ಭಾರತದಲ್ಲಿ ನಾಳೆಯಿಂದ ಫೇಸ್‌ಬುಕ್‌, ಟ್ವಿಟರ್, ಕಾರ್ಯನಿರ್ವಹಿಸುವುದು ಡೌಟ್‌! ಯಾಕೆ?

|

ಇದು ಸೊಶೀಯಲ್‌ ಮೀಡಿಯಾ ಜಮಾನ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಸೊಶೀಯಲ್‌ ಮೀಡಿಯಾಗಳಲ್ಲಿ ಚರ್ಚೆ ಆಗುತ್ತಲೇ ಇರುತ್ತೆ. ಇನ್ನು ಭಾರತದಲ್ಲಿಕೂಡ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಹೆಚ್ಚಿನ ಜನಪ್ರಿಯತೆಯನ್ನೇ ಪಡೆದುಕೊಂಡಿವೆ. ಅದರಲ್ಲೂ ಸೊಶಿಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ಗಳು ತಮ್ಮದೇ ಆದ ಬಳಕೆದಾರರನ್ನು ಹೊಂದಿವೆ. ಆದರೆ ಇದೀಗ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌ ಭಾರತದಲ್ಲಿ ಬ್ಲಾಕ್‌ ಆಗಲಿದೆಯಾ ಅನ್ನೊ ಸುದ್ದಿ ಜೋರಾಗಿದೆ.

ಫೇಸ್‌ಬುಕ್

ಹೌದು, ಇನ್ನು ಎರಡು ದಿನಗಳಲ್ಲಿ ಭಾರತೀಯರು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ನಾಳೆಯಿಂದ ಬ್ಯಾನ್‌ ಆಗಲಿದೆಯಾ ಎಂಬ ಪ್ರಶ್ನೆ ಶುರುವಾಗಿದೆ? ಏಕೆಂದರೆ ಭಾರತ ಸರ್ಕಾರ ಈ ವರ್ಷದ ಆರಂಭದಲ್ಲಿ ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸಿತ್ತು. ಅಲ್ಲದೆ ಈ ಹೊಸ ರೂಲ್ಸ್‌ ಅನ್ನು ಜಾರಿಗೊಳಿಸಲು ಸೋಶಿಯಲ್ ಮೀಡಿಯಾಗಳಿಗೆ ಮೂರು ತಿಂಗಳ ಗಡುವು ನೀಡಿತ್ತು. ಇದೀಗ ಈ ಗಡುವು ಮುಗಿದಿದ್ದು, ಈ ನಿಯಮ ಜಾರಿಗೆ ತರುವಲ್ಲಿ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ವಿಫಲವಾಗಿವೆ. ಆದರಿಂದ ಭಾರತದಲ್ಲಿ ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದು ಡೌಟ್‌ ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿರಿ.

ತಂತ್ರಜ್ಞಾನ

ಈ ವರ್ಷದ ಆರಂಭದಲ್ಲಿ ಆಂದರೆ ಫೆಬ್ರವರಿ 25 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿ) ಹೊಸ ಐಟಿ ನಿಯಮಗಳನ್ನು ಪಾಲಿಸಲು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮೂರು ತಿಂಗಳ ಗಡುವನ್ನು ನೀಡಿತ್ತು. ಈ ನಿಯಮಗಳಲ್ಲಿ ಅನುಸರಣೆ ಅಧಿಕಾರಿಗಳ ನೇಮಕ, ಭಾರತದಲ್ಲಿ ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವುದು ಸೇರಿವೆ. ಇಲ್ಲಿಯವರೆಗೆ, ಒಬ್ಬರನ್ನು ಹೊರತುಪಡಿಸಿ ಯಾವುದೇ ಕಂಪನಿಯು ಅಂತಹ ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ ಎಂದು ವರದಿಯಾಗಿದೆ.

ಮೀಡಿಯಾ

ಇನ್ನು ಈ ನಿಯಮಗಳು ಇದೇ ಮೇ 26, 2021 ರಿಂದ ಜಾರಿಗೆ ಬರುತ್ತವೆ. ಸಾಮಾಜಿಕ ಮಾಧ್ಯಮ ಕಂಪನಿಗಳು ಇದನ್ನು ಪಾಲಿಸದಿದ್ದರೆ, ಅವರು ಮಧ್ಯವರ್ತಿಗಳಂತೆ ತಮ್ಮ ಸ್ಥಾನಮಾನ ಮತ್ತು ರಕ್ಷಣೆಯನ್ನು ಕಳೆದುಕೊಳ್ಳಬಹುದು. ಅಲ್ಲದೆ ಭಾರತದ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರಾಗಬಹುದು ಎಂದು ಮೂಲಗಳು ತಿಳಿಸಿವೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ತಡೆಯಲು ಪ್ರಯತ್ನಿಸುವ ಹೊಸ ಐಟಿ ನಿಯಮಗಳ ಅಡಿಯಲ್ಲಿ ಹೆಚ್ಚುವರಿ ಕಟ್ಟುಪಾಡುಗಳನ್ನು ವಿಧಿಸಿದೆ. ಇದರಿಂದಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯನ್ನು ವ್ಯಾಖ್ಯಾನಿಸಲು ಸರ್ಕಾರವು 50 ಲಕ್ಷ ನೋಂದಾಯಿತ ಬಳಕೆದಾರರನ್ನು ಮಿತಿ ನಿಗದಿಪಡಿಸಿದೆ.

ಕಂಪನಿಗಳು

ಹೊಸ ಐಟಿ ನಿಯಮದ ಪ್ರಕಾರ ವಿವಿಧ ಕ್ರಮಗಳ ನಡುವೆ, ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಖಾತೆಗಳನ್ನು ಪರಿಶೀಲಿಸಲು ಬಯಸುವವರಿಗೆ ಸ್ವಯಂಪ್ರೇರಿತ ಬಳಕೆದಾರ ಪರಿಶೀಲನಾ ಕಾರ್ಯವಿಧಾನವನ್ನು ನೀಡುವುದನ್ನು ನೋಡಬಹುದು ಎಂದು ನಿಯಮಗಳು ತಿಳಿಸಿವೆ. ಅಂತಹ ಬಳಕೆದಾರರಿಗೆ "ಅವರ ಖಾತೆಗಳನ್ನು ಪರಿಶೀಲಿಸಲು ಸೂಕ್ತವಾದ ಕಾರ್ಯವಿಧಾನವನ್ನು ಒದಗಿಸಲಾಗುವುದು ಮತ್ತು ಪರಿಶೀಲನೆಯ ಪ್ರದರ್ಶಿಸಬಹುದಾದ ಮತ್ತು ಗೋಚರಿಸುವ ಗುರುತು ಒದಗಿಸಲಾಗುತ್ತದೆ" ಎಂದು ನಿಯಮಗಳು ತಿಳಿಸಿವೆ. ಸದ್ಯ ಯಾವೊಂದು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್ ಕೂಡ ನಿಯಮ ಪಾಲನೆ ಮಾಡದೇ ಇರುವುದರಿಂದ ನಾಳೆಯಿಂದ ಫೇಸ್‌ಬುಕ್‌ ಸೇರಿದಂತೆ ಹಲವು ಸೊಶೀಯಲ್‌ ಮೀಡಿಯಾಗಳು ಬ್ಲಾಕ್‌ ಆಗುವ ಸಾಧ್ಯತೆ ಇದೆ.

Best Mobiles in India

English summary
A three-month deadline was given to social media platforms on February 25 to comply with the new IT regulations.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X