Home
ಸುದ್ದಿಜಾಲ

ಗೂಗಲ್ ಸರ್ಚ್ ಮೋಸದಿಂದಾಗಿ 1 ಲಕ್ಷ ಕಳೆದುಕೊಂಡ ಮಹಿಳೆ

ಪೂರ್ವ ದೆಹಲಿಯ ಸೀಮಾಪುರಿ ಭಾಗದ ಮಹಿಳೆಯೊಬ್ಬರು ಗೂಗಲ್ ಹುಡುಕಾಟದಿಂದಾಗಿ ಮೋಸಹೋಗಿದ್ದಾರೆ. ಮೋಸದ ಜಾಲದಿಂದಾಗಿ 1 ಲಕ್ಷ ರುಪಾಯಿ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಕಳ್ಳರು ಕಳ್ಳತನ ಮಾಡುವುದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದು ಗೂಗಲ್ ನಿಂದ ನಡೆದ ಯಾವುದೇ ತಪ್ಪಲ್ಲ.

ಗೂಗಲ್ ಸರ್ಚ್ ಮೋಸದಿಂದಾಗಿ 1 ಲಕ್ಷ ಕಳೆದುಕೊಂಡ ಮಹಿಳೆ

ಜನರಿಗೆ ಅನುಕೂಲವಾಗಲಿ ಎಂದು ಗೂಗಲ್ ನೀಡಿರುವ ಸೇವೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಳ್ಳರು ಮುಗ್ಧ ಜನರನ್ನು ವಂಚಿಸಲು ಆರಂಭಿಸಿದ್ದಾರೆ. ಮಹಾರಾಷ್ಟ್ರ ಸೈಬರ್ ಪೋಲೀಸರು ಈ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಈ ಮೊದಲೇ ಆರಂಭಿಸಿದ್ದರು. ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಪಿಎಫ್ಓ ಸಂಸ್ಥೆಗಳ ಹೆಸರಿನಲ್ಲಿ ಇದೇ ರೀತಿಯ ಮೋಸ ಕೆಲಸಗಳನ್ನು ಮೋಸಗಾರರು ಮಾಡಿದ್ದರು. ಹಾಗಾದ್ರೆ ಈ ಮೋಸದ ಜಾಲದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿದೆ ನೋಡಿ.

ಗ್ರಾಹಕ ಸೇವಾ ಕೇಂದ್ರ

ಗ್ರಾಹಕ ಸೇವಾ ಕೇಂದ್ರ

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಇ-ವ್ಯಾಲೆಟ್ ಅಕೌಂಟ್ ನಲ್ಲಿ ಕೆಲವು ಸಮಸ್ಯೆ ಕಾಣಿಸಿದೆ ಹಾಗಾಗಿ ಆಕೆ ಕಸ್ಟಮರ್ ಕೇರ್(ಗ್ರಾಹಕ ಸೇವಾ ಕೇಂದ್ರ) ನಂಬರ್ ನ್ನು ಹುಡುಕಾಡಿದ್ದಾರೆ.

ಇ-ವ್ಯಾಲೆಟ್

ಇ-ವ್ಯಾಲೆಟ್

ಇ-ವ್ಯಾಲೆಟ್ ಅಕೌಂಟ್ ನಲ್ಲಿ ತಪ್ಪು ಟ್ರಾನ್ಸ್ಯಾಕ್ಷನ್ ನಡೆದಿರುವ ಬಗ್ಗೆ ಗ್ರಾಹಕ ಸೇವಾ ಕೇಂದ್ರಕ್ಕೆ ಮಾಹಿತಿ ನೀಡಲು ಆಕೆ ಗೂಗಲ್ ನಲ್ಲಿ ಗ್ರಾಹಕ ಸೇವಾ ಕೇಂದ್ರದ ನಂಬರ್ ನ್ನು ಹುಡುಕಿದ್ದಾರೆ.

ಗೂಗಲ್ ವೆಬ್ ಸೈಟ್

ಗೂಗಲ್ ವೆಬ್ ಸೈಟ್

ಗೂಗಲ್ ನಲ್ಲಿ ಹುಡುಕಾಡಿದ ನಂತರ ಆಕೆ ಒಂದು ವೆಬ್ ಸೈಟ್ ನಲ್ಲಿ ನಂಬರ್ ನ್ನು ಪಡೆದಿದ್ದಾರೆ ಮತ್ತು ಅದುವೇ ಅಧಿಕೃತ ನಂಬರ್ ಎಂದು ಭಾವಿಸಿ ಅವರಿಗೆ ಸಿಕ್ಕಿದ ಫೋನ್ ನಂಬರ್ ಗೆ ಕರೆ ಮಾಡಿದ್ದಾರೆ.

ಇವ್ಯಾಲೆಟ್ ಕಂಪೆನಿಯ

ಇವ್ಯಾಲೆಟ್ ಕಂಪೆನಿಯ

ಮಹಿಳೆ ತಾನು ಮಾತನಾಡುತ್ತಿರುವುದು ಒಬ್ಬ ಮೋಸಗಾರನ ಬಳಿ ಎಂಬುದನ್ನು ತಿಳಿದಿರುವುದಿಲ್ಲ. ಇವ್ಯಾಲೆಟ್ ಕಂಪೆನಿಯ ಪ್ರತಿನಿಧಿಯೊಂದಿಗೆ ತಾನು ಮಾತನಾಡುತ್ತಿದ್ದೇನೆ ಎಂದು ಭಾವಿಸುತ್ತಾಳೆ.

ಗ್ರಾಹಕ ಸೇವಾ ಕೇಂದ್ರ

ಗ್ರಾಹಕ ಸೇವಾ ಕೇಂದ್ರ

ಅಧಿಕೃತ ಗ್ರಾಹಕ ಸೇವಾ ಕೇಂದ್ರದವರೆಂದೇ ಭಾವಿಸಿದ ಮಹಿಳೆ ಇ-ವ್ಯಾಲೆಟ್ ಕಂಪೆನಿಯಿಂದ ಮರುಪಾವತಿಗಾಗಿ ಅವರು ಕೇಳಿದ ಮಾಹಿತಿಯನ್ನು ನೀಡುತ್ತಾರೆ. ಕಾರ್ಡ್ ಮಾಹಿತಿಯನ್ನು ಕೂಡ ಒದಗಿಸುತ್ತಾರೆ.

EPFO

EPFO

ಆಕೆಗೆ ಮೋಸವಾಗುತ್ತಿರುವುದು ತಿಳಿಯುವ ಮುನ್ನವೇ ಆಕೆಯ ಅಕೌಂಟಿನಿಂದ 1 ಲಕ್ಷ ರುಪಾಯಿ ಕದಿಯಲಾಗುತ್ತದೆ.

ಇತ್ತೀಚೆಗೆ EPFO ಪ್ರಾವಿಡೆಂಟ್ ಫಂಡ್ ನಲ್ಲೂ ಇಂತಹ ಘಟನೆ ನಡೆದಿತ್ತು. ಜನರು ಸುಳ್ಳು ನಂಬರ್ ಗೆ ಕರೆ ಮಾಡಿ ಹಣ ಕಳೆದುಕೊಂಡಿದ್ದರು.

ಗೂಗಲ್ ಸರ್ಚ್ ನಲ್ಲಿ ಇಪಿಎಫ್ಓ ಮುಂಬೈ ಬ್ರಾಂಚಿನ ಫೋನ್ ನಂಬರ್ ನ್ನೇ ಬದಲಾಯಿಸಿದ್ದರು. ಯಾವಾಗ ಜನರು ಆ ಮೊಬೈಲ್ ನಂಬರ್ ಗೆ ಕರೆ ಮಾಡಿದರೋ ಆ ಮೋಸಗಾರರು ಜನರ ಬಳಿ ವಯಕ್ತಿಕ ವಿವರಗಳನ್ನು ಕೇಳಿದ್ದಾರೆ ಮತ್ತು ಅವರನ್ನು ವಂಚಿಸಿದ್ದಾರೆ.

ಸ್ಕ್ಯಾಮ್

ಸ್ಕ್ಯಾಮ್

ಈ ಸ್ಕ್ಯಾಮ್ ನಲ್ಲಿ ಜನರು ಗೂಗಲ್ ನಲ್ಲಿ ಕಾಣಿಸಿದ ನಂಬರ್ ಗೆ ಕರೆ ಮಾಡಿದ್ದಾರೆ. ಅವರು ಸರ್ಕಾರದ ಅಧಿಕೃತ ಫೋನ್ ನಂಬರ್ ಎಂದು ಭಾವಿಸಿ ಕರೆ ಮಾಡಿದ್ದರು.

ಗೂಗಲ್/ಗೂಗಲ್ ಮ್ಯಾಪ್ ನಲ್ಲಿ ಮೋಸಗಾರರು ಫೋನ್ ನಂಬರ್ ಬದಲಿಸುವುದಕ್ಕೆ ಹೇಗೆ ಸಾಧ್ಯ?

ಉತ್ತಮ ಸೇವೆಯ ಕಾರಣದಿಂದಾಗಿ ಗೂಗಲ್ ಬಳಕೆದಾರರಿಗೆ ಯಾವುದೇ ಶಾಪ್/ಬ್ಯಾಂಕ್ ಅಥವಾ ಸಂಸ್ಥೆಯ ಕಾಂಟ್ಯಾಕ್ಟ್ ವಿವರಗಳನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಸ್ಕ್ಯಾಮರ್ ಗಳು ಆ ಕಾಂಟ್ಯಾಕ್ಟ್ ವಿವರಗಳನ್ನು ಬದಲಾಯಿಸಿ ತಮ್ಮ ಫೋನ್ ನಂಬರ್ ನೀಡುತ್ತಾರೆ ಮತ್ತು ಜನರನ್ನು ಅದರ ಮೂಲಕ ಟ್ರ್ಯಾಪ್ ಮಾಡುತ್ತಾರೆ.

ಸ್ಕ್ಯಾಮರ್ ಗಳು ಫೇಕ್

ಸ್ಕ್ಯಾಮರ್ ಗಳು ಫೇಕ್

ಜನರು ಬ್ಯಾಂಕ್/ಸಂಸ್ಥೆ/ಸಂಘ ಇತ್ಯಾದಿಗಳದ್ದು ಗೂಗಲ್ ತೋರಿಸುವುದು ಅಧಿಕೃತ ಫೋನ್ ನಂಬರ್ ಎಂದು ಭಾವಿಸಿ ಜನರು ಆ ಫೋನ್ ನಂಬರ್ ಗೆ ಕರೆ ಮಾಡುತ್ತಾರೆ ಮತ್ತು ಅದು ಮೋಸಗಾರರ ನಂಬರ್ ಆಗಿರುತ್ತದೆ ಎಂಬ ಸುಳಿವು ಅವರಿಗೆ ಸಿಗುವುದೇ ಇಲ್ಲ.


ಕರೆಗಳನ್ನು ವೆರಿಫೈ ಮಾಡುವ ನೆಪದಲ್ಲಿ, ಬ್ಯಾಂಕ್ ಉದ್ಯೋಗಿಗಳ ನೆಪದಲ್ಲಿ ಮೋಸಗಾರರು ನಿಮ್ಮ ಬಳಿ ಕೆಲವು ಬ್ಯಾಂಕಿಂಗ್ ಗೆ ಸಂಬಂಧಿಸಿದ ವಯಕ್ತಿಕ ವಿವರಗಳನ್ನು ಪಡೆದುಕೊಳ್ಳುತ್ತಾರೆ.

ಕೆಲವೊಮ್ಮೆ ಸ್ಕ್ಯಾಮರ್ ಗಳು ಫೇಕ್ IVR ಗಳನ್ನು ಕೂಡ ಮಾಡಿ ಕರೆಗಳು ನೈಜತೆ ಭಾಸವಾಗುವಂತೆ ಮಾಡುತ್ತಾರೆ.

ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ

ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ

ತಮಗೂ ಕೂಡ ಸೇವೆ ಮೊಬೈಲ್ ನಲ್ಲಿ ಲಭ್ಯವಾಗಬೇಕು ಎಂಬ ಕಾರಣಕ್ಕೆ ಬಳಕೆದಾರರು ತಮ್ಮ ಕಾರ್ಡ್ ವಿವರ, ಎಟಿಎಂ ಪಿನ್ ಮತ್ತು ಇತರೆ ಮಾಹಿತಿಗಳನ್ನು ಹಂಚಿಕೊಂಡು ಬಿಡುತ್ತಾರೆ.

ಗೂಗಲ್ ಈ ಬಗ್ಗೆ ಕ್ಷಮೆಯಾಚಿಸಿದೆ ಆದರೆ ಕಾಂಟ್ಯಾಕ್ಟ್ ನಂಬರ್ ನ್ನು ಎಡಿಟ್ ಮಾಡುವ ಆಯ್ಕೆ ಇದುವರೆಗೂ ಲಭ್ಯವಿದೆ.

ಇದೀಗ ಗೂಗಲ್ ಹೇಳುವುದನ್ನೆಲ್ಲ ನಂಬುವ ಸಮಯವಿಲ್ಲ. ಯಾವುದೇ ಕಾಂಟ್ಯಾಕ್ಟ್ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ತೆರಳಬೇಕು. ಅನಧಿಕೃತ ವೆಬ್ ಸೈಟ್ ಗಳಿಗೆ ಮೋಸಹೋಗಬೇಡಿ.

Best Mobiles in India

English summary
Woman loses Rs 1 lakh to ‘Google search fraud’: All you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+