ಫ್ರೆಶರ್ ಉದ್ಯೋಗಿಗಳಿಗೆ 1 ಲಕ್ಷ ರೂ. ಬೋನಸ್ ಘೋಷಿಸಿದ ವಿಪ್ರೊ!

|

ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರು ಉದ್ಯೋಗ ತೊರೆಯದಂತೆ ಮಾಡುವ ಸಲುವಾಗಿ ವಿಪ್ರೊ ಭರ್ಜರಿ ಬೋನಸ್ ಆಫರ್ ನೀಡಿದೆ. ವಿಪ್ರೊ ಕಂಪನಿಯಲ್ಲಿ ಕನಿಷ್ಟ ಒಂದು ವರ್ಷ ಉದ್ಯೋಗ ಅನುಭವ ಹೊಂದಿರುವ ಕಿರಿಯ ಎಂಜಿನಿಯರ್‌ಗಳಿಗೆ 1 ಲಕ್ಷ ರೂಪಾಯಿಗಳ ಬೋನಸ್‌ ನೀಡುತ್ತಿರುವುದಾಗಿ ವಿಪ್ರೊ ಮಾನವಸಂಪನ್ಮೂಲ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶರ್ ಉದ್ಯೋಗಿಗಳಿಗೆ 1 ಲಕ್ಷ ರೂ. ಬೋನಸ್ ಘೋಷಿಸಿದ ವಿಪ್ರೊ!

ಹೌದು, ಶಿಕ್ಷಣ, ವೇತನ ಹೆಚ್ಚಳ ಇವೇ ಮುಂತಾದ ಕಾರಣಗಳಿಂದ ಕಿರಿಯ ಉದ್ಯೋಗಿಗಳಿಂದ ಉದ್ಯೋಗಕ್ಕೆ ಗುಡ್‌ ಬೈ ಹೇಳುವ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ, ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವ ಮತ್ತು ಕಾರ್ಯಕ್ಷಮತೆಯುಳ್ಳ ಕಿರಿಯ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ವಿಪ್ರೊ, ಈ ವರ್ಷ 1ಲಕ್ಷ ರೂ. ಬೋನಸ್‌ ನೀಡುವ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ವಯಸ್ಸಾದಾಗ ಕಾಣಿಸುವಂತೆ ಮಾಡುವ ಮೊಬೈಲ್ ಆಪ್ ವೈರಲ್!ವಯಸ್ಸಾದಾಗ ಕಾಣಿಸುವಂತೆ ಮಾಡುವ ಮೊಬೈಲ್ ಆಪ್ ವೈರಲ್!

ಕೆಲ ವರ್ಷಗಳಷ್ಟು ಅನುಭವ ಹೊಂದಿರುವ ಎಂಜಿನಿಯರ್‌ಗಳು ಹೆಚ್ಚಿನ ವೇತನಕ್ಕಾಗಿ ಬೇರೆ ಕಂಪನಿಗಳಿಗೆ ವಲಸೆ ಹೋಗುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಈ ಜೂನ್‌ ತ್ರೈಮಾಸಿಕದಲ್ಲಿ ಉದ್ಯೋಗ ತೊರೆದವರ ಸಂಖ್ಯೆ ಶೇ.17.9ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಿರಿಯ ಉದ್ಯೋಗಿಗಳು ಕೆಲಸ ಬದಲಾಯಿಸದಿರಲು ವಿಪ್ರೊ ಕಂಪೆನಿ ಈ ಯೋಜನೆಯನ್ನು ಜಾರಿಗೊಳಿಸಿದೆ.

ಫ್ರೆಶರ್ ಉದ್ಯೋಗಿಗಳಿಗೆ 1 ಲಕ್ಷ ರೂ. ಬೋನಸ್ ಘೋಷಿಸಿದ ವಿಪ್ರೊ!

ಕಿರಿಯ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಕಂಪನಿಯು ಹಲವಾರು ವರ್ಷಗಳಿಂದ ಈ ರೀತಿಯಾಗಿ ಬೋನಸ್‌ ನೀಡುತ್ತಿದೆ . ಈ ರೀತಿಯಾಗಿ ಬೋನಸ್‌ ಪಡೆದ ಉದ್ಯೋಗಿಗಳು ಒಂದು ವರ್ಷದ ಕಾಲ ಉದ್ಯೋಗ ತೊರೆದು ಹೋಗುವಂತಿಲ್ಲ ಎಂದು ವಿಪ್ರೊ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಸೌರಭ್ ಗೋವಿಲ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಿಯೋಮಿ 'ಮಿ ಎ2' ವಿನ ಉತ್ತರಾಧಿಕಾರಿಯಾಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ!ಶಿಯೋಮಿ 'ಮಿ ಎ2' ವಿನ ಉತ್ತರಾಧಿಕಾರಿಯಾಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ!

ಮೂರರಿಂದ ನಾಲ್ಕು ವರ್ಷಗಳ ಅನುಭವ ಹೊಂದಿರುವ ಉದ್ಯೋಗಿಗಳಿಗೆ ಶೇ.10 ಅಥವಾ ಅದಕ್ಕಿಂತಲೂ ಹೆಚ್ಚು ವೇತನವನ್ನು ಏರಿಕೆ ಮಾಡಲಾಗುತ್ತದೆ. ಹೆಚ್ಚು ಡಿಜಿಟಲ್‌ ಕೌಶಲ್ಯವನ್ನು ಹೊಂದಿರುವವರಿಗೆ ಒಂದಂಕಿಯಿಂದ ಎರಡಂಕಿಯವರೆಗೆ ಹೆಚ್ಚಳ ಮಾಡಲಾಗಿದೆ. ಉತ್ತಮ ನಿರ್ವಹಣೆ ತೋರದವರ ವೇತನದಲ್ಲಿ ಹೆಚ್ಚಳ ಮಾಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಇನ್ಪೋಸಿಸ್‌ನಂತೆ ವಿಪ್ರೊ ಕೂಡ ಹೆಚ್ಚು ಫ್ರೆಶರ್ ಉದ್ಯೋಗಿಗಳಿಗೆ ( ಹೊಸ ಉದ್ಯೋಗಿಗಳಿಗೆ) ಮಣೆ ಹಾಕುತ್ತಿದೆ. ವಿಪ್ರೊ ಕಂಪನಿಯು ಜೂನ್‌ ತ್ರೈಮಾಸಿಕದಲ್ಲಿ 6 ಸಾವಿರ ಫ್ರೆಶರ್ ಉದ್ಯೋಗಿಗಳನನ್ನು ನೇಮಕ ಮಾಡಿಕೊಂಡಿದೆ. ಕಳೆದ ಹಣಕಾಸು ವರ್ಷದಂತೆಯೇ ಈ ವರ್ಷವೂ ಕೂಡ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯು ತಿಳಿಸಿದೆ.

Best Mobiles in India

English summary
Indian IT major Wipro has promised to pay a retention bonus of Rs 1 lakh to the freshers hired from campus placements this year who complete one year with the company. The decision has been taken to counter the high attrition rates prevalent across the IT industry.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X