ChatGPT ಬಳಕೆಯಿಂದ ಏನೆಲ್ಲಾ ಲಾಭ? ಏನೆಲ್ಲಾ ನಷ್ಟ?
ಮನುಷ್ಯನಿಗೆ ಸರಿಸಮನಾಗಿ ಆಲೋಚನೆ ಮಾಡಬಲ್ಲ ತಂತ್ರಜ್ಞಾನ ಬಂದರೆ ಏನಾಗಬಹುದು? ಇದು ಸಾಧ್ಯನಾ? ಮನುಷ್ಯನಂತೆ ಕಾರ್ಯನಿರ್ವಹಿಸಬಲ್ಲ, ಮನುಷ್ಯನಿಗಿಂತ ತುಂಬಾ ಚುರುಕಾಗಿ ಆಲೋಚನೆ ಮಾಡಬಲ್ಲ ತಂತ್ರಜ್ಞಾನ ಅಭಿವೃದ್ಧಿಯಾದರೆ ಏನೆಲ್ಲಾ ಉಪಯೋಗ? ಇದರಿಂದಾ ಏನೆಲ್ಲಾ ನಷ್ಟ ಸೃಷ್ಟಿಯಾಗಲಿದೆ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮ ನಿಮ್ಮ ನಡುವೆ ಬರೋದು ಸಹಜ. ಇದೀಗ ಇಡೀ ವಿಶ್ವವೇ ಇಂತಹ ಪ್ರಶ್ನೆಯನ್ನು ಕೇಳಿಕೊಳ್ಳುವ ಮಟ್ಟಿಗೆ ChatGPT AI ತಂತ್ರಜ್ಞಾನ ಮೂಡಿಸಿದೆ.

ಹೌದು, ಒಪನ್AI ಅಭಿವದ್ಧಿ ಪಡಿಸಿರುವ ChatGPT ಸಾಕಷ್ಟು ಸದ್ದು ಮಾಡ್ತಿದೆ. ಜಾಗತಿಕವಾಗಿ ಟೆಕ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮನುಷ್ಯನಿಗೆ ಸರಿಸಮನಾಗಿ ಯೋಚಿಸಬಲ್ಲ ತನ್ನ ಅಸಾದಾರಣ ಸಾಮರ್ಥ್ಯದ ಮೂಲಕ ಮನುಷ್ಯನ ಉದ್ಯೋಗಕ್ಕೆ ಕುತ್ತು ತರಲಿದೆ ಎನ್ನುವ ಮಟ್ಟಿಗೆ ಚರ್ಚೆ ಯಾಗ್ತಿದೆ. ಅಷ್ಟಕ್ಕೂ ChatGPTಯ ಸಾಮರ್ಥ್ಯ ಏನು? ಇದು ಹೇಗೆ ಕಾರ್ಯನಿರ್ವಹಿಸಲಿದೆ? ಸರ್ಚ್ ಇಂಜಿನ್ ದೈತ್ಯ ಗೂಗಲ್ ಕೂಡ ChatGPT ಕಂಡು ಹೆದರುತ್ತಿರುವುದು ಏಕೆ? ಇದೆಲ್ಲದರ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏನಿದು ChatGPT? ಇದರ ಕಾರ್ಯನಿರ್ವಹಣೆ ಹೇಗೆ?
ChatGPT ಅನ್ನೊದು ಒಂದು ರೀತಿಯ AI ಚಾಟ್‌ಬಾಟ್ ಆಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಒಪನ್AI (OpenAI) ಸಂಸ್ಥೆ ಪರಿಚಯಿಸಿದೆ. ಇದು ಮನುಷ್ಯನ ಅಲೋಚನೆಗೆ ಸರಿಸಮನಾಗಿ ಯೋಚನೆ ಮಾಡಲಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ನೀವು ಪ್ರಶ್ನೆಗಳನ್ನು ಕೇಳಿದರೆ ತಾನೇ ಯೋಚಿಸಿ ಉತ್ತರವನ್ನು ನೀಡಲಿದೆ. ಇದಕ್ಕಾಗಿ ಡೇಟಾ ಸೆಟ್‌ಗಳ ಮೂಲಕ ತರಬೇತಿಯನ್ನು ಕೂಡ ನೀಡಲಾಗಿದೆ ಎಂದು ವರದಿಯಾಗಿದೆ.

ChatGPTಯ ಕಾರ್ಯನಿರ್ವಹಣೆಯಿಂದ ಏನೆಲ್ಲಾ ಲಾಭ?
ChatGPT AI ಆಧಾರಿತ ತಂತ್ರಜ್ಞಾನವಾಗಿದ್ದು, ನೀವು ಕೇಳಿದ ಪ್ರಶ್ನೆಗಳಿಗೆ ತನ್ನದೇ ಅದ ಆಲೋಚನೆಯ ಉತ್ತರಗಳನ್ನು ನೀಡಲಿದೆ. ಅಲ್ಲದೆ ಇದು ನೀಡುವ ಉತ್ತರಗಳು ಸಾಕಷ್ಟು ನಿಖರವಾಗಿವೆ ಎಂದು ಹೇಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಇದು ಉಪಯೋಗಕ್ಕೆ ಬರಲಿದೆ. ಅಲ್ಲದೆ ಗೂಗಲ್‌ಗೆ ಪ್ರತಿಸ್ಫರ್ಧಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಕೂಡ ಇದೆ.

ChatGPT ಅಭಿವೃದ್ಧಿಯಾದಂತೆ ಮನುಷ್ಯನ ಉದ್ಯೋಗಕ್ಕೆ ಕತ್ತರಿ ಬೀಳಲಿದೆಯಾ?
ChatGPTಯ ಕಾರ್ಯ ವೈಖರಿಯ ಬಗ್ಗೆ ವರದಿಯಾಗ್ತಿದ್ದ ಹಾಗೇ ಇಡೀ ವಿಶ್ವದಲ್ಲಿಯೇ ಕೇಳಿಬರುತ್ತಿರುವ ಕೂಡ ಇದರಿಂದ ಮುಂದಿನ ದಿನಗಳಲ್ಲಿ ಮನುಷ್ಯನ ಉದ್ಯೋಗ ಕಡಿತವಾಗಲಿದೆಯಾ ಅನ್ನೊದು. ನಿಜ ಮನುಷ್ಯನಿಗೆ ಸರಿಸಮನಾಗಿ ಯೋಚಿಸಬಲ್ಲ ತಂತ್ರಜ್ಞಾನ ಇರುವಾಗ ಮನುಷ್ಯನಿಗೆ ಕೆಲಸ ಇರುತ್ತದೆಯಾ ಅನ್ನೊ ಪ್ರಶ್ನೆ ಸಹಜವಾಗಿ ಮೂಡಲಿದೆ. ಆದರೆ ಪ್ರಸ್ತುತ ChatGPTಯ ಬಳಕೆಯಿಂದ ಮನುಷ್ಯನ ಉದ್ಯೋಗಕ್ಕೆ ಕತ್ತರಿ ಬೀಳುವುದಿಲ್ಲ ಎಂದು ಅಂದಾಜಿಸಲಾಗಿದೆ. ಆದರೆ ಇದು ಪರಿಪೂರ್ಣವಾಗಿ ಅಭಿವೃದ್ಧಿಯಾದ ನಂತರ ಇದರ ಪರಿಣಾಮ ಹೇಗೆ ಬೀರಲಿದೆ ಅನ್ನೊದನ್ನ ಹೇಳಬಹುದಾಗಿದೆ.
ChatGPT ಸದ್ಯ ಭಾಷಾ ಮಾದರಿಗಳು, ಕಸ್ಟಮರ್ ಸರ್ವಿಸ್, ಡೇಟಾ ಎಂಟ್ರಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮಾನವ ಉದ್ಯೋಗಗಳನ್ನು ಬದಲಾಯಿಸಬಲ್ಲ ಸಾಮರ್ಥ್ಯವನ್ನು ಇನ್ನು ಕೂಡ ವಿನ್ಯಾಸಗೊಳಿಸಲಾಗಿಲ್ಲ ಎಂದುವರದಿಯಾಗಿದೆ. ಬದಲಿಗೆ ಈ ತಂತ್ರಜ್ಞಾನವನ್ನು ಮನುಷ್ಯನಿಗೆ ಸಹಾಯವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಇದರ ನಡುವೆ ChatGPT ಅಮೆರಿಕದ ಕಾನೂನು ಶಾಲೆಯೊಂದರ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ಹೇಳಲಾಗಿದೆ.

ಕಾನೂನು ಕಾಲೇಜಿನಲ್ಲಿ ನೀಡಲಾದ ಬಹುಆಯ್ಕೆಯ ಪ್ರಶ್ನೆಗಳಿಗೆ ChatGPT ತಾನೇ ಆಲೋಚಿಸಿ ನಿಖರವಾದ ಉತ್ತರವನ್ನು ನೀಡಿದೆ. ಈ ಮೂಲಕ ಮನುಷ್ಯನಂತೆ ತಾನು ಸಹ ಕಾನೂನ ಪರೀಕ್ಷೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಇದಿಷ್ಟೇ ಅಲ್ಲ ಇನ್ನು ಹಲವು ಕ್ಷೇತ್ರಗಳಲ್ಲಿ ChatGPT ತನ್ನ ಪ್ರಭಾವ ಬೀರಲು ಪ್ರಾರಂಭಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ವಲಯದಲ್ಲಿ ಹೊಸದೊಂದು ಅಲೆ ಶುರುವಾಗುವ ಸಾಧ್ಯತೆಯಿದೆ. ಈ ಮೂಲಕ ಈ ವರ್ಷ ChatGPTಯ ವರ್ಷವಾಗಿ ಗುರುತಿಸಿಕೊಂಡರು ಅಚ್ಚರಿಯಿಲ್ಲ ಎಂದೇ ಹೇಳಬಹುದು.
ಮನುಷ್ಯನ ಆಲೋಚನೆ ಎಲ್ಲಿಯವರೆಗೆ ತಲುಪಿದೆ ಅನ್ನೊದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ChatGPT ಆಗಿದೆ. ತಂತ್ರಜ್ಞಾನ ಮನುಷ್ಯನಿಗೆ ಹಲುವ ಭಾರಿ ಉಪಯೋಗವನ್ನು ಮಾಡಲಿದೆ. ಅದೇ ರೀತಿ ನಷ್ಷವನ್ನು ಸಹ ಸೃಷ್ಟಿಸಲಿದೆ. ಆದರಿಂದ ChatGPT ಮಾನವ ಕುಲಕ್ಕೆ ಉಪಯುಕ್ತವಾಗಲಿದೆಯಾ? ಇಲ್ಲ ಕಂಟಕವಾಗಿ ಪರಿಣಮಿಸಲಿದೆಯಾ ಅನ್ನೊದನ್ನ ಕಾಲವೇ ಉತ್ತರಿಸಲಿದೆ.


Click it and Unblock the Notifications








