ಭವಿಷ್ಯದಲ್ಲಿ ಬರುವ ಈ ಸ್ಮಾರ್ಟ್‌ಪೋನ್ ಬಗ್ಗೆ ವಿಜ್ಞಾನಿಗಳು ಹೇಳಿರುವುದೇ ವಿಚಿತ್ರ!
ಮುಂದಿನ ವರ್ಷದ ವೇಳೆಗೆ ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿಗೆ ಆಶ್ಚರ್ಯಪಟ್ಟವರೆಷ್ಟೋ. ಆದರೆ, ಇದಕ್ಕಿಂತಲೂ ವಿಚಿತ್ರವಾದ ಸ್ಮಾರ್ಟ್‌ಫೋನ್ ಒಂದರ ಸುದ್ದಿಯನ್ನು ನೀವು ನಾವು ನಂಬಲೂ ಸಾಧ್ಯವಿಲ್ಲ. ಏಕೆಂದರೆ, ಭವಿಷ್ಯದಲ್ಲಿ ಬರುವಂತಹ ಸ್ಮಾರ್ಟ್‌ಪೋನ್ ಒಂದರ ಬಗ್ಗೆ ವಿಜ್ಞಾನಿಗಳು ಹೇಳಿರುವುದೇ ನಂಬಲಾಗದ ವಿಚಿತ್ರ!
ಹೌದು, ಇಂತಹದೊಂದು ಸುದ್ದಿಯನ್ನು ನೀವು ಸುಳ್ಳು ಸುದ್ದಿ ಎಂದುಕೊಳ್ಳಬಹುದು. ಆದರೆ,ವಿಜ್ಞಾನಿಗಳು ಹೇಳಿರುವಂತೆ, ಇನ್ನು ಕೆಲವೇ ವರ್ಷಗಳಲ್ಲಿ ಒಂದು ವೇಳೆ ಸ್ಕ್ರೀನ್ ಒಡೆದರೂ ತಾನೇ ತಾನಾಗಿ ರಿಪೇರಿಯಾಗೋ ಸ್ಮಾರ್ಟ್‌ಫೋನ್ ಒಂದು ಭವಿಷ್ಯದಲ್ಲಿ ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿವೆಯಂತೆ. ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎನ್ನುವಂತೆ ಈ ಆವಿಷ್ಕಾರ ಬೆಳಕಿಗೆ ಬಂದಿದೆಯಂತೆ.!

ಥಿಯೋರಿಯಾ ಎನ್ನುವ ಒಂದು ವಸ್ತು ಇದ್ದು, ಇದರ ಅಣುಗಳು ಒಡೆದು ಹೋದಾಗ, ಸ್ವಲ್ಪ ಒತ್ತಡ ಹೇರಿದರೆ ತಾನೇ ತಾನಾಗಿ ರಿಪೇರಿಯಾಗಿ ಮೊದಲಿದ್ದ ಆಕಾರಕ್ಕೆ ಬರುತ್ತದೆ ಎಂದು ಟೋಕಿಯೋ ವಿವಿ ಪ್ರೊಫೆಸರ್ ಟಕುಜೋ ಐಡಾ ಕಂಡುಕೊಂಡಿದ್ದಾರೆ. ಇದೇ ರೀತಿ ಕ್ಯಾಲಿಫೋರ್ನಿಯಾ ವಿವಿ ಕೂಡ ಹೊಸ ಸ್ಮಾರ್ಟ್‌ಫೋನ್ ರೆಡಿ ಮಾಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ವಿವಿ ಸಂಶೋಧಕರು ತಾನೇ ತಾನಾಗಿ ರಿಪೇರಿಯಾಗೋ ಸರ್ಕಿಟ್ ಸ್ಮಾರ್ಟ್‌ಫೋನ್ ಕಂಡು ಹಿಡಿದಿದ್ದಾರೆ. ಈ ಸ್ಮಾರ್ಟ್ಫೋನ್ನ ಸ್ಕ್ರೀನ್ ಒಡೆದರೆ, ಒಳಗಿರೋ ಸರ್ಕಿಟ್ಗಳು ಸ್ಕ್ರೀನ್ ರಿಪೇರಿ ಮಾಡೋ ಸಾಮರ್ಥ್ಯ ಹೊಂದಿದೆ. ಹೊಸ ಬಗೆಯ ಪಾಲಿಮರ್‌ಗಳಿಂದ ತಯಾರಾದ ಫೋನ್ ತಾನೇ ತಾನಾಗಿ ಸ್ಕ್ರ್ಯಾಚ್, ಕ್ರ್ಯಾಕ್ಗಳನ್ನು ರಿಪೇರಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಇದು ಕೂಡ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಲ್ಲಿ ಮಾತ್ರ ಪರೀಕ್ಷೆ ಮಾಡಿದ್ದಾರೆ.ಈಗ ಇಂತದ್ದೊಂದು ತಂತ್ರಜ್ಞಾನವುಳ್ಳ ಸ್ಮಾರ್ಟ್‌ಫೋನ್ ಕಂಡು ಹಿಡಿಯಲು ಮೋಟೋರೋಲಾ, ಸ್ಯಾಮ್‌ಸಂಗ್ ಮುಂದಾಗಿವೆ. ಇದಕ್ಕಾಗಿ ಈ ವರ್ಷದ ಆರಂಭದಲ್ಲಿಯೇ ಪೇಟೆಂಟ್ಗೆ ಅಪ್ಲೈ ಮಾಡಿವೆ ಎಂದರೆ ಭವಿಷ್ಯದಲ್ಲಿ ಇನ್ನೇನನ್ನು ನೋಡಬೇಕೊ.!

ಭವಿಷ್ಯದ ಸ್ಮಾರ್ಟ್‌ಪೋನ್‌ಗಳು ಹೀಗೆಲ್ಲಾ ಇರುತ್ತವಂತೆ!!
ಈ 10 ರಿಂದ 20 ವರ್ಷಗಳ ಹಿಂದೆ ಮೊಬೈಲ್‌ಗಳನ್ನೇ ಆಶ್ಚರ್ಯವಾಗಿ ನೋಡುತ್ತಿದ್ದ ಪ್ರತಿಯೊರ್ವರು ಇಂದು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ ಸಮಯದಲ್ಲಿ ಮೊಬೈಲ್ ತಂತ್ರಜ್ಞಾನ ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ. ಮುಂದಿನ ಕೇವಲ ಹತ್ತು ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಪ್ರಪಂಚವು ಯಾರು ಊಹಿಸಲಾಗದಷ್ಟು ಬದಲಾಗುತ್ತದೆ ಎನ್ನುತ್ತಿದೆ ಟೆಕ್ ಪ್ರಪಂಚ.!
ಹೌದು, ಕೃತಕ ಬುದ್ದಿ ಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಸ್ಮಾರ್ಟ್‌ಫೋನ್ ಅನ್ನು ಆವರಿಸಿಕೊಂಡಿರುತ್ತವಂತೆ. ಕಂಪ್ಯೂಟರ್ ಬಳಕೆಯನ್ನೇ ಮುಗಿಸುವಷ್ಟು ತಂತ್ರಜ್ಞಾನವನ್ನು ಭವಿಷ್ಯದ ಸ್ಮಾರ್ಟ್‌ಫೋನ್‌ಗಳು ಹೊಂದಿರುತ್ತವಂತೆ. ಇದಕ್ಕೆ ಪೂರಕವಾಗಿ, ಇಂಟರ್‌ನೆಟ್ ಪ್ರಪಂಚ ಕೂಡ ಮಿಂಚಿನಂತೆ ಬದಲಾಗಿಬಿಡುತ್ತದೆ ಎಂದು ತಂತ್ರಜ್ಞಾನ ಪ್ರಪಂಚ ಊಹಿಸಿದೆ.
ನಾವು ಈಗ ನೋಡುತ್ತಿರುವ ಸ್ಮಾರ್ಟ್‌ಫೋನ್‌ಗಳು ಇನ್ನು ಹತ್ತು ವರ್ಷಗಳಲ್ಲಿ ಮೂಲೆಗೆ ಸೇರುತ್ತವೆ ಎಂದು ತಂತ್ರಜ್ಞಾನ ಪ್ರಪಂಚದ ದಿಗ್ಗಜರು ಹೇಳುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಭವಿಷ್ಯದ ಸ್ಮಾರ್ಟ್‌ಪೋನ್‌ಗಳು ಹೇಗೆ ಬದಲಾಗಬಹುದು? ಏನೆಲ್ಲಾ ತಂತ್ರಜ್ಞಾನಗಳನ್ನು ಹೊಂದಬಹುದು ಎಂದು ತಂತ್ರಜ್ಞಾನ ಪ್ರಪಂಚ ಊಹಿಸಿರುವುದನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.!

ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!
ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನದ ಬಗ್ಗೆ ಈಗಾಗಲೇ ಅಭಿವೃದ್ದಿ ನಡೆಯುತ್ತಿದೆ. ಎಲ್‌ಜಿ, ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಸ್ವಲ್ಪಮಟ್ಟಿನ ಯಶಸ್ಸನ್ನು ಸಹ ಈ ತಂತ್ರಜ್ಞಾನ ಪಡೆದುಕೊಂಡಿರುವುದು ಭವಿಷ್ಯದಲ್ಲಿ ಮಡುಚಬಹುದಾದ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ಆಸೆಯನ್ನು ಹೊತ್ತಿದೆ.

ಪಾರದರ್ಶಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!
ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಬಹುಬೇಗ ಬದಲಾವಣೆ ಕಾಣುವ ತಂತ್ರಜ್ಞಾನ ಎಂದು ಹೇಳಲಾಗುತ್ತಿರುವ ಪಾರದರ್ಶಕ ಡಿಸ್‌ಪ್ಲೇ ಕಲ್ಪನೆಯೇ ಅತ್ಯದ್ಬುತವಾಗಿದೆ.ಸ್ಮಾರ್ಟ್‌ಫೋನ್ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಪಾರದರ್ಶಕವಾಗಿ ನೋಡಬಹುದಾದ ಪಾರದರ್ಶಕ ಡಿಸ್‌ಪ್ಲೇ ಇನ್ನೆನು ಕೆಲವೇ ವರ್ಷಗಳಲ್ಲಿ ಕಾಲಿಡುತ್ತದೆ ಎಂದರೆ ಆಶ್ಚರ್ಯವೇನಿಲ್ಲ.!

ವೈರ್‌ಲೆಸ್ ಚಾರ್ಜಿಂಗ್!
ಭವಿಷ್ಯದ್ಲಲಿ ಸ್ಮಾರ್ಟ್‌ಪೋನ್ ಸೇರಿದಂತೆ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ನಂಬಲಾರದ ರೀತಿಯಲ್ಲಿ ಹೊಂದುತ್ತವೆ ಎಂದು ಹೇಳಲಾಗಿದೆ. ಮನೆಯಲ್ಲಿನ ಪವರ್ ಸ್ಟೇಷನ್ ಇಂದ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳು ವೈರ್‌ಲೆಸ್ ಸಿಗ್ನಲ್‌ಗಳಿಂದ ಚಾರ್ಜ್ ಆಗುತ್ತವೆ. ಮನೆಯ ಯಾವುದೇ ಸ್ಥಳದಲ್ಲಿ ಚಾರ್ಜ್ ಸ್ವಯಂಚಾಲಿತ ಆಗುವ ಸಾಮರ್ಥ್ಯ ಅವುಗಳಿಗೆ ಇರಲಿದೆಯಂತೆ.

ಸ್ಮಾರ್ಟ್‌ವಾಚ್ ಪ್ರೊಜೆಕ್ಟರ್!
ಈಗ ಇರುವ ಸ್ಮಾರ್ಟ್‌ವಾಚ್‌ಗಳೇ ಮುಂದೆ ಮತ್ತಷ್ಟು ಬದಲಾಗುತ್ತವೆ. ಕೇವಲ ಒಂದು ಸ್ಮಾರ್ಟ್‌ವಾಚ್ ಸ್ಮಾರ್ಟ್‌ಫೋನ್ ರೀತಿಯ ಕಾರ್ಯನಿರ್ವಹಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್ ಹೊರಸೂಸುವ ಪಾರದರ್ಶಕ ಬೆಳಕಿನ ಪರದೆಯ ಮೂಲಕವೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಟೆಕ್ ಪ್ರಪಂಚ ಈ ತಂತ್ರಜ್ಞಾನ ಅಭಿವೃದ್ದಿಯತ್ತ ಹೆಚ್ಚು ಒಲವು ತೋರಿದೆ.

3D ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!
ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು 3D ಅನುಭವದಲ್ಲಿ ನೋಡುವ ರಿತಿಯಲ್ಲಿಯೇ, ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿಯೇ 3D ಅನುಭವ ನೀಡುವ ಡಿಸ್‌ಪ್ಲೇ ತಯಾರಾಗಲಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಸಹಾಯದಿಂದ ಭವಿಷ್ಯದ ಸ್ಮಾರ್ಟ್‌ಫೋನ್‌ಗಳೆಲ್ಲವೂ 3D ಸ್ಮಾರ್ಟ್‌ಫೋನ್‌ಗಳಾಗಿರಲಿವೆ ಎಂದು ಟೆಕ್ ಪ್ರಪಂಚ ಊಹಿಸಿ ಅಭಿವೃದ್ದಿಯತ್ತ ದೃಷ್ಟಿಯನ್ನು ಹಾಯಿಸಿದೆ.

ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ!
ಇನ್ನು ಹತ್ತು ವರ್ಷಗಳಲ್ಲಿ ಬ್ಯಾಟರಿ ಖಾಲಿಯಾಗುವುದೇ ಇಲ್ಲದ ಸ್ಮಾರ್ಟ್‌ಫೋನ್ ತಂತ್ರಜ್ಞಾನ ಅಭಿವೃದ್ದಿಯಾಗುತ್ತದೆ. ಕೇವಲ ಸೋಲಾರ್ ಪವರ್ ಮೂಲಕವೇ ಸ್ಮಾರ್ಟ್‌ಫೋನ್ ಸ್ವಯಂ ಚಾರ್ಜ್ ಆಗುವ ತಂತ್ರಜ್ಞಾನ ಬೆಳವಣಿಗೆಯಾಗಲಿದೆಯಂತೆ. ಈಗಾಗಲೇ ಈ ತಂತ್ರಜ್ಞಾನದ ಅಭಿವೃದ್ದಿಗಾಗಿ ಟೆಕ್ ಪ್ರಪಂಚ ಶ್ರಮಿಸುತ್ತಿರುವ ಬಗ್ಗೆ ಮಾಹಿತಿಗಳಿವೆ.

5G ಪ್ರಪಂಚ!
ಭವಿಷ್ಯದಲ್ಲಿ ಜಗತ್ತಿನ ಬಹುತೇಕ ವ್ಯವಹಾರ ಕಾರ್ಯಗಳು ಆನ್‌ಲೈನ್‌ನಲ್ಲಿಯೇ ನಡೆಯುವುದರಿಂದ ಕೆವಲ ಇನ್ನೈದು ವರ್ಷಗಳಲ್ಲಿ ಪ್ರಪಂಚವೇ ಡೇಟಾ ಮೂಲಕ ಆವೃತವಾಗಲಿದೆ ಪ್ರತಿಯೊಂದು GB ಡೇಟಾದ ಬೆಲೆ 1 ರೂಪಾಯಿಗಳಿಗಿಂತ ಕಡಿಮೆಯಾಗುತ್ತದೆಯಂತೆ. 5G ತಂತ್ರಜ್ಞಾನ ಅಭಿವೃದ್ದಿಯಾದರೆ ಇದು ಸಾಧ್ಯವಾಗಲಿದೆ ಎನ್ನುತ್ತಿವೆ ವರದಿಗಳು.!


Click it and Unblock the Notifications








