Home
ಸುದ್ದಿಜಾಲ

ವಿಂಡೋಸ್‌7ಗೆ ನಾಳೆ ಅಂತಿಮ ತೆರೆ ಎಳೆಯಲಿರುವ ಮೈಕ್ರೋಸಾಫ್ಟ್!

ಪರ್ಸನಲ್‌ ಕಂಪ್ಯೂಟರ್‌ ಬಳಕೆದಾರರು ಈ ಸುದ್ದಿಯನ್ನ ಓದಲೇಬೇಕು. ಏಕೆಂದರೆ ಇಂದೇ ನಿಮ್ಮ ಕಂಪ್ಯೂಟರ್‌ನ ವಿಂಡೋಸ್‌ ಸಾಫ್ಟ್‌ವೇರ್‌ ಅನ್ನ ವಿಂಡೋಸ್‌ 10ಗೆ ಅಪ್‌ಗ್ರೇಡ್‌ ಮಾಡದೇ ಹೋದರೆ ನಾಳೆಯಿಂದ ಕಾರ್ಯನಿರ್ವಹಿಸುವುದು ಕಷ್ಟವಾಗಬಹುದು. ಹೌದು ನೀವೆನಾದರೂ ವಿಂಡೋಸ್‌7 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೇ ಇಂದೇ ಅದನ್ನ ವಿಂಡೋಸ್‌ 10 ಸಾಫ್ಟ್‌ವೇರ್‌ಗೆ ಬದಲಾಯಿಸಿಕೊಳ್ಳುವುದು ಉತ್ತಮ, ಇಲ್ಲದಿದ್ದರೆ ಮೈಕ್ರೋಸಾಫ್ಟ್‌ ಕಂಪೆನಿಯು ನಾಳೆಯಿಂದ ವಿಂಡೋಸ್‌ 7ಗೆ ಯಾವುದೇ ಆಪ್‌ಡೇಟ್‌ ಫೀಚರ್ಸ್ ಅನ್ನ ತರೋದಿಲ್ಲ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಕಂಪೆನಿಯು ವಿಂಡೋಸ್‌7 ಸಾಫ್ಟ್‌ವೇರ್‌ನಿಂದ ವಿಂಡೊಸ್‌10 ಆಪ್‌ಡೇಟ್‌ ಆಗಲು ಇದ್ದ ಕಾಲವಕಾಶವನ್ನ ನಾಳೆಗೆ(ಜ.14) ಕೊನೆಗಾಣಿಸಲಿದೆ. ಈ ಮೂಲಕ ನಾಳೆಯಿಂದ ವಿಂಡೋಸ್‌ 7ನಲ್ಲಿ ಕಾರ್ಯನಿರ್ವಹಿಸುವ ನಿಮ್ಮ ಕಂಪ್ಯೂಟರ್‌ನ ಕೆಲವೊಂದು ಫೀಚರ್ಸ್‌ಗೆ ಅಂತಿಮ ತೆರೆ ಎಳೆಯಲು ಸಿದ್ದವಾಗಿದೆ. ಇನ್ಮುಂದೆ 2020ರಲ್ಲಿ ನಿಮ್ಮ ಕಂಪ್ಯೂಟರ್‌ಗಳು ವಿಂಡೋಸ್‌ 10ನಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ.

ಈಗ

ಮೈಕ್ರೋಸಾಫ್ಟ್ ಈಗ ಎಲ್ಲಾ ವಿಂಡೋಸ್ 7 ಬಳಕೆದಾರರನ್ನು ತಮ್ಮ ವೈಯಕ್ತಿಕ ಕಂಪ್ಯೂಟರ್‌ಗಳನ್ನು ಮತ್ತು ಅವರ ಡೇಟಾವನ್ನು ಮಾಲ್‌ವೇರ್ ಮತ್ತು ಇತರ ಬೆದರಿಕೆಗಳಿಂದ ಬಳಕೆದಾರರನ್ನ ರಕ್ಷಿಸುವ ಸಲುವಾಗಿ ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಲು ಕೇಳುತ್ತಿದೆ. ನೀವು ವಿಂಡೋಸ್ 7 ಅನ್ನು ಬಳಸುತ್ತಿದ್ದು, ಈಗ ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡದಿದ್ದರೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಐದು ಫೀಚರ್ಸ್‌ಗಳು ಬದಲಾಗಲಿವೆ.

ಟಾಸ್ಕ್‌ ಮ್ಯಾನೇಜರ್‌

ಟಾಸ್ಕ್‌ ಮ್ಯಾನೇಜರ್‌

ವಿಂಡೋಸ್ 7 ಮತ್ತು ವಿಂಡೋಸ್ 10 ಸಾಫ್ಟ್‌ವೇರ್‌ ನಡುವೆ ಕಂಡುಬರುವ ಸುಲಭ ವ್ಯತ್ಯಾಸವೆಂದರೆ ಟಾಸ್ಕ್ ಮ್ಯಾನೇಜರ್, ಇದನ್ನು ಕಂಪ್ಯೂಟರ್‌ನಲ್ಲಿ ಹೆಚ್ಚಾಗಿ ಅಪ್ಲಿಕೇಶನ್‌ಗಳನ್ನು ಮುಚ್ಚಲು ಬಳಸಲಾಗುತ್ತದೆ. ನೀವು ವಿಂಡೋಸ್ 7 ನಲ್ಲಿ ಟಾಸ್ಕ್ ಮ್ಯಾನೇಜರ್ ಅನ್ನು ತೆರೆದರೆ, ಇದು ಅಪ್ಲಿಕೇಶನ್‌ಗಳು, ಪ್ರಕ್ರಿಯೆಗಳು, ಸೇವೆಗಳು ಮತ್ತು ಕಾರ್ಯಕ್ಷಮತೆಯಂತಹ ಉಪ-ವಿಭಾಗಗಳ ಹೋಸ್ಟ್ ಅನ್ನು ತೋರಿಸುತ್ತದೆ ಅಲ್ಲದೆ ಮತ್ತೆ ಹಂತಹಂತವಾಗಿ ಎಲ್ಲ ಆಪ್ಲಿಕೇಶನ್‌ಗಳನ್ನ ಕ್ಲೋಸ್‌ ಮಾಡಬೇಕಾಗುತ್ತದೆ. ಆದರೆ ವಿಂಡೋಸ್‌10 ಒಂದೇ ಕ್ಲಿಕ್ ಬಳಸಿ ಕ್ಲೋಸ್‌ ಮಾಡುವ ಅವಕಾಶವನ್ನ ಬಳಕೆದಾರರಿಗೆ ನೀಡಲಿದೆ.

ಫ್ಲೆಕ್ಸಿಬಿಲಿಟಿ

ಫ್ಲೆಕ್ಸಿಬಿಲಿಟಿ

ಇನ್ನು ಹೊಂದಾಣಿಕೆಯ ದೃಷ್ಟಿಯಿಂದ ತಿಳಿಯುವುದಾದರೆ ವಿಂಡೋಸ್ 10 ವಿಂಡೋಸ್ 7 ಗಿಂತ ಭಿನ್ನವಾಗಿದೆ. ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿವಿಧ ಸಾಧನಗಳಲ್ಲಿ ಕೆಲಸ ಮಾಡಲು ವಿಂಡೋಸ್ 10 ಅನ್ನು ವಿನ್ಯಾಸಗೊಳಿಸಲಾಗಿದ್ದು. ವಿಂಡೋಸ್ 10 ಕಂಟಿನ್ಯಂ ಫೀಚರ್ಸ್ ಅನ್ನು ಒಳಗೊಂಡಿದೆ. ‌ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಮಾನಿಟರ್‌ಗಳು, ಕೀಬೋರ್ಡ್‌ಗಳು, ಮೌಸ್‌ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ವರ್ಚುವಲ್ ಟ್ರ್ಯಾಕ್‌ಪ್ಯಾಡ್‌ಗಳು ಮತ್ತು ಕೀಬೋರ್ಡ್‌ಗಳಾಗಿ ಸಂಪರ್ಕಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ವಿಂಡೋಸ್ 7 ನಲ್ಲಿ ಇಂತಹ ಒಂದೇ ರೀತಿಯ ಹೊಂದಾಣಿಕೆಯನ್ನ ನೋಡಲು ಸಾಧ್ಯವಿಲ್ಲ.

ಕೊರ್ಟಾನಾ

ಕೊರ್ಟಾನಾ

ವಿಂಡೋಸ್ 7 ಮತ್ತು ವಿಂಡೋಸ್ 10 ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಮೈಕ್ರೋಸಾಫ್ಟ್ನ ವರ್ಚುವಲ್ ಅಸಿಸ್ಟೆಂಟ್ ಕೊರ್ಟಾನಾ. ಕೊರ್ಟಾನಾ ಬಳಸಿ ಸ್ಮಾರ್ಟ್ ಹುಡುಕಾಟಗಳನ್ನು ಮಾಡಲು ವಿಂಡೋಸ್ 10 ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದು ಡೆಟಾ ಸರ್ಚ್‌ ಮಾಡುವಾಗ ಸರ್ಚ್ ರಿಸಲ್ಟ್‌, ಲೋಕಲ್‌ ಸರ್ಚ್‌ ರಿಸಲ್ಟ್‌ ಆಧರಿಸಿದ ಡೇಟಾ ಮಾತ್ರವಲ್ಲದೆ ಇಂಟರ್‌ನೆಟ್‌ ಸರ್ಚ್‌ ರಿಸಲ್ಟ್‌ ಅನ್ನು ಸಹ ನೀಡಲಿದೆ. ಆದರೆ ವಿಂಡೋಸ್ 7, ಲೋಕಲ್‌ ಸರ್ಚ್‌ ರಿಸಲ್ಟ್‌ ಅನ್ನು ಮಾತ್ರ ತೋರಿಸುತ್ತದೆ.

ವೆಬ್ ಬ್ರೌಸರ್

ವೆಬ್ ಬ್ರೌಸರ್

ವಿಂಡೋಸ್ 7 ಸೇರಿದಂತೆ ಹಳೆಯ ವಿಂಡೋಸ್ ಓಎಸ್‌ಗಳು ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಹೊಂದಿವೆ. ಆದರೆ ವಿಂಡೋಸ್ 10, ಎಡ್ಜ್ ವೆಬ್ ಬ್ರೌಸರ್‌ ಹೊಂದಿದ್ದು, ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗಿಂತ ಎಡ್ಜ್ ವೆಬ್‌ಬ್ರೌಸರ್‌ ವೇಗವಾಗಿದೆ. ಇನ್ನು ವೆಬ್ ಪುಟಗಳನ್ನು ಕ್ಯಾನ್ವಾಸ್‌ಗಳಾಗಿ ಪರಿವರ್ತಿಸುವ ಫೀಚರ್ಸ್‌ ಅನ್ನ ಎಡ್ಜ್ ವೆಬ್‌ಬ್ರೌಸರ್‌ ಹೊಂದಿದ್ದು, ಬಳಕೆದಾರರಿಗೆ ಪುಟಗಳು ಮತ್ತು ಅಪ್ಲಿಕೇಶನ್‌ಗಳನ್ನು ಹಂಚಿಕೊಳ್ಳಲು ಸುಲಭಗೊಳಿಸುತ್ತದೆ. ಆದರೆ ವಿಂಡೋಸ್ 7 ನಲ್ಲಿ ಬಳಕೆದಾರರು ಪ್ರತಿಯೊಂದಕ್ಕೂ ಹೊಸ ಸ್ಕ್ರೀನ್‌ ತೆರೆಯಬೇಕಾದ ಅಗತ್ಯವಿದೆ.

ಸೆಕ್ಯೂರಿಟಿ

ಸೆಕ್ಯೂರಿಟಿ

ಇನ್ನು ನಿಮ್ಮ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್ ಅನ್ನು ವೈರಸ್ ನಿಂದ ರಕ್ಷಿಸಲು ಬಯಸಿದರೆ, ವಿಂಡೋಸ್ 10ಗೆ ಆಪ್‌ಗ್ರೇಡ್‌ ಆಗಲೇಬಿಕದೆ. ಈಗಾಗಲೇ ಮೈಕ್ರೋಸಾಫ್ಟ್ ಇನ್ನು ಮುಂದೆ ವಿಂಡೋಸ್ 7 ನಲ್ಲಿ ಯಾವುದೇ ಭದ್ರತಾ ಫೀಚರ್ಸ್‌ಗಳನ್ನ ಪರಿಚಯಿಸೋದಿಲ್ಲ, ಇದರಿಂದಾಗಿ ನಿಮ್ಮ ಕಂಪ್ಯೂಟರ್‌ ಕ್ರ್ಯಾಶ್ ಆಗಿದ್ದರೆ ಅಥವಾ ಮಾಲ್‌ವೇರ್ ನಿಂದ ನಿಮ್ಮ ಕಂಪ್ಯೂಟರ್‌ಗೆ ಹಾನಿಯಾದರೆ ನೀವು ಸಹಾಯಕ್ಕಾಗಿ ಮೈಕ್ರೋಸಾಫ್ಟ್ ಅನ್ನು ಕೇಳಲು ಸಾಧ್ಯವಿಲ್ಲ. ಇದರಿಂದಾಗಿ ವಿಂಡೋಸ್‌ 7 ಬಳಕೆದಾರರು ಈ ಕೂಡಲೇ ವಿಂಡೋಸ್‌ 10ಗೆ ಬದಲಾಗುವುದು ಉತ್ತಮ.

Best Mobiles in India

English summary
Microsoft will soon be ending support for Windows 7. The company had ended mainstream support for Windows 7 back in January 2015. However, starting January 14, 2020, the company will no longer roll out security updates to its decade old desktop operating system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+