ನಿಮ್ಮ ಕಂಪ್ಯೂಟರ್‌ನಲ್ಲಿ ವಿಂಡೋಸ್ 7 ಬಳಸುತ್ತಿದ್ದರೆ ಇಲ್ಲಿ ನೋಡಿ!

|

2020 ರ ಜನವರಿ 14 ರಿಂದ ವಿಂಡೋಸ್ 7 ಆಪರೇಟಿಂಗ್ ಸಿಸ್ಟಂಗೆ ಯಾವುದೇ ಅಪ್ಡೇಟ್ ಜೊತೆಗೆ ಸೆಕ್ಯೂರಿಟಿ ಬೆಂಬಲ ದೊರೆಯುವುದಿಲ್ಲವೆಂದು ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದ್ದು, ಕಂಪ್ಯೂಟರ್ ನಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿರುವವರಿಗೆ ಮೈಕ್ರೋಸಾಫ್ಟ್ ಸಂಸ್ಥೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿರುವವರು ಕೂಡಲೇ ಪರಿಷ್ಕೃತ ಆವೃತ್ತಿಗೆ ಬದಲಾಗುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಸೂಚಿಸಿದೆ.

ಹೌದು, ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಹಳೆಯ ವಿಂಡೊಸ್ 7 ಆಪ್ರೆಟಿಂಗ್ ಸಿಸ್ಟಮ್‌ಗೆ 14 ಜನವರಿ 2020ಯಲ್ಲಿ ವಿದಾಯ ಹೇಳಲು ರೆಡಿಯಾಗಿದೆ. ಅಂದರೇ ಮುಂದಿನ ವರ್ಷದ ಆರಂಭದಿಂದ ವಿಂಡೋಸ್ 7 ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪೆನಿ ತಿಳಿಸಿದೆ. ಹಾಗಾಗಿ, ಯಾರೆಲ್ಲಾ ಇನ್ನೂ ಮೈಕ್ರೋಸಾಫ್ಟ್ ವಿಂಡೊಸ್ 7 ಆಪ್ರೆಟಿಂಗ್ ಸಿಸ್ಟಮ್‌ ಅನ್ನೇ ಬಳಸುತ್ತಿದ್ದಿರೋ ಆದಷ್ಟು ಬೇಗ ಮೈಕ್ರೋಸಾಫ್ಟ್ ವಿಂಡೊಸ್ 10 ವರ್ಷನ್‌ಗೆ ಅಪ್‌ಗ್ರೇಡ್ ಆಗಬೇಕಿದೆ.

ನಿಮ್ಮ ಕಂಪ್ಯೂಟರ್‌ನಲ್ಲಿ ವಿಂಡೋಸ್ 7 ಬಳಸುತ್ತಿದ್ದರೆ ಇಲ್ಲಿ ನೋಡಿ!

ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆಯೇ ವಿಂಡೊಸ್ 7 ಅಪ್‌ಗ್ರೇಡ್‌ ಮಾಡಿಕೊಳ್ಳಲು ಮಾಹಿತಿ ನೀಡಿತ್ತು ಮತ್ತು ಅಪ್‌ಗ್ರೇಡ್‌ ಮಾಡಿಕೊಳ್ಳಲು ಅದಕ್ಕೆ ಬಹಳಷ್ಟು ಸಮಯಾವಕಾಶವನ್ನು ನೀಡುತ್ತಾ ಬಂದಿತ್ತು. ಆದರೆ ಇದೀಗ ಕಂಪೆನಿ ಮುಂದಿನ ವರ್ಷದ ಆರಂಭದಿಂದಲೇ ವಿಂಡೊಸ್‌7 ಗೆ ಆಪರೇಟಿಂಗ್‌ಗೆ ಸಿಸ್ಟಮ್‌ಗೆ ಮೈಕ್ರೋಸಾಫ್ಟ್‌ನಿಂದ ಯಾವುದು ಸಪೋರ್ಟ್ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ. ಹಾಗಾದರೆ, ಏನಿದು ಸ್ಟೋರಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಿಂಡೊಸ್ 7

ವಿಂಡೊಸ್ 7

ಮೈಕ್ರೋಸಾಫ್ಟ್ ಸಂಸ್ಥೆಯು ವಿಂಡೊಸ್ 7 ಆಪ್‌ರೇಟಿಂಗ್ ಸರಣಿ ಅನ್ನು ಜುಲೈ 2009 ರಲ್ಲಿ ಕಂಪ್ಯೂಟರ್ ಬಳಕೆದಾರರಿಗೆ ಪರಿಚಯಿಸಿತ್ತು. ಈ ಸರಣಿಯಲ್ಲಿ ವಿಂಡೊಸ್ ಸ್ಟಾರ್ಟ್‌ರ್, ಹೋಮ್ ಬೇಸಿಕ್, ಹೋಮ್ ಪ್ರೀಮಿಯಂ, ಪ್ರೋಫೆಶನಲ್, ಎಂಟರ್‌ಪ್ರೈಸ್ ಮತ್ತು ಅಲ್ಟಿಮೇಟ್ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಜನಪ್ರಿಯವಾಗಿದ್ದ ಈ ವಿಂಡೊಸ್ 7 ಆಪ್‌ರೇಟಿಂಗ್ ಸಿಸ್ಟಮ್ ಇನ್ನು ಕಾರ್ಯನಿಲ್ಲಿಸಲಿದೆ.

ವಿಂಡೊಸ್ 8 ಮತ್ತು 8.1

ವಿಂಡೊಸ್ 8 ಮತ್ತು 8.1

2012 ಅಕ್ಟೊವರ್‌ನಲ್ಲಿ ಲಾಂಚ್‌ ಆಗಿದ್ದ ವಿಂಡೊಸ್ 8 ಆಪ್ರೇಟಿಂಗ್ ಸಿಸ್ಟಂ ಹೊಸ ಅವತರಣಿಕೆಯೊಂದಿಗೆ ಬಂದಿತ್ತು. ಇದರ ಕೋಡ್‌ಕಲರ್ ಬ್ಲೂ ಆಗಿದೆ. ವಿಂಡೊಸ್ 8, 8 ಪ್ರೋ, 8 ಎಂಟರ್‌ಪ್ರೈಸ್, 8 ಓಇಎಮ್ ಎಂಬ ಆಯ್ಕೆಗಳನ್ನು ಹೊಂದಿತ್ತು. ವಿಂಡೊಸ್ 8.1 ಅಕ್ಟೊಬರ್ 2013ರಲ್ಲಿ ಬಿಡುಗಡೆಯಾಗಿತ್ತು. ಇದು ಸಹ ಬ್ಲೂ ಕಲರ್ ಕೋಡ್ ಹೊಂದಿದೆ. ಇದೂ ಕೂಡ ಹೆಚ್ಚು ಜನಪ್ರಿಯತೆ ಪಡೆದ ಆಪ್‌ರೇಟಿಂಗ್ ಸಿಸ್ಟಮ್ ಆಗಿದೆ.

ವಿಂಡೊಸ್ 10

ವಿಂಡೊಸ್ 10

ಜುಲೈ 2015ರಲ್ಲಿ ಬಿಡುಗಡೆಯಾಗಿ ಪ್ರಸ್ತುತ ಜಾಲ್ತಿಯಲ್ಲಿರುವ ವಿಂಡೊಸ್ 10 ಆಪ್ರೇಟಿಂಗ್ ಸಿಸ್ಟಂ ರೆಡ್‌ಸ್ಟೋನ್‌ಕಲರ್‌ಕೋಡ್ ಅನ್ನು ಹೊಂದಿದೆ. ವಿಂಡೊಸ್ 10 ಆಪ್ರೇಟಿಂಗ್ ಸಿಸ್ಟಮ್ ಅನೇಕ ಆಯ್ಕೆಗಳನ್ನು ಹೊಂದಿದೆ. ಹಾಗಾಗಿ, ನೀವು ಕೂಡ ಈಗಲೂ ವಿಂಡೊಸ್ 7 ಆಪ್‌ರೇಟಿಂಗ್ ಸಿಸ್ಟಂ ಬಳಕೆ ಮಾಡುತ್ತಿದ್ದರೆ ಈಗಲೇ ವಿಂಡೊಸ್ 10ಗೆ ಅಪ್‌ಡೇಟ್ ಆಗೇಬೇಕಿದೆ. ಇದಕ್ಕೆ ಮೈಕ್ರೋಸಾಫ್ಟ್ ಹೆಚ್ಚು ಸಪೋರ್ಟ್ ನೀಡಲಿದೆ.

ವಿಂಡೊಸ್ 10 ಏಕೆ?

ವಿಂಡೊಸ್ 10 ಏಕೆ?

ನೀವೀಗ ವಿಂಡೊಸ್ 10 ವರ್ಷನ್‌ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಲೇಬೇಕಿದ್ದು, ಒಂದು ವೇಳೆ ಅಪ್‌ಗ್ರೇಡ್‌ ಮಾಡಿಕೊಳ್ಳದಿದ್ದರೇ ನಿಮ್ಮ ಕಂಪ್ಯೂಟರ್ ಭದ್ರತಾ ದೃಷ್ಠಿಯಿಂದ ಮತ್ತು ಸಂಸ್ಥೆಯ ಮುಂದಿನ ಯಾವುದೇ ಫೀಚರ್‌ಗಳನ್ನು ವಿಂಡೊಸ್ 7 ನಲ್ಲಿ ಇನ್ನು ಮುಂದೆ ಪಡೆಯಲು ಸಾಧ್ಯವಿರುವುದಿಲ್ಲ. ಇನ್ನು ವಿಂಡೊಸ್ 10 ವರ್ಷನ್ ಅತ್ಯುತ್ತಮವಾಗಿರುವುದರಿಂದ ಈಗಲೇ ವಿಂಡೊಸ್ 10ಗೆ ಅಪ್‌ಡೇಟ್ ಆಗೇಬೇಕಿದೆ.

Best Mobiles in India

English summary
Windows 7 can still be installed and activated after support has ended. ...Microsoft 365 Business comes with a free upgrade for users with a Windows 7, 8, or 8.1 Pro license on their device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X