Subscribe to Gizbot

ಮೊದಲ 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಹುವಾವೆ: ಏರ್‌ಟೆಲ್‌ನೊಂದಿಗೆ ಹೊಂದಾಣಿಕೆ...!

Written By:

ದೇಶಿಯ ಮಾರುಕಟ್ಟೆಯಲ್ಲಿ 4G ಹವಾ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಹಲವು ಹೊಸ ತನಗಳಿಗೆ ಸಾಕ್ಷಿಯಾಗಿದ್ದ 4G ದೇಶಿಯ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಸಿಕ್ಕ ಅತೀ ವೇಗದ ನೆಟ್‌ವರ್ಕ್‌ ಆಗಿತ್ತು. ಇದೇ ಮಾದರಿಯಲ್ಲಿ ಶೀಘ್ರವೇ 5G ಸೇವೆಯೂ ಆರಂಭವಾಗಲಿದೆ ಎನ್ನುವ ಮಾಹಿತಿಯೊಂದು ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸದೊಂದು ಮಾಹಿತಿ ಲಭ್ಯವಾಗಿದೆ.

ಮೊದಲ 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಹುವಾವೆ: ಏರ್‌ಟೆಲ್‌ನೊಂದಿಗೆ ಹೊಂದಾಣಿಕೆ

ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್‌ಗಳಿಗೆ ಸೆಡ್ಡು ಹೊಡೆಯುತ್ತಿರುವ ಚೀನಾ ಮೂಲದ ಹುವಾವೆ ಕಂಪನಿಯೂ 2019ಕ್ಕೆ 5G ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈಗಾಗಲೇ 5G ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾಗಿರುವ ಹುವಾಮೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಕುರಿತಯ ಕಂಪನಿಯೂ ಅಧಿಕೃತವಾಗಿ ಮಾಹಿತಿಯನ್ನು ಸಹ ನೀಡಿದೆ ಎನ್ನಲಾಗಿದೆ.

ಹುವಾವೆ ಮಾರುಕಟ್ಟೆಯಲ್ಲಿಯೇ ಮೊದಲ 5G ಎಂಡ್ ಟು ಎಂಡ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಇದು ಮೆಟ್ 30 ಸ್ಮಾರ್ಟ್‌ಫೋನ್ ಎನ್ನಲಾಗಿದೆ. ಇತರೆ ಕಂಪನಿಗಳು ಇನ್ನು ಈ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿಲ್ಲ, ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿರುವ ಹುವಾವೆ, 5G ಮಾಕಟ್ಟೆಯಲ್ಲಿ ಹೊಸ ತನವನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಮೊದಲ 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಹುವಾವೆ: ಏರ್‌ಟೆಲ್‌ನೊಂದಿಗೆ ಹೊಂದಾಣಿಕೆ

ಹುವಾವೆ 5G ಸೇವೆಯ ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆದಿದ್ದು, 5G ತಂತ್ರಜ್ಞಾವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಏರ್‌ಟೆಲ್‌ನೊಂದಿಗೆ ಕೈ ಜೋಡಿಸಿದೆ, ದೇಶದಲ್ಲಿ ಮೊದಲ 5G ಆರಂಭಕ್ಕೆ ಏರ್‌ಟೆಲ್ ಈಗಾಗಲೇ ಹುವಾವೆಯೊಂದಿಗೆ ಸೇರಿ ತಯಾರಿಯನ್ನು ನಡೆಸುತ್ತಿದೆ.

What is Jio Cricket Gold Pass? How to Buy it

ಈಗಾಗಲೇ ಮಾರುಕಟ್ಟೆಯಲ್ಲಿ 5G ಹವಾ ಎದಿದ್ದು, ಹುವಾವೆ, ನೋಕಿಯಾ ಮತ್ತು ZTEಗಳು 5G ನೆಟ್‌ವರ್ಕ್‌ನಲ್ಲಿ ಸಾಕಷ್ಟು ತಲೆ ಕಡಿಸಿಕೊಂಡಿವೆ, ಈ ಹಿನ್ನಲೆಯಲ್ಲಿ ಭಾರತೀಯ ಟೆಲಿಕಾಂ ಕಂಪನಿಗಳು 5G ಅಭಿವೃದ್ಧಿಗಾಗಿ ಈ ಕಂಪನಿಗಳೊಂದಿಗೆ ಹೊಂದಣಿಯನ್ನು ಮಾಡಿಕೊಂಡಿವೆ ಎನ್ನಲಾಗಿದೆ.

English summary
Will Huawei Mate 30 be first 5G smartphone? Company hints 2019 release. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot