ಬಳಕೆದಾರರಿಗೆ ವಿಂಡೋಸ್ 10ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳ ಅನಾವರಣ!

|

ವಿಂಡೋಸ್ 10 ನಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನ ಅನಾವರಣಗೊಳಿಸಿದೆ. ಇದು ನಿಮ್ಮ ಫೋನ್‌ಗಳ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸ್ಟ್ರೀಮಿಂಗ್ ಮೂಲಕ ನಿಮ್ಮ ಪರ್ಸನಲ್‌ ಕಂಪ್ಯೂಟರ್‌ಗೆ ತರುತ್ತದೆ. ಅಲ್ಲದೆ ಅವುಗಳನ್ನು ಲೋಕಲ್‌ ಅಪ್ಲಿಕೇಶನ್‌ಗಳಂತೆ ತಮ್ಮದೇ ಆದ ಅಪ್ಲಿಕೇಶನ್ ವಿಂಡೋಗಳಲ್ಲಿ ಇರಿಸುತ್ತದೆ. ಇದು ಕಳೆದ ವರ್ಷ ಪರಿಚಯಿಸಲಾದ ಫೋನ್ ಸ್ಕ್ರೀನ್ ಫೀಚರ್ಸ್‌ಗಿಂತ ಹೆಚ್ಚಿನ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ವಿಂಡೋಸ್ ಅನುಭವದೊಂದಿಗೆ ಹೆಚ್ಚು ಸಂಯೋಜಿಸಲ್ಪಟ್ಟಿದೆ ಎಂದು ಹೇಳಲಾಗ್ತಿದೆ.

ವಿಂಡೋಸ್‌ 10

ಹೌದು, ಬಳಕೆದಾರರ ಫೋನ್‌ ಅಪ್ಲಿಕೇಶನ್‌ಗಾಗಿ ವಿಂಡೋಸ್‌ 10ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದೆ. ನಿಮಗೆಲ್ಲಾ ತಿಳಿದಿರುವಂತೆ ಹಲವು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿರೋದು ಗೊತ್ತೆ ಇದೆ. ಬಳಕೆದಾರರ ಅನುಭವ ಉತ್ತಮವಾಗಿರಿಸುವುದಕ್ಕೆ ಮೈಕ್ರೋಸಾಪ್ಟ್‌ ಹಲವು ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಇದೆ. ಇದರ ಮುಂದುವರೆದ ಭಾಗವಾಗಿ ನಿಮ್ಮ ಫೋನ್‌ಗಳ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸ್ಟ್ರೀಮಿಂಗ್ ಮೂಲಕ ನಿಮ್ಮ ಪರ್ಸನಲ್‌ ಕಂಪ್ಯೂಟರ್‌ ಫೀಚರ್ಸ್‌ಗಳನ್ನ ಡಿಸ್‌ಪ್ಲೇ ಮಾಡುವುದಕ್ಕೆ ಮುಂದಾಗಿದೆ.

ವಿಂಡೋಸ್‌

ಇನ್ನು ವಿಂಡೋಸ್‌ ಅಪ್ಲಿಕೇಶನ್‌ ಪರಿಚಯಿಸಿರುವ ಹೊಸ ಅಪ್ಲಿಕೇಶನ್‌ಗಳ ಫೀಚರ್ಸ್‌ಗಳು, ನೀವು ಇನ್‌ಸ್ಟಾಲ್‌ ಮಾಡಿದ ಆಪ್‌ಗಳ ಪಟ್ಟಿಯನ್ನ ಡಿಸ್‌ಪ್ಲೇಯಲ್ಲಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ ಹೊಸ ಫೋಲ್ಡರ್‌ ಅನ್ನು ಸಹ ನೀಡಲಿದೆ. ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೀವು ವಿಂಡೋಸ್‌ನಲ್ಲಿಯೂ ನೋಡಬಹುದಾಗಿರುತ್ತೆ. ಅವುಗಳಲ್ಲಿ ಕೆಲವನ್ನು ನಿಮ್ಮ ಇಷ್ಟದ ಆಯ್ಕೆಗಳಾಗಿ ಗುರುತಿಸಬಹುದು. ಅವುಗಳನ್ನು ಸ್ಟಾರ್ಟ್ ಮೆನು ಮತ್ತು ಟಾಸ್ಕ್‌ಬಾರ್‌ಗೆ ಪಿನ್ ಮಾಡಬಹುದಾಗಿದೆ.

ಅಪ್ಲಿಕೇಶನ್‌

ಇದಲ್ಲದೆ ಅಪ್ಲಿಕೇಶನ್‌ಗಳ ಐಕಾನ್ ಕ್ಲಿಕ್ ಮಾಡುವುದರಿಂದ ಅದನ್ನು ತನ್ನದೇ ಆದ ವಿಂಡೋದಲ್ಲಿ ಪ್ರಾರಂಭಿಸುತ್ತದೆ, ಅದನ್ನು ಬೇರೆ ಯಾವುದೇ ಅಪ್ಲಿಕೇಶನ್‌ನಂತೆ ರನ್‌ ಮಾಡಬಹುದಾಗಿರುತ್ತೆ. ಆದಾಗ್ಯೂ, ನೀವು ನಿಮ್ಮ ಅಪ್ಲಿಕೇಶನ್‌ಗಳ ವಿಂಡೋಗಳನ್ನು ಮರುಗಾತ್ರಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಇದೀಗ ಒಳಗಿನವರೊಂದಿಗೆ ಪೂರ್ವವೀಕ್ಷಣೆಯಲ್ಲಿದೆ. ಅಲ್ಲದೆ ಮುಂದಿನ ಕೆಲವು ವಾರಗಳು ಮತ್ತು ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ.

ವಿಂಡೋಸ್

ಇನ್ನು ಈ ಫೀಚರ್ಸ್‌ ವಿಂಡೋಸ್ 10 ನಲ್ಲಿ ಅನಾವರಣಗೊಳಿಸಲಾಗಿದೆ. ಇದು ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳ ವಿಂಡೋಸ್‌ನಲ್ಲಿ ಅನಾವರಣ ಮಾಡುವುದರಿಂದ ನಿಮ್ಮ ನೆಚ್ಚಿನ ಅಪ್ಲಿಕೇಶನ್‌ಗಳನ್ನ ಗುರುತು ಮಾಡಬಹುದು. ಅಲ್ಲದೆ ವಿಂಡೋಸ್‌ನಲ್ಲಿಯೂ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸ್ಟ್ರೀಮಿಂಗ್ ಮಾಡಬಹುದಾಗಿದೆ. ಇವುಗಳನ್ನು ಲೋಕಲ್‌ ಅಪ್ಲಿಕೇಶನ್‌ಗಳಂತೆ ತಮ್ಮದೇ ಆದ ಅಪ್ಲಿಕೇಶನ್ ವಿಂಡೋಗಳಲ್ಲಿ ಇರಿಸಬಹುದಾಗಿರುತ್ತೆ. ಸದ್ಯ ಈ ಫೀಚರ್ಸ್‌ ಇನ್ನು ಅಭಿವೃದ್ದಿಯ ಹಂತದಲ್ಲಿದ್ದೂ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಆದ್ಯತೆಗಳೊಂದಿಗೆ ಬರುವ ನಿರೀಕ್ಷೆ ಇದೆ.

Most Read Articles
Best Mobiles in India

English summary
Microsoft unveiled a new feature for the Your Phone app on Windows 10 that brings your phones Android apps to your PC via streaming and places them in their own app windows as if they were native.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X