13ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಕಿಪೀಡಿಯ

Posted By:

ವಿಶ್ವದ ಮಾಹಿತಿಗಳನ್ನು ಆಯಾ ಪ್ರದೇಶದ ಆಯಾ ಭಾಷೆಯಲ್ಲಿ ನೀಡುತ್ತಿರುವ,ಮುಕ್ತ ವಿಶ್ವಕೋಶ ವಿಕಿಪೀಡಿಯ ಇಂದು 13ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ.

ಜನವರಿ 2001ರಂದು ಜಿಮ್ಮಿ ವೇಲ್ಸ್ ಮತ್ತು ಲಾರ್ರಿ ಸೇಂಗರ್ ಆರಂಭಿಸಿದ ವಿಕಿಪೀಡಿಯ ಇಂದು ಕನ್ನಡವು ಸೇರಿದಂತೆ ಜಗತ್ತಿನ 262 ವಿವಿಧ ಭಾಷೆಗಳಲ್ಲಿ ಮಾಹಿತಿಯನ್ನು ನೀಡುತ್ತಿದೆ.ವಿಕಿಪೀಡಿಯ ಅನ್ಯ ವಿಶ್ವಕೋಶಗಳಿಂದ ಬೇರೆಯಾಗಿದ್ದು ಅಂತರ್ಜಾಲ ಆಧಾರಿತ ವಿಶ್ವಕೋಶವಾಗಿದ್ದು,ಇದರಲ್ಲಿರುವ ಮಾಹಿತಿಗಳು ನಿರಂತರವಾಗಿ ಪರಿಷ್ಕರಣೆಗೊಳ್ಳುತ್ತಿರುತ್ತದೆ.

 13ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಕಿಪೀಡಿಯ

ಯಾವುದೇ ರೀತಿಯ ಸಾಮಾಜಿಕ, ಸಾಂಸ್ಕೃತಿಕ, ಅಥವಾ ಜನಾಂಗೀಯ ನಿರ್ಬಂಧಗಳಿಲ್ಲದೆ ಯಾರು ಬೇಕಾದರೂ ವಿವಿಧ ರೀತಿಯ ಲೇಖನಗಳು, ಆಕರಗಳು, ಚಿತ್ರಗಳು ಮತ್ತಿತರ ಮಾಧ್ಯಮ ಪ್ರಕಾರಗಳ ಬಗೆಗಿನ ಮಾಹಿತಿಗಳನ್ನು ವಿಕಿಪೀಡಿಯಕ್ಕೆ ಸೇರಿಸಬಹುದು.

ವಿಕಿಪೀಡಿಯದ ವಿಶೇಷ ಏನೆಂದರೆ ಇಲ್ಲಿ ಕೊಡುಗೆದಾರರ ಪರಿಣತಿಯಾಗಲೀ ವಿದ್ಯಾರ್ಹತೆಯಾಗಲೀ ಅಥವಾ ಮತ್ಯಾವುದೇ ಅಂಶ ಗಣನೆಗೆ ಬರುವುದಿಲ್ಲ.ಆದರೆ ಕೊಡುಗೆದಾರ ನೀಡುತ್ತಿರುವ ಮಾಹಿತಿಗಳು ನಂಬಲರ್ಹವಾದ ಮೂಲಗಳ ಮೂಲಕ ಖಚಿತಗೊಳ್ಳಲ್ಪಡಲು ಸಮರ್ಥವಾಗಿರಬೇಕು.

ಏರ್‌ಸೆಲ್‌ ಬಳಕೆದಾರರು ತನ್ನ ಮೊಬೈಲ್‌ನಲ್ಲಿ ಉಚಿತವಾಗಿ ವಿಕಿಪಿಡೀಯ ಮಾಹಿತಿಯನ್ನು ಓದಬಹುದು.ಪ್ರಮುಖ ಟೆಲಿಕಾಂ ಸಂಸ್ಥೆ ಏರ್ ಸೆಲ್ ಜೊತೆ ಆನ್ ಲೈನ್ ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ ಒಪ್ಪಂದ ಮಾಡಿಕೊಂಡಿದ್ದು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.ಇಂಗ್ಲೀಷ್, ಹಿಂದಿ, ತಮಿಳು, ಕನ್ನಡ ಸೇರಿದಂತೆ 17ಕ್ಕೂ ಅಧಿಕ ಇಂಡಿಕ್ ಮಾದರಿ ಭಾಷೆಗಳಲ್ಲಿ ವಿಕಿಪೀಡಿಯ ಉಚಿತವಾಗಿ ಲಭ್ಯವಾಗಲಿದೆ. ಹೆಚ್ಚಿನ ವಿವರಗಳನ್ನು ವಿಕಿಪೀಡಿಯ ಬ್ಲಾಗ್‌‌ನಲ್ಲಿ ಓದಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot