ಇಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ ಕೈತಪ್ಪುತ್ತಿರುವುದು ಏಕೆ.? ಪರಿಹಾರ ಏನು..?

By Gizbot Bureau
|

ನೀವು ಎಲ್ಲಿಗಾದರೂ ಹೋಗಿ, ಅದು ಮನೆ, ಸೂಪರ್‌ ಮಾರ್ಕೆಟ್ ಅಥವಾ ಸಂಗೀತ ಕಚೇರಿ ಆಗಿರಬಹುದು. ಆ ಸ್ಥಳಕ್ಕೆ ತಕ್ಕಂತೆ ನಿಮ್ಮ ನಡವಳಿಕೆ, ಆಲೋಚನೆಗಳು ಮತ್ತು ಕಾರ್ಯಗಳನ್ನು ಬದಲಾಯಿಸಿಕೊಂಡು ಅಲ್ಲಿಗೆ ಹೊಂದಿಕೊಳ್ಳುತ್ತೀರಿ. ಅಂತೆಯೇ, ಪ್ರತಿ ಕೆಲವು ವರ್ಷಗಳಿಗೊಮ್ಮೆ ಸಾಂಸ್ಥಿಕ ಮತ್ತು ಸರ್ಕಾರಿ ಮಟ್ಟಗಳಲ್ಲಿ ರೂಪಿತವಾದ ವಿವಿಧ ನಿಯಮಗಳಿಂದ ಹಾಗೂ ಸುಗಮ ಕಾರ್ಯನಿರ್ವಹಣೆಗಾಗಿ ಹೊಸ ತಂತ್ರಜ್ಞಾನದ ಅನುಷ್ಠಾನದಿಂದ ವೃತ್ತಿಪರತೆಯಲ್ಲಿ ವಿವಿಧ ಬೆಳವಣಿಗೆಗಳು, ಬದಲಾವಣೆಗಳು ಕಾಣುತ್ತವೆ. ಈ ಬದಲಾವಣೆಗಳಿಗೆ ನೀವು ಹೊಂದಿಕೊಳ್ಳದಿದ್ದರೆ ವೃತ್ತಿ ಜೀವನದಲ್ಲಿ ನಿಮಗೆ ಹಿನ್ನಡೆಯಾಗುವ ಅಪಾಯ ಖಂಡಿತವಾಗಿಯೂ ಇರುತ್ತದೆ.

ಕೌಶಲ್ಯ ಕೊರತೆ ತಗ್ಗಿಸುವುದು

ಕೌಶಲ್ಯ ಕೊರತೆ ತಗ್ಗಿಸುವುದು

ಉದ್ಯೋಗಿಗಳಲ್ಲಿನ ಕೌಶಲ್ಯದ ಕೊರತೆ ಭಾರತದಲ್ಲಿ ಸದ್ಯ ದೊಡ್ಡ ಸಮಸ್ಯೆಯಾಗಿದೆ. ಇಂಜಿನಿಯರಿಂಗ್‌ನಂತಹ ವಿಶೇಷ ಕ್ಷೇತ್ರಗಳು ಕೌಶಲ್ಯಯುತ ಪ್ರತಿಭೆಗಳ ತೀವ್ರ ಕೊರತೆ ಎದುರಿಸುತ್ತಿವೆ. ಆಸ್ಪೈರಿಂಗ್ ಮೈಂಡ್ಸ್‌ನ ಅಧ್ಯಯನದ ಪ್ರಕಾರ, ಶೇ.80ರಷ್ಟು ಭಾರತೀಯ ಇಂಜಿನಿಯರ್‌ಗಳು ಸದ್ಯದ ಉದ್ಯೋಗಗಳಿಗೆ ಬೇಕಾದ ಕೌಶಲ್ಯ ಹೊಂದಿಲ್ಲ. ಉದ್ಯೋಗದ ಮಟ್ಟವು ಪ್ರತಿಭೆ ಹೊಂದಿರುವ ಕೌಶಲ್ಯಗಳಿಗೆ ನೇರವಾಗಿ ಸಂಬಂಧಿಸಿದೆ. ಆದರೆ, ಇಂಜಿನಿಯರ್‌ಗಳು ತಮ್ಮ ಕೋರ್ಸ್‌ ಅವಧಿಯಲ್ಲಿ ಯಾವ ರೀತಿ ಅಭ್ಯಸಿಸಿದ್ದಾರೆ ಎಂಬುದು ಕೂಡ ಉದ್ಯೋಗದ ಮಟ್ಟವನ್ನು ನಿರ್ಧರಿಸುತ್ತದೆ.

ಪಠ್ಯಕ್ರಮದ ಬದಲಾವಣೆ

ಪಠ್ಯಕ್ರಮದ ಬದಲಾವಣೆ

ಪ್ರಮುಖವಾಆಗಿ ಗಮನಿಸಬೇಕಾದ ಸಂಗತಿಯೆಂದರೆ, ಭಾರತದ ಶಿಕ್ಷಣ ವ್ಯವಸ್ಥೆ ಪ್ರಾಯೋಗಿಕ ಅನ್ವಯಿಕತೆಗಿಂತ ಹೆಚ್ಚಾಗಿ ಸಿದ್ಧಾಂತವನ್ನು ನೆಚ್ಚಿಕೊಂಡಿದೆ. ಇನ್ನು, ದೊಡ್ಡ ಮಟ್ಟದ ಪ್ರಮಾಣೀಕೃತ ವ್ಯವಸ್ಥೆ, ಅನುದಾನದ ಕೊರತೆ ಮತ್ತು ಹಲವಾರು ಮೂಲಸೌಕರ್ಯ ಸಮಸ್ಯೆಗಳು ಹಾಗೂ ಹೆಚ್ಚಿನ ಸಂಸ್ಥೆ ಮತ್ತು ತರಬೇತಿ ಕೇಂದ್ರಗಳಲ್ಲಿ ಪಠ್ಯಕ್ರಮ ಹಳೆಯದಾಗಿರುವುದರಿಂದ ಕೌಶಲ್ಯದ ಸಮಸ್ಯೆ ಹೆಚ್ಚಿದೆ.

ಪಠ್ಯಕ್ರಮದ ಪ್ರಮಾಣೀಕರಣದಲ್ಲಿ ಕಠಿಣತೆ ಇರುವುದರಿಂದ ಸ್ವಯಂ-ಕಲಿಕೆಯ ಮಾರ್ಗದರ್ಶಿ ವಾತಾವರಣ ಸುಗಮಗೊಳ್ಳುತ್ತಿಲ್ಲ. ಹೆಚ್ಚಿನ ಇಂಜಿನಿಯರ್‌ಗಳು ಒಂದು ವಾರದಲ್ಲಿ 1 ಗಂಟೆಗಿಂತ ಕಡಿಮೆ ಸಮಯ ಕೋಡಿಂಗ್ ಅನುಭವ ಹೊಂದಿರುತ್ತಾರೆ ಎಂದರೆ ನಂಬಲೇಬೇಕು. ಆದ್ದರಿಂದ, ಒಂದೇ ಟ್ಯಾಲೆಂಟ್‌ ಪೂಲ್ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಇದು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ, ಅವರು ವಿವಿಧ ಸನ್ನಿವೇಶಗಳಲ್ಲಿ ಸ್ವತಂತ್ರವಾಗಿ ಮತ್ತು ವಿಶ್ವಾಸದಿಂದ ಕಾರ್ಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದು ಅವಶ್ಯಕವಾಗಿರುತ್ತದೆ.

ಹೊಸ ತಂತ್ರಜ್ಞಾನಗಳ ಜೊತೆ ಪ್ರಗತಿ

ಹೊಸ ತಂತ್ರಜ್ಞಾನಗಳ ಜೊತೆ ಪ್ರಗತಿ

ಪ್ರತಿವರ್ಷ ಉತ್ಪತ್ತಿಯಾಗುವ ಇಂಜಿನಿಯರ್ ಪ್ರತಿಭೆಗಳ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಸೇವಾ ಮಟ್ಟದ ಉದ್ಯೋಗಗಳ ಬೇಡಿಕೆಯು ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ತಾಂತ್ರಿಕ ಐಟಿ ಉದ್ಯೋಗದ ಪ್ರಮಾಣದಲ್ಲೂ ಏರಿಕೆಯಾಗಿದೆ. ಸದ್ಯ, ಉದಯೋನ್ಮುಖ ತಂತ್ರಜ್ಞಾನಗಳ ಆಗಮನದಿಂದ ಕೈಗಾರಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅಡ್ಡಿಯಾಗುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ‘ಫ್ಯೂಚರ್ ಆಫ್ ಜಾಬ್ಸ್' ವರದಿಯ ಪ್ರಕಾರ, 75 ಮಿಲಿಯನ್ ಮೂಲ ಉದ್ಯೋಗಗಳು ಯಂತ್ರಗಳ ಪಾಲಾಆಗುವ ನಿರೀಕ್ಷೆಯಿದೆ. ಮತ್ತು ಹೊಸ ತಂತ್ರಜ್ಞಾನಗಳು ಹೆಚ್ಚುವರಿಯಾಗಿ 33 ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಈ ಉದ್ಯೋಗಗಳಿಗೆ ಸುಧಾರಿತ ಕೌಶಲ್ಯಗಳ ಸೆಟ್‌ಗಳ ಅಗತ್ಯವಿರುತ್ತದೆ.

ಉದ್ಯೋಗದ ಅನಿವಾರ್ಯತೆ

ಉದ್ಯೋಗದ ಅನಿವಾರ್ಯತೆ

ತಂತ್ರಜ್ಞಾನದ ಬೆಳವಣಿಗೆಗಳಿಂದ ಹಳೆಯ ವ್ಯವಸ್ಥೆಯಿಂದ ಹೊರಬರುವ ಇಂಜಿನಿಯರ್‌ಗಳ ಕೌಶಲ್ಯಗಳು ಹೆಚ್ಚು ಪುನರಾವರ್ತನೆಯಾಗುತ್ತವೆ. ಇದಲ್ಲದೆ, ಪ್ರಾಯೋಗಿಕ ಅನ್ವಿಯಕತೆಯ ಕೊರತೆಯಿಂದ ಹಲವರು ಕೋಡಿಂಗ್‌ ಸಾಮರ್ಥ್ಯದ ಬಗ್ಗೆ ಕಡಿಮೆ ವಿಶ್ವಾಸ ಹೊಂದಿರುತ್ತಾರೆ. ಇದು ಕೋಡಿಂಗ್ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ವಿಫಲವಾಗಲು ಕಾರಣವಾಗುತ್ತದೆ. ಈ ಅಂಶದಿಂದಾಗಿ ಹಲವು ಇಂಜಿನಿಯರ್‌ಗಳು ಕಡಿಮೆ ಮಟ್ಟದ ಕೌಶಲ್ಯಗಳ ಅಗತ್ಯವಿರುವ ಇತರ ಉದ್ಯೋಗಗಳನ್ನು ಮುಂದುವರಿಸುತ್ತಾರೆ. ಇದರಲ್ಲಿ ಹೆಚ್ಚಿನವರು ತಮ್ಮ ಕುಟುಂಬಗಳಿಗೆ ಮತ್ತು ಇತರ ಹಣಕಾಸಿನ ಬದ್ಧತೆಯ ಪೂರೈಕೆಗಾಗಿ ಕೆಲಸ ಸೇರುತ್ತಾರೆ. ಇದು ಒಂದು ರೀತಿಯ ನಕಾರಾತ್ಮಕ ಚಕ್ರವಾಗಿ ಪರಿಣಮಿಸಿ, ವೃತ್ತಿ ಮತ್ತು ಕೌಶಲ್ಯಗಳ ಪ್ರಗತಿಗೆ ಅಡಚಣೆಯುಂಟು ಮಾಡುತ್ತದೆ.

ಇಂಜಿನಿಯರಿಂಗ್‌ ಭವಿಷ್ಯ

ಇಂಜಿನಿಯರಿಂಗ್‌ ಭವಿಷ್ಯ

ಭಾರತದಲ್ಲಿ ಪ್ರತಿವರ್ಷ 1.5 ಮಿಲಿಯನ್ ಇಂಜಿನಿಯರ್‌ಗಳು ಕಾಲೇಜಿನಿಂದ ಪದವಿ ಪಡೆದು ಹೊರಬರುತ್ತಾರೆ ಎಂಬುದನ್ನು ಅಂಕಿ-ಅಂಶಗಳು ಬಹಿರಂಗಪಡಿಸುತ್ತವೆ. ಆದರೆ, ಇಷ್ಟು ಜನ ಇಂಜಿನಿಯರ್‌ಗಳಲ್ಲಿ ಕೆಲವೇ ಕೆಲವು ಪದವೀಧರರು ಮಾತ್ರ (ಶೇ.0.4) ಕೋಡಿಂಗ್‌ನಲ್ಲಿ ಆತ್ಮವಿಶ್ವಾಸ ಹೊಂದಿರುತ್ತಾರೆ. ಇದಲ್ಲದೆ, ಪಿಡಬ್ಲ್ಯೂಸಿ ಸಂಶೋಧನೆಯ ಪ್ರಕಾರ, ತಾಂತ್ರಿಕ ಕ್ಷೇತ್ರಗಳಲ್ಲಿ ಪದವಿ ಪಡೆದವರಲ್ಲಿ ಕೇವಲ ಶೇ.25ರಷ್ಟು ಮತ್ತು ಇತರ ಪದವೀಧರರಲ್ಲಿ ಶೇ.15ರಷ್ಟು ಜನರು ‘ಉದ್ಯೋಗಕ್ಕೆ' ಅರ್ಹರಾಗಿದ್ದಾರೆ. ಭಾರತದಲ್ಲಿ ಶೇ.67ರಷ್ಟು ಕಂಪನಿಗಳು ಹೊಸ ನೇಮಕಾತಿಗಳಲ್ಲಿ ಕೌಶಲ್ಯದ ಅಂತರ ಗುರುತಿಸುತ್ತಾರೆ. ಈ ಸಮಸ್ಯೆ ಬಹಳ ಪ್ರಾಮುಖ್ಯತೆ ಹೊಂದಿದ್ದರಿಂದ, ಉದ್ಯಮವು ಬದಲಾಗುತ್ತಿರುವ ವೇಗದಲ್ಲಿ ಮಾತ್ರ ಸಮಸ್ಯೆಯು ವೇಗ ಪಡೆಯುತ್ತಿದೆ. ಆದ್ದರಿಂದ, ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳು ಉದ್ಯಮದ ಗುಣಮಟ್ಟ ಪೂರೈಸಲು ಹೊಸ ಇಂಜಿನಿಯರ್‌ಗಳಿಗೆ ಸಹಾಯ ಮಾಡುವತ್ತ ಗಮನ ಹರಿಸುವುದು ಅಗತ್ಯವಾಗಿದೆ.

ಪ್ರಾಯೋಗಿಕ ಕಲಿಕೆಗೆ ಒತ್ತು

ಪ್ರಾಯೋಗಿಕ ಕಲಿಕೆಗೆ ಒತ್ತು

ಪ್ರಾಯೋಗಿಕ ಕಲಿಕೆ, ಪರಿಣಿತ ಮಾರ್ಗದರ್ಶಕ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಯೋಜನೆಗಳ ಆಧಾರಿತ ಮೂರು ಹಂತದ ವಿಧಾನದ ಮೂಲಕ ಇದನ್ನು ಸಾಧಿಸಬಹುದು. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಇಂಜಿನಿಯರ್‌ಗಳು ಬಹುಮುಖ ಕೋಡಿಂಗ್ ಸಾಮರ್ಥ್ಯ ಹೊಂದಿರಬೇಕು ಎಂದು ಉದ್ಯಮ ಬಯಸುತ್ತದೆ. ಇದನ್ನು ಸಾಧಿಸಲು ಸಹಾಯ ಮಾಡಲು, ಇಂಜಿನಿಯರಿಂಗ್ ಶಿಕ್ಷಣವು ಉದ್ಯಮ-ಆಧಾರಿತ ಲೈವ್ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವೃತ್ತಿಪರ ಕ್ಷೇತ್ರದೊಳಗಿನ ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ಅವರ ಸಾಮರ್ಥ್ಯಗಳು ಮತ್ತು ಕೌಶಲ್ಯಗಳ ಪ್ರಭಾವವನ್ನು ಅಳೆಯಲು ಈ ಕ್ರಮ ಸಹಾಯ ಮಾಡುತ್ತದೆ. ಇದಲ್ಲದೆ, ಉದ್ಯಮ ತಜ್ಞರನ್ನು ಮಾರ್ಗದರ್ಶಕರಾಗಿ ಪಡೆಯುವುದರಿಂದ, ಇಂಜಿನಿಯರ್‌ಗಳು ಸ್ವತಂತ್ರವಾಗಿ ಕೋಡ್ ಮಾಡುವಾಗ ಮತ್ತು ಯೋಜನೆಗಳಲ್ಲಿ ಕೆಲಸ ಮಾಡುವಾಗ ಸಮರ್ಪಕ ಮಾರ್ಗದರ್ಶನ ಮತ್ತು ನಿರ್ದೇಶನ ಸಿಗುವುದು ಖಚಿತವಾಗುತ್ತದೆ.

ಉದ್ಯಮ ಕೇಂದ್ರಿತ ಶಿಕ್ಷಣ

ಉದ್ಯಮ ಕೇಂದ್ರಿತ ಶಿಕ್ಷಣ

ಪ್ರಮುಖವಾಗಿ ಪ್ರಾಯೋಗಿಕ-ಆಧಾರಿತ ಕಲಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸುವುದರಿಂದ, ಈ ವಿಧಾನ ಭವಿಷ್ಯದಲ್ಲಿ ಇಂಜಿನಿಯರ್‌ಗಳನ್ನು ತಮ್ಮದೇ ಆದ ಸಾಮರ್ಥ್ಯಗಳೊಂದಿಗೆ ಆತ್ಮವಿಶ್ವಾಸದಿಂದಿರಲು ಸಹಾಯ ಮಾಡುತ್ತದೆ. ಇದರಿಂದ ಭವಿಷ್ಯದ ಉದ್ಯೋಗಗಳಲ್ಲಿ ಯಾವುದೇ ಬೆಳವಣಿಗೆಯಾದರೂ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಉದ್ಯಮ ಕೇಂದ್ರಿತ ಶಿಕ್ಷಣವು ನಿಜವಾದ ಉದ್ಯೋಗಗಳಿಗೆ ಚಾಲಕನಾಗಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, ಇಂಜಿನಿಯರ್‌ಗಳು ಸಂಸ್ಥೆಯ ಬೆಳವಣಿಗೆಗೆ ಸುಸ್ಥಿರ ರೀತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಲು ಸಾಧ್ಯವಾಗುತ್ತದೆ.

Best Mobiles in India

Read more about:
English summary
Why Indian Engineering Graduates Are Choosing Other Fields?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X