Home
ಸುದ್ದಿಜಾಲ

ವಿಶ್ವದಾದ್ಯಂತ ಮೈಕ್ರೋಸಾಫ್ಟ್ WINDOWS ಸರ್ವರ್ ಡೌನ್!

ಬಿಗ್ ಶಾಕ್..! ವಿಶ್ವಾದ್ಯಂತ ಮೈಕ್ರೋಸಾಫ್ಟ್ ವಿಂಡೋಸ್ (Microsoft Windows) ಆಪರೇಟಿಂಗ್ ಸಿಸ್ಟಮ್ ಡೌನ್! ಹೌದು, ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಪ್ರಮುಖ ದೋಷ ಕಂಡುಬಂದಿದೆ. ಈ ಸಮಸ್ಯೆಯಿಂದಾಗಿ, ಪ್ರಪಂಚದಾದ್ಯಂತ ವಿಂಡೋಸ್ ಬಳಕೆದಾರರ ಸಿಸ್ಟಮ್ ಡಿಸ್ಲ್ಪೇಗಳು ನೀಲಿ ಬಣ್ಣಕ್ಕೆ ತಿರುಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ನಿರಂತರವಾಗಿ ದೂರು ನೀಡುತ್ತಿದ್ದಾರೆ. ವರದಿಯ ಪ್ರಕಾರ, ವಿಂಡೋಸ್ ಸಿಸ್ಟಮ್‌ನಲ್ಲಿ ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ದೋಷ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಸಿಸ್ಟಮ್ ಅನ್ನು ಕೂಡಲೇ ಸ್ಥಗಿತಗೊಳಿಸಬೇಕು ಅಥವಾ ಮರು ಪ್ರಾರಂಭಿಸಬೇಕಿದೆ.

ಹೌದು, ಪ್ರಪಂಚದಾದ್ಯಂತ ಲಕ್ಷಾಂತರ 'WINDOWS' ಬಳಕೆದಾರರು ಸರ್ವ‌ರ್ ಡೌನ್ ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ಸಿಸ್ಟಂ ಹಠಾತ್ತಾಗಿ ಸ್ಥಗಿತಗೊಳ್ಳುತ್ತಿದೆ ಎಂದು ಬಳಕೆದಾರರು ಎಕ್ಸ್‌ ಖಾತೆಯಲ್ಲಿ (ಟ್ವಿಟ್ಟರ್‌) ದೂರುತ್ತಿದ್ದಾರೆ. ಆದಾಗ್ಯೂ, ಕ್ರೌಡ್‌ಸ್ಟೈಕ್ ಅಪ್‌ಡೇಟ್‌ನಿಂದ ದೋಷ ಉಂಟಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುತ್ತಿದೆ.

Microsoft: ವಿಶ್ವದಾದ್ಯಂತ ಮೈಕ್ರೋಸಾಫ್ಟ್ WINDOWS ಸರ್ವರ್ ಡೌನ್!

ವರದಿಯ ಪ್ರಕಾರ, ಈ ದೋಷದಿಂದಾಗಿ ಅಮೆರಿಕ, ಆಸ್ಟ್ರೇಲಿಯಾದಂತಹ ಅನೇಕ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಮತ್ತು ಇದರಿಂದಾಗಿ ಅನೇಕ ದೊಡ್ಡ ಬ್ಯಾಂಕ್‌ಗಳ ಕೆಲಸವೂ ಸ್ಥಗಿತಗೊಂಡಿದೆ. ಮೈಕ್ರೋಸಾಫ್ಟ್‌ನ ಇತ್ತೀಚಿನ ಕ್ರೌಡ್‌ಸ್ಟ್ರೈಕ್ ನವೀಕರಣದ ನಂತರ ಈ ದೋಷ ಬಂದಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿಯೂ ಬಳಕೆದಾರರು ತಮ್ಮ ಕೆಲಸದ ನಡುವೆಯೇ ಸಿಸ್ಟಮ್‌ ಸ್ಥಗಿತವಾಗಿರುವುದರಿಂದ ತಮ್ಮ ವಿಂಡೋಸ್ ಪಿಸಿಗಳಲ್ಲಿನ ಸಮಸ್ಯೆ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ.

ಈ ದೋಷದ ಕುರಿತು ಮೈಕ್ರೋಸಾಫ್ಟ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆಸ್ಟ್ರೇಲಿಯಾದ ಬಳಕೆದಾರರು ಇದರಿಂದ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಹಾರ್ಡ್‌ವೇರ್ ಅಥವಾ ಸಾಫ್ಟ್‌ವೇರ್ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಅನೇಕ ಬಳಕೆದಾರರು ಇತ್ತೀಚೆಗೆ ಹೊಸ ಸಾಫ್ಟ್‌ವೇರ್ ಅನ್ನು ಪಡೆದಿದ್ದಾರೆ ಮತ್ತು ಅಪ್ಡೇಟ್‌ಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರವೂ ಬಳಕೆದಾರರ ಸಿಸ್ಟಮ್‌ನಲ್ಲಿ ಈ ಸಮಸ್ಯೆ ಕಂಡುಬಂದಿದೆ.

ವಿಂಡೋಸ್ ದೋಷ ಸ್ಥಗಿತ: ಯಾವ ಸೇವೆಗಳ ಮೇಲೆ ಪರಿಣಾಮ

ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಂನ ದೋಷ ಕಂಡುಬಂದಿದೆ. ಎಲ್ಲಾ ಮೈಕ್ರೋಸಾಫ್ಟ್ ಗ್ರಾಹಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಂಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕ್ರೌಡ್‌ಸ್ಟ್ರೈಕ್ ಸಮಸ್ಯೆಯು ಈ ಕೆಳಗಿನ ದೊಡ್ಡ ಮಟ್ಟದ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ.

- ಭಾರತ ಮತ್ತು ಇತರ ದೇಶಗಳಲ್ಲಿ ವಿಮಾನಯಾನ ಸಂಸ್ಥೆಗಳು
- ಲಂಡನ್ ಸ್ಟಾಕ್ ಎಕ್ಸ್ಚೇಂಜ್
- ಬ್ಯಾಂಕಿಂಗ್ ಸಂಸ್ಥೆಗಳು
- USನಲ್ಲಿ 911 ತುರ್ತು ಸೇವೆಗಳು
- ಮೈಕ್ರೋಸಾಫ್ಟ್ ಅಜುರೆ ಗ್ರಾಹಕರು
- ವಿಂಡೋಸ್ ಸೇವೆಗಳನ್ನು ಬಳಸುವ ಮಾಧ್ಯಮ ಕಂಪನಿಗಳು

ಬಳಕೆದಾರರು ಏನು ಮಾಡಬೇಕು?

  • ನೀವು ಸಮಸ್ಯೆ ಪರಿಹರಿಸಿಕೊಳ್ಳಲು ನಿಮ್ಮದೇ ಆದ ನಿಲುವನ್ನು ತೆಗೆದುಕೊಳ್ಳಬೇಡಿ. ಅಧಿಕೃತ ತಾಂತ್ರಿಕ ಎಚ್ಚರಿಕೆಗಾಗಿ ನಿರೀಕ್ಷಿಸಿ.
  • ಕ್ಷಣ ಕ್ಷಣದ ಅಪ್ಡೇಟ್‌ಗಳಿಗಾಗಿ ಪಿನ್ ಮಾಡಿದ ಫೋರಮ್ ಥ್ರೆಡ್ ಮೇಲೆ ಕಣ್ಣಿಡಿ. ಆಗಾಗ್ಗೆ ಪರಿಶೀಲಿಸಿ.
  • ನೀವು ಯಾವುದೇ ಗೊಂದಲಕ್ಕೆ ಒಳಗಾಗದೇ ತಾಳ್ಮೆಯಿಂದ ಇರಬೇಕು. ಸಾಫ್ಟ್‌ವೇರ್ ದೋಷವನ್ನು ಪರಿಹರಿಸಲು ಸಮಯ ತೆಗೆದುಕೊಳ್ಳಬಹುದು. CrowdStrike ದೋಷ ನಿವಾರಣೆಗೆ ಕಾರ್ಯನಿರ್ವಹಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೋಲಾಹಲ

ವಿಂಡೋಸ್ ಪಿಸಿ ಸ್ಥಗಿತವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲವನ್ನು ಉಂಟುಮಾಡಿದೆ. ಇಲ್ಲಿ ಕೆಲವರು ವೀಕೆಂಡ್‌ನ ಆರಂಭಿಕ ವಿರಾಮವನ್ನು ಪಡೆಯುವ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇತರರು ಪ್ರಮುಖ ಕೆಲಸ ಮತ್ತು ಕಾರ್ಯಕ್ರಮಗಳ ನಡುವೆಯೇ ಸ್ಥಗಿತಗೊಂಡಿರುವ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ನೀವು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದೀರಾ? ಕಾಮೆಂಟ್ ಮಾಡಿ.

Best Mobiles in India

English summary
Windows Operating System Down Worldwide, Throws Blue Screen Of Death. Thousands of Windows users across the globe have reported experiencing the Blue Screen of Death (BSOD) error.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+