ಇ-ಕಾಮರ್ಸ್ ನ ಹೊಸ ನಿಯಮಗಳು ಸ್ಯಾಮ್ ಸಂಗ್ ಗೆ ಸಿಹಿ ಸುದ್ದಿ ಮತ್ತು ಶಿಯೋಮಿಗೆ ಕೆಟ್ಟ ಸುದ್ದಿ
ಇ-ಕಾಮರ್ಸ್ ಸೈಟ್ ನ ಎಫ್ ಡಿ ಐ ನೀತಿಯನ್ನು ಬಿಗಿಗೊಳಿಸಿದ ಕಾರಣದಿಂದಾಗಿ ಭಾರತದ ಟಾಪ್ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಎಂಬ ಪಟ್ಟವನ್ನು ಶಿಯೋಮಿಯಿಂದ ಕಸಿದುಕೊಳ್ಳುವುದಕ್ಕೆ ಸ್ಯಾಮ್ ಸಂಗ್ ಗೆ ಸಹಾಯವಾಗಲಿದೆ ಯಾಕೆಂದರೆ ಸೌತ್ ಕೋರಿಯಾದ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ ಹೆಚ್ಚು ಆಫ್ ಲೈನ್ ರೀಟೈಲ್ ಶಾಪ್ ಗಳನ್ನು ಚೀನಾದ ಸಂಸ್ಥೆಗಿಂತ ಹೆಚ್ಚಾಗಿ ಹೊಂದಿದೆ. ಇದು ಹೆಚ್ಚೆಚ್ಚು ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕೆ ಸ್ಯಾಮ್ ಸಂಗ್ ಗೆ ನೆರವು ನೀಡಲಿದೆ ಎಂದು ಅಭಿಪ್ರಾಯ ಪಡುತ್ತಾರೆ ತಜ್ಞರು.

ಕೌಂಟರ್ ಪಾಯಿಂಟ್ ರೀಸರ್ಚ್:
ಕೌಂಟರ್ ಪಾಯಿಂಟ್ ಟೆಕ್ನಾಲಜಿಯ ಮಾರ್ಕೆಟ್ ರೀಸರ್ಚ್ ಸಂಸ್ಥೆಯ ಪಾರ್ಟ್ನರ್ ಮತ್ತು ರೀಸರ್ಚ್ ಡೈರೆಕ್ಟರ್ ಆಗಿರುವ ನೀಲ್ ಶಾ ಹೇಳುವ ಪ್ರಕಾರ ಇದು ಸ್ಯಾಮ್ ಸಂಗ್ ಗೆ ಬಹಳ ಪ್ರಮುಖವಾದ ಅವಕಾಶವು ಲಭ್ಯವಾಗುತ್ತಿರುವ ಸಮಯವಾಗಿದ್ದು ಹೆಚ್ಚಿನ ಅಂದರೆ 70% ಮಾರುಕಟ್ಟೆ ಆನ್ ಲೈನ್ ಚಾನಲ್ ಗಳಲ್ಲಿ ನಡೆಯುತ್ತಿದೆ" ಎನ್ನುತ್ತಾರೆ.

ಹೊಸ ನಿಯಮ:
ಬುಧವಾರ ಸರ್ಕಾರವು ಆನ್ ಲೈನ್ ಮಾರುಕಟ್ಟೆಯ ಯಾವುದೇ ಫ್ಲ್ಯಾಟ್ ಫಾರ್ಮ್ ನಲ್ಲಿ ಎಕ್ಸ್ ಕ್ಲೂಸೀವ್ ಡೀಲ್ ಗಳಿಗೆ ಸಹಿ ಹಾಕದಂತೆ ನಿಷೇಧ ಹೇರಿದೆ. ಇ-ಕಾಮರ್ಸ್ ಫ್ಲ್ಯಾಟ್ ಫಾರ್ಮ್ ನಲ್ಲಿ ಒಬ್ಬ ವೆಂಡರ್ ಗರಿಷ್ಟ 25% ತನ್ನ ದಾಸ್ತಾನನ್ನು ಮಾರಾಟ ಮಾಡಬಹುದೆಂದು ತಿಳಿಸಿದ್ದಾರೆ.

ಯಾರಿಗೆ ಕಷ್ಟ?
ಈ ಬದಲಾದ ನಿಯಮಾವಳಿಗಳು ಶಿಯೋಮಿ,ಒನ್ ಪ್ಲಸ್, ಹುವಾಯಿ, ಹಾನರ್ ಮತ್ತು ರಿಯಲ್ ಮಿ ಸಂಸ್ಥೆಗಳಿಗೆ ಸ್ವಲ್ಪ ತೊಂದರೆಯನ್ನು ಮಾಡುವ ಸಾಧ್ಯತೆ ಇದೆ. ಈ ಎಲ್ಲಾ ಸ್ಮಾರ್ಟ್ ಫೋನ್ ತಯಾರಕರು ಕೇವಲ ಆನ್ ಲೈನ್ ಸೈಟ್ ಗಳನ್ನೇ ಮಾರಾಟಕ್ಕಾಗಿ ಆಧರಿಸಿದೆ.

ಸೀಸನ್ ಸೇಲ್ ಗಳಿಗೆ ಬ್ರೇಕ್:
ಫೆಬ್ರವರಿ 1 ರಿಂದ ಈ ನಿಯಮಾವಳಿಗಳು ಜಾರಿಗೆ ಬಂದಲ್ಲಿ ಫೆಸ್ವೀವ್ ಆಫರ್, ಸೀಸನಲ್ ಸೇಲ್ ಇತ್ಯಾದಿಗಳು ಇ-ಕಾಮರ್ಸ್ ಸೈಟ್ ನಲ್ಲಿ ನಡೆಯದೇ ಇರುವ ಸಾಧ್ಯತೆಗಳಿದೆ.

ಸ್ಯಾಮ್ ಸಂಗ್ ಗೆ ಸಿಹಿಸುದ್ದಿ:
ಸ್ಯಾಮ್ ಸಂಗ್ ಹೊಸ ನಿಯಮಾವಳಿಗಳು ಜಾರಿಗೆ ಬಂದ ನಂತರ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಕೊರಿಯನ್ ಸಂಸ್ಥೆ ಚೀನಾ ಕಂಪೆನಿಗಳು ತಮ್ಮ ಆಫ್ ಲೈನ್ ಸ್ಟೋರ್ ಗಳನ್ನು ಸ್ಥಾಪಿಸುವ ಸಮಯದವರೆಗೆ ಹೆಚ್ಚಿನ ಲಾಭವನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ಟೆಕ್ ಆರ್ಕ್ ನ ಫೌಂಡರ್ ಆಗಿರುವ ಫೈಝಲ್ ಕವೋಸಾ.

ಮಾರುಕಟ್ಟೆ ಹಣಾಹಣಿ:
ಶಿಯೋಮಿ 27% ಶೇರ್ ಮತ್ತು 23% ಶೇರ್ ನ್ನು ಸ್ಯಾಮ್ ಸಂಗ್ ಹೊಂದಿದ್ದು 2018 ರಲ್ಲಿ ಮೊದಲ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು, ಈ ಸರ್ಧೆಯು 2019 ರಲ್ಲೂ ಕೂಡ ಮುಂದುವರೆಯುವ ಸಾಧ್ಯತೆ ಇದೆ.
ಶಿಯೋಮಿಗೆ ಅಗತ್ಯವಾಗಿದೆ ಆಫ್ ಲೈನ್ ಸ್ಟೋರ್:
ಈ ಬದಲಾವಣೆಯಿಂದ ಸ್ಯಾಮ್ ಸಂಗ್ ಗೆ ಲಾಭವಾಗುತ್ತದೆ. ಆದರೆ ಶಿಯೋಮಿ ಈ ಸೋಲನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ಈಗಾಗಲೇ ಶಿಯೋಮಿ ಸಂಸ್ಥೆ ಭರತದಲ್ಲಿ ತನ್ನ ಆಫ್ ಲೈನ್ ಸ್ಟೋರ್ ಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಕೆಲಸಗಳನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಇದರ ಯಶಸ್ಸು ಶಿಯೋಮಿಗೆ ಲಭ್ಯವಾಗುವ ಸಾಧ್ಯತೆ ಇದೆ.
ಶಿಯೋಮಿ ಗುರಿ:
ಕೌಂಟರ್ ಪಾಯಿಂಟ್ ನ ಸರ್ವೇಯ ಪ್ರಕಾರ ಎರಡು ವರ್ಷಗಳ ಹಿಂದೆ ಶಿಯೋಮಿಯ ಒಟ್ಟು ಮೊತ್ತದಲ್ಲಿ 5% ವು ಆಫ್ ಲೈನ್ ಚಾನಲ್ ಗಳಿಂದ ಲಭ್ಯವಾಗಿತ್ತು. ನಂತರದ ದಿನಗಳಲ್ಲಿ ಅದು 30% ಕ್ಕೆ ಏರಿಕೆಯಾಗಿದೆ. ವರದಿಯ ಪ್ರಕಾರ ಸದ್ಯ 500ಎಂಐ ಸ್ಟೋರ್ ಗಳಿದ್ದು 2019 ರ ಅಂತ್ಯದೊಳಗೆ 5,000 ಔಟ್ ಲೆಟ್ ನ್ನು ಸೇರಿಸುವ ಗುರಿ ಹೊಂದಲಾಗಿದೆ.


Click it and Unblock the Notifications








