ಭಾರತೀಯ ಪ್ರಜೆಗಳ ಆಧಾರ್ ಮಾಹಿತಿಗಳನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ರಹಸ್ಯವಾಗಿ ಕದಿಯುತ್ತಿದೆ ಎಂದು ವಿಕಿಲೀಕ್ಸ್ ದಾಖಲೆ ಪತ್ರಗಳನ್ನು ಶುಕ್ರವಾರ ಬಹಿರಂಗಪಡಿಸಿತ್ತು. ಈ ವರದಿಯ ಬೆನ್ನಲ್ಲೇ, ವಿಕಿಲೀಕ್ಸ್ ಹೇಳಿಕೆಗಳನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ತಿರಸ್ಕರಿಸಿ ಇದೊಂದು ಕುಚೋದ್ಯದ ಹೇಳಿಕೆ ಎಂದು ಹೇಳಿದೆ.!!
ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ವಿನ್ಯಾಸಗೊಳಿಸಿರುವ ಎಕ್ಸ್‌ಪ್ರೆಸ್ ಲೇನ್ ಮೂಲಕ ಭಾರತೀಯರ ಆಧಾರ್ ಮಾಹಿತಿಯನ್ನು ಅಮೆರಿಕಾ ಗುಪ್ತಚರ ಸಂಸ್ಥೆ ಕದಿಯುತ್ತಿದೆ. ಕೆಲವು ನಿರ್ದಿಷ್ಟ ಪರಿಕರಗಳ ಮೂಲಕ ಮಾಹಿತಿಗಳನ್ನು ಪಡೆಯುತ್ತಿದೆ ಎಂದು ಹೇಳಿದ್ದ ವಿಕಿಲೀಕ್ಸ್ ವರದಿ ಈಗಾಗಲೇ ಸಂಚಲನ ಮೂಡಿಸಿತ್ತು!!
ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಅಮೆರಿಕಾ ಗುಪ್ತಚರ ಸಂಸ್ಥೆ ಈ ಕಾರ್ಯವನ್ನು ಮಾಡುತ್ತಿದೆ ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದ ದಾಖಲೆಗಳು ಸತ್ಯಕ್ಕೆ ದೂರವಾದುದು. ಇಂತಹ ಯಾವುದೇ ಕಾರ್ಯ ಅಮೆರಿಕಾದಿಂದ ಅಥವಾ ಅಮೆರಿಕದ ಗುಪ್ತಚರ ಸಂಸ್ಥೆಯಿಂದ ಕಂಡುಬಂದಿಲ್ಲ. ಇದೊಂದು ವಿಕಿಲೀಕ್ಸ್ ಕುಚೋದ್ಯದ ಹೇಳಿಕೆ ಎಂದು ಕೇಂದ್ರ ಸರಕಾರ ತಿರಸ್ಕರಿಸಿದೆ.!!
ಆಧಾರ್ ಯೋಜನೆಗಾಗಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಗುರುತಿಸಿದ್ದ ಬಯೋಮೆಟ್ರಿಕ್ ಉಪಕರಣಗಳನ್ನು ಮತ್ತು ಈ ಬಯೋಮೆಟ್ರಿಕ್ ಸಾಫ್ಟ್‌ವೇರ್ ಅನ್ನು ಅಮೆರಿಕದ ಕಂಪೆನಿ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಸಂಸ್ಥೆ ಪೂರೈಸಿತ್ತು.!! ಈ ಸಂಸ್ಥೆಯ ಪೂರ್ವಾಪರ ಮತ್ತು ವೃತ್ತಿಪರತೆಯನ್ನು ಭಾರತ ಪರಿಶೀಲಿಸಿರಲಿಲ್ಲ ಎಂದು ಸಹ ವಿಕಿಲೀಕ್ಸ್ ಹೇಳಿದೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.
English summary
WikiLeaks published documents that claims the United State's Central Intelligence Agency (CIA) is using specific tools to secretly collect Aadhaar data.to know more visit to kannada.gizbot.com
Story first published: Saturday, August 26, 2017, 17:00 [IST]