ಜೊಬೋನ್ ವೃಸ್ಟ್‌ಬ್ಯಾಂಡ್ ನಿಮ್ಮ ಫಿಟ್‌ನೆಸ್ ಗುರು

Posted By:

ಬಾಲಿವುಡ್ ಡ್ಯಾನ್ಸಿಂಗ್ ಹೀರೋ ಹೃತಿಕ್‌ರ ಆರೋಗ್ಯಯುತ ಸೌಂದರ್ಯದ ಗುಟ್ಟು ಪ್ಲಾಸ್ಟಿಕ್ ಬ್ರಾಸ್ಲೆಟ್ ಆಗಿರಬಹುದೇ? ಹೀಗೊಂದು ಗುಮಾನಿ ಹೃತಿಕ್‌ರ ಈ ಜಾಹೀರಾತನ್ನು ನೋಡಿದಾಗ ಉಂಟಾಗುವುದು ಸಹಜವೇ. ಕೃಷ್ ಹೀರೋ ಹೃತಿಕ್ ಜೊಬೋನ್ ವೃಸ್ಟ್‌ಬ್ಯಾಂಡ್ ಅನ್ನು ಧರಿಸಿ ಒಪ್ಪೊ 7 ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಈ ಗುಮಾನಿ ಹುಟ್ಟಲು ಕಾರಣವಾಗಿದೆ.

ಜೊಬೋನ್ ಎನ್ನುವುದು ಹೈಟೆಕ್ ಫಿಟ್‌ನೆಸ್ ಗ್ಯಾಜೆಟ್ ಆಗಿದ್ದು ನೀವು ಎಷ್ಟು ಸಮಯದವರೆಗೆ ಕುಳಿತಿದ್ದೀರಿ, ನೀವು ಎಷ್ಟು ಮೆಟ್ಟಿಲುಗಳನ್ನು ಏರಿದ್ದೀರಿ ಅಥವಾ ನೀವು ಸಾಕಷ್ಟು ನಿದ್ದೆ ಮಾಡುತ್ತಿದ್ದೀರಾ ಎಂಬೆಲ್ಲಾ ಮಾಹಿತಿಯನ್ನು ನೀಡುತ್ತದೆ.

ಹೃತಿಕ್ ಫಿಟ್‌ನೆಸ್ ಗುಟ್ಟು ಈ ಪ್ಲಾಸ್ಟಿಕ್ ಬ್ರಾಸ್ಲೆಟ್ಟೇ?

ನೀವು ತುಂಬಾ ಹೊತ್ತಿನವರೆಗೆ ಕುಳಿತಿದ್ದರೆ, ಹೆಚ್ಚು ಸಮಯ ಕೆಲಸ ಮಾಡುತ್ತಿದ್ದರೆ, ಇದು ಕ್ಯಾಲೋರಿಗಳನ್ನು ಎಣಿಸುತ್ತದೆ ಮತ್ತು ಲೆಕ್ಕಾಚಾರ ಮಾಡುತ್ತದೆ. ನಿಮ್ಮ ಈ ದೈಹಿಕ ಚಟುವಟಿಕೆ ನಿಮಗೆ ಆರೋಗ್ಯವಾಗಿದೆಯೇ ಎಂಬ ಮಾಹಿತಿಯನ್ನು ಬಳಕೆದಾರರ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗೆ ರವಾನಿಸುತ್ತದೆ. ನೀವು ನಡೆಯುತ್ತಿರುವ ಸಮಯ, ನಿದ್ದೆಯ ಸಮಯ, ನೀವು ಎಷ್ಟು ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದೀರಾ ಮುಂತಾದ ಮಾಹಿತಿಯನ್ನು ತಿಳಿದುಕೊಳ್ಳಲು ಇಚ್ಛಿಸುವವರಿಗೆ ಜೊಬೋನ್ ವರದಾಯಕಾಗಿದೆ.

ಹೃತಿಕ್ ಫಿಟ್‌ನೆಸ್ ಗುಟ್ಟು ಈ ಪ್ಲಾಸ್ಟಿಕ್ ಬ್ರಾಸ್ಲೆಟ್ಟೇ?

ಹೃತಿಕ್ ಒಪ್ಪೊ 7 ಜಾಹೀರಾತಿನಲ್ಲಿ ಮಾತ್ರ ಈ ಬ್ಯಾಂಡ್ ಅನ್ನು ಧರಿಸಿ ಕಾಣಿಸಿಕೊಂಡಿರುವುದು ಲೇಖನಕ್ಕೆ ಬೇರೆಯೇ ತಿರುವನ್ನು ನೀಡಿದೆ. ಹೃತಿಕ್ ಕೂಡ ತಮ್ಮ ದಿನಚರಿಯ ವೇಳಾಪಟ್ಟಿಯ ಮಾಹಿತಿಯನ್ನು ಪಡೆದುಕೊಳ್ಳಲು ಈ ವೃಸ್ಟ್ ಬ್ಯಾಂಡ್‌ಗೆ ಮಾರುಹೋಗಿದ್ದಾರೆ ಎಂದೇ ನಾವು ತಿಳಿದಿದ್ದೆವು ಆದರೆ ಈ ಜಾಹೀರಾತಿಗೆ ಮಾತ್ರ ಇದನ್ನು ಧರಿಸಿರುವ ಹೃತಿಕ್ ನಮ್ಮ ಯೋಜನೆಯನ್ನು ತಲೆಕೆಳಗು ಮಾಡಿದ್ದಾರೆ.

ಇನ್ನು ಜೊಬೋನ್ ವಿಷಯಕ್ಕೆ ಬಂದಾಗ ಈ ಬ್ಯಾಂಡ್ ಐಓಎಸ್ ಡಿವೈಸ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಮಾರ್ಚ್ 2014 ರಿಂದ ಇದು ಆಂಡ್ರಾಯ್ಡ್‌ ಫೋನ್‌ಗಳೊಂದಿಗೆ ಕೂಡ ಸಂಯೋಜನೆಯಾಗುತ್ತಿದೆ. 3.0 ಆವೃತ್ತಿಯ ಆಂಡ್ರಾಯ್ಡ್ ಅಪ್ಲಿಕೇಶನ್ ಕೂಡ ಜೊಬೋನ್ ವೃಸ್ಟ್ ಬ್ಯಾಂಡಿಗೆ ಈಗ ಪೂರಕ ಸಹಾಯವನ್ನು ಒದಗಿಸುತ್ತಿದೆ. ಆಂಡ್ರಾಯ್ಡ್ ಸೆಟ್‌ಗಳಾದ ಸ್ಯಾಮ್‌ಸಂಗ್, ಸೋನಿ, ಎಚ್‌ಟಿಸಿ ಮತ್ತು ಹೆಚ್ಚಿನದಕ್ಕೆ ಇದು ಸಂಯೋಜನೆಯನ್ನು ನೀಡುತ್ತದೆ.

ಈಗ ಒಪ್ಪೊ 7 ನೊಂದಿಗೆ ಕೂಡ ಜೊಬೋಂಡ್ ಕಾಂಪಿಟೇಬಲ್ ಆಗುತ್ತಿದ್ದು, ಬಳಕೆದಾರರಿಗೆ ಇನ್ನು ಫಿಟ್‌ನೆಸ್ ಬಗ್ಗೆ ಯೋಚಿಸುವ ತಲೆನೋವನ್ನು ಕಡಿಮೆ ಮಾಡಲಿದೆ. ಆದರೆ ಕಂಪೆನಿ ಇನ್ನೂ ಈ ಬಗ್ಗೆ ಸರಿಯಾಗಿ ಮಾಹಿತಿಯನ್ನು ನೀಡದೇ ಇರುವುದು ಬಳಕೆದಾರರು ತುಸು ಕಾಯುವಂತೆ ಮಾಡಿದೆ.

Read more about:
Please Wait while comments are loading...
Opinion Poll

Social Counting