ಫೋನ್ ರಕ್ಷಣೆಗಾಗಿ ಬ್ಯಾಕ್ ಕವರ್ ಹಾಕುವ ಮುನ್ನ ಇದನ್ನೊಮ್ಮೆ ಓದಿ!
ಯಾವುದೇ ಸ್ಮಾರ್ಟ್‌ಫೋನ್ ರಕ್ಷಣೆಗಾಗಿ ಫ್ಲಿಪ್‌ಕವರ್ ಅಥವಾ ಬ್ಯಾಕ್ ಕವರ್ ಗಳನ್ನು ಬಳಸುವುದು ಇತ್ತೀಚಿನ ರೂಢಿ. ಸಂಪೂರ್ಣ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಮೊಬೈಲ್ ಡಿಸ್‌ಪ್ಲೇ ಮುಚ್ಚುವ ಪುಸ್ತಕದಂತೆ ತೆರೆಯಬಹುದಾದ ಫ್ಲಿಪ್ ಕವರ್‌ಗಳನ್ನು ಬಳಸಿದರೆ, ಇನ್ನು ಕೆಲವರು ಮೊಬೈಲ್‌ನ ಅಂದ ಕಾಣಬೇಕು ಎಂದು ತರತರದ ಬ್ಯಾಕ್ ಕವರ್‌ಗಳನ್ನು ಬಳಸುತ್ತಿರುತ್ತಾರೆ.
ಕೇವಲ 30 ರೂಪಾಯಿಗಳಿಗೂ ಈಗ ಬೀದಿಬದಿಯಲ್ಲೂ ಸಿಗುವ ಬ್ಯಾಕ್ ಕವರ್ ವಿಷಯಯದಲ್ಲೂ ನಾವು ತಿಳಿಯಬೇಕಾದದ್ದು ಏನಿದೆ?, ಬ್ಯಾಕ್ ಕವರ್ ಗಳನ್ನು ಹಾಕುವುದರಿಂದ ನಮ್ಮ ಫೋನ್ ಸುರಕ್ಷತವಾಗಿದೆ ಎಂದು ಹಲವರು ಹೇಳುತ್ತಾರೆ. ಆದರೆ, ಬ್ಯಾಕ್ ಕವರ್ ಬಳಸುವುದರಲ್ಲಿ ನಾವು ಮಾಡುವ ತಪ್ಪು ಎಂತಹ ಅನಾಹುತ ತರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.

ನಿಮಗೆ ಗೊತ್ತಾ?, ಸ್ಮಾರ್ಟ್‌ಫೋನ್‌ಗಳ ರಕ್ಷಣೆಗಾಗಿ ಮೇಲೆ ನೀವು ಹಾಕುವ ಬ್ಯಾಕ್‌ಕವರ್ ಅದರ ಸ್ಪೋಟಕ್ಕೂ ಕಾರಣವಾಗಿರುತ್ತದೆ. ನೀವು ಹಾಕುವ ಬ್ಯಾಕ್ ಕವರ್ ನಿಮ್ಮ ಫೋನನ್ನು ಹಾಳು ಮಾಡಬಹುದಾಗಿದೆ. ಹಾಗಾಗಿಯೇ, ಇತ್ತೀಚಿಗೆ ಕೆಲವೊಂದು ಮೊಬೈಲ್ ಕಂಪೆನಿಗಳು ತಮ್ಮ ಸ್ಮಾರ್ಟ್‌ಫೋನ್ ಜೊತೆಗೆ ಸರಿಹಹೊಂದುವಂತಹ ಬ್ಯಾಕ್ ಕವರ್‌ಗಳನ್ನು ನೀಡುತ್ತಿವೆ.
ಉದಾಹರಣೆಗೆ ನೀವು ಈಗ ಯಾವುದೇ ಶಿಯೋಮಿ ಫೋನ್ ಖರೀದಿಸಿದರೆ ಅವುಗಳ ಜೊತೆಗೆ ಪಾರದರ್ಶಕ ಬ್ಯಾಕ್ ಕವರ್‌ಗಳನ್ನು ನೀಡಿರುತ್ತದೆ. ಅವು ಬೇಗ ಮಾಸಿದರೂ ಚೆನ್ನಾಗಿ ರಕ್ಷಣೆ ನೀಡುತ್ತವೆ. ನೀವು ಫೋನನ್ನು ಹೆಚ್ಚು ಬಳಸಿದರೂ ಅದರ ಬಿಸಿಯನ್ನು ಹಿಡಿದಿಟ್ಟುಕೊಳ್ಳದಂತಹ ಪಾರದರ್ಶಕ ಬ್ಯಾಕ್ ಕವರ್ ಇದಾಗಿರುವುದಂದ ಫೋನ್ ಸ್ಪೋಟವಾಗುವುದು ತಪ್ಪುತ್ತದೆ.

ನಿಮ್ಮ ಮೊಬೈಲ್ ವಿನ್ಯಾಸವು ಸಂಪೂರ್ಣವಾಗಿ ಮೊಬೈಲ್ ಕಂಪೆನಿ ತಂತ್ರಜ್ಞಾನದ ಅಡಿಯಲ್ಲಿರುವುದರಿಂದ ಅವುಗಳಿಗೆ ಬ್ಯಾಕ್‌ಕವರ್ ಹಾಕುವುದು ಕೂಡ ತಪ್ಪಾಗಿರುತ್ತದೆ. ಆದರೆ, ಬ್ಯಾಕ್ ಕವರ್ ಬಳಸದೇ ವಿಧಿಯಿಲ್ಲ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ರಕ್ಷಣೆಗೆ ಸಂಪೂರ್ಣ ಪಾರದರ್ಶಕವಾಗಿರುವಂತಹ ಉತ್ತಮ ಬ್ರಾಂಡ್‌ನ ಬ್ಯಾಕ್‌ಕವರ್ ಹಾಕುವುದನ್ನು ಮರೆಯಲೇಬೇಡಿ.


Click it and Unblock the Notifications