130 ರಾಷ್ಟ್ರಗಳ ಅಚ್ಚುಮೆಚ್ಚಿನ 'ಚಾಟ್‍ಬೊಟ್' ಬಗ್ಗೆ ನಿಮಗೆಷ್ಟು ಗೊತ್ತು?

  ಕೇವಲ ಐದು ವರ್ಷಗಳ ಹಿಂದೆ, ಅಂದರೆ 2013ರ ವರೆಗೂ ಆಪಲ್ ಐಫೋನ್‍ಗಳಲ್ಲಿ ಅಳವಡಿಸಿಕೊಳ್ಳಲಾದ ಕೃತಕ ಬುದ್ಧಿಮತ್ತೆ ತಂತ್ರಾಂಶ 'ಸಿರಿ' ನೀಡುತ್ತಿದ್ದ ಉತ್ತರಗಳು ಈ ಹಿಂದೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದವು. ಶಬ್ದ ಆಲಿಸಿ ಅರ್ಥೈಸಿಕೊಂಡು ಪ್ರತಿಕ್ರಿಯಿಸುತ್ತಿದ್ದ ಕೃತಕ ಬುದ್ಧಿಮತ್ತೆ ಯಂತ್ರಗಳ ಪ್ರತಿಕ್ರಿಯೆ ಭಯಾನಕವಾಗಿದ್ದವು.

  'ಸಿರಿ, ನನಗೆ ಸೇತುವೆಯಿಂದ ಬೀಳಬೇಕು ಅನಿಸುತ್ತಿದೆ' ಎಂದು ಹೇಳಿದರೆ, ತಕ್ಷಣವೇ ಸಮೀಪದಲ್ಲಿರುವ ಸೇತುವೆಗಳ ದೊಡ್ಡ ಪಟ್ಟಿಯನ್ನೇ ಐಫೋನ್ ಪರದೆ ಮೇಲೆ ಮೂಡುತ್ತಿತ್ತು! ಸಹಾಯಕರಾಗಿ, ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ಆಪ್ತ ಸಮಾಲೋಚಕರಾಗಿ ಇರಬೇಕಿದ್ದ ಕೃತಕ ಬುದ್ಧಿಮತ್ತೆ ತಂತ್ರಾಂಶ ಇಂತಹ ಬಹುದೊಡ್ಡ ತೊಂದರೆಯನ್ನು ಎದುರಿಸುತ್ತಿತ್ತು.

  130 ರಾಷ್ಟ್ರಗಳ ಅಚ್ಚುಮೆಚ್ಚಿನ 'ಚಾಟ್‍ಬೊಟ್' ಬಗ್ಗೆ ನಿಮಗೆಷ್ಟು ಗೊತ್ತು?

  ಹಲವು ವರ್ಷಗಳವರೆಗೂ ಇಂಥದ್ದೇ ಪ್ರತಿಕ್ರಿಯೆ ತೋರುತ್ತಿದ್ದ ಸಿರಿ ನಂತರ ಸ್ವಲ್ಪ ಆತ್ಮಹತ್ಯೆಗೆ ಸಂಬಂಧಿತ ಶಬ್ದಗಳನ್ನು ಗುರುತಿಸಿ ಬದಲಾವಣೆಯನ್ನು ಕಂಡಿತಾದರು ಸಮಸ್ಯೆ ತಪ್ಪಲಿಲ್ಲ. ಈ ಸಮಯದಲ್ಲಿ ಸಂಶೋಧಕರು ಮಾನಸಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂವಹನ 'ಚಾಟ್‍ಬೊಟ್'(chatbot) ಅಭಿವೃದ್ಧಿ ಪಡಿಸಲು ಮುಂದಾದರು. ಇದೇ ನಿಟ್ಟಿನಲ್ಲಿ 'ವೊಬೊಟ್'!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಏನಿದು ‘ವೊಬೊಟ್'?

  ಕೃತಕ ಬುದ್ಧಿಮತ್ತೆಯ ಸೀಮಿತ ಪರಿಧಿ, ಅಪಾಯ ಹಾಗೂ ಜನರ ಮನಸ್ಥಿತಿಯನ್ನು ಗ್ರಹಿಸುವ ಸಲುವಾಗಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞರು 2017ರಲ್ಲಿ ‘ವೊಬೊಟ್'( Woebot)ಅನ್ನು ಸೃಷ್ಟಿಸಿದರು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸುಧಾರಣೆಗೆ ಸಹಕಾರಿಯಾಗುವ ಕೃತಕ ಬುದ್ಧಿಮತ್ತೆ ಅಭಿವೃದ್ಧಿಯಲ್ಲಿಇದು ಬಹಳಷ್ಟು ಪ್ರಯತ್ನ ನಡೆಸಿದೆ.

  ಆಪ್ತ ಸಮಾಲೋಚಕ ವೊಬೊಟ್

  ವಿಶ್ವದ 10 ಜನರಲ್ಲಿ ಓರ್ವ ಯಾವುದಾದರೊಂದು ಮಾನಸಿಕ ಸಮಸ್ಯೆಗೆ ಒಳಗಾಗಿರುತ್ತಾನೆ ಎನ್ನುತ್ತವೆ ವರದಿಗಳು. ಮನೋವೈದ್ಯರನ್ನು ಭೇಟಿಯಾಗದ ಇವರ ಸಮಸ್ಯೆ ಪರಿಹಾರಕ್ಕಾಗಿಯೇ 2017ರ ಜೂನ್ ತಿಂಗಳಲ್ಲಿ ವೊಬೊಟ್ ಮಾರ್ಗದರ್ಶನ ಪ್ರಾರಂಭಿಸಿತು. ಈ ವೊಬೊಟ್ ವಾರಕ್ಕೆ ಅಂದಾಜು 20 ಲಕ್ಷ ಸಂದೇಶಗಳಿಗೆ ವೊಬೊಟ್ ಪ್ರತಿಕ್ರಿಯಿಸುತ್ತಿದೆ.

  ಹೇಗೆ ಕೆಲಸ ಮಾಡುತ್ತದೆ ವೂಬೊಟ್?

  ಮನಸ್ಸಿನ ಎಲ್ಲ ಮಾತುಗಳನ್ನು ಸಂದೇಶಗಳ ಮೂಲಕ ನಿರಾತಂಕವಾಗಿ ಈ ಆಪ್ತ ಸಮಾಲೋಚಕನೊಂದಿಗೆ ಹೇಳಿಕೊಳ್ಳಲು ಈ ವೊಬೊಟ್ ನಿಮಗೆ ಸಹಾಯಕನಾಗಲಿದೆ. ವ್ಯಕ್ತಿ ಆಡುವ ಮಾತನ್ನು ಇತರರೊಡನೆ ಹಂಚಿಕೊಳ್ಳುವುದಿಲ್ಲ, ಗಾಸಿಪ್ ಮಾಡುವುದಿಲ್ಲ, ಮಾತಿನ ಆಧಾರದ ಮೇಲೆ ವ್ಯಕ್ತಿತ್ವ ನಿರ್ಣಯಿಸದಂತೆ ಇದು ಕಾರ್ಯನಿರ್ವಹಿಸುತ್ತದೆ.

  ಮನಸಿನ ಗ್ರಾಫ್ ನಿಡುತ್ತದೆ

  ಈ ವೊಬೊಟ್ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುವ ವ್ಯವಸ್ಥಿತ ಮಾರ್ಗವಾಗಿರುವುದರಿಂದ ಫಲಿತಾಂಶ ಉತ್ತಮವಾಗಿದೆ. ತನ್ನೊಂದಿಗೆ ಸಂವಹನ ನಡೆಸುತ್ತಿರುವ ವ್ಯಕ್ತಿಯ ಮಾನಸಿಕ ಮಟ್ಟದಲ್ಲಿನ ಬದಲಾವಣೆಯನ್ನು ಗ್ರಾಫ್ ಮುಖೇನ ಪ್ರತಿ ವಾರವೂ ತೋರುವುದು ಈ ಆಪ್‌ನ ವಿಶೇಷತೆಯಾಗಿದೆ.

  130 ರಾಷ್ಟ್ರಗಳ ಅಚ್ಚು ಮೆಚ್ಚು ಈ ವೊಬೊಟ್!

  ವರ್ಷದ ಎಲ್ಲ ದಿನವೂ ಯಾವುದೇ ಸಮಯದಲ್ಲಿ ಆಪ್ತ ಸಮಾಲೋಚನೆ ನೀಡುವ ‘ವೊಬೊಟ್' ಅನ್ನು ವಿಶ್ವದ 130 ರಾಷ್ಟ್ರಗಳ ಜನರು ಮೆಚ್ಚಿದ್ದಾರೆ. ಹಾಗಾಗಿಯೇ, ‘ವೊಬೊಟ್' ಅನ್ನು ಜಗತ್ತಿನ ಬ್ಯುಸಿ ಚಾಟ್‍ಬೊಟ್ ಎಮದು ಕರೆಯಲಾಗಿದೆ. ಫೇಸ್‍ಬುಕ್ ಪುಟ, ಆಪ್ ಕೂಡ ಒಳಗೊಂಡಿರುವ ಈ ವ್ಯವಸ್ಥೆಯೊಂದಿಗೆ ಸಾವಿರಾರು ಜನ ಸಂಪರ್ಕ ಸಾಧಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Woebot is your 24/7 cognitive behavioral therapy (CBT) chatbot. Woebot is genderless but the company refers to it with the pronouns “he”/”him”.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more