ಹೆಚ್ಚು ವಾಟ್ಸ್ಆಪ್ ಬಳಕೆ ಆರೋಗ್ಯಕ್ಕೆ ಒಳ್ಳೆಯದಂತೆ!..ಹೇಗೆ ಗೊತ್ತಾ?
ಜನರು ವಾಟ್ಸ್‌ಆಪ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ವಾಟ್ಸ್ಆಪ್‌ನಲ್ಲಿ ಹೆಚ್ಚು ಸಮಯ ಕಳೆಯುವ ಜನರು ಅವರ ಸ್ನೇಹಿತರ ಮತ್ತು ಕುಟುಂಬದವರ ಜೊತೆಗೆ ನಿಕಟ ಭಾವನೆ ಹೊಂದುತ್ತದೆ ಮತ್ತು ಈ ಸಂಬಂಧಗಳು ಉತ್ತಮ ಗುಣಮಟ್ಟದ್ದಾಗಿವೆ. ಇನ್ನು ವಿಶೇಷವಾಗಿ ವಾಟ್ಸ್ಆಪ್‌ನಲ್ಲಿ ಹೆಚ್ಚು ಸಮಯ ಕಳೆಯುವ ಜನರು ಕಡಿಮೆ ಒಂಟಿತನವನ್ನು ಅನುಭವಿಸುತ್ತಾರೆ ಎಂದು ಇಂಗ್ಲೆಂಡಿನ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.

ಜನರು ವಾಟ್ಸ್‌ಆಪ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುವುದು ಅವರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಕಟ ಭಾವನೆ ಹೊಂದುವಂತೆ ಮಾಡುತ್ತದೆ ಮತ್ತು ಈ ಸಂಬಂಧಗಳು ಉತ್ತಮ ಗುಣಮಟ್ಟದ್ದಾಗಿರುವುದನ್ನು ನೋಡಬಹುದು ಎಂದು ಎಡ್ಜ್ ಹಿಲ್ ವಿಶ್ವವಿದ್ಯಾಲಯದ ಡಾ. ಲಿಂಡಾ ಕೇ ಅವರು ಹೇಳಿದ್ದಾರೆ. ಹಾಗೆಯೇ, ಹೆಚ್ಚು ಜನರು ತಮ್ಮ ವಾಟ್ಸ್ಆಪ್ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಭಾವಿಸಿದರೆ, ಇದು ಅವರ ಸ್ವಾಭಿಮಾನ ಮತ್ತು ಸಾಮಾಜಿಕ ಸಾಮರ್ಥ್ಯಕ್ಕೆ ಸಕಾರಾತ್ಮಕವಾಗಿ ಸಂಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲೂ ವಿಶೇಷವಾಗಿ ವಾಟ್ಸ್ಆಪ್‌ನಲ್ಲಿ ಹೆಚ್ಚು ಸಮಯ ಕಳೆಯುವ ಜನರು ಕಡಿಮೆ ಒಂಟಿತನವನ್ನು ಅನುಭವಿಸುತ್ತಾರೆ ಮತ್ತು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಹೇಳುತ್ತದೆ. ಬಹುತೇಕ ವಾಟ್ಸ್ಆಪ್ ಬಳಕೆದಾರರು ಒಬ್ಬಂಟಿಯಾಗಿರುವುದಿಲ್ಲ. ಅವರು ತಮ್ಮ ಆಪ್ತರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸ್ಆಪ್ ಅನ್ನು ಬಳಸುವುದು ಯೋಗಕ್ಷೇಮದ ಅಂಶಗಳಿಗೆ ಅನುಕೂಲಕರವಾಗಿದೆ ಎಂದು ತೋರುತ್ತದೆ ಎಂದು ಸಂಶೋಧಕರು ತಿಳಿಸಿರುವುದನ್ನು ನಾವು ನೋಡಬಹುದಾಗಿದೆ.

ಒಟ್ಟಾರೆಯಾಗಿ ಪಠ್ಯ ಆಧಾರಿತ ವಾಟ್ಸ್ಆಪ್ ಅಥವಾ ಇನ್ನಿತರ ಯಾವುದೇ ಮೆಸೇಜಿಂಗ್ ಅಪ್ಲಿಕೇಶನ್ ಮಾನಸಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಯುಕೆ ಯ ಎಡ್ಜ್ ಹಿಲ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ. ಸಂವಹನ ತಂತ್ರಜ್ಞಾನವನ್ನು ಬಳಸುವುದು ಸಾಮಾಜಿಕ ಬೆಂಬಲ ಪ್ರೇರಣೆಗಳೊಂದಿಗೆ ಸಾಮಾಜಿಕ ಅಂಶಗಳ ಪಾತ್ರದ ಬಗ್ಗೆ ನಿರ್ದಿಷ್ಟ ಪುರಾವೆಗಳನ್ನು ಒದಗಿಸುತ್ತದೆ. ಹೀಗೆ ನಡೆಯುತ್ತಿರುವ ಚರ್ಚೆಯು ಪೂರಕವೂ ಆಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಒಟ್ಟು ಇನ್ನೂರು ಜನರನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿದ್ದು, ಸರಾಸರಿ 24 ವರ್ಷ ವಯಸ್ಸಿನ 158 ಮಹಿಳೆಯರು ಮತ್ತು 41 ಪುರುಷರು ಈ ಅಧ್ಯಯನದಲ್ಲಿ ಭಾಗವಹಿಸಿದ್ದಾರೆ. ಇದನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಹ್ಯೂಮನ್-ಕಂಪ್ಯೂಟರ್ ಸ್ಟಡೀಸ್‌ನಲ್ಲಿ ಪ್ರಕಟಿಸಲಾಗಿದೆ. ಇನ್ನು ವಾಟ್ಸಾಪ್‌ನ ದೈನಂದಿನ ಬಳಕೆಯು ಸರಾಸರಿ 55 ನಿಮಿಷಗಳು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ವಾಟ್ಸ್ಆಪ್ ಜನಪ್ರಿಯತೆ ಮತ್ತು ಗುಂಪು ಚಾಟ್ ಕಾರ್ಯದಿಂದಾಗಿ ಜನರು ಇದನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.


Click it and Unblock the Notifications








