Home
ಸುದ್ದಿಜಾಲ

ಈ ರೀತಿಯ ವಂಚನೆಗೆ ಏನೆಂದು ಹೇಳೋದು? ಹೀಗೂ ಮಾಡ್ತಾರೆ ಜೋಕೆ!

ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಂಚನೆ ಮಾಡುವುದಕ್ಕಾಗಿ ದಿನಕೊಂದು ಮಾರ್ಗ ಹುಡುಕುತ್ತಿರುವ ವಂಚಕರು ಸಾಮಾನ್ಯ ಜನರನ್ನು ಸುಲಭವಾಗಿ ಯಾಮಾರಿಸುತ್ತಿದ್ದಾರೆ. ಇದೀಗ ಮತ್ತೊಂದು ಸೈಬರ್‌ ವಂಚನೆ ಪ್ರಕರಣ ನಡೆದಿದ್ದು, ಎಂತಹವರನ್ನು ಒಂದು ಕ್ಷಣ ದಂಗಾಗುವಂತೆ ಮಾಡಿದೆ.

ಹೌದು, ಮುಂಬೈನಲ್ಲಿ ಇತ್ತೀಚಿಗೆ ನಡೆದಿರುವ ಸೈಬರ್‌ ವಂಚನೆ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಮಹಿಳೆಯೆ ಇಲ್ಲಿ ವಂಚಕರಿಂದ ಮೋಸ ಹೋಗಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಬರೋಬ್ಬರಿ 1.97 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಅದರಲ್ಲೂ ಮಹಿಳಾ ವೈದ್ಯಯನ್ನು ವಂಚಿಸಲು ವಂಚಕರು ಅನುಸರಿಸಿರುವ ಮಾರ್ಗ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ವಂಚಕರು ಮಹಿಳಾ ವೈದ್ಯೆಯನ್ನು ವಂಚಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಈ ರೀತಿಯ ವಂಚನೆಗೆ ಏನೆಂದು ಹೇಳೋದು? ಹೀಗೂ ಮಾಡ್ತಾರೆ ಜೋಕೆ!

ಸೈಬರ್‌ ವಂಚನೆ ಪ್ರಕರಣಗಳು ದೇಶದಲ್ಲಿ ಹೊಸದೇನು ಅಲ್ಲ. ಆದರೆ ಸೈಬರ್‌ ವಂಚಕರು ಮಾತ್ರ ಹೊಸ ಹೊಸ ಮಾರ್ಗಗಳಲ್ಲಿ ವಂಚನೆ ಮಾಡುತ್ತಿರುವುದು ಸಾಮಾನ್ಯವಾಗಿದೆ ಹೋಗಿದೆ. ಮುಂಬೈನಲ್ಲಿ ನಡೆದಿರುವ ಈ ಪ್ರಕರಣವು ಕೂಡ ಇಂತಹದ್ದೇ ಆಗಿದೆ. ಇಲ್ಲಿ ಮಹಿಳಾ ವೈದ್ಯೆಗೆ ವಂಚಕರು ನಾರ್ಕೋಟಿಕ್ಸ್‌ ಇಲಾಖೆಯ ಅಧಿಕಾರಗಳ ರೂಪದಲ್ಲಿ ವಂಚನೆ ಮಾಡಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್‌ ವಿಚಾರ ಏನೆಂದರೆ ಮಹಿಳೆಯ ಆತುರವೇ ವಂಚನೆ ಹೋಗಲು ಪ್ರಮುಖ ಕಾರಣ ಎನ್ನಬಹುದಾಗಿದೆ.

ಮಹಿಳೆಗೆ ವಂಚಸಿದ್ದು ಹೇಗೆ?
ಮಹಿಳಾ ವೈದ್ಯಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಕೋರಿಯರ್‌ ಕಂಪೆನಿಯವರು ಎಂದು ಹೇಳಿದ್ದು, ನೀವು ಕಳುಹಿಸಿದ್ದ ಪಾರ್ಸಲ್‌ ಅನ್ನು ತೈವಾನ್‌ಗೆ ಕೋರಿಯರ್‌ ಮಾಡಲು ಸಾದ್ಯವಾಗಿಲ್ಲ ಎಂದಿದ್ದಾನೆ. ಆದರೆ ಮಹಿಳೆ ತಾನು ಯಾವುದೇ ಪಾರ್ಸಲ್‌ ಕೋರಿಯರ್‌ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹಾಗಾದ್ರೆ ನೀವು ಆನ್‌ಲೈನ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ, ಯಾಕೆಂದರೆ ನಿಮ್ಮ ಪಾರ್ಸಲ್‌ನಲ್ಲಿ ಐದು ಪಾಸ್‌ಪೋರ್ಟ್‌ಗಳು, ಎರಡು ಕ್ರೆಡಿಟ್ ಕಾರ್ಡ್‌ಗಳು ಮತ್ತು ಕೆಲವು ಮಾದಕ ವಸ್ತುಗಳಿವೆ ಎಂದು ಹೇಳಿ ಕರೆಯನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸಿದ್ದಾನೆ.

ಇದೀಗ ಮಹಿಳೆಯೊಂದಿಗೆ ಮಾತನಾಡಿದ ವ್ಯಕ್ತಿ ಪೊಲೀಸ್‌ ಇಲಾಖೆಯೆಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ಈ ಪ್ರಕರಣವು ಗಂಬೀರವಾಗಿದ್ದು, ಇದು ಮಾದಕದ್ರವ್ಯಕ್ಕೆ ಸಂಬಂದಿಸಿದೆ ಇದನ್ನು ನಾರ್ಕೊಟಿಕ್ಸ್‌ ಇಲಾಖೆ ಅಧಿಕಾರಿಗೆ ವರ್ಗಾಯಿಸುತ್ತೇನೆ ಮಾತಾಡಿ ಎಂದು ಮತ್ತೊಬ್ಬ ವ್ಯಕ್ತಿಗೆ ಕರೆ ವರ್ಗಾಯಿಸಿದ್ದಾನೆ. ಇದೀಗ ನಾರ್ಕೊಟಿಕ್ಸ್‌ ಇಲಾಖೆ ಅಧಿಕಾರಿಯ ಸೋಗಿನಲ್ಲಿ ಮಾತನಾಡಿದ ವ್ಯಕ್ತಿ ಮಹಿಳೆಯ ಆಧಾರ್‌ ನಂಬರ್‌ ಅನ್ನು ಕೇಳಿದ್ದಾರೆ. ಅಲ್ಲದೆ ನಿಮ್ಮ ಆಧಾರ್‌ ನಂಬರ್‌ಗೆ ಮೂರು ಬ್ಯಾಂಕ್‌ ಖಾತೆಗಳು ಲಿಂಕ್‌ ಆಗಿವೆ ಎಂದು ಹೇಳಿದ್ದಾರೆ.

ಏಕಾಏಕಿ ಹೀಗೆ ನಾರ್ಕೊಟಿಕ್ಸ್‌ ಅಧಿಕಾರಿಗಳಿಂದ ಕರೆ ಬಂದಿದೆ ಎಂದು ಬೆದರಿದ ಮಹಿಳೆ ವಂಚಕರು ಹೇಳಿದಂತೆ ಕೇಳಿದ್ದಾರೆ. ತಾನು ಮಾಡಿರದ ಪಾರ್ಸಲ್‌ ವಿಚಾರವಾಗಿ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲವೆಂದು ನಿರೂಪಿಸುವ ಉಮೇದಿನಲ್ಲಿ ವಂಚಕರ ದಾಳಕ್ಕೆ ಸಿಲುಕಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಆಕೆಯ ಖಾತೆಯಿಂದ ಬರೋಬ್ಬರಿ 1.97 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಈ ರೀತಿಯ ವಂಚನೆಗೆ ಏನೆಂದು ಹೇಳೋದು? ಹೀಗೂ ಮಾಡ್ತಾರೆ ಜೋಕೆ!

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್‌ ವಿಚಾರವೆಂದರೆ ವೃತ್ತಿಯಲ್ಲಿ ವೈದ್ಯ ಆಗಿರುವ ಮಹಿಳೆ ವಂಚಕರಿಗೆ ಸುಲಭವಾಗಿ ಮೋಸ ಹೋಗಿರೋದು. ನಾರ್ಕೋಟಿಕ್ಸ್ ಅಧಿಕಾರಿಯಂತೆ ವರ್ತಿಸಿದ ವಂಚಕ ಹೇಳಿದಂತೆ ಸ್ಕೈಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಸ್ಕೈಪ್‌ ಮೂಲಕ ಕರೆ ಮಾಡಿದಾಗ ಆಕೆಗೆ ನಾರ್ಕೊಟಿಕ್ಸ್‌ ಅಧಿಕಾರಗಳ ಅಪ್ಲಿಕೇಶನ್ ಐಡಿಯನ್ನು ತೋರಿಸಿದ್ದಾರೆ. ಜೊತೆಗೆ ಆಕೆಗೆ ಪೊಲೀಸರು ಸಿಕ್ಕಿಬಿದ್ದ ಅಪರಾಧಿಗಳ ಕೆಲವು ಛಾಯಾಚಿತ್ರಗಳನ್ನು ತೋರಿಸಿ, ಇವರ ಬ್ಯಾಂಕ್‌ ಖಾತೆಗಳು ನಿಮ್ಮ ಆಧಾರ್‌ಸಂಖ್ಯೆಗೆ ಲಿಂಕ್‌ ಆಗಿವೆ ಎಂದು ಹೆದರಿಸಿದ್ದಾರೆ.

ಇದೆಲ್ಲದರಿಂದ ಬೆದರಿದ ಮಹಿಳೆ ಅವರು ಹೇಳಿದಂತೆ ಬ್ಯಾಂಕ್‌ ಖಾತೆಗಳಿಂದ ಪರಿಶೀಲನೆಗಾಗಿ ಎರಡು ಖಾತೆಗಳಿಂದ ತಲಾ 98,888 ರೂ. ವರ್ಗಾಯಿಸಿಕೊಂಡಿದ್ದಾರೆ. ಆದರೆ ಎಷ್ಟೇ ಸಮಯ ಕಳೆದು ಹಣ ವಾಪಾಸ್‌ ಬಾರದೇ ಹೋದಾಗ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಕೂಡಲೇ ಪೊಲೀಸ್‌ ಠಾಣೆಗೆ ತೆರಳಿ ಅಪರಿಚಿತ ವಂಚಕರ ವಿರುದ್ಧ ದೂರು ನೀಡಿದ್ದಾರೆ.

Best Mobiles in India

English summary
Woman loses Rs 1.97 lakh in 'courier-related fraud: Details here's
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+