ಅಕ್ಟೋಬರ್ 14 ರಿಂದ ವಿಂಡೋಸ್ 10 ಬೆಂಬಲ ಅಂತ್ಯ: ಮಿಸ್ ಮಾಡದೇ ಇಲ್ಲಿ ನೋಡಿ!
ಅಕ್ಟೋಬರ್ 14, 2025 ರ ಗಡುವು ಸಮೀಪಿಸುತ್ತಿದೆ. ಈ ದಿನಾಂಕದ ನಂತರ, ಮೈಕ್ರೋಸಾಫ್ಟ್ ವಿಂಡೋಸ್ 10 (Windows 10) ಸಾಧನಗಳಿಗೆ ಭದ್ರತಾ ನವೀಕರಣಗಳನ್ನು ನೀಡುವುದನ್ನು ಅಧಿಕೃತವಾಗಿ ನಿಲ್ಲಿಸಲಿದೆ. ಇದರರ್ಥ ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರ ಸಿಸ್ಟಮ್‌ಗಳು ಭದ್ರತಾ ಬೆದರಿಕೆಗಳು, ಮಾಲ್‌ವೇರ್ ಮತ್ತು ಹೊಂದಾಣಿಕೆ ಸಮಸ್ಯೆಗಳಿಗೆ ಹೆಚ್ಚು ಗುರಿಯಾಗಲಿವೆ. ನವೀಕರಣಗಳಿಲ್ಲದೆ, ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವಾಗ ಅಥವಾ ಸಂಪರ್ಕಿತ ಸೇವೆಗಳನ್ನು ಬಳಸುವಾಗ ಬಳಕೆದಾರರು ಗಂಭೀರ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಈ ಮಹತ್ವದ ಬದಲಾವಣೆಗೆ ಪ್ರತಿಯೊಬ್ಬ ಬಳಕೆದಾರರು ಮತ್ತು ವ್ಯವಹಾರಗಳು ಸಿದ್ಧರಾಗಿರಬೇಕು. ಹಾಗಾದರೆ, ಮೈಕ್ರೋಸಾಫ್ಟ್ ವಿಂಡೋಸ್ 10 ಬಳಸುತ್ತಿರುವ ಗ್ರಾಹಕರು ಏನು ಮಾಡಬೇಕು? ಎಂಬುದನ್ನು ನೋಡೋಣ ಬನ್ನಿ.
ವಿಂಡೋಸ್ 10: ಹೊಸ ಬದಲಾವಣೆಗಳು
ವಿಂಡೋಸ್ 10 ಅನ್ನು ಹಂತಹಂತವಾಗಿ ಹೊರಹಾಕುವ ಮೈಕ್ರೋಸಾಫ್ಟ್‌ನ ನಿರ್ಧಾರವು ವಿಂಡೋಸ್ 11 (Windows 11) ಮತ್ತು ಹೊಸ ಕೊಪಿಲೋಟ್+ ಪಿಸಿಗಳ (Copilot+ PCs) ಅಳವಡಿಕೆಯನ್ನು ಉತ್ತೇಜಿಸುವ ದೊಡ್ಡ ಕಾರ್ಯತಂತ್ರದ ಭಾಗವಾಗಿದೆ. ಇದರಿಂದಾಗಿ ಅಕ್ಟೋಬರ್ 14 ರ ನಂತರ ಮೈಕ್ರೋಸಾಫ್ಟ್ ವಿಂಡೋಸ್ 10 (Windows 10) ಸಾಧನಗಳಿಗೆ ಭದ್ರತಾ ನವೀಕರಣಗಳನ್ನು ನೀಡುವುದನ್ನು ಅಧಿಕೃತವಾಗಿ ನಿಲ್ಲಿಸಲಿದೆ.
ಈ ನವೀಕರಣಗಳು ನಿಂತರೂ ವಿಂಡೋಸ್ 10 ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ. ಮತ್ತೊಂದು ಚಿಕ್ಕ ಸಮಾಧಾನವೆಂದರೆ ಮೈಕ್ರೋಸಾಫ್ಟ್ ಡಿಫೆಂಡರ್ ಆಂಟಿವೈರಸ್ ಅಕ್ಟೋಬರ್ 2028 ರವರೆಗೆ Security Intelligence Updates ಸ್ವೀಕರಿಸುವುದನ್ನು ಮುಂದುವರಿಸುತ್ತದೆ. ಇದು ಒಂದು ಮೂಲಭೂತ ಮಟ್ಟದ ರಕ್ಷಣೆಯನ್ನು ನೀಡುತ್ತದೆ, ಆದರೆ ಇದು ಸಂಪೂರ್ಣ ಆಪರೇಟಿಂಗ್ ಸಿಸ್ಟಮ್ ನವೀಕರಣಗಳ ಸಮಗ್ರ ರಕ್ಷಣೆಗೆ ಪರ್ಯಾಯವಲ್ಲ.

ವಿಸ್ತೃತ ಭದ್ರತಾ ನವೀಕರಣಗಳ ಪ್ರೋಗ್ರಾಂ ಪರಿಚಯ
ಇನ್ನು ತಕ್ಷಣ ಅಪ್‌ಗ್ರೇಡ್ ಮಾಡಲು ಸಾಧ್ಯವಾಗದ ಬಳಕೆದಾರರಿಗಾಗಿ ಮೈಕ್ರೋಸಾಫ್ಟ್ ವಿಸ್ತೃತ ಭದ್ರತಾ ನವೀಕರಣಗಳು (Extended Security Updates - ESU) ಪ್ರೋಗ್ರಾಂ ಅನ್ನು ಪರಿಚಯಿಸಿದೆ. ಅಕ್ಟೋಬರ್ 15, 2025 ರಿಂದ, ಬಳಕೆದಾರರು ತಮ್ಮ ಸಾಧನ ಸೆಟ್ಟಿಂಗ್‌ಗಳ ಮೂಲಕ ಈ ಪ್ರೋಗ್ರಾಂಗೆ ಚಂದಾದಾರರಾಗಬಹುದು. ವೈಯಕ್ತಿಕ ಸಾಧನಗಳ ಬಳಕೆದಾರರು ವಿಸ್ತೃತ ಭದ್ರತಾ ನವೀಕರಣಗನ್ನು ಪಡೆಯಲು ಮೂರು ಆಯ್ಕೆಗಳನ್ನು ಹೊಂದಿದ್ದಾರೆ.
ಇದಕ್ಕಾಗಿ, ಪ್ರತಿ ಸಾಧನಕ್ಕೆ $30 ವಾರ್ಷಿಕ ಚಂದಾದಾರಿಕೆಯನ್ನು ಪಾವತಿಸಬೇಕಾಗುತ್ತದೆ. ಇಲ್ಲವೆ, ವಿಂಡೋಸ್ ಬ್ಯಾಕಪ್ ಅಥವಾ ಮೈಕ್ರೋಸಾಫ್ಟ್ ರಿವಾರ್ಡ್ಸ್ ಪಾಯಿಂಟ್‌ಗಳ ಮೂಲಕ ಉಚಿತವಾಗಿ ಪಡೆಯಬಹುದು. ಇನ್ನು ಬ್ಯುಸಿನೆಸ್ ಬಳಕದಾರರಿಗೆ ಈ ವೆಚ್ಚವು ವರ್ಷಕ್ಕೆ ಪ್ರತಿ ಸಾಧನಕ್ಕೆ $61 ಆಗಿದ್ದು, ಇದನ್ನು ಮೂರು ವರ್ಷಗಳವರೆಗೆ ನವೀಕರಿಸಬಹುದು. ಗಮನಿಸಿ: ವಿಂಡೋಸ್ 11 ಕ್ಲೌಡ್ ಪಿಸಿಗಳು ಮತ್ತು Virtual Machines ಸೇರಿದಂತೆ ಕ್ಲೌಡ್-ಆಧಾರಿತ ಸೆಟಪ್‌ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ESU ಸ್ವಯಂಚಾಲಿತವಾಗಿ ದೊರೆಯುತ್ತದೆ.
ಅಕ್ಟೋಬರ್ 14, 2025 ರ ಗಡುವಿನ ಬಗ್ಗೆ ಎಲ್ಲಾ ವಿಂಡೋಸ್ 10 ಬಳಕೆದಾರರು ವಿಂಡೋಸ್ 11 ಗೆ ಅಪ್‌ಗ್ರೇಡ್ ಮಾಡಿ. ಇಲ್ಲವಾದರೆ, ಉತ್ತಮ AI ಸಾಮರ್ಥ್ಯಗಳಿಗಾಗಿ ಹೊಸ ಕೊಪಿಲೋಟ್+ ಪಿಸಿಯನ್ನು ಖರೀದಿಸಿ. ಕೊನೆಯದಾಗಿ, ತಕ್ಷಣ ಅಪ್‌ಗ್ರೇಟ್ ಮಾಡಲು ಸಾಧ್ಯವಾಗದಿದ್ದರೆ, ತಾತ್ಕಾಲಿಕವಾಗಿ ESU ಯೋಜನೆಯನ್ನು ಆರಿಸಿಕೊಳ್ಳಿ. ಏಕೆಂದರೆ, ವಿಂಡೋಸ್ 11, ವಿಂಡೋಸ್ 10 ಗೆ ಹೋಲಿಸಿದರೆ ಶೇಕಡಾ 62 ರಷ್ಟು ಕಡಿಮೆ ಭದ್ರತಾ ಘಟನೆಗಳು ಮತ್ತು 2.3x ವೇಗದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ, ಹೊಸ ಕೊಪಿಲೋಟ್+ ಪಿಸಿಗಳು ಮುಂದಿನ ಪೀಳಿಗೆಯ AI-ಚಾಲಿತ ಅನುಭವಗಳನ್ನು ನೀಡುತ್ತವೆ. ಹಾಗಾಗಿ, ಈ ಕುರಿತು ಸಹ ಗಮನಹರಿಸಿ. source


Click it and Unblock the Notifications








