Subscribe to Gizbot

ಕಳವಾದ ಮೊಬೈಲ್ ಪತ್ತೆ ಅಸಾಧ್ಯ?..ಪೊಲೀಸರಿಗೆ ದೊಡ್ಡ ತಲೆನೊವಾದ ಚೀನಾ ಡಿವೈಸ್!?

Posted By:

ಇಷ್ಟು ದಿವಸ ಮೊಬೈಲ್ ಕಳ್ಳರಿಗೆ ಬಹುದೊಡ್ಡ ಸವಾಲಾಗಿದ್ದ ತೊಂದರೆಯೊಂದು ಬಹಳ ಸುಲಭವಾಗಿ ಪರಿಹಾರವಾಗಿದೆ.!! ಹೌದು, ಕಳವಾದ ಮೊಬೈಲ್ ಫೋನ್ ಪತ್ತೆಗೆ ಇದ್ದ ಸಂಖ್ಯೆಯನ್ನು( IMEI) ಸಹ ಬದಲಾಯಿಸಬಹುದಾದ ತಂತ್ರಜ್ಞಾನವು ಇದೀಗ ಕಳ್ಳರ ಕೈಗೆ ದೊರೆತಿದೆ..ಇದು ಪೊಲೀಸರಿಗೆ ದೊಡ್ಡ ತಲೆನೊವ್ವಾಗಿದೆ!!

ಇಷ್ಟು ದಿವಸ ಕಳೆದುಹೋದ ಮೊಬೈಲ್ ಅನ್ನು ಮೊಬೈಲ್‌ನಲ್ಲಿರುವ IMEI ನಂಬರ್‌ ಮೂಲಕ ಟ್ರ್ಯಾಕ್ ಮಾಡಿ ಪೊಲೀಸರು ಕಳ್ಳರನ್ನು ಹಿಡಿಯುತ್ತಿದ್ದರು. ಆದರೆ, ಚೀನಾದಿಂದ ಈ IMEI ನಂಬರ್‌ ಅನ್ನು ಬೇರೆ ಮಾಡುವ ಕುತಂತ್ರಜ್ಞಾನ ಭಾರತಕ್ಕೆ ರವಾನೆಯಾಗಿದ್ದು, IMEI ನಂಬರ್‌ ಸಹ ಪೊಲೀಸರಿಗೆ ನಿಷ್ಪ್ರಯೋಜಕವಾಗಿದೆ.!!

IMEI ನಂಬರ್ ಬದಲಾಯಿಸಬಹುದಾದ ಆ ಡಿವೈಸ್ ಈಗಾಗಲೇ ಖದೀಮರಿಗೆ ಎಲ್ಲಾ ಕಡೆ ಲಭ್ಯವಾಗುತ್ತಿದೆ ಎನ್ನಲಾಗಿದ್ದು, ಹಾಗಾದರೆ, ಇದರಿಂದ ಆಗಬಹುದಾದ ಪರಿಣಾಮಗಳು ಯಾವುವು? ಪೋಲೀಸರಿಗೆ ಬೇರೆ ಮಾರ್ಗ ಇಲ್ಲವೇ? ಗ್ರಾಹಕರಿಗೆ ಆಗಬಹುದಾದ ತೊಂದರೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು IMEI ?

ಏನಿದು IMEI ?

ಎಲ್ಲಾ ಮೊಬೈಲ್‌ಗಳಲ್ಲಿಯೂ 15 ಅಂಕಿಗಳನ್ನು ಹೊಂದಿರುವ ಸಂಖ್ಯೆಯ ಲಭ್ಯವಿರುತ್ತದೆ. ಅದನ್ನು IMEI ಅಥವಾ ಇಂಟರ್ ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ ಎಂದು ಕರೆಯಲಾಗುತ್ತದೆ.!! ಮೊಬೈಲ್‌ಗೆ ಯಾವುದೇ ಸಿಮ್ ಹಾಕಿ ಬಳಕೆ ಮಾಡಿದರೂ ಆ ಮೊಬೈಲ್‌ ಎಲ್ಲಿದೆ ಎಂದು ಪೊಲೀಸರು ಟ್ರ್ಯಾಕ್ ಮಾಡಬಹುದಾಗಿತ್ತು.!!

IMEI ಬದಲಾವಣೆ ಮಾಡಿದರೆ.?

IMEI ಬದಲಾವಣೆ ಮಾಡಿದರೆ.?

ಚೀನಾದಿಂದ ಈ IMEI ನಂಬರ್‌ ಅನ್ನು ಬೇರೆ ಮಾಡುವ ಕುತಂತ್ರಜ್ಞಾನ ಭಾರತಕ್ಕೆ ರವಾನೆಯಾಗಿದ್ದು, ಡಿವೈಸ್ ಈಗಾಗಲೇ ಖದೀಮರಿಗೆ ಎಲ್ಲಾ ಕಡೆ ಲಭ್ಯವಾಗುತ್ತಿದೆ ಎನ್ನಲಾಗಿದೆ. ಈ ಡಿವೈಸ್ ಮೂಲಕ IMEI ಸಂಖ್ಯೆಯನ್ನು ಕೇವಲ 10 ನಿಮಿಷಗಳಲ್ಲಿ ಬದಲಾಯಿಸಬಹುದು ಎಂದು ಹೇಳಲಾಗಿದೆ.!!

ಮುಚ್ಚಿ ಹೋದ ಏಕೈಕ ಮಾರ್ಗ!!

ಮುಚ್ಚಿ ಹೋದ ಏಕೈಕ ಮಾರ್ಗ!!

ಈ ಕುತಂತ್ರಜ್ಞಾನದಿಂದಾಗಿ ಕಳವಾದ ಫೋನ್ ಗಳನ್ನು ಪತ್ತೆ ಮಾಡಲು ಇದ್ದ ಏಕೈಕ ಮಾರ್ಗ ಪೊಲೀಸರ ಪಾಲಿಗೆ ಮುಚ್ಚಿ ಹೋದಂತಾಗುತ್ತದೆ. IMEI ನಂಬರ್ ಬದಲಾಯಿಸುವ ಡಿವೈಸ್ ಬೆಲೆ 2000-5000 ರೂಪಾಯಿಗೆ ಸಿಗುತ್ತಿದ್ದು, ಕದ್ದ ಮೊಬೈಲ್‌ಗಳ IMEI ಬದಲಾಯಿಸಿ ಕಳ್ಳರು ಬಹಳ ಸುಲಭವಾಗಿ ಬೇರೆಯವರಿಗೆ ಮಾರಾಟಮಾಡುತ್ತಾರೆ.!!

ಭಯೋತ್ಪಾದಕರಿಂದ ಭಯ ಹೆಚ್ಚಾಗಿದೆ.!!

ಭಯೋತ್ಪಾದಕರಿಂದ ಭಯ ಹೆಚ್ಚಾಗಿದೆ.!!

IMEI ಬದಲಾಯಿಸುವ ತಂತ್ರಜ್ಞಾನ ಏನಾದರೂ ಭಯೋತ್ಪಾದಕರಿಗೆ ಸಿಕ್ಕರೆ ಆಗಬುದಾದ ಅನಾಹುತ ಹೆಚ್ಚಿದೆ.! ಇದರಿಂದ ಭಯೋತ್ಪಾದಕರು ಹೆಚ್ಚು ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ. ಹಾಗಾಗಿ, ಸರ್ಕಾರ ಈ ಬಗ್ಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.!!

ಐಫೋನ್ ಬಳಕೆದಾರರಿಗೆ ತೊಂದರೆಯಿಲ್ಲ!!

ಐಫೋನ್ ಬಳಕೆದಾರರಿಗೆ ತೊಂದರೆಯಿಲ್ಲ!!

ಅತ್ಯಾಧುನಿಕ ಆಪಲ್ ತಂತ್ರಜ್ಞಾನವನ್ನು ಹೊಂದಿರುವ ಆಪಲ್‌ ಐಫೋನ್ ಐಡಿಯನ್ನು ಬದಲಾವಣೆ ಮಾಡುವ ಆಯ್ಕೆ ಈ ಡಿವೈಸ್‌ಗಳಲ್ಲಿ ಕೆಲಸ ಮಾಡುವುದಿಲ್ಲ.!! IMEI ಬದಲಾಯಿಸುವ ತಂತ್ರಜ್ಞಾನ ಐಫೋನ್‌ಗಳಿಗೆ ಮಾತ್ರ ತಟ್ಟುವುದಿಲ್ಲ. ಆದರೆ, ಕಳೆದುಹೋದ ಮೊಬೈಲ್ ಸಿಗದಂತೆ ಅವುಗಳ ಬಿಡಿಭಾಗಗಳನ್ನು ಅವರು ಮಾರಾಟ ಮಾಡುತ್ತ್ಆರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Once it was true that your mobile phone's IMEInumber could help police trace it in case it was stolen.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot