ಲವರ್‌ ಬೇಕೆಂದು ಕೇಳಿದ ಯುವತಿಗೆ ತುಂಟತನದಿಂದ ಅಮೆಜಾನ್ ಕೊಟ್ಟದೇನು..?

|

A ಯಿಂದ Z ವರೆಗೆ ಎಲ್ಲವನ್ನು ಮಾರಾಟ ಮಾಡುತ್ತೇವೆ ಎಂದು ತನ್ನ ಲೋಗೊದಲ್ಲಿಯೇ ಹೇಳಿಕೊಂಡಿರುವ ಅಮೆಜಾನ್, ರಾಜಧಾನಿ ದೆಹಲಿಯ ಯುವತಿಯೊಬ್ಬಳ ಬೇಡಿಕೆಗೆ ದಂಗಾಗಿ ಹೋಗಿದೆ. ನಂತರ ತುಂಟತನದಿಂದಲೇ ಉತ್ತರವೊಂದನ್ನು ನೀಡಿದೆ.

ಲವರ್‌ ಬೇಕೆಂದು ಕೇಳಿದ ಯುವತಿಗೆ ತುಂಟತನದಿಂದ ಅಮೆಜಾನ್ ಕೊಟ್ಟದೇನು..?

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಎಲ್ಲಾವನ್ನು ಮಾರಾಟ ಮಾಡುವ ಅಮೆಜಾನ್, ನನಗೊಬ್ಬ ಪ್ರಿಯತಮನನ್ನು ಹುಡುಕಿಕೊಡು ಕೊಂಡು ಎಂದು ಟ್ವಿಟ್ಟರ್‌ನಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದಾಳೆ. ಸದ್ಯ ಈ ಟ್ವಿಟ್ ವೈರಲ್ ಆಗಿದೆ. ಅಲ್ಲದೇ ಈ ವಿಚಿತ್ರ ಬೇಡಿಕೆಗೆ ಅಮೆಜಾನ್ ಸಹ ಸ್ಪಂದಿಸಿದೆ ಎನ್ನಲಾಗಿದೆ.

ಹುಡುಕಿದ್ದು ಸಿಕ್ಕಿಲ್ಲ:

ವಿಶ್ವದ ಇ-ಕಾರ್ಮಸ್ ದೊಡ್ಡ ಕಂಪನಿಯಾದ ನಿಮ್ಮ ಅಮೆಜಾನ್‌ನಲ್ಲಿ ನೀವು ತುಂಬ ಸಮಯಗಳಿಂದ ಹುಡುಕುತ್ತಿರುವ ವಸ್ತುವೊಂದು ದೊರೆಯುತ್ತಿಲ್ಲ ಎಂದು ಮುದ್ದಾದ ಯುವತಿಯೊಬ್ಬಳು ಟ್ವಿಟ್ ಮಾಡಿದ್ದಾಳೆ.

ಉತ್ತರ ಕೊಟ್ಟ ಅಮೆಜಾನ್:

ಟ್ವಿಟ್‌ಗೆ ತಕ್ಷಣ ಪ್ರತಿಕ್ರಿಯೇ ಕೊಟ್ಟ ಅಮೆಜಾನ್, ನಾವು ಸಂಸ್ಥೆಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಸತತವಾಗಿ ಕ್ರಿಯಾಶೀಲರಾಗಿದ್ದೇವೆ, ನಿಮಗೇ ಬೇಕಾದ ಉತ್ಪನ್ನ ಯಾವುದು ಎಂದು ತಿಳಿದುಕೊಳ್ಳಬಹುದೇ ಎಂದು ಪ್ರಶ್ನಿಸಿದೆ ಟ್ವಿಟ್ ಮೂಲಕವೇ ಪ್ರಶ್ನಿಸಿದೆ.

ಲವರ್ ಬೇಕು:

ಈ ವೇಳೆ ಅಮೆಜಾನ್ ಪ್ರಶ್ನೇಗೆ ಉತ್ತರಿಸಿದ ಯುವತಿ, 'ಬಸ್ ಎಕ್ ಸನಮ್ ಚಾಹಿಯೇ, ಆಶಿಕಿ ಕೆಲಿಯೇ' (ಎನಿಲ್ಲ ಪ್ರೀತಿಸಲು ಒಬ್ಬ ಪ್ರಿಯತಮ ಬೇಕು) ಎಂದು ಉತ್ತರಿಸಿದ್ದಾಳೆ.

ಬೊಂಬಾಟ್ ಉತ್ತರ ಕೊಟ್ಟ ಅಮೆಜಾನ್:

ಲವರ್ ಬೇಕೆಂದ ಯುವತಿಗೆ ಬೊಂಬಾಟ್ ಉತ್ತರ ಕೊಟ್ಟ ಅಮೆಜಾನ್, ‘ಯೇ ಅಖಾ ಇಂಡಿಯಾ ಜಾನತಾ ಹೈ, ಹಮ್ ತುಮ್ಪೆ ಮರ್ತೆ ಹೈ, ದಿಲ್ ಕ್ಯಾ ಚೀಜ್ ಹೈ ಜಾನಮ್, ಅಪನಿ ಜಾನ್ ತೇರೆ ನಾಮ್ ಕರ್ತಾ ಹೈ' (ಇದು ಇಡೀ ಇಂಡಿಯಾಗೆ ಗೊತ್ತು, ನಾವು ನಿಮಗಾಗಿ ಸಾಯಲು ಸಹ ಸಿದ್ಧನಿದ್ದೇನೆ. ಅಂತಹದರಲ್ಲಿ ಈ ಹೃದಯ ಏನ್ ಮಹಾ, ನನ್ನ ಪ್ರಾಣ ನಿನಗಾಗಿ) ಎಂದು ‘ಜಾನ್ ತೇರೆ ನಾಮ್' ಚಿತ್ರದ ಹಾಡಿನ ಲೈನ್‌ಗಳನ್ನು ಟ್ವಿಟ್ ಮಾಡಿದೆ.

ಸದ್ಯ ವೈರಲ್:

ಸದ್ಯ ಅಮೆಜಾನ್ ಮತ್ತು ಯುವತಿ ನಡುವಿನ ಟ್ವಿಟರ್ ವೈರಲ್ ಆಗಿದ್ದು, ಹಲವು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

Most Read Articles
Best Mobiles in India

English summary
Woman asks Amazon for 'sanam', company replies with a song. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X