Home
ಸುದ್ದಿಜಾಲ

ಬ್ಯಾಟರಿ ತನ್ನ ಆಯಸ್ಸನ್ನು ಬಹುಬೇಗ ಕಳೆದುಕೊಳ್ಳುವುದೇಕೆ?..ಓರ್ವ ವಿಜ್ಞಾನಿ ಹೇಳಿದ್ದು ಹೀಗೆ!

By Bhaskar N J

ಬ್ಯಾಟರಿ ತನ್ನ ಆಯಸ್ಸನ್ನು ಏಕೆ ಕಳೆದುಕೊಳ್ಳುತ್ತದೆ ಎಂಬ ಯಕ್ಷ ಪ್ರಶ್ನೆಗೆ ಉಷ್ಣಬಲ ವಿಜ್ಞಾನದ ಎರಡನೆಯ ನಿಯಮ ಸರಳವಾಗಿ ಉತ್ತರವನ್ನು ನಿಡುತ್ತದೆ. ಉಷ್ಣಬಲ ವಿಜ್ಞಾನದ ಎರಡನೆಯ ನಿಯಮದ ಪ್ರಕಾರ, ಯಾವುದೇ ಬ್ಯಾಟರಿಯ ಆಯಸ್ಸು ಅದರ ಬಳಕೆಯ ಮೇಲೆ ಕಡಿಮೆಯಾಗುತ್ತಾ ಬರುತ್ತದೆ. ಇದನ್ನು ನಾವು ಎಂದಿಗೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತದೆ.

ಆದರೆ, ಸಾಮಾನ್ಯ ಜನರಿಗೆ ಇಲ್ಲಿಯವರೆಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿರುವುದು ನಮ್ಮ ಮೊಬೈಲ್ ಬ್ಯಾಟರಿ ಮಾತ್ರ ಏಕೆ ಬಹುಬೇಗ ಹಾಳಾಗುತ್ತದೆ ಎಂಬ ಪ್ರಶ್ನೆ ಮಾತ್ರ. ಹಾಗಾಗಿ, ಇಂದಿನ ಲೇಖನದಲ್ಲಿ ಬ್ಯಾಟರಿ ತನ್ನ ಆಯಸ್ಸನ್ನು ಬಹುಬೇಗವಾಗಿ ಕಳೆದುಕೊಳ್ಳಲು ಇರುವ ಕಾರಣಗಳ ಬಗ್ಗೆ ವಿಜ್ಞಾನಿಯೋರ್ವರು ಚರ್ಚಿಸಿರುವ ಮಾಹಿತಿಯನ್ನು ನೀಡುವ ಪ್ರಯತ್ನ ನಮ್ಮದು.

ಬ್ಯಾಟರಿ ತನ್ನ ಆಯಸ್ಸನ್ನು ಬಹುಬೇಗ ಕಳೆದುಕೊಳ್ಳುವುದೇಕೆ?

ಹಾಗಾದರೆ, ನಮ್ಮ ಮೊಬೈಲ್ ಬ್ಯಾಟರಿ ಬಹುಬೇಗ ಆಯಸ್ಸನ್ನು ಕಳೆದುಕೊಳ್ಳಲು ಇರುವ ಇತರೆ ಕಾರಣಗಳೇನು? ಮೊಬೈಲ್ ಬ್ಯಾಟರಿಯನ್ನು ನಾವು ಹೇಗೆ ನಿರ್ವಹಣೆ ಮಾಡಬೇಕು? ಇದೀಗ ಬ್ಯಾಟರಿ ಸ್ಫೋಟಕ್ಕೂ ಮತ್ತು ಬ್ಯಾಟರಿ ಹಾಳಾಗುವುದಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಈ ಮುಂದಿನ ಸ್ಲೈಡರ್‌ಗಳಲ್ಲಿ ಪಡೆಯಿರಿ.

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ..!

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ..!

ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತೇನೆ ಎಂದು ಬ್ಯಾಟರಿ ಚಾರ್ಜ್ ಪೂರ್ತಿ ಖಾಲಿಯಾಗುವವರೆಗೂ ಬಳಕೆ ಬೇಡ.ಹೌದು, ಸ್ಮಾರ್ಟ್‌ಫೋನ್ ಎಷ್ಟೇ ಬಳಸಿದರೂ ಕಡಿಮೆ ಎಂದರೂ ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರುವ ಹಾಗೆ ನೋಡಿಕೊಳ್ಳಿ. ಏಕೆಂದರೆ ಖಾಲಿಯಾದ ಬ್ಯಾಟರಿಯನ್ನು ಸೆಲ್ಸ್‌ಗಳನ್ನು ತಳಮಟ್ಟದಿಂದ ಚಾರ್ಜ್ ಮಾಡಿದರೆ ಅವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

100% ಚಾರ್ಜ್ ಮಾಡಿದರೆ?

100% ಚಾರ್ಜ್ ಮಾಡಿದರೆ?

ಅತಿಯಾಗಿ ಆಹಾರ ಸೇವನೆ ದೇಹಕ್ಕೆ ಹಾನಿಕರವಾಗಿರುವಂತೆಯೇ ನಿಮ್ಮ ಬ್ಯಾಟರಿಯನ್ನೂ ಅತಿಯಾಗಿ ಚಾರ್ಜ್ ಮಾಡಬೇಡಿ. ಸಂಪೂರ್ಣವಾಗಿ ನೀವು ಫೋನ್ ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಡ್ರೈನ್ ಆಗುತ್ತದೆ. ಮೇಲಿನ ಸಲಹೆಗೆ ಇದು ತದ್ವಿರುದ್ದವಾಗಿದ್ದು,ರಾತ್ರಿ ಪೂರ್ತಿ ಚಾರ್ಜ್ ಹಾಕಿ ಬಿಡುವುದು ಒಳ್ಳೆಯದಲ್ಲ.

ಸರಿಯಾಗಿ ಚಾರ್ಜ್ ಮಾಡಿ

ಸರಿಯಾಗಿ ಚಾರ್ಜ್ ಮಾಡಿ

ಹೆಚ್ಚು ಜನರು ಮೊಬೈಲ್ ಅನ್ನು ಸರಿಯಾಗಿ ಸರಿಯಾಗಿ ಚಾರ್ಜ್ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ಮೊಬೈಲ್ ತನ್ನ ಆಯಸ್ಸನ್ನು ಬೇಗ ಕಳೆದುಕೊಳ್ಳುತ್ತದೆ ಎಂಬುದು ನಿಜ. ಬ್ಯಾಟರಿ ಡೆಡ್ ಆಗುವವರೆಗೂ ಕಾದು ಮೊಬೈಲ್ ಚಾರ್ಜ್ ಮಾಡಿದರೆ ಮೊಬೈಲ್ ಬಿಡಿಭಾಗಗಳ ಮೇಲೆ ಒತ್ತಡ ಉಂಟಾಗಿ ಆಯಸ್ಸನ್ನು ಕಳೆದುಕೊಳ್ಳಲಿವೆ.!

ಅತ್ಯುತ್ತಮ ಚಾರ್ಜರ್‌ಗಳನ್ನು ಬಳಸಿ

ಅತ್ಯುತ್ತಮ ಚಾರ್ಜರ್‌ಗಳನ್ನು ಬಳಸಿ

ಯಾವುದೇ ಕಾರಣಕ್ಕೂ ಗುಣಮಟ್ಟವಲ್ಲದ ಚಾರ್ಜರ್ ಬಳಕೆ ಮಾಡಬೇಡಿ. ಇಂತಹ ಚಾರ್ಜರ್‌ಗಳೆ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗಲೂ ಮೊದಲ ಕಾರಣ ಹಾಗಾಗಿ, ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀಡಿರುವ ಚಾರ್ಜರ್ ಬಳಸಿ. ಏಕೆಂದರೆ ಬೇರೆ ಮೊಬೈಲ್‌ನ ಅತ್ಯುತ್ತಮ ಚಾರ್ಜರ್ ಸಹ ಅಪಾಯಕಾರಿ ಎಂಬುದನ್ನು ಮರೆಯದಿರಿ.!

ಕಳಪೆ ಬಿಡಿ ಭಾಗ ಬಳಸಬೇಡಿ

ಕಳಪೆ ಬಿಡಿ ಭಾಗ ಬಳಸಬೇಡಿ

ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿ ಭಾಗಗಳು ಹಾಳಾಗುವುದು ಸಹಜ ಆಗಿರುವುದರಿಂದ ಅವುಗಳ ರಿಪ್ಲೇಸ್‌ಗೆ ಕಳಪೆ ಬಿಡಿ ಭಾಗಗಳನ್ನು ಹಾಕಬೇಡಿ. ಕಳಪೆ ಬಿಡಿ ಭಾಗಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಎಲೆಕ್ಟ್ರಾನಿಕ್ ಸಾಧನ ಸಂಪೂರ್ಣವಾಗಿ ಹಾಳಾಗುವುದರಲ್ಲಿ ಎರಡು ಮಾತಿಲ್ಲ.!

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ

ಯಾವುದೇ ಗ್ಯಾಜೆಟ್‌ನ ಇಡೀ ಸಾಧನದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಬ್ಯಾಟರಿಗಳ ಸ್ಥಿತಿಯನ್ನು ಮೊದಲು ಪರಿಶೀಲಿಸಿಕೊಳ್ಳಿ. ಬ್ಯಾಟರಿ ಸರಿಯಾಗಿ ಕೆಲಸ ಮಾಡ ದಿದ್ದರೆ ಹೊಸತನ್ನು ಖರೀದಿಸುವುದು ಇಲ್ಲವೇ ದುರಸ್ತಿ ಮಾಡಿಸುವುದು ಸೂಕ್ತ.!

ಪಿನ್ ಬಗ್ಗೆ ಜಾಗರೂಕವಾಗಿರಿ.!

ಪಿನ್ ಬಗ್ಗೆ ಜಾಗರೂಕವಾಗಿರಿ.!

ನಿಜವಾಗಿಯೂ ಬಹುತೇಕರ ಸಮಸ್ಯೆ ಇದೇ. ಆದರೆ, ಇದು ಬ್ಯಾಟರಿ ಸಮಸ್ಯೆಯಲ್ಲ. ಚಾರ್ಜರ್ ಪಿನ್ ಸಮಸ್ಯೆ. ಸೂಕ್ಮ ವಾಗಿರುವ ವಸ್ತುಗಳ ಮೇಲೆ ಹೆಚ್ಚು ಬಲಪ್ರಯೂಗ ಮಾಡಿದಂತೆ. ಯಾವಾಗಲೂ ಚಾರ್ಜ್ ತೆಗೆದು ಹಾಕಿ ಮಾಡುವುದರಿಂದ ಸ್ಮಾರ್ಟ್‌ಫೋನ್ ಚಾರ್ಜರ್ ಪಿನ್ ಹಾಳಾಗುತ್ತದೆ.

ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್…!

ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್…!

ಸ್ಮಾರ್ಟ್‌ಫೋನ್ ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್‌ನಂತಹ ರಕ್ಷಕ ಕವಚಗಳನ್ನು ಅಳವಡಿಸಿ ಕೊಂಡಿರುತ್ತಾರೆ. ಇದೇ ಬ್ಯಾಟರಿ ಸ್ಪೋಟಕ್ಕೂ ಕಾರಣವಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಫ್ಲಿಪ್ ಕವರ್ ಫೋನ್ ಬ್ಯಾಟರಿ ಹೆಚ್ಚು ಬಿಸಿಯಾಗುವುದರಿಂದಲೂ ಇಂತಹ ಘಟನೆಗಳು ಜರುಗುತ್ತವೆ ಎಂದು ಹಲವು ವರದಿಗಳು ತಿಳಿಸಿವೆ.!

ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!

ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!

ಈ ಮಾತನ್ನು ನಾವು ಹೇಳುತ್ತಿಲ್ಲ. ಬದಲಾಗಿ ಗೂಗಲ್ ಹೇಳುತ್ತಿದೆ. ಹೌದು, ಎಲ್ಲರೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡಿ ಸ್ಮಾರ್ಟ್ ಫೋನ್ ಬಿಸಿಯಾಗಿದ್ದಾಗ ಚಾರ್ಜ್ ಗೆ ಹಾಕುತ್ತಾರೆ. ಇದರಿಂದ ಬ್ಯಾರಿ ಸೆಲ್ಸ್‌ಗಳು ಹಾಳಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗುತ್ತದೆ. ನೆನಪಿರಲಿ ಇದು ಸ್ಫೋಟಕ್ಕೂ ಕಾರಣ.!

Best Mobiles in India

English summary
Why does your phone battery die so quickly? One scientist explains!. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+