'ಡಿಜಿ ಲಾಕರ್' ಅನ್ನು ಪರಿಗಣಿಸಿ!..ಸಂಚಾರಿ ಪೊಲೀಸರಿಗೆ ಕಮಿಷನರ್ ನಿರ್ದೇಶನ!

|

ಡಿಜಿಟಲ್ ರೂಪದ ಸರ್ಕಾರದ ಅಧಿಕೃತ 'ಡಿಜಿ ಲಾಕರ್' ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಕೆಲ ಪೊಲೀಸರು ಡಿಜಿಲಾಕರ್‌ನಲ್ಲಿರುವ ದಾಖಲೆಗಳನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದನಂತರ, ಈ ನಿರ್ದೇಶನವನ್ನು ನೀಡಲಾಗಿದೆ. ಇನ್ಮುಂದೆ ಇಂತಹ ಯಾವುದೇ ತಪ್ಪುಗಳು ಆಗಬಾರದು ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ ಎಂದು ತಿಳಿದುಬಂದಿದೆ.

'ಡಿಜಿ ಲಾಕರ್' ಅನ್ನು ಪರಿಗಣಿಸಿ!..ಸಂಚಾರಿ ಪೊಲೀಸರಿಗೆ ಕಮಿಷನರ್ ನಿರ್ದೇಶನ!

ಹೌದು, 'ದಾಸರಹಳ್ಳಿ ಬಳಿ ನನ್ನ ಬೈಕ್ ತಡೆದಿದ್ದ ಪೊಲೀಸರು, ಡಿಜಿಲಾಕರ್‌ನಲ್ಲಿರುವ ದಾಖಲೆ ತೋರಿಸಿದರೂ ಒಪ್ಪಲಿಲ್ಲ. ಕೇಂದ್ರ ಸರ್ಕಾರವೇ ರೂಪಿಸಿರುವ ಡಿಜಿಲಾಕರ್ ವ್ಯವಸ್ಥೆ ಬಗ್ಗೆ ಪೊಲೀಸರಿಗೆ ತಿಳಿದಿಲ್ಲವೇ' ಎಂದು ಪ್ರಶ್ನಿಸಿ ಲಾಲ್ ಎಂಬುವವರು ಕಮಿಷನರ್ ಅಲೋಕ್ ಕುಮಾರ್ ಅವರಿಗೆ ಟ್ವಿಟ್ ಮೂಲಕ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಲೋಕ್ ಕುಮಾರ್ ಅವರು ಡಿಜಿಟಲ್ ರೂಪದ ಡಿಜಿ ಲಾಕರ್ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುವಂತೆ ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

'ಡಿಜಿ ಲಾಕರ್' ಎಂಬುದುದಾಖಲೆಗಳು ಮತ್ತು ಪ್ರಮಾಣ ಪತ್ರಗಳನ್ನು ಡಿಜಿಟಲ್ ರುಪದಲ್ಲಿ ಸಂಗ್ರಹಿಸುವ , ವಿತರಿಸುವ ಮತ್ತು ದೃಢೀಕರಿಸುವ ವ್ಯವಸ್ಥೆ ಯಾಗಿದ್ದು, ಇದನ್ನು ಕೇಂದ್ರಸರ್ಕಾರವೇ ಅಭಿವೃದ್ಧಿಪಡಿಸಿದೆ. ಇದನ್ನು ಕಾಗದರಹಿತ ಆಡಳಿತ ಪರಿಕಲ್ಪನೆಯಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಹಾಗಾದರೆ, 'ಡಿಜಿ ಲಾಕರ್' ವ್ಯವಸ್ಥೆಯನ್ನು ಬಳಸುವುದು ಹೇಗೆ?, ಡಿಜಿ ಲಾಕರ್' ವ್ಯವಸ್ಥೆಯಲ್ಲಿ ದಾಖಲೆಗಳನ್ನು ಸ್ಟೋರ್ ಮಾಡುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಡಿಜಿಲಾಕರ್?

ಏನಿದು ಡಿಜಿಲಾಕರ್?

ಸಾರಿಗೆ ಇಲಾಖೆಯು ವಾಹನ ಸವಾರರ ಸಹಾಯಕ್ಕೆ ಲಾಂಚ್ ಮಾಡಿರುವ ಹೊಸ ಯೋಜನೆಯೇ ಡಿಜಿ ಲಾಕರ್. ಕೋಟಿ ಸಂಖ್ಯೆಯಲ್ಲಿ ವಾಹನಗಳು ಮತ್ತು ವಾಹನ ಸವಾರರು ಈ ಡಿಜಿ ಲಾಕರ್ ಆಪ್ ಲಾಭವನ್ನು ಪಡೆಯಬಹುದಾಗಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು ಅದರ ಸಾಫ್ಟ್ ಕಾಪಿಯನ್ನು (ಡಿಜಿಟಲ್ ರೂಪ) ತೋರಿಸುವ ಆಪ್ ಇದಾಗಿದೆ.

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ವಾಹನದ ಮತ್ತು ಚಾಲನೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಆಪ್ ಇದಾಗಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಂಡರೆ ಓರ್ಜಿನಲ್ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ. ಮೊಬೈಲ್‌ ನಲ್ಲಿಯೇ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಪೊಲೀಸರು ಕೇಳಿದ ಸಂದರ್ಭದಲ್ಲಿ ಪ್ರದರ್ಶಿಸಬಹುದಾಗಿದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು

ರಿಜಿಸ್ಟರ್ ಮಾಡಿಕೊಳ್ಳಬೇಕು

ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಸ್ಮಾರ್ಟ್‌ಫೋನಿನಲ್ಲಿ ಇನ್ಸ್‌ಸ್ಟಾಲ್ ಮಾಡಬೇಕಾಗಿದೆ. ನಂತರ ಆಪ್ ತೆರೆದು ಮೊಬೈಲ್‌ ಸಂಖ್ಯೆ ಬಳಸಿ ಲಾಗ್‌- ಇನ್‌ ಆಗಬೇಕು. ನಂತರ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್‌ ಮಾಡಬಹುದಾಗಿದೆ.

ದಾಖಲೆಗಳನ್ನು ಸ್ಟೋರ್ ಮಾಡುವುದು ಹೇಗೆ?

ದಾಖಲೆಗಳನ್ನು ಸ್ಟೋರ್ ಮಾಡುವುದು ಹೇಗೆ?

ಆಪ್‌ ಡೌನ್‌ಲೋಡ್ ಮಾಡಿದ ನಂತರ 12 ಅಂಕಿ ಆಧಾರ್ ನಂಬರ್ ಬಳಕೆ ಬಳಕೆ ಮಾಡಿ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ರಚಿಸಿ. ಬಳಿಕ ಇಶ್ಯೂಡ್ ಡಾಕ್ಯೂಮೆಂಟ್ಸ್ ಸರ್ಚ್ ಮಾಡಿ ರಿಜಿಸ್ಟ್ರೇಶನ್ ಲೈಸನ್ಸ್ ಅಥವಾ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಆಯ್ಕೆ ಮಾಡಿ. ಚಾಸೀ ನಂಬರ್, ರಿಜಿಸ್ಟ್ರೇಷನ್ ನಂಬರ್/ಲೈಸನ್ಸ್ ಇತರೆ ನಂಬರ್‌ಗಳನ್ನು ನಮೂದಿಸಿ. ಈ ಮೂಲಕ ಶಾಶ್ವತವಾಗಿ ಇಶ್ಯೂಡ್ ಡಾಕ್ಯೂಮೆಂಟ್ಸ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು.

ಡಿಜಿ ಲಾಕರ್ ಬಳಸುವುದು ಸುಲಭ

ಡಿಜಿ ಲಾಕರ್ ಬಳಸುವುದು ಸುಲಭ

ವಾಹನ ಸವಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Digilocker ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯತೆ ಇಲ್ಲ. ಇದೊಂದು ಉಚಿತ ಸೇವೆಯಾಗಿದೆ. ಸ್ಮಾರ್ಟ್‌ಫೋನ್‌ ಹೊಂದಿರುವವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ನೀವು ಬೇರೆ ಯಾರದ್ದರೂ ವಾಹನವನ್ನು ಓಡಿಸುತ್ತಿರುವ ಸಂಧರ್ಭದಲ್ಲಿ ಪೊಲೀಸರು ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಮಾಲೀಕರ ಡಾಕ್ಯುಮೆಂಟ್ ಸಂಖ್ಯೆಯನ್ನು ತಿಳಿಸಿದರೂ ಸಾಕು. ಆದರೆ ವಾಹನದ ಮಾಲೀಕರು ಡಿಜಿ ಲಾಕರ್ ಬಳಕೆ ಮಾಡಿಕೊಳ್ಳುತ್ತಿರಬೇಕು. ಬೇರೆಯವರ ಗಾಡಿ ಓಡಿಸಿದರು ಸಹ ಡಾಕ್ಯುಮೆಂಟ್ ಅವರ ಬಳಿ ಇರಬೇಕು.

ಆಪ್ ಉಪಯೋಗಗಳೇನು?

ಆಪ್ ಉಪಯೋಗಗಳೇನು?

ಈ ಆಪ್ ಬಳಕೆಯಿಂದಾಗಿ ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದ್ದು, ಓರ್ಜಿನಲ್ ದಾಖಲೆ ಕಳೆದುಹೋಗುವ ಭಯವಿಲ್ಲ, ಇದಲ್ಲದೇ ಇ-ಆಧಾರ್ ಡಿಜಿಲಾಕರ್​ನಲ್ಲೇ ಸಿಗಲಿದೆ. ಹೀಗಾಗಿ ಈ ಆಪ್ ಬಳಕೆಯೂ ಸಾಕಷ್ಟು ಸಹಾಯವನ್ನು ಮಾಡುತ್ತದೆ. ನೀವು ಈ ದಾಖಲೆಗಳನ್ನು ಭಾರತದೆಲ್ಲೆಡೆ ಉಪಯೋಗಿಸಬಹುದಾಗಿದೆ.

Best Mobiles in India

English summary
DigiLocker is Govt of India's platform for issuance & verification of documents & certificates!. Will direct the traffic cops to accept documents shown in Digilocker: Alok Kumar. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X