ಒನ್ ಪ್ಲಸ್ ನ ಪಂದ್ಯಾವಳಿಯಲ್ಲಿ ಭಾಗವಹಿಸಿ ಮತ್ತು 5,00,000 ರೂಪಾಯಿ ಗೆಲ್ಲಿ..

By GizBot Bureau
|

ಕೆಲವೇ ದಿನದಲ್ಲಿ ದಿಢೀರ್ ಲಕ್ಷಾಧೀಶರಾಗಬೇಕಾ? ಪಟ್ ಅಂತ ನಿಮ್ಮ ಪಾಕೆಟ್ ಗೆ 5,00,000 ಹಣ ಬರಬೇಕಾ?ಸಂಪಾದನೆ ಮಾರ್ಗ ಸುಲಭವಾಗಿರಬೇಕಾ? ಅದೂ ಆಟ ಆಡಿ ಸಂಪಾದನೆ ಮಾಡಿ ಶ್ರೀಮಂತರಾಗಬೇಕಾ?. ಯಾರಿಗುಂಟು ಯಾರಿಗಿಲ್ಲ ಆಫರ್ ಇಲ್ಲಿದೆ ನೋಡಿ..! ಮುಂದೆ ಓದಿ..

ಒನ್ ಪ್ಲಸ್ ನ ಪಂದ್ಯಾವಳಿಯಲ್ಲಿ ಭಾಗವಹಿಸಿ ಮತ್ತು 5,00,000 ರೂಪಾಯಿ ಗೆಲ್ಲಿ..

ಒನ್ ಪ್ಲಸ್ ಮತ್ತು ಗೇಮ್ಲಾಫ್ಟ್ ಸಹಯೋಗದೊಂದಿಗೆ ಒಂದು ಹೊಸ ಆನ್ ಲೈನ್ ಬೇಸ್ಡ್ ಆಟದ ಸ್ಪರ್ದೆಯನ್ನು ಏರ್ಪಡಿಸಿದ್ದು, ಇದರಲ್ಲಿ ಗೆದ್ದವರಿಗೆ 5,00,000 ರುಪಾಯಿಯ ಕ್ಯಾಷ್ ಬಹುಮಾನವನ್ನು ನೀಡಲಾಗುತ್ತದೆ. ಇಷ್ಟು ದೊಡ್ಡ ಮೊತ್ತದ ಕ್ಯಾಷ್ ಪ್ರೈಸ್ ಇರುವ ಭಾರತದ ಮೊದಲ ಆನ್ ಲೈನ್-ಗೇಮಿಂಗ್ ಪಂದ್ಯಾವಳಿ ಇದಾಗಿದೆ ಎಂದು ಒನ್ ಪ್ಲಸ್ ಅಭಿಪ್ರಾಯ ಪಟ್ಟಿದೆ. ಈ ಆನ್ ಲೈನ್ ಪಂದ್ಯಾವಳಿಯು ಜೂನ್ 13 ಕ್ಕೆ ಆರಂಭವಾಗಲಿದ್ದು, ಜುಲೈ 8 ನೇ ತಾರೀಕಿಗೆ ಕೊನೆಗೊಳ್ಳಲಿದೆ.

ಒನ್ ಪ್ಲಸ್ 6 ಎಷ್ಟು ವೇಗವಾಗಿದೆ ಮತ್ತು ಎಷ್ಟು ನಯವಾಗಿ ಆಟವನ್ನು ಆಡಲು ಇದು ಬೆಂಬಲ ನೀಡುತ್ತದೆ ಎಂಬುದನ್ನು ತೋರ್ಪಡಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನ ಆಯೋಜಿಸಲಾಗಿದೆಯಂತೆ.

ಒನ್ ಪ್ಲಸ್ ಆಸ್ಫಾಲ್ಟ್ ಕಪ್ ನಲ್ಲಿ ಭಾಗವಹಿಸುವುದು ಹೇಗೆ?

ಇದೊಂದು ಮುಕ್ತ ಚಾನೆಲ್ ಆಗಿದೆ ಮತ್ತು ಇದರಲ್ಲಿ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿರುವ ಬಳಕೆದಾರರು ಭಾಗವಹಿಸುವ ಅವಕಾಶವಿದೆ. ಯಾವುದೇ ಸ್ಮಾರ್ಟ್ ಫೋನ್ ನ ಬಳಕೆದಾರರು (ಆಂಡ್ರಾಯ್ಡ್,, iOS, ಮತ್ತು ವಿಂಡೋಸ್ OS) ಈ ಗೇಮಿನ ಭಾಗವಾಗಬಹುದು, Asphalt 8 ಗೇಮನ್ನು ಎಲ್ಲಾ ಸ್ಮಾರ್ಟ್ ಫೋನ್ ಗಳು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.

Oneplus 6 First Impressions - Gizbot Kannada

ನಿಮ್ಮ ಸ್ಮಾರ್ಟ್ ಫೋನಿನ ಗೂಗಲ್ ಪ್ಲೇ ಅಥವಾ ವಿಂಡೋಸ್ ಆಪ್ ಸ್ಟೋರ್ ಅಥವಾ ಆಪಲ್ ಸ್ಟೋರ್ ನಿಂದ Asphalt 8 ಗೇಮನ್ನು ಡೌನ್ ಲೋಡ್ ಮಾಡಿ. ಅಥವಾ ನಿಮ್ಮಲ್ಲಿ ಈ ಗೇಮ್ ಈಗಾಗಲೇ ಇದ್ದರೆ, ಲೇಟೇಸ್ಟ್ ವರ್ಷನ್ ಗೆ ನಿಮ್ಮ ಗೇಮನ್ನು ಅಪ್ ಡೇಟ್ ಮಾಡಿ..

ಗೇಮ್ ನ್ನ ಓಪನ್ ಮಾಡಿ ಮತ್ತು "OnePlus Asphalt Cup" ನ್ನು ಟ್ಯಾಪ್ ಮಾಡಿ ಪಂದ್ಯಾವಳಿಗೆ ಪ್ರವೇಶಿಸಿ. ನಿಮಗಿಷ್ಟವಾದ ಕಾರನ್ನು ಆಯ್ಕೆ ಮಾಡಿ, ನಂತರ ರೇಸ್ ಆರಂಭಿಸಿ. ನಿಮ್ಮ ಸ್ಮಾರ್ಟ್ ಪೋನ್ ಯಾವಾಗಲೂ ಇಂಟರ್ ನೆಟ್ ಕನೆಕ್ಟ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಯಾಕೆಂದರೆ ನಿಮ್ಮ ಸ್ಕೋರ್ ಬೋರ್ಡ್ ನಲ್ಲಿ ನಿಮ್ಮ ಅಂಕಗಳು ಸಿಂಕ್ ಆಗಲು ಇದು ಬೇಕಾಗುತ್ತದೆ.

ಅಪಘಾತ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊತ್ತು ಬರಲಿದೆ ಡ್ರೋನ್...ಚೆನ್ನೈ ವಿದ್ಯಾರ್ಥಿಗಳಿಂದ ವಿನ್ಯಾಸ..!ಅಪಘಾತ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊತ್ತು ಬರಲಿದೆ ಡ್ರೋನ್...ಚೆನ್ನೈ ವಿದ್ಯಾರ್ಥಿಗಳಿಂದ ವಿನ್ಯಾಸ..!

ಪಂದ್ಯಾವಳಿಯಲ್ಲಿ ಉತ್ತಮ ಸ್ಪರ್ಧಿಗಳಾಗಿ ಮತ್ತು ಗೆಲ್ಲುವ ಮೂಲಕ ನಿಮ್ಮ ಸ್ಥಾನವನ್ನು ಖಾತ್ರಿ ಪಡಿಸಿಕೊಳ್ಳುತ್ತಾ ಸಾಗಿ. ಒಬ್ಬ ವ್ಯಕ್ತಿ ಎಷ್ಟು ಸಲ ಬೇಕಾದರೂ ಆಟವಾಡಬಹುದು. ಅದಕ್ಕೆ ಯಾವುದೇ ಲಿಮಿಟ್ ಇಲ್ಲ. ನಾಯಕನ ಬೋರ್ಡ್ ನಲ್ಲಿ ಮುಂಚೂಣಿಯಲ್ಲಿರುವ ಕಾರ್ಯಗಳಲ್ಲಿ ನಿಯೋಜಿಸಲಾದ ಕಾರ್ಯಗಳು ಅಥವಾ ಕಾರ್ಯಗಳನ್ನು ಮುಗಿಸಿ ಹೆಚ್ಚಿನ ಅಂಕಗಳನ್ನು ಗಳಿಸುವಂತೆ ನೀವು ಆಟವಾಡಬೇಕಾಗುತ್ತದೆ.

ಪ್ರತಿ ವಾರವು ಒನ್ ಪ್ಲಸ್ 5 ಮಂದಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡುತ್ತೆ ಮತ್ತು ಉಚಿತ ಒನ್ ಪ್ಲಸ್ ಬುಲೆಟ್ ಗಳು ಮತ್ತು ವಯರ್ ಲೆಸ್ ಇಯರ್ ಫೋನ್ ಗಳನ್ನು ಹಂಚಲಾಗುತ್ತೆ. ವಾರದ ಟಾಪ್ 25 ಆಟಗಾರರು ಒನ್ ಪ್ಲಸ್ ನ ವಿಶೇಷ ವಸ್ತುಗಳನ್ನು ಪಡೆಯುತ್ತಾರೆ.

ತಿಂಗಳ ಅಂತ್ಯದಲ್ಲಿ ಒನ್ ಪ್ಲಸ್ 6, ಟಾಪ್ ಮೂವರು ಆಟಗಾರರನ್ನು ಆಯ್ಕೆ ಮಾಡುತ್ತೆ. ಮೊದಲ ಬೆಸ್ಟ್ ಆಟಗಾರ 5,00,000 ಕ್ಯಾಷ್ ಬಹುಮಾನವನ್ನು ಪಡೆಯುತ್ತಾನೆ, ಎರಡನೇ ಸ್ಥಾನದ ಅಥವಾ ಮೊದಲ ರನ್ನರ್ ಅಪ್ ವ್ಯಕ್ತಿಗೆ 3,00,000 ಕ್ಯಾಷ್ ಬಹುಮಾನ ಮತ್ತು ಮೂರನೇ ಸ್ಥಾನ ಅಥವಾ ಎರಡನೇ ರನ್ನರ್ ಅಪ್ ಗೆ 1,00,000 ಕ್ಯಾಷ್ ಬಹುಮಾನವನ್ನು ನೀಡಲಾಗುತ್ತೆ.ಇದರ ಜೊತೆಗೆ ಮೂವರು ಆಟಗಾರರಿಗೆ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಮತ್ತು ಜೊತೆಗೆ ವಯರ್ ಲೆಸ್ ಇಯರ್ ಫೋನ್ ಸಿಗಲಿದೆ.

ಹೆಚ್ಚುವರಿಯಾಗಿ, ಎಲ್ಲ ಆಟಗಾರರು ರೂ. 20,000,000 ಮೌಲ್ಯದ ಆಟದ-ಪ್ರತಿಫಲವನ್ನು ಸ್ವೀಕರಿಸುತ್ತಾರೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಅಂದರೆ ನಿಮಗೆ ಕಡಿಮೆ ಅಂದರೆ 13 ವರ್ಷ ಆಗಿರಲೇಬೇಕು.

. ಗೇಮ್ಲಾಫ್ಟ್ ನ ಭಾರತೀಯ ಮ್ಯಾನೇಜರ್ ಆಗಿರುವ ನಿತಿನ್ ಗೋಯಲ್ ಹೇಳಿಕೆ...

“ಬಳಕೆದಾರರಿಗೆ ಉತ್ತಮ ಪಂದ್ಯಾವಳಿಯ ಅವಕಾಶ ನೀಡಲು ಒನ್ ಪ್ಲಸ್ ಜೊತೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ. ಒನ್ ಪ್ಲಸ್ ಜೊತೆಗಿನ ಈ ಪ್ರಯತ್ನವು ಹೈಪರ್-ರಿಯಲ್- ಗ್ರಾಫಿಕ್ಸ್ ನ್ನು ಗೇಮ್ ಗಳಲ್ಲಿ ಸೃಷ್ಟಿಸಿದ ನಮ್ಮ ತಾಕತ್ತನ್ನು ಅನಾವರಣಗೊಳಿಸಿ ಬಳಕೆದಾರರಿಗೆ ತಲುಪಿಸುವ ಪ್ರಯ್ನವಾಗಿದೆ. ಹೊಸದಾಗಿ ಬಿಡುಗಡೆಗೊಂಡ ಒನ್ ಪ್ಲಸ್ 6 ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಮುಖಾಂತರ ಮೊಬೈಲ್ ಗೇಮ್ ಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೆ ಮತ್ತು ಆಟಗಾರರಿಗೆ ನಿಜಕ್ಕೂ ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸವಿದೆ”ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

. ವಿಕಾಸ್ ಅಗರ್ ವಾಲ್ ,ಜನರಲ್ ಮ್ಯಾನೇಜರ್, ಒನ್ ಪ್ಲಸ್ ಇಂಡಿಯಾ ಹೇಳಿಕೆ :

“ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ Asphalt 8 ನ ಸಹಯೋಗದೊಂದಿಗೆ, ಮೊಬೈಲ್ ರೇಸಿಂಗ್ ಗೆ ಕೊಟ್ಟ ಟೈಟಲ್ 'OnePlus Asphalt Cup” ನಿಜಕ್ಕೂ ಆಕರ್ಷಣೀಯವಾಗಿದೆ ಮತ್ತು ಭಾರತೀಯ ಗೇಮಿಂಗ್ ಸಮುದಾಯಕ್ಕೆ ಇದನ್ನು ಅರ್ಪಿಸಲಾಗುತ್ತಿದೆ.ಭಾರತದಲ್ಲಿನ ಹಾರ್ಡ್ ಕೋರ್ ಆಟಗಾರರಿಗಾಗಿ ಇದು ಹೊಸ ಅವಕಾಶವಾಗಿರುತ್ತದೆ. “

ನಿಮಗೂ ಇಷ್ಟು ದೊಡ್ಡ ಮೊತ್ತದ ಹಣ ಗೆಲ್ಲಬೇಕೆಂಬ ಆಸೆ ಇದ್ದರೆ ಇನ್ನು ಯಾಕೆ ತಡ ಮಾಡುತ್ತೀರಿ.. ನಿಮ್ಮ ಮೊಬೈಲ್ ಕೈಗೆ ತೆಗೆದುಕೊಳ್ಳಿ...ಆಟ ಆಡೋಕೆ ಶುರು ಮಾಡಿ..ಆಲ್ ದಿ ಬೆಸ್ಟ್..

Best Mobiles in India

Read more about:
English summary
OnePlus in collaboration with Gameloft has announced OnePlus Alphalt Cup 2018, where a winner can get a price of Rs 5,00,000 in cash. Here are the complete details on how to participate in the OnePlus Asphalt Cup 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X