ಇನ್‌ಸ್ಟಾಗ್ರಾಮ್‌ನಲ್ಲಿ ಬಟ್ಟೆ ಖರೀದಿಸುವ ಮುನ್ನ ಈ ಸುದ್ದಿ ಗಮನಿಸಿ!
ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಅಕೌಂಟ್‌ಗಳ ಮೂಲಕ ಕೂಡ ವ್ಯಾಪಾರ ಮಾಡುವವರಿದ್ದಾರೆ. ಆದರೆ ಕೆಲವು ಇದನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಅದರಂತೆ ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬಟ್ಟೆಗಳನ್ನು ಖರೀದಿಸಿದ ಮಹಿಳೆಯೊಬ್ಬರು ಇದೀಗ ಶಾಕ್‌ಗೆ ಒಳಗಾಗಿದ್ದಾರೆ.
ಹೌದು, ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಂದ-ಚೆಂದದ ಬಟ್ಟೆಗಳನ್ನು ನೋಡಿದ ಮಹಿಳೆಯೊಬ್ಬರು ಆ ಬಟ್ಟೆಗಳನ್ನು ಖರೀದಿಸಲು ಮನಸ್ಸು ಮಾಡಿದ್ದಾರೆ. ಅದರಂತೆ ಬಟ್ಟೆಗಳ ಬಗ್ಗೆ ಜಾಹಿರಾತು ನೀಡಿದ್ದ ಇನ್‌ಸ್ಟಾಗ್ರಾಮ್ ಅಕೌಂಟ್ ಮೇಲೆ ಕ್ಲಿಕ್ ಮಾಡಿದ್ದಾರೆ. ಅಲ್ಲದೆ ಇದರಲ್ಲಿ 1,25,000ರೂ ಬೆಲೆಬಾಳುವ ಬಟ್ಟೆಗಳನ್ನು ಆರ್ಡರ್ ಮಾಡಿದ್ದಾಳೆ. ಹಾಗಾದ್ರೆ 1,25,000ರೂ. ಬೆಲೆಬಾಳುವ ಬಟ್ಟೆಗಳನ್ನು ಖರೀದಿಸಿದ ಮಹಿಳೆಗೆ ನಂತರ ಶಾಕ್ ಆಗಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋಟೋ ಶೇರಿಂಗ್ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯುಸಿನೆಸ್ ಬ್ರ್ಯಾಂಡ್ ಪ್ರಚಾರಕ್ಕೆ ಕೂಡ ಅವಕಾಶವಿದೆ. ಅದರಂತೆ ಎಷ್ಟೋ ಮಂದಿ ಇನ್‌ಸ್ಟಾಗ್ರಾಮ್‌ನಲ್ಲಿ ಜಾಹಿರಾತುಗಳನ್ನು ನೋಡಿ ಸರಕುಗಳನ್ನು ಖರೀದಿಸುವವರಿದ್ದಾರೆ. ಅದರಂತೆ ಮೇಲ್ ಎಂಬ ಮಹಿಳೆ ತನ್ನ ಮಗನಿಗೆ ಬಟ್ಟೆ ಖರೀದಿಸುವ ಆಲೋಚನೆಯಲ್ಲಿರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ನೋಡಿದ್ದಾಳೆ. ಇದರಲ್ಲಿ ಚಾರ್ಲ್ಸ್ ಟೈರ್‌ವಿಟ್ ಎಂಬ ಸ್ಟೋರ್ ಅನ್ನು ಮುಚ್ಚುತ್ತಿರುವುದರಿಂದ ಬಟ್ಟೆಗಳನ್ನು ಕಡಿಮೆ ಬೆಲೆಗೆ ಸೇಲ್ ಮಾಡುವುದಾಗಿ ಹೇಳಿದ್ದಾರೆ.
ಮೊದಲೇ ಬಟ್ಟೆಗಳನ್ನು ಖರೀದಿಸುವ ಆಸಕ್ತಿಯಲ್ಲಿದ್ದ ಮಹಿಳೆ ಕೂಡಲೇ ಆ ಜಾಹಿರಾತಿನ ಮೇಲೆ ಕ್ಲಿಕ್ ಮಾಡಿದ್ದಾಳೆ. ಅಲ್ಲದೆ ತನ್ನ ಮಗನಿಗೆ ಬೇಕಾದ ಎಲ್ಲಾ ರೀತಿಯ ಬಟ್ಟೆಗಳನ್ನು ಅಂದಾಜು 1,25,000ರೂ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾಳೆ. ಆದರೆ ಈಕೆ ಬಟ್ಟೆಗಳಿಗೆ ಹಣ ಪಾವತಿ ಮಾಡಿದ ನಂತರವೂ ಸಹ ಅವರು ಆರ್ಡರ್ ಮಾಡಿದ ಯಾವುದೇ ಬಟ್ಟೆಗಳು ಕೂಡ ಇವರ ಮನೆಗೆ ಬಂದಿಲ್ಲ ಅನ್ನೊದು ವರದಿಯಾಗಿದೆ. ಅಂದರೆ ಇಲ್ಲಿ ವಂಚಕರು ನಕಲಿ ಖಾತೆಯ ಮೂಲಕ ಬಟ್ಟೆ ವ್ಯಾಪಾರದ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಜಾಹಿರಾತು ನೀಡುವುದಕ್ಕೆ ಯಾವುದೇ ನಿಗದಿತ ವೆಚ್ಚವನ್ನು ನಿಗದಿಪಡಿಸಿಲ್ಲ. ಆದರಿಂದ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹಿರಾತುಗಳನ್ನು ನೀಡುವುದು ಸಾಮಾನ್ಯವಾಗಿದೆ. ಇಲ್ಲಿ ಕಂಪನಿಯ ಅಲ್ಗಾರಿದಮ್‌ಗಳು ಜಾಹೀರಾತುದಾರರ ಮಿತಿಯೊಳಗೆ ನಿಯೋಜಿಸಲಾದ ಬಜೆಟ್ ಅನ್ನು ಸಮರ್ಥವಾಗಿ ಖರ್ಚು ಮಾಡುವ ಗುರಿಯನ್ನು ಹೊಂದಿವೆ. ಆದರೆ ಇಲ್ಲಿ ಬರುವ ಜಾಹಿರಾತುಗಳು ಎಷ್ಟು ಸತ್ಯ ಅನ್ನೊದನ್ನು ಪರಿಶೀಲಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ.

ಇನ್ನು ಮಹಿಳೆ ತಾನು ಆರ್ಡರ್ ಮಾಡಿದ ಐಟಂಗಳು ಮೂರರಿಂದ ಐದು ದಿನಗಳ ನಿರೀಕ್ಷಿತ ಕಾಲಮಿತಿಯೊಳಗೆ ಬಂದಿಲ್ಲ ಎಂದು ತಿಳಿದ ನಂತರವೇ ತಾನು ಮೋಸ ಹೋಗಿರೋದು ಬೆಳಕಿಗೆ ಬಂದಿದೆ. ನಂತರ ಆಕೆ ಚಾರ್ಲ್ಸ್ ಟೈರ್‌ವಿಟ್‌ನ ನಿಜವಾದ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದಿದ್ದಾಳೆ. ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮೆಟಾ ವಕ್ತಾರರು ನಾವು ಗ್ರಾಹಕರ ಜಾಗೃತಿ ಅಭಿಯಾನಗಳನ್ನು ನಡೆಸುತ್ತೇವೆ. ಜನರು ಈ ವಿಷಯವನ್ನು ಕೆಲವು ಸರಳ ಕ್ಲಿಕ್‌ಗಳಲ್ಲಿ ವರದಿ ಮಾಡಬಹುದು ಎಂದು ಹೇಳಿದ್ದಾರೆ.
ಇದಲ್ಲದೆ ಇತ್ತೀಚಿಗೆ ಗುರಗ್ರಾಮ್‌ದ ಟೆಕ್ಕಿಯೊಬ್ಬರು ಆನ್‌ಲೈನ್ ವಂಚಕರ ಜಾಲದಲ್ಲಿ ಸಿಲುಕಿ 42 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ವಾಟ್ಸಾಪ್‌ನಲ್ಲಿ ಬಂದ ಪಾರ್ಟ್ ಟೈಂ ಜಾಬ್ ಸಂದೇಶವನ್ನು ನಂಬಿ ಮೋಸ ಹೋಗಿದ್ದಾರೆ.ಯೂಟ್ಯೂಬ್ ವೀಡಿಯೊ ಲೈಕ್ ಮಾಡಿದರೆ ಹಣ ನೀಡುತ್ತೇವೆ ಎಂದು ಹೇಳಿ ವಂಚಿಸುತ್ತಿರುವ ಪ್ರಕರಣಗಳಿಗೆ ಇದು ಮತ್ತೊಂದು ಉದಾಹರಣೆಯಾಗಿದೆ. ಆದರೆ ಇಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ಒಬ್ಬ ವೃತ್ತಿಪರ ಟೆಕ್ಕಿ ಅನ್ನೊದು ಗಮನಿಸಬೇಕಾದ ಸಂಗತಿಯಾಗಿದೆ. ಗುರುಗ್ರಾಮದ ಟೆಕ್ಕಿ ಹೆಚ್ಚುವರಿ ಆದಾಯಗಳಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಜಾಬ್‌ಗಾಗಿ ಸರ್ಚ್ ಮಾಡಿದ್ದಾರೆ. ಇದೇ ಸಮಯದಲ್ಲಿ ಟೆಕ್ಕಿಯ ವಾಟ್ಸಾಪ್‌ಗೆ ಪಾರ್ಟ್‌ಟೈಂ ಜಾಬ್ ಕುರಿತ ಸಂದೇಶ ಬಂದಿದೆ. ಈ ಸಂದೇಶವನ್ನು ನಂಬಿದ ಟೆಕ್ಕಿ ಮೋಸ ಹೋಗಿದ್ದಾನೆ.
ವಂಚಕರು ನೀಡಿದ ಲಾಭದಾಯಕ ಭರವಸೆ ಹಾಗೂ ಅಧಿಕ ಆದಾಯದ ವ್ಯಾಮೋಹದಿಂದ ಟೆಕ್ಕಿ ತನ್ನ ಮತ್ತು ಪತ್ನಿಯ ಬ್ಯಾಂಕ್ ಖಾತೆಗಳ ಮೂಲಕ 42,31,600 ರೂ.ಗಳನ್ನು ಹೂಡಿಕೆ ಮಾಡಿದ್ದಾನೆ. ಟೆಕ್ಕಿ ಹಣ ಹೂಡಿಕೆ ಮಾಡಿದ ನಂತರ 69 ಲಕ್ಷ ರೂ. ಲಾಭ ನಿಮಗೆ ಬಂದಿದೆ ಎಂದು ಹೇಳಿದ್ದಾರೆ. ಅದರಂತೆ ಆ ಹಣವನ್ನು ಹಿಂಪಡೆಯಲು ಟೆಕ್ಕಿ ಪ್ರಯತ್ನಿಸಿದಾಗ ವಂಚಕರು ಹಣ ಮರಳಿ ಪಡೆಯಲು 11 ಸಾವಿರ ರೂ. ಹೆಚ್ಚುವರಿಯಾಗಿ ಪಾವತಿಸುವಂತೆ ಹೇಳಿದ್ದಾರೆ. ಈ ಹಂತದಲ್ಲಿ ಟೆಕ್ಕಿಗೆ ತಾನು ಮೋಸ ಹೋಗಿರುವುದು ತಿಳಿದಿದೆ.


Click it and Unblock the Notifications








