ವಿಂಡೋಸ್ ಬಳಕೆದಾರರಿಗೆ ಅಕ್ಟೋಬರ್‌ನಲ್ಲಿ ಸಿಗಲಿದೆ ಸಿಹಿ ಸುದ್ದಿ..!

By Lekhaka
|

ಜರ್ಮನಿಯ ಬರ್ಲಿನ್ ನಲ್ಲಿ ನಡೆಯುತ್ತಿರುವ IFA 2018 ಕಾರ್ಯಕ್ರಮದಲ್ಲಿ ಸಾಕಷ್ಟು ಹೊಸ ತಾಂತ್ರಿಕ ವಸ್ತುಗಳ ಬಿಡುಗಡೆ ಮತ್ತು ಕುತೂಹಲಕಾರಿ ವಿಚಾರಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಕೂಡ ವೀಕ್ಷಕರಿಗೆ ಆಶ್ಚರ್ಯದ ವಿಚಾರವನ್ನು ತಿಳಿಸಿದ್ದು, ಈ ಹಿಂದೆ ಬಿಡುಗಡೆಗೊಳಿಸಿದ್ದ ರೆಡ್ ಸ್ಟೋನ್ 5 ಎಂಬ ಕೋಡ್ ನೇಮ್ ಈಗ “ ವಿಂಡೋಸ್ 10 ಅಕ್ಟೋಬರ್ ಅಪ್ ಡೇಟ್” ಆಗಿದೆ. .ಸೂಚನೆಯಂತೆ ಇದು ವಿಂಡೋಸ್ 10 ನ ಮಹತ್ವದ ಅಪ್ ಡೇಟ್ ಇದಾಗಿರಲಿದೆ. ವಿಂಡೋಸ್ ಇನ್ ಸೈಡರ್ ಪ್ರೋಗ್ರಾಂ ಮೂಲಕ ಅಪ್ ಡೇಟ್ ನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ.

ವಿಂಡೋಸ್ ಬಳಕೆದಾರರಿಗೆ ಅಕ್ಟೋಬರ್‌ನಲ್ಲಿ ಸಿಗಲಿದೆ ಸಿಹಿ ಸುದ್ದಿ..!

ಈ ವರ್ಷದ ಅಕ್ಟೋಬರ್ ನಲ್ಲಿ ಅಪ್ ಡೇಟ್ ನ್ನು ಬಿಡುಗಡೆಗೊಳಿಸಲಾಗುತ್ತದೆ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಮಷಿನ್ ಗಳಲ್ಲಿ ಸಿನ್ಕ್ರನೈಜ್ ಮಾಡಲು ಅಲಿಯಾ ನ್ಯೂ ಕ್ಲೌಡ್ ಕ್ಲಿಪ್ ಬೋರ್ಡ್ ನಲ್ಲಿ ಪರಿಚಯಿಸಲಾಗುತ್ತದೆ. ಇದು ಅಪ್ ಡೇಟೆಡ್ ಸ್ಲಿಪ್ಪಿಂಗ್ ಟೂಲ್ ಆಗಿದೆ. ಹೊಸ ಡಾರ್ಕ್ ಫೈಲ್ ಎಕ್ಸ್ ಪ್ಲೋರರ್ ಕೂಡ ಇರಲಿದ್ದು ಪ್ರದರ್ಶನದ ಮಾಹಿತಿಗಳು Xbox ಗೇಮ್ ಬಾರ್ ನಲ್ಲಿ ಇರಲಿದೆ ಮತ್ತು ಮೈಕ್ರೋಸಾಫ್ಟ್ಎಡ್ಜ್ ನ ಸುಧಾರಿತ ಆವೃತ್ತಿಯನ್ನು ಕೂಡ ಹೆಚ್ಚುವರಿಯಾಗಿ ಸೇರಿಸಲಾಗಿರುತ್ತದೆ.

ವಿಂಡೋಸ್ 10 ಬಳಕೆದಾರರು ಸರ್ಚ್ ನಲ್ಲಿ ಪ್ರೀವ್ಯೂ ನೋಡಲು ಅವಕಾಶವಿರುತ್ತದೆ. ಎರಡು ಅಥವಾ ಮೂರು ಸರ್ಚ್ ರಿಸಲ್ಟ್ ಗಳಲ್ಲೇ ಬಳಕೆದಾರರಿಗೆ ಸಂಪೂರ್ಣ ಉತ್ತರ ದೊರೆಯುತ್ತದೆ.

ಈ ಅಪ್ ಡೇಟ್ ಮುಖಾಂತರ, ವಿಂಡೋಸ್ 10 ಡಿವೈಸ್ ಗಳಲ್ಲಿ ಟೈಲ್ ಫೋಲ್ಡರ್ ಗಳಿಗೆ ಹೆಸರಿಡಬಹುದು. ಫೋಲ್ಡರ್ ಗೆ ಹೆಸರಿಸುವ ಆಯ್ಕೆಯು ನೀವು ಹಲವಾರು ಟೈಲ್ ಗಳನ್ನು ವಿಸ್ತರಿಸಿದಾಗ ಕಾಣಿಸಿಕೊಳ್ಳುತ್ತದೆ. ಅಕ್ಟೋಬರ್ ನಲ್ಲಿ ಯಾವ ದಿನ ಬಿಡುಗಡೆಗೊಳಿಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನೂ ಕಂಪೆನಿ ನೀಡಿಲ್ಲ.

ವಿಂಡೋಸ್ ಬಳಕೆದಾರರಿಗೆ ಅಕ್ಟೋಬರ್‌ನಲ್ಲಿ ಸಿಗಲಿದೆ ಸಿಹಿ ಸುದ್ದಿ..!

ಸದ್ಯ ಮೈಕ್ರೋ ಸಾಫ್ಟ್ ಸಂಸ್ಥೆ ವಿಂಡೋಸ್ 10 ಅಪ್ ಡೇಟ್ ಅದರ ಕೋಡ್ ನೇಮ್ '19H1’ ಬಗ್ಗೆ ಕೆಲಸ ಮಾಡುತ್ತಿದೆ. ಎಪ್ರಿಲ್ 2019 ಕ್ಕೆ ಇದು ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ವಿಂಡೋಸ್ ನ ನೋಟ್ ಪ್ಯಾಡ್ ಆಪ್ ಗೂ ಕೂಡ ಮೈಕ್ರೋಸಾಫ್ಟ್ ಕೆಲವು ಅಪ್ ಡೇಟ್ ಗಳನ್ನು ಕೊಟ್ಟಿದೆ.

ಈ ಅಪ್ ಡೇಟ್ ನಲ್ಲಿ ಪ್ರಕಟಿಸಿರುವಂತೆ 'Fast Sign-in’, ಅಂದರೆ ವೇಗವಾಗಿ ಶೇರ್ಡ್ ಪಿಸಿಯಲ್ಲಿ ಸೈನ್ ಇನ್ ಆಗುವುದು ಮತ್ತು ವಿಂಡೋಸ್ 10 ಗೆ ನೂತನ ಬಯೋಮೆಟ್ರಿಕ್ ಸೈನ್ ಇನ್ ವೈಶಿಷ್ಟ್ಯತೆಗಳು ಇರಲಿವೆ.

Best Mobiles in India

English summary
Windows users, Microsoft is bringing some good news in October. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X