ನೌಕರಿಗೆ ಅರ್ಜಿ ಹಾಕಲು ಹೋಗಿ ಭಾರೀ ಹಣ ಕಳೆದುಕೊಂಡ ಮಹಿಳೆ!
ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಕೆಲವು ಅಂಶಗಳನ್ನು ಪರಿಗಣಿಸುವುದು ಉತ್ತಮ. ಅದರಲ್ಲೂ ಸೊಶೀಯಲ್ ಮೀಡಿಯಾದಲ್ಲಿ ಜಾಬ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಬರುವ ಪೋಸ್ಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. ಇದೇ ರೀತಿ ನಕಲಿ ಪೋಸ್ಟ್‌ಗಳ ಮೂಲಕ ವಂಚಕರು ಹಣ ಎಗರಿಸುವ ಕೆಲಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಹೌದು, ಆನ್‌ಲೈನ್‌ನಲ್ಲಿ ಉದ್ಯೋಗದ ಜಾಹೀರಾತು ನೀಡು ವಂಚಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ದೆಹಲಿಯಲ್ಲಿ ಹೊಸ ಪ್ರಕರಣವೊಂದು ದಾಖಲಾಗಿದೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ಮೂಲಕ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಮಹಿಳೆ 8.6 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾದ್ರೆ ಏನಿದು ಪ್ರಕರಣ? ಮಹಿಳೆಗೆ ವಂಚಕರು ಹೇಳಿದ್ದೇನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೆಹಲಿ ಮೂಲದ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಉದ್ಯೋಗದ ಜಾಹೀರಾತನ್ನು ನೋಡಿದ್ದಾರೆ. ಉದ್ಯೋಗಕ್ಕಾಗಿ ಸರ್ಚ್ ಮಾಡುತ್ತಿದ್ದ ಆಕೆ ಕೂಡಲೇ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಆಕೆಯನ್ನು 8.6 ಲಕ್ಷ ರೂ 'ಏರ್‌ಲೈನ್‌ಜೋಬಲ್ಲಿಂಡಿಯಾ' ಎಂಬ ಇನ್ನೊಂದು ಐಡಿ ನಿರ್ದೇಶಿಸಲಾಗಿದೆ. ಇದರಲ್ಲಿದ್ದ ಫಾರ್ಮ್ಯಾಟ್‌ನಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿದ್ದಾರೆ. ಮಹಿಳೆ ವಿವರಗಳನ್ನು ನಮೂದಿಸುತ್ತಿದ್ದಂತೆ ವಂಚಕರ ಜಾಲಕ್ಕೆ ಆಕಿ ಸಿಲುಕಿದ್ದಾಳೆ.
ಮಹಿಳೆ ವಿವರಗಳನ್ನು ನಮೂದಿಸಿದ ತಕ್ಷಣೆ ಆಕೆಗೆ ರಾಹುಲ್ ಎಂಬ ವ್ಯಕ್ತಿ ಕರೆ ಮಾಡಿದ್ದಾನೆ. ಕರೆ ಮಾಡಿದ ವಂಚಕ ಮೊದಲು 'ನೋಂದಣಿ ಶುಲ್ಕ' ಎಂದು 750 ರೂಪಾಯಿಗಳನ್ನು ಡೆಪಾಸಿಟ್ ಮಾಡಲು ಹೇಳಿದ್ದಾನೆ. ನಂತರ ಆಕೆಗೆ 'ಗೇಟ್ ಪಾಸ್ ಶುಲ್ಕ, ವಿಮೆ, ಭದ್ರತೆ ಹಣ' ಎಂದು ಹಂತ ಹಂತವಾಗಿ 8.6 ಲಕ್ಷ ರೂ.ಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಹೀಗೆ ಹೆಚ್ಚಿನ ಹಣವನ್ನು ಕೇಳುತ್ತಾ ಹೋದಂತೆ ಮಹಿಳೆಗೆ ತಾನು ವಂಚನೆ ಹೋಗಿರುವುದು ತಿಳಿದಿದೆ. ಕೂಡಲೇ ಆಕೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ತನಿಖೆಯ ವೇಳೆ ಈ ಆರೋಪಿಗಳು ಹರಿಯಾಣದಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ವಂಚಿಸುತ್ತಿದ್ದರು ಅನ್ನೊದು ತಿಳಿದುಬಂದಿದೆ. ಇದಲ್ಲದೆ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ಎರಡು ವರ್ಷಗಳ ಹಿಂದೆ ಜನರನ್ನು ವಂಚಿಸಲು ಪ್ರಾರಂಭಿಸಿದ್ದಾಗಿ ಆರೋಪಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಇರಬೇಕಾದ ಎಚ್ಚರಿಕೆಗಳೇನು?
ಆನ್‌ಲೈನ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗ ಜಾಹೀರಾತುಗಳ ವಿಶ್ವಾಸಾರ್ಹತೆಯ ಬಗ್ಗೆ ತಿಳಿಯಿರಿ. ಅಲ್ಲದೆ ಉದ್ಯೋಗಕ್ಕಾಗಿಯೇ ಮೀಸಲಾಗಿರುವ LinkedIn, Naukri.com, Indeed,ನಂತಹ ಅಧಿಕೃತ ಪೋರ್ಟಲ್‌ಗಳಿಂದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ. ಒಂದು ವೇಳೆ ನೀವು ಸೊಶೀಯಲ್ ಮೀಡಿಯಾ ಮೂಲಕವೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದಾದರೆ ಉದ್ಯೋಗವನ್ನು ನೀಡುತ್ತಿರುವ ಖಾತೆಯ ಸಂಪೂರ್ಣ ಪರಿಶೀಲನೆಯನ್ನು ಮಾಡಿ.

ಇದಲ್ಲದೆ ಉದ್ಯೋಗಕ್ಕಾಗಿ ಅರ್ಜಿ ಕರೆದಿರುವ ಪ್ರತಿಷ್ಠಿತ ಕಂಪನಿಗಳು ಉದ್ಯೋಗಕ್ಕಾಗಿ ಯಾವುದೇ ರೀತಿಯ ಪಾವತಿ ಶುಲ್ಕವನ್ನು ಕೇಳುವುದಿಲ್ಲ. ಒ೦ಂದು ವೇಳೆ ಪಾವತಿ ಶುಲ್ಕ ಕೇಳಿದರೆ ಅಂತಹ ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಿರಿ. ಇನ್ನು ನೀವು ಅರ್ಜಿ ಸಲ್ಲಿಸುವಾಗ ನಿಮ್ಮ ಹೆಸರು, ಫೋನ್ ಸಂಖ್ಯೆ. ಬ್ಯಾಂಕ್ ವಿವರಗಳು ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡುವ ಮೊದಲು ಆ ವೆಬ್‌ಸೈಟ್ ನಬಿಕೆ ಅರ್ಹವಾಗಿದೆಯಾ ಅನ್ನೊದನ್ನ ಯೋಚಿಸಿ. ಇಲ್ಲವೇ ನಿಮ್ಮ ಹತ್ತಿರದವರ ಬಳಿ ಕೇಳಿ ವಿಚಾರಿಸುವುದು ಸೂಕ್ತ. ಇಲ್ಲದೆ ಹೋದರೆ ಬವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೂ ಬರಬಹುದು.


Click it and Unblock the Notifications








