ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸೋಕೆ ಜನರೇ ಬರುತ್ತಿಲ್ಲವಂತೆ ಯಾಕೆ ಗೊತ್ತಾ?
ದೇಶದ ಸ್ಮಾರ್ಟ್‌ಫೋನ್ ವಲಯದಲ್ಲಿ ಮತ್ತೊಂದು ಮಹಾಕುಸಿತ ಕಂಡುಬಂದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೆಟ್ ಮಾಡಿದ್ದ 4G ಫೋನ್‌ಗಳು ಇದೀಗ ಸೇಲ್ ಆಗದೆ ಮೂಲೆ ಸೇರುತ್ತಿವೆ ಎನ್ನಲಾಗಿದೆ. ಅಂದರೆ ಭಾರತದಲ್ಲಿ 4G ಸ್ಮಾರ್ಟ್‌ಫೋನ್ (smartphone) ಕೊಂಡುಕೊಳ್ಳುವವರ ಪ್ರಮಾಣ ಕಡಿಮೆ ಆಗಿದೆ.
ಹೌದು, ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟಗಾರರು 4G ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ 5G ನೆಟ್‌ವರ್ಕ್ ವಿಶಾಲವಾಗುತ್ತಿದ್ದಂತೆ 4G ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ. ಇದರ ನಡುವೆ 5G ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯ ಪಾಲು 50% ಮುಟ್ಟಿದೆ ಎನ್ನಲಾಗಿದೆ. ಹಾಗಾದ್ರೆ ಭಾರತದ ಮಾರುಕಟ್ಟೆಯಲ್ಲಿ 4G ಸ್ಮಾರ್ಟ್‌ಫೋನ್‌ಗಳ ಕಥೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ 5G ಶುರುವಾಗುವುದಕ್ಕೂ ಮೊದಲು ಆರ್ಭಟಿಸುತ್ತಿದ್ದ 4G ಸ್ಮಾರ್ಟ್‌ಫೋನ್ ಮಾರುಕಟ್ಟೆ ಇದೀಗ ಭಾರಿ ಹಿನ್ನಡೆ ಅನುಭವಿಸುತ್ತಿದೆ. 5G ಸ್ಮಾರ್ಟ್‌ಫೋನ್ ಮಾರುಕಟ್ಟೆ ದಿನೇ ದಿನೇ ಬೆಳವಣಿಗೆ ಸಾಧಿಸುತ್ತಿದ್ದು 4G ಫೋನ್ ಮಾರಾಟಗಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ 4G ಮೊಬೈಲ್ ಸ್ಟಾಕ್ ಅನ್ನು ತೆರವುಗೊಳಿಸುವುದಕ್ಕೆ ಮಾರಾಟಗಾರರ ಹೆಣಗಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ 4G ಸ್ಮಾರ್ಟ್‌ಫೋನ್‌ಗಳು ಶಾಶ್ವತ ಬೆಲೆ ಕಡಿತವನ್ನು ಪಡೆದುಕೊಳ್ಳುತ್ತಿವೆ ಅನ್ನೊದು ಇಂಟ್ರೆಸ್ಟಿಂಗ್ ವಿಚಾರವಾಗಿದೆ.
ಮೊಬೈಲ್ ಮಾರುಕಟ್ಟೆಯಲ್ಲಿ 4G ಇನ್ವೆಂಟರಿ ಸ್ಟಾಕ್ ಪ್ರಸ್ತುತ ಸರಾಸರಿ ಮಾರುಕಟ್ಟೆ ದಾಸ್ತಾನುಗಿಂತ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ 4G ಮೊಬೈಲ್ ಸೇಲ್ ಆಗುವ ಪ್ರಮಾಣ ಕಡಿಮೆಯಾಗಿದೆ. ಆದರೆ 5G ಸ್ಮಾರ್ಟ್‌ಫೋನ್‌ಗಳ ಬೇಡಿಕೆಗೆ ತೀವ್ರ ವ್ಯತಿರಿಕ್ತವಾಗಿದೆ. ಅದರಲ್ಲೂ ಏಪ್ರಿಲ್‌ನಲ್ಲಿ 5G ಮಾರುಕಟ್ಟೆ ಪಾಲು 50% ಅನ್ನು ಮುಟ್ಟಿದೆ ಎನ್ನಲಾಗಿದೆ. ಆದರಿಂದ 4G ಸ್ಮಾರ್ಟ್‌ಫೋನ್ ಕೊಂಡುಕೊಳ್ಳುವವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ.

ಇದಲ್ಲದೆ 15,000ರೂ. ಬೆಲೆಯಲ್ಲಿಯು ಸಹ 5G ಸ್ಮಾರ್ಟ್‌ಫೋನ್‌ಗಳು ಲಭ್ಯವಾಗುತ್ತಿರುವುದು 4G ಫೋನ್ ಖರೀದಿಸುವವರ ಸಂಖ್ಯೆಗೆ ಇಳಿಕೆಯಾಗಲು ಮುಖ್ಯಕಾರಣವಾಗಿದೆ. ಇದೇ ಕಾರಣಕ್ಕೆ ಕಳೆದ ವಾರದಿಂದ 4G ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆಯನ್ನು ಮಾಡಲಾಗ್ತಿದೆ. ಈಗಾಗಲೇ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ 4G ಫೋನ್‌ಗಳ ಬೆಲೆಯಲ್ಲಿ ಶಾಶ್ವತ ಇಳಿಕೆಯನ್ನು ಮಾಡಿವೆ. ಸಾಧ್ಯವಾದಷ್ಟು ಭಾರತದಲ್ಲಿ ಹಬ್ಬದ ಸೀಸನ್‌ಗೆ ಮುಂಚಿತವಾಗಿ 4G ಸ್ಟಾಕ್ ದಾಸ್ತಾನುಗಳನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಮುಂದಾಗಿವೆ.
ಇನ್ನು ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಕೂಡ 4G ಮಾಡೆಲ್‌ಗಳನ್ನು ಬಿಡುಗಡೆ ಮಾಡುವುದನ್ನು ಕಡಿತಗೊಳಿಸಿವೆ. ವಿಶೇಷವಾಗಿ 10,000 ರೂ. ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವ ಗ್ರಾಹಕರು ಕೂಡ ಈಗ 5G ಸ್ಮಾರ್ಟ್‌ಫೋನ್ ಕಡೆಗೆ ನೊಡುತ್ತಿರುವುದು ಈ ಮಹಾಕುಸಿತಕ್ಕೆ ಮುಖ್ಯ ಕಾರಣ ಎನ್ನಬಹುದಾಗಿದೆ. ಇದರ ನಡುವೆ 4G ಸ್ಮಾರ್ಟ್‌ಫೋನ್‌ಗಳ ದಾಸ್ತಾನುಗಳನ್ನು ಖಾಲಿ ಮಾಡುವುದಕ್ಕಾಗಿ ಶಿಯೋಮಿ ಸಂಸ್ಥೆ ಚಿಲ್ಲರೆ ವ್ಯಾಪಾರಿಗಳಿಗೆ ಸುಮಾರು 20 ಕೋಟಿ ರೂಪಾಯಿಗಳ ಬೆಂಬಲವನ್ನು ವಿಸ್ತರಿಸುತ್ತಿದೆ ಎಂದು ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಶಿಯೋಮಿ ಕಂಪೆನಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡಿದೆ. ವರದಿಯ ಪ್ರಕಾರ ಶಿಯೋಮಿ 5 ಮಿಲಿಯನ್ ಸಾಗಣೆಗಳನ್ನು ಮಾತ್ರ ಹೊಂದಿದ್ದು, ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆದರೆ ಶಿಯೋಮಿಯನ್ನು ಹಿಂದಿಕ್ಕಿರುವ ಒಪ್ಪೋ ಕಂಪೆನಿ 5.5 ಮಿಲಿಯನ್ ಶಿಪ್ಪಿಂಗ್ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನು ವಿವೋ ಕಂಪೆನಿ ತನ್ನ 5.4 ಮಿಲಿಯನ್ ಶಿಪ್‌ಮೆಂಟ್ಸ್ ಮೂಲಕ ಮೂರನೇ ಸ್ಥಾನಕ್ಕೇರಿದೆ.
ಕ್ಯಾನಲಿಸ್ ವರದಿಯ ಪ್ರಕಾರ ಸ್ಯಾಮ್‌ಸಂಗ್ ತನ್ನ ಹೊಸ 5G ಚಾಲಿತ ಎ ಸರಣಿ ಸ್ಮಾರ್ಟ್‌ಫೋನ್ ಮೂಲಕ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿದೆ. ಇದರಿಂದ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ಡೆಂಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಆಪಲ್ ಕಂಪೆನಿ ಕೂಡ ತನ್ನ ಹೊಸ ಆಫ್‌ಲೈನ್ ಸ್ಟೋರ್‌ಗಳೊಂದಿಗೆ ಇನ್ನಷ್ಟು ಬೇಡಿಕೆಯನ್ನು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ. ಈ ಎರಡು ಕಂಪನಿಗಳು ಭಾರತದ ಸ್ಮಾರ್ಟ್‌ಫೋನ್ ರಫ್ತು ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಇದರಿಂದ 2023 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು $4 ಶತಕೋಟಿಯಷ್ಟು ದಾಖಲೆಯ ರಫ್ತು ಮೌಲ್ಯವನ್ನು ಸಾಧಿಸಲು ಸಾಧ್ಯವಾಗಿದೆ ಎನ್ನಲಾಗಿದೆ.


Click it and Unblock the Notifications








