4 ಕಾರಣಗಳು: Freedom 251 ದೊಡ್ಡ ಮೋಸ ಆಗಿದೆ?
ಜಾಸ್ತಿ ಜನ ಯಾವಾಗ ಮುಗಿಬೀಳ್ತಾರೆ ಅಂದ್ರೆ ಒಂದು ಉಚಿತ ಸೇವೆ. ಇನ್ನೊಂದು ಅತಿ ಕಡಿಮೆ ಬೆಲೆಗೆ ಅಧಿಕ ಉಪಯೋಗದ ವಸ್ತು ಸಿಗುತ್ತೆ ಅಂದ್ರೆ. ಈಗ ಆಗಿರೋದು ಅದೇ ಗತಿ. ರಿಂಗಿಂಗ್ ಬೆಲ್ ಕಂಪನಿ ಲಾಂಚ್ ಮಾಡಿರೋ "ಫ್ರೀಡಮ್251" ಸ್ಮಾರ್ಟ್‌ಫೋನ್ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಅತಿ ಕಡಿಮೆ ಬೆಲೆ 251 ರೂಪಾಯಿಗೆ ಮಾರಾಟಕ್ಕೆ ತಯಾರಾಗಿರುವ ಮೊಬೈಲ್. ಬರಿ 251 ರೂಪಾಯಿಗೆ ಅದುವೆ 3G ಸ್ಮಾರ್ಟ್‌ಫೋನ್ ಅಂದ್ರೆ ಹಳ್ಳಿಯಲ್ಲಿರುವವರು ಸಹ ತಮ್ಮ ಮನೆ ಜನಕ್ಕೆಲ್ಲಾ ಬುಕ್ ಮಾಡಿಸ್ತಾರೆ.
ಸಿಟಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವವರಿಗೋ ಅಥವಾ ಈಗಾಗಲೇ ಕೈಯಲ್ಲಿ ಮೊಬೈಲ್ ಹಿಡಿದಿರುವವರಿಗೋ ಫೋನ್ ಮಾಡಿ "ಮಗ 50-100 ರೂಪಾಯಿ ಜಾಸ್ತಿ ಆಗ್ಲಿ ನಮ್ ಮನೆಯವರಿಗೆಲ್ಲಾ ಬುಕ್ ಮಾಡು ಮಗ" ಅಂತಾರೆ. ಹೌದು, ಹೀಗೆಯೇ ಆಗಿದ್ದು ಈಗ ಯಾರು ಸಹ "ಫ್ರೀಡಮ್ 251" ಸ್ಮಾರ್ಟ್‌ಫೋನ್ ಅನ್ನು ವೆಬ್‌ಸೈಟ್‌ನಲ್ಲಿ ಬುಕ್ ಮಾಡೋಕೆ ಆಗ್ತಿಲ್ಲ. ಹಾಗಾದ್ರೆ ಬುಕ್ ಮಾಡೋಕೆ ಆಗದೇ ಇರಲು ಕಾರಣವೇನು? ಸುಳ್ಳು ಮಾಹಿತಿಯೇ ? ನಿಜನಾ ಅಲ್ವಾ ? ಇಂತಹ ಹಲವಾರು ಪ್ರಶ್ನೆಗಳು ಭಾರತೀಯ ಜನರಲ್ಲಿದೆ. ಈ ಸಂಶಯವನ್ನಾ ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ಬುಕ್ ಮಾಡೋಕೆ ಆಗದಿರಲು ಕಾರಣ ತಿಳಿಯಿರಿ.

1 ಸೆಕೆಂಡ್‌ಗೆ 6 ಲಕ್ಷ ಜನರು
ಗುರುವಾರ (ದಿನಾಂಕ 18) ಬೆಳಿಗ್ಗೆ 6 ಗಂಟೆ ಯಿಂದ "ಫ್ರೀಡಮ್ 251" ಸ್ಮಾರ್ಟ್‌ಫೋನ್ ರಿಂಗಿಂಗ್ ಬೆಲ್ಸ್ ಅಧಿಕೃತ ವೆಬ್‌ಸೈಟ್ "www.freedom251.com" ನಲ್ಲಿ ಬುಕಿಂಗ್ ಪ್ರಾರಂಭವಾಗಿದೆ. ಸ್ಮಾರ್ಟ್‌ಫೋನ್ ಬುಕಿಂಗ್‌ಗಾಗಿ ಮುಗಿಬಿದ್ದವರ ಸಂಖ್ಯೆ ಪ್ರತಿ ಸೆಕೆಂಡ್‌ಗೆ 6 ಲಕ್ಷ ಜನ ವೆಬ್‌ಸೈಟ್ ಕ್ಲಿಕ್ ಮಾಡುತ್ತಿರುವುದರಿಂದ ತಾಂತ್ರಿಕ ದೋಷ ಉಂಟಾಗಿದೆ.

ಸರ್ವರ್ ಲೋಡ್
ಪ್ರತಿ ಸೆಕೆಂಡ್‌ಗೆ 6 ಲಕ್ಷ ಜನರು ವೆಬ್‌ಸೈಟ್‌ಗೆ ಬರುತ್ತಿರುವುದರಿಂದ ಸರ್ವರ್ ಓವರ್ ಲೋಡ್ ಆಗಿದೆ. ಇಂತಹ ಟ್ರಾಫಿಕ್ ಸಮಸ್ಯೆಯನ್ನು ಅಮೆಜಾನ್ ಸಹ ಬಗೆಹರಿಸಲಾರದು. ಆದ್ದರಿಂದ ವೆಬ್‌ಸೈಟ್ ಕ್ರ್ಯಾಷ್ ಅಗಿದೆ.
*Freedom 251 ಬಗ್ಗೆ ಹಿಂದುಸ್ತಾನ್ ಟೈಮ್ಸ್ ಸರಳ ವಿಮರ್ಶೆ ಬರೆದಿದ್ದು, ಇದು ಮೋಸ ಎಂದು ಗುರುತಿಸಿದೆ. ದೆಹಲಿ ಮೂಲದ ಗ್ಯಾಜೆಟ್ ಪ್ರಾಡಕ್ಟ್ ಕಂಪನಿ Adcom ನ ಮರುನಾಮಕರಣದ ಕಂಪನಿ ಇದಾಗಿದೆ. ಅಲ್ಲದೇ Adcom ಮಾರುಕಟ್ಟೆ ನಿರ್ದೇಶಕರು "ನಮ್ಮ ಬ್ರ್ಯಾಂಡಿಂಗ್ Freedom 251 ಸ್ಮಾರ್ಟ್‌ಫೋನ್ ಮೇಲೆ ಬಳಸಲಾದಿದೆ. ಅದು ಹೇಗೆ ಎಂದು ತಿಳಿದಿಲ್ಲ. ಎನ್ನಲಾಗಿದೆ. Adcom ಬ್ರ್ಯಾಂಡ್ ಅನ್ನು ವೈಟ್ನರ್‌ನಲ್ಲಿ ತಿದ್ದಲಾಗಿದೆ ಎನ್ನಲಾಗಿದೆ.

ರಾಜಕೀಯ ಪ್ರಮುಖರು ಲಾಂಚ್
ಹಲವು ಜನರು ಇದನ್ನು ಫೇಕ್ ನ್ಯೂಸ್ ಎನ್ನುತ್ತಾ ಸುಳ್ಳು ಮಾಹಿತಿ ಎನ್ನುತ್ತಿದ್ದಾರೆ. ಅಂತಹವರು ಸ್ಮಾರ್ಟ್‌ಫೋನ್ ಬಿಡುಗಡೆಯಾಗಿರುವುದನ್ನು ನಂಬಲೇ ಬೇಕಿದೆ. ಕಾರಣ ರಾಜಕೀಯ ಪ್ರಮುಖ ವ್ಯಕ್ತಿಗಳಾದ ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಶಿ'ಯವರು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದಾರೆ.

ಮಾಲಿಕರ ಮಾಹಿತಿ
ಸ್ಮಾರ್ಟ್‌ಫೋನ್ ಸ್ಕ್ಯಾಮ್ ಎನ್ನುವವರು ನಂಬಲೇ ಬೇಕಾದ ವಿಷಯವೆಂದರೆ ರಿಂಗಿಂಗ್ ಬೆಲ್ ಕಂಪನಿಯ ಮಾಲಿಕರಾದ ಮೋಹಿತ್ ಗೋಯೆಲ್ ಫೇಸ್‌ಬುಕ್ ಖಾತೆ ಸಾಕ್ಷಿಯಾಗಿದೆ.

ಫೇಕ್ ಎಂದ ಜನರು
ಹಲವು ಜನರು ವೆಬ್‌ಸೈಟ್ ಬುಕಿಂಗ್ ತೆಗೆದುಕೊಳ್ಳದ ಕಾರಣ ಇದನ್ನು ಫೇಕ್, ಮೋಸ ಎಂದು ಹೇಳುತ್ತಿದ್ದಾರೆ. ಅಲ್ಲದೇ ಮೋಹಿತ್‌ರವರ ಫೇಸ್‌ಬುಕ್ ನ್ಯೂಸ್ ಪೋಸ್ಟ್‌ಗೆ ಫೇಕ್ ಎಂದು ಕಮೆಂಟ್ ಹಾಕಿದ್ದಾರೆ.

ಫೇಕ್ ಎನ್ನಲು ಕಾರಣವೇನು
'ಫ್ರೀಡಮ್251" ಸ್ಮಾರ್ಟ್‌ಫೋನ್ ಫೀಚರ್ ಬಿಡುಗಡೆಗೊಳಿಸಿದಾಗ ಮೊಬೈಲ್‌ನಲ್ಲಿ ಯಾವ ಅಪ್ಲಿಕೇಶನ್‌ಗಳಿರುತ್ತವೆ ಎಂದು ಹೇಳಿರಲಿಲ್ಲ. ಆದರೆ ಈಗ ಸ್ಮಾರ್ಟ್‌ಫೋನ್‌ನಲ್ಲಿ ಸ್ವಚ್ಛ ಭಾರತ್, ವೂಮೆನ್‌ಸೇಫ್ಟಿ ಆಪ್, ಫೇಸ್‌ಬುಕ್, ವಾಟ್ಸಾಪ್ ಆಪ್‌ಗಳು ಸಹ ಇವೆ. ಅಲ್ಲದೇ "ಮೊಬೈಲ್ ಇಂಡಸ್ಟ್ರಿ ಬಾಡಿ ಇಂಡಿಯನ್ ಸೆಲ್ಯೂಲಾರ್ ಅಸೋಸಿಯೇಷನ್" ಟೆಲಿಕಾಂ ಸಚಿವರಾದ 'ರವಿ ಶಂಕರ್ ಪ್ರಸಾದ್‌ರವರಿಗೆ ಪತ್ರ ಬರೆದಿದ್ದು "ಎಲ್ಲಾ ಕಡಿತಗಳನ್ನು ಕಡೆಗಣಿಸಿಯು ಸಹ ಯಾವುದೇ ಈ ರೀತಿಯ ಸ್ಮಾರ್ಟ್‌ಫೋನ್ ಅನ್ನು 2700 ರೂಪಾಯಿಗಿಂತ ಕಡಿಮೆ ಬೆಲೆಗೆ ಮಾರಲು ಸಾಧ್ಯವಿಲ್ಲ ಎನ್ನಲಾಗಿದೆ.

ಸರ್ಕಾರದ ಅನುಮತಿ
ಸ್ಮಾರ್ಟ್‌ಫೋನ್ ಆಫರ್ ಬಗ್ಗೆ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ನಲ್ಲೂ ಸಹ ಪಟ್ಟಿಯಾಗಿಲ್ಲ. ಆದ್ದರಿಂದ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ಗಾಳಿಸುದ್ದಿ ಹರಿದಾಡುತ್ತಿದೆ. ಆದರೂ ಸಹ ಸ್ಮಾರ್ಟ್‌ಫೋನ್ ಪ್ರಿಯರು ಜೂನ್ 30 ದಿನಾಂಕದ ವರೆಗೆ ಮೊದಲ ಬ್ಯಾಚ್ ಸ್ಮಾರ್ಟ್‌ಫೋನ್ ಡಿಲಿವರಿ ಸ್ವೀಕರಿಸುವವರೆಗೆ ಕಾದು ನೋಡಬೇಕಿದೆ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








