶನ್ ರನ್ ಆಗುತ್ತಿರಬಹುದು.
* ನಿಮ್ಮ ಫೋನ್‌ನ ವಾಲ್ಯೂಮ್ ಬಟನ್ ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು
* ಸ್ಪೀಕರ್‌ಗಳು ಅಥವಾ ಹೆಡ್‌ಫೋನ್‌ಗಳು ಹಾರ್ಡ್‌ವೇರ್ ಸಮಸ್ಯೆ ಹೊಂದಿರುವ ಸಾದ್ಯತೆ ಕೂಡ ಇದೆ.
ಇಂತಹ ಸನ್ನಿವೇಶಗಳಲ್ಲಿ ನಿಮ್ಮ ಮೊಬೈಲ್ ಸೌಂಡ್ ಕಡಿಮೆ ಆಗಿರುವ ಸಾಧ್ಯತೆಯಿರುತ್ತದೆ. ಇವುಗಳನ್ನು ನಿವಾರಿಸಿದ ನಂತರವೂ ಮೊಬೈಲ್ ವಾಲ್ಯೂಮ್‌ನಲ್ಲಿ ಬದಲಾವಣೆ ಆಗದೇ ಹೋದರೆ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಆಂಡ್ರಾಯ್ಡ್ ಫೋನ್ ವಾಲ್ಯೂಮ್ ಸರಿ ಮಾಡಲು ಹೀಗೆ ಮಾಡಿ!
* ಬ್ಲೂಟೂತ್ ಆಫ್ ಮಾಡಿ.
* ನಿಮ್ಮ ಬಾಹ್ಯ ಸ್ಪೀಕರ್‌ಗಳ ಮೇಳಿನ ದೂಳನ್ನು ಸ್ವಚ್ಛಗೊಳಿಸಿ
* ನಿಮ್ಮ ಹೆಡ್‌ಫೋನ್ ಜ್ಯಾಕ್‌ನಿಂದ ಲಿಂಟ್ ಅನ್ನು ತೆರವುಗೊಳಿಸಿ.
ಈ ಮೇಲಿನ ಅಂಶಗಳನ್ನು ಅನುಸರಿಸುವ ಮೂಲಕ ನಿಮ್ಮ ಮೊಬೈಲ್‌ನಲ್ಲಿ ಸೌಂಡ್ ಅನ್ನು ಸುಧಾರಿಸಲು ಸಾಧ್ಯವಾಗಲಿದೆ.
ಫೋನ್ ಸೆಟ್ಟಿಂಗ್ಸ್‌ನಲ್ಲಿ ಕೆಲ ಬದಲಾವಣೆಗಳು ಮಾಡುವ ಮೂಲಕ ಸೌಂಡ್ ಸರಿಪಡಿಸಿ!
ಕೆಲವೊಮ್ಮೆ ನಿಮ್ಮ ಮೊಬೈಲ್ ಸೆಟ್ಟಿಂಗ್ಸ್‌ಗಳಲ್ಲಿ ಆದ ಬದಾಲಾವಣೆಯಿಂದ ಮೊಬೈಲ್ ಸೌಂಡ್ ಕಡಿಮೆ ಆಗಿರುತ್ತದೆ. ಇಂತಹ ಸಮಯದಲ್ಲಿ ಮೊದಲಿಗೆ ನಿಮ್ಮ ಮೊಬೈಲ್ ಸೆಟ್ಟಿಂಗ್ಸ್‌ನ್ಲಿ ಸೌಂಡ್ ಆಯ್ಕೆಯನ್ನು ಟ್ಯಾಪ್ ಮಾಡಿ. ಇದರಲ್ಲಿ ನೀವು ಕಾಲ್ ವಾಲ್ಯೂಮ್, ರಿಂಗ್ ವಾಲ್ಯೂಮ್, ಅಲಾರ್ಮ್ ವಾಲ್ಯೂಮ್ ಮತ್ತು ಮೀಡಿಯಾ ವಾಲ್ಯೂಮ್ ಅನ್ನು ಕಾಣಬಹುದು. ಈ ಆಯ್ಕೆಗಳಲ್ಲಿ ನೀವು ಮೀಡಿಯಾ ವಾಲ್ಯೂಮ್ ಮತ್ತು ಕಾಲ್ ವಾಲ್ಯೂಮ್ ಅನ್ನು ಜಾಸ್ತಿ ಮಾಡುವ ಮೂಲಕ ನಿಮ್ಮ ಮೊಬೈಲ್‌ನಲ್ಲಿ ಸೌಂಡ್ ಜಾಸ್ತಿ ಮಾಡಬಹುದಾಗಿದೆ.
ಈಕ್ವಲೈಜರ್ ಅಪ್ಲಿಕೇಶನ್ ಮೂಲಕ ಮೊಬೈಲ್ ಸೌಂಡ್ ಸರಿಪಡಿಸಿ!
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೌಂಡ್ ಕಡಿಮೆ ಆಗಿದ್ದು, ಮೊದಲಿನಂತೆ ಸೌಂಡ್ ಜಾಸ್ತಿ ಮಾಡಬೇಕೆಂದುಕೊಂಡವರಿಗೆ ಈಕ್ವಲೈಜರ್ ಅಪ್ಲಿಕೇಶನ್ ಸೂಕ್ತವಾಗಿದೆ. ಇದು ನಿಮ್ಮ ಸ್ಪೀಕರ್‌ಗಳು ಅಥವಾ ಹೆಡ್‌ಫೋನ್‌ಗಳಿಂದ ಹೊರಹೊಮ್ಮುವ ಆಡಿಯೊದಲ್ಲಿನ ಕೆಲವು ಸೋನಿಕ್ ಆವರ್ತನಗಳ ತೀವ್ರತೆಯ ಮಟ್ಟವನ್ನು ಬದಲಾಯಿಸಲು ಅವಕಾಶ ನೀಡಲಿದೆ.

ಫ್ಲೆಕ್ಸ್ ಕೇಬಲ್ ಸಮಸ್ಯೆ ಇದಿಯಾ ಪರಿಶೀಲಿಸಿ!
ಮೊಬೈಲ್‌ನಲ್ಲಿ ಸೌಂಡ್ ಕಡಿಮೆ ಆಗುವಲ್ಲಿ ವಾಲ್ಯೂಮ್ ಫ್ಲೆಕ್ಸ್ ಕೇಬಲ್ ಸಮಸ್ಯೆ ಕೂಡ ಇರಲಿದೆ. ಇನ್ನು ಈ ಕೇಬಲ್ ಫೋನ್‌ನ ಮದರ್‌ಬೋರ್ಡ್‌ಗೆ ಸಂಪರ್ಕಿಸುತ್ತದೆ. ಈ ಕೇಬಲ್‌ನಲ್ಲಿ ಸಮಸ್ಯೆ ಉಂಟಾದರೆ ನಿಮ್ಮ ಮೊಬೈಲ್‌ನಲ್ಲಿನ ಸೌಂಡ್ ಪ್ರೊಡಕ್ಷನ್‌ನಲ್ಲಿ ಸಮಸ್ಯೆ ಎದುರಾಗಲಿದೆ. ಇದೇ ಕಾರಣಕ್ಕೆ ನಿಮ್ಮ ಫೋನ್ ಸ್ಪೀಕರ್ ವಾಲ್ಯೂಮ್ ಕಡಿಮೆಯಾಗಿದ್ದರೆ ನಿಮ್ಮ ಮೊಬೈಲ್ ಅನ್ನು ರಿಪೇರಿ ಮಾಡಿಸುವ ಮೂಲಕ ಮಾತ್ರವೇ ಸೌಂಡ್ ಸರಿಪಡಿಸಲು ಸಾದ್ಯವಾಗಲಿದೆ.


Click it and Unblock the Notifications








