ಭಾರತಕ್ಕೆ ಯಾವಾಗ ಬರುತ್ತೆ ಗೂಗಲ್ ಟ್ಯಾಬ್ಲೆಟ್ ?

Posted By: Varun
ಭಾರತಕ್ಕೆ ಯಾವಾಗ ಬರುತ್ತೆ ಗೂಗಲ್ ಟ್ಯಾಬ್ಲೆಟ್ ?

ಕಳೆದ ವಾರ ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾದ ಗೂಗಲ್ ನೆಕ್ಸಸ್ 7 ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಟ್ಯಾಬ್ಲೆಟ್ ವಿಶ್ವದಾದ್ಯಂತ ಕ್ರೇಜ್ ಹುಟ್ಟಿಸಿದೆ. ಆಗಲೇ ಆನ್ಲೈನ್ ನಲ್ಲಿ ಬುಕಿಂಗ್ ಶುರುವಾಗಿದ್ದು, ಈ ದೇಶಗಳಲ್ಲಿ ಬುಕಿಂಗ್ ಮಾಡಿದವರಿಗೆ ಜುಲೈ ಎರಡನೆ ವಾರಕ್ಕೆ ಟ್ಯಾಬ್ಲೆಟ್ ಕೈ ಸೇರಲಿದೆ.

ದಿನಕ್ಕೊಂದು ಅಗ್ಗದ ಟ್ಯಾಬ್ಲೆಟ್ ಬಿಡುಗಡೆಯಾಗುತ್ತಿರುವ ಭಾರತದಲ್ಲಿ ಈ ಟ್ಯಾಬ್ಲೆಟ್ಯಾವಾಗ ಬರಲಿದೆ ಎಂದು ಹಲವಾರು ಓದುಗರು ಕೇಳಿದ್ದರು.

8 GB ಆಂತರಿಕ ಮೆಮೊರಿ ಇರುವ, ಆಂಡ್ರಾಯ್ಡ್ ನ ಲೇಟೆಸ್ಟ್ ತಂತ್ರಾಂಶ ಇರುವ ಮೊದಲನೇ ಟ್ಯಾಬ್ಲೆಟ್ ಇದಾಗಿದ್ದು, 11 ಸಾವಿರ ರೂಪಾಯಿಗೆ ಸಿಗುವುದರಿಂದ ಸಹಜವಾಗಿ ಇಲ್ಲಿನ ಗ್ರಾಹಕರಿಗೆ ಕುತೂಹಲ ಹೆಚ್ಚಿದೆ. ಗೂಗಲ್ ಕಂಪನಿಯ ಮೂಲಗಳ ಪ್ರಕಾರ ನೆಕ್ಸಸ್ 7 ಟ್ಯಾಬ್ಲೆಟ್ ಅನ್ನು ಸೆಪ್ಟೆಂಬರ್ ಮುಂಚೆ ಭಾರತದಲ್ಲಿ ಬಿಡುಗಡೆ ಮಾಡುವ ಯಾವುದೇ ಆಲೋಚನೆ ಗೂಗಲ್ ಗೆ ಇಲ್ಲವಂತೆ.

ಅದೂ ಅಲ್ಲದೆ ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾ ಗ್ರಾಹಕರಿಗೆ ಗೂಗಲ್ ಪ್ಲೇ (ಆಂಡ್ರಾಯ್ಡ್ ಮಾರ್ಕೆಟ್) ನಲ್ಲಿ ಆನ್ಲೈನ್ ಬುಕಿಂಗ್ ಅವಕಾಶವನ್ನು ಗೂಗಲ್ ಒದಗಿಸಿದ್ದು, ಭಾರತದಲ್ಲಿ ಹೇಗೆ ಮಾರುತ್ತೆ ಎನ್ನುವುದೇ ಪ್ರಶ್ನೆಯಾಗಿದೆ.

ಹೀಗಾಗಿ ನಾವು ಗೂಗಲ್ ಟ್ಯಾಬ್ಲೆಟ್ ಖರೀದಿಸಲು ಗಣೇಶ ಹಬ್ಬದ ವರೆಗೂ ಕಾಯಲೇ ಬೇಕು.

ಗೂಗಲ್ ಟ್ಯಾಬ್ಲೆಟ್ ನ ವಿಶೇಷತೆಗಳನ್ನು ತಿಳಿದುಕೊಳ್ಳಲು ಓದಿ

ಗೂಗಲ್ ಟ್ಯಾಬ್ಲೆಟ್ ನ ಫೀಚರ್ ಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot