ಭಾರತದ ಆಪಲ್ ಯೋಜನೆಗೆ ಟ್ರಂಪ್ ಸುಂಕದ ಆಘಾತ!..ಐಫೋನ್ ಬೆಲೆ ಏರಿಕೆ?
ಡೊನಾಲ್ಡ್ ಟ್ರಂಪ್ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ನಿರ್ಧಾರವು ಭಾರತದ ವಿವಿಧ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತು ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ನಿರ್ಧಾರವು ಆಗಸ್ಟ್ 1 ರಿಂದ ಜಾರಿಗೆ ಬರಲಿದ್ದು, ಭಾರತದಲ್ಲಿ ಐಫೋನ್ ಉತ್ಪಾದನೆಯನ್ನು ವಿಸ್ತರಿಸುವ ಮತ್ತು ಅಮೆರಿಕ ಮಾರುಕಟ್ಟೆಗೆ ಎಲೆಕ್ಟ್ರಾನಿಕ್ಸ್ ರಫ್ತುಗಳನ್ನು ಹೆಚ್ಚಿಸುವ ಆಪಲ್‌ನ ಯೋಜನೆಗಳಿಗೆ ಅಡ್ಡಿಯಾಗಬಹುದು. ಇಷ್ಟೇ ಅಲ್ಲದೆ, ಈ ಸುಂಕಗಳು ಭಾರತದಲ್ಲಿ ಆಪಲ್‌ನ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಅಮೆರಿಕದ ಗ್ರಾಹಕರಿಗೆ ಐಫೋನ್‌ಗಳ ಬೆಲೆಯನ್ನು ಹೆಚ್ಚಿಸಬಹುದು ಎಂದು ಉದ್ಯಮ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ
ಸದ್ಯ, ಭಾರತವು ಅಮೆರಿಕದ ಸ್ಮಾರ್ಟ್‌ಫೋನ್ ಆಮದುಗಳಲ್ಲಿ ಸುಮಾರು ಶೇ. 36ರಷ್ಟು ಪಾಲನ್ನು ಹೊಂದಿದೆ. ಇದು ಆಪಲ್‌ನ ಭಾರತದಲ್ಲಿನ ಹೆಚ್ಚುತ್ತಿರುವ ಉತ್ಪಾದನಾ ಚಟುವಟಿಕೆಗಳಿಂದಾಗಿ ಸಾಧ್ಯವಾಗಿದೆ. ಒಂದು ವೇಳೆ ಈ ಸುಂಕದ ಆದೇಶವು ಪರಿಣಾಮಕಾರಿಯಾಗಿ ಜಾರಿಯಾದರೆ ಭಾರತದಿಂದ ಅಮೆರಿಕಕ್ಕೆ ಐಫೋನ್‌ಗಳನ್ನು ರಫ್ತು ಮಾಡಲು ಆಪಲ್ ಹೆಚ್ಚಿನ ಸುಂಕಗಳನ್ನು ಪಾವತಿಸಬೇಕಾಗುತ್ತದೆ, ಈ ವೆಚ್ಚವನ್ನು ಅದು ಅಲ್ಲಿನ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿದೆ.
ವಿಶ್ಲೇಷಕರ ಪ್ರಕಾರ, ಚೀನಾದ ರಫ್ತು ನಿಯಂತ್ರಣಗಳು ಜಾಗತಿಕವಾಗಿ ಉತ್ಪಾದನಾ ಸವಾಲುಗಳನ್ನು ಸೃಷ್ಟಿಸಿದರೂ, ಅಮೆರಿಕದ ಸುಂಕಗಳು ಭಾರತದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ಸುಂಕಗಳು ಭಾರತವನ್ನು ಐಫೋನ್‌ಗಳ ಪ್ರಮುಖ ರಫ್ತು ಕೇಂದ್ರವನ್ನಾಗಿ ಮಾಡುವ ಆಪಲ್‌ನ ಯೋಜನೆಗಳಿಗೆ ಹೊಡೆತ ನೀಡುತ್ತವೆ ಎಂದು ಐಡಿಸಿ ಇಂಡಿಯಾ, ದಕ್ಷಿಣ ಏಷ್ಯಾ ಮತ್ತು ಎಎನ್‌ಝಡ್‌ನ ಸಾಧನಗಳ ಸಂಶೋಧನೆಯ ಸಹಾಯಕ ಉಪಾಧ್ಯಕ್ಷ ನವಕೇಂದ್ರ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಪಲ್‌ನ ಜಾಗತಿಕ ಐಫೋನ್ ಸಾಗಣೆಯಲ್ಲಿ ಅಮೆರಿಕ ಸುಮಾರು ಶೇ. 25ರಷ್ಟು ಪಾಲನ್ನು ಹೊಂದಿದೆ. ಇದು ವಾರ್ಷಿಕವಾಗಿ ಸುಮಾರು 60 ಮಿಲಿಯನ್ ಯುನಿಟ್‌ಗಳಷ್ಟಾಗುತ್ತದೆ. ಭಾರತದಲ್ಲಿ ಜೋಡಿಸಲಾದ ಸಾಧನಗಳಿಂದ ಅಮೆರಿಕದಲ್ಲಿ ಐಫೋನ್ ಬೇಡಿಕೆಯನ್ನು ಪೂರೈಸಲು ಗಮನಾರ್ಹ ಉತ್ಪಾದನಾ ವಿಸ್ತರಣೆ ಅಗತ್ಯವಿದ್ದು, ಹೊಸ ಸುಂಕಗಳು ಇದನ್ನು ನೇರವಾಗಿ ಬಾಧಿಸುತ್ತವೆ. ಆಪಲ್ 2025-26ರ ವೇಳೆಗೆ ಐಫೋನ್ ಉತ್ಪಾದನೆಯನ್ನು ಸುಮಾರು 60 ಮಿಲಿಯನ್ ಯುನಿಟ್‌ಗಳಿಗೆ ಹೆಚ್ಚಿಸಲು ಯೋಜಿಸುತ್ತಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಉತ್ಪಾದಿಸಿದ 35-40 ಮಿಲಿಯನ್ ಯುನಿಟ್‌ಗಳಿಂದ ಗಣನೀಯ ಹೆಚ್ಚಳವಾಗಿದೆ. ಆಪಲ್ ಸಿಇಒ ಟಿಮ್ ಕುಕ್ ಘೋಷಿಸಿದಂತೆ, ಏಪ್ರಿಲ್ ಮತ್ತು ಜೂನ್ ನಡುವೆ ಅಮೆರಿಕದಲ್ಲಿ ಮಾರಾಟವಾದ ಎಲ್ಲಾ ಐಫೋನ್‌ಗಳನ್ನು ಭಾರತದಿಂದ ರವಾನಿಸಲಾಗಿದ್ದು, ಇವುಗಳನ್ನು ತಮಿಳುನಾಡಿನಲ್ಲಿರುವ ಫಾಕ್ಸ್‌ಕಾನ್ ಘಟಕದಲ್ಲಿ ಜೋಡಿಸಲಾಗುತ್ತದೆ.
ಸೈಬರ್‌ಮೀಡಿಯಾ ರಿಸರ್ಚ್‌ನ ಪ್ರಭು ರಾಮ್ ಪ್ರಕಾರ, ಹೊಸ ಯುಎಸ್ ಆಮದು ಸುಂಕಗಳು ಅಲ್ಪಾವಧಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ. ಆಪಲ್‌ಗೆ, ಭಾರತದಲ್ಲಿ ಜೋಡಿಸಲಾದ ಐಫೋನ್‌ಗಳ ಮೇಲಿನ ಹೆಚ್ಚಿದ ವೆಚ್ಚಗಳು ಬೇಡಿಕೆಯನ್ನು ಕಡಿಮೆ ಮಾಡಬಹುದು ಮತ್ತು ಪೂರೈಕೆ ಸರಪಳಿಯ ಮರು-ನಿರ್ಧಾರಕ್ಕೆ ಕಾರಣವಾಗಬಹುದು. ಅಮೆರಿಕ ಮೂಲದ ಉತ್ಪಾದನೆಯತ್ತ ಬದಲಾವಣೆಗಳು ನಡೆಯುತ್ತಿದೆಯಾದರೂ, ಭಾರತವು ಆಪಲ್‌ನ ಜಾಗತಿಕ ಕಾರ್ಯತಂತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಚೀನಾದ ರಫ್ತು ನಿರ್ಬಂಧಗಳು ಪ್ರಮುಖ ವಸ್ತುಗಳು ಮತ್ತು ಘಟಕಗಳಿಗೆ ಪ್ರವೇಶವನ್ನು ಸೀಮಿತಗೊಳಿಸುವ ಮೂಲಕ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಪ್ರಗತಿಯನ್ನು ನಿಧಾನಗೊಳಿಸಬಹುದು ಎಂದು ರಾಮ್ ಎಚ್ಚರಿಸಿದ್ದಾರೆ. ಭಾರತವು ತನ್ನ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ದೃಢವಾದ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಇನ್ನು ಅಮೆರಿಕಾದ ಸುಂಕ ರಚನೆಯ ಬಗ್ಗೆ ಉದ್ಯಮದಲ್ಲಿ ಗೊಂದಲವಿದೆ. ಅಸ್ತಿತ್ವದಲ್ಲಿರುವ ಶೇ. 10ರ ಮೂಲ ಸುಂಕದ ಜೊತೆಗೆ ಈ ಶೇ. 25ರ ಸುಂಕವನ್ನು ವಿಧಿಸಲಾಗುವುದೇ ಎಂಬ ಸ್ಪಷ್ಟತೆ ಇಲ್ಲ. ಎಲ್ಸಿನಾದ ಪ್ರಧಾನ ಕಾರ್ಯದರ್ಶಿ ರಾಜೂ ಗೋಯೆಲ್ ಪ್ರಕಾರ, ಶೇ. 25ರ ದರವು ಮೂಲ ಸುಂಕದ ಮೇಲೆ ಹೆಚ್ಚುವರಿ ಶೇ. 15ರ ಹೆಚ್ಚಳವನ್ನು ಒಳಗೊಂಡಿದೆ. "ಆಮದು ಸುಂಕದಲ್ಲಿ ಶೇ. 15ರಷ್ಟು ಹೆಚ್ಚಳವು ನಮ್ಮ ಎಲೆಕ್ಟ್ರಾನಿಕ್ಸ್ ರಫ್ತುಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ, ಅದರಲ್ಲಿ ಪ್ರಮುಖ ಪಾಲು ಮೊಬೈಲ್‌ಗಳಾಗಿವೆ. ಅಲ್ಲದೆ, ದೂರಸಂಪರ್ಕ, ಆಟೋ, ಗ್ರಾಹಕ ಉಪಕರಣಗಳು ಮತ್ತು ಕೆಲವು ಘಟಕಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದ್ದಾರೆ. ಪರ್ಯಾಯ ಮೂಲಗಳನ್ನು ಅಭಿವೃದ್ಧಿಪಡಿಸುವವರೆಗೆ, ಚೀನಾದ ಆಕ್ರಮಣಕಾರಿ ಕ್ರಮಗಳು ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಬಹುದು ಮತ್ತು ಅಲ್ಪಾವಧಿಯಲ್ಲಿ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಬಹುದು ಎಂದು ಗೋಯೆಲ್ ಎಚ್ಚರಿಸಿದ್ದಾರೆ.
IESA ಮತ್ತು SEMI ಇಂಡಿಯಾದ ಅಧ್ಯಕ್ಷ ಅಶೋಕ್ ಚಂದಕ್ ಅವರು, ಜಾಗತಿಕ ಎಲೆಕ್ಟ್ರಾನಿಕ್ಸ್ ಭೂದೃಶ್ಯದಲ್ಲಿ ಭಾರತದ ಸ್ಥಾನದ ಮೇಲೆ ಈ ನಿರ್ಧಾರದ ಪರಿಣಾಮಗಳನ್ನು ವಿವರಿಸಿದ್ದಾರೆ. "ಬೇಸ್‌ಲೈನ್ ಶೇ. 10ರ ಬದಲಿಗೆ ಶೇ. 25ರ ಸುಂಕವನ್ನು ವಿಧಿಸಿದರೆ, ಇತರ ಏಷ್ಯಾದ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಯಾವುದೇ ಪ್ರಮುಖ ಪ್ರಯೋಜನವಿರುವುದಿಲ್ಲ." ಆದಾಗ್ಯೂ, ಇದು ಭಾರತದ ಎಲೆಕ್ಟ್ರಾನಿಕ್ಸ್ ವಲಯಕ್ಕೆ ರಫ್ತು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಲು, ದೇಶೀಯ ಮಾರುಕಟ್ಟೆಗಳನ್ನು ಬಲಪಡಿಸಲು, ಬ್ರ್ಯಾಂಡ್‌ಗಳು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸುಂಕ-ಸೂಕ್ಷ್ಮ ರಫ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಭಾರತವು ದೇಶೀಯವಾಗಿ ಸೆಮಿಕಂಡಕ್ಟರ್‌ಗಳನ್ನು ತಯಾರಿಸುವುದಿಲ್ಲವಾದ್ದರಿಂದ, ಇತ್ತೀಚಿನ ನೀತಿ ಬದಲಾವಣೆಗಳಿಂದ ತಕ್ಷಣದ ಪರಿಣಾಮವನ್ನು ತಪ್ಪಿಸಬಹುದು. ಆದರೆ ದೀರ್ಘಾವಧಿಯ ಸ್ಪರ್ಧಾತ್ಮಕತೆಗೆ ಚೀನಾದ ಪ್ರಭಾವದಿಂದ ಹೊರಬರುವುದು ಅಗತ್ಯ ಎಂದು ಚಂದಕ್ ಚಂದಕ್ ಅವರು ಹೇಳಿದ್ದಾರೆ.ಈ ಸುಂಕಗಳ ಘೋಷಣೆಯು ಭಾರತದ ಆರ್ಥಿಕತೆಗೆ ಯಾವ ರೀತಿಯ ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನೀವು ಭಾವಿಸುತ್ತೀರಿ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








