Home
ಸುದ್ದಿಜಾಲ

ಬರೋಬರಿ 300 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ ಈ ಇಯರ್‌ಬಡ್ಸ್‌!

ಇಂದಿನ ಕಾಲಮಾನದ ಯುವಜನತೆಗೆ ಸ್ಮಾರ್ಟ್‌ಫೋನ್‌ ಜೊತೆಗೊಂದು ಇಯರ್‌ಫೋನ್‌ ಇರಲೇಬೇಕು. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೂಡ ಹಲವು ಆಕರ್ಷಕ ಇಯರ್‌ಬಡ್ಸ್‌ಗಳು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇದರಲ್ಲಿ ವಿಂಗ್ಸ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ವಿಂಗ್ಸ್‌ ಕಂಪೆನಿ ಹೊಸ ಫ್ಯಾಂಟಮ್‌ 345 ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ.

ಹೌದು, ವಿಂಗ್ಸ್‌ ಕಂಪೆನಿ ಭಾರತದಲ್ಲಿ ಹೊಸ ವಿಂಗ್ಸ್‌ ಫ್ಯಾಂಟಮ್‌ 345 ಇಯರ್‌ಬಡ್ಸ್‌ ಪರಿಚಯಿಸಿದೆ. ಇದು ಡಿಜಿಟಲ್ ಬ್ಯಾಟರಿ ಡಿಸ್‌ಪ್ಲೇ, ಸೆನ್ಸಿಟಿವ್ ಟಚ್ ಕಂಟ್ರೋಲ್ ಮತ್ತು 50 ಗಂಟೆಗಳ ಪ್ಲೇಟೈಮ್‌ ಅನ್ನು ಹೊಂದಿದೆ. ಹಾಗಾದ್ರೆ ವಿಂಗ್ಸ್‌ ಫ್ಯಾಂಟಮ್‌ 345 ಇಯರ್‌ಬಡ್ಸ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬರೋಬರಿ 300 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ ಈ ಇಯರ್‌ಬಡ್ಸ್‌!

ವಿಂಗ್ಸ್ ಫ್ಯಾಂಟಮ್ 345 ಫೀಚರ್ಸ್‌ ಹೇಗಿದೆ?

ವಿಂಗ್ಸ್ ಫ್ಯಾಂಟಮ್ 345 ಇಯರ್‌ಬಡ್ಸ್‌ 13mm ಹೈ ಫಿಡೆಲಿಟಿ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಪರಿಸರದ ನಾಯ್ಸ್‌ ಕ್ಯಾನ್ಸಲೇಶನ್‌, 30db ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಇಯರ್‌ಬಡ್ಸ್‌ ಗೂಗಲ್‌ ಮತ್ತು ಆಪಲ್‌ ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಇಯರ್‌ಬಡ್ಸ್‌ನಲ್ಲಿ ಡಿಜಿಟಲ್‌ ಬ್ಯಾಟರಿ ಡಿಸ್‌ಪ್ಲೇ ನೀಡಿರುವುದು ಮೇನ್‌ ಹೈಲೈಟ್‌ ಆಗಿದೆ. ಇದರಿಂದ ಇಯರ್‌ಬಡ್ಸ್‌ ಚಾರ್ಜಿಂಗ್‌ ಸಾಮರ್ಥ್ಯ ಎಷ್ಟಿದೆ ಅನ್ನೊದನ್ನ ತಿಳಿದುಕೊಳ್ಳಬಹುದಾಗಿದೆ.

ಬರೋಬರಿ 300 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ ಈ ಇಯರ್‌ಬಡ್ಸ್‌!

ವಿಂಗ್ಸ್ ಫ್ಯಾಂಟಮ್ 345 ಇಯರ್‌ಬಡ್ಸ್‌ ದೂಳು ಮತ್ತು ನೀರಿನಿಂದ ರಕ್ಷಣೆಗಾಗಿ IPX5 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇದು ಪ್ಲೇ/ಪಾಸ್, ವಾಲ್ಯೂಮ್ ಕಂಟ್ರೋಲ್‌ಗಳು ಮತ್ತು ಕರೆಗಳಿಗಾಗಿ ಟಚ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು 40ms ಲೇಟೆನ್ಸಿ ಆಫರ್‌ಗಳೊಂದಿಗೆ ಮೀಸಲಾದ ಗೇಮಿಂಗ್ ಮೋಡ್ ಅನ್ನು ಕೂಡ ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಈ ಇಯರ್‌ಬಡ್ಸ್‌ AAC ಮತ್ತು SBC ಕೋಡೆಕ್‌ಗಳಿಗೆ ಬೆಂಬಲವನ್ನು ಪಡೆದಿದೆ. ಹಾಗೆಯೇ 15 ಮೀಟರ್ ರೇಂಜ್‌ನ ಬ್ಲೂಟೂತ್ ಆವೃತ್ತಿ 5.3 ಬೆಂಬಲಿಸಲಿದೆ.

ವಿಂಗ್ಸ್ ಫ್ಯಾಂಟಮ್ 345 ಇಯರ್‌ಬಡ್ಸ್‌ ಒಟ್ಟು 50 ಗಂಟೆಗಳ ಪ್ಲೇ ಟೈಂ ನೀಡಲಿದೆ. ಇದರಲ್ಲಿ 10 ಗಂಟೆಗಳ ಇಯರ್‌ಬಡ್ಸ್‌ ಪ್ಲೇಟೈಮ್, 40 ಗಂಟೆಗಳ ಟಾಕ್ ಟೈಮ್ ಮತ್ತು 300 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ. ಇದರೊಂದಿಗೆ ಸಂಪೂರ್ಣ ಚಾರ್ಜಿಂಗ್ ಸಮಯ 1.5 ಗಂಟೆಗಳು ಎಂದು ಹೇಳಲಾಗಿದೆ. ಈ ಇಯರ್‌ಬಡ್ಸ್‌ ಯುಎಸ್‌ಬಿ-ಸಿ ಬುಲೆಟ್ ಚಾರ್ಜ್‌ನೊಂದಿಗೆ ಬರಲಿದ್ದು, 10 ನಿಮಿಷಗಳ ಚಾರ್ಜ್‌ನಲ್ಲಿ 100 ನಿಮಿಷಗಳ ಪ್ಲೇಟೈಮ್ ಅನ್ನು ನೀಡಲಿದೆ ಎಂದು ವಿಂಗ್ಸ್‌ ಕಂಪೆನಿ ಹೇಳಿಕೊಂಡಿದೆ.

ಬರೋಬರಿ 300 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ ಈ ಇಯರ್‌ಬಡ್ಸ್‌!

ಬೆಲೆ ಮತ್ತು ಲಭ್ಯತೆ

ವಿಂಗ್ಸ್ ಫ್ಯಾಂಟಮ್ 345 ಇಯರ್‌ಬಡ್ಸ್‌ ಭಾರತದಲ್ಲಿ ಕೇವಲ 1,299ರೂ. ಬೆಲೆಯನ್ನು ಹೊಂದಿದೆ. ಇದು ಅಮೆಜಾನ್, ಫ್ಲಿಪ್‌ಕಾರ್ಟ್, ವಿಂಗ್ಸ್ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಬರಲಿದೆ. ಇದನ್ನು ನೀವು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ವಿಂಗ್ಸ್‌ ಕಂಪೆನಿ ತನ್ನ ಫ್ಯಾಂಟಮ್ 380 TWS ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿತ್ತು. ಈ ಇಯರ್‌ಬಡ್ಸ್‌ 50 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಅನ್ನು ಪಡೆದಿದೆ. ಇನ್ನು ಇಯರ್‌ಬಡ್ಸ್‌ 13 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರ ತೂಕ 39 ಗ್ರಾಂ ಆಗಿದ್ದು, 40msನ ಅತಿ ಕಡಿಮೆ ಲೇಟೆನ್ಸಿ ಬೆಂಬಲವನ್ನು ಪಡೆದಿದೆ. ಈ ಇಯರ್‌ಬಡ್ಸ್ ್ಸ್ಪರ್ಧಾತ್ಮಕ ಆಟದಲ್ಲಿ ಅತ್ಯುತ್ತಮ ಅನುಭವವನ್ನು ನೀಡಲಿದೆ. ಸದ್ಯ ಭಾರತದಲ್ಲಿ ಇದರ ಬೆಲೆ 1,299 ರೂಪಾಯಿಗಳು ಆಗಿದೆ.

Best Mobiles in India

English summary
Wings Phantom 345 earbuds with a digital battery display launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+